For Quick Alerts
ALLOW NOTIFICATIONS  
For Daily Alerts

ಪಿಪಿಎಫ್‌ನಲ್ಲಿ ಗರಿಷ್ಠ ಬಡ್ಡಿ ಪಡೆಯಲು ನೀವು ಮಾಡಬೇಕಾದದ್ದು ಏನು?

|

ಭವಿಷ್ಯದ ದೃಷ್ಠಿಯಿಂದ ಉಳಿತಾಯ ಅತ್ಯಂತ ಮಹತ್ವದ್ದಾಗಿದೆ. ಇಂದು ಪ್ರತಿಯೊಬ್ಬರೂ ಉಳಿತಾಯದ ಬಗ್ಗೆ ಯೋಚಿಸದಿದ್ದರೂ, ಅದರ ಬಗ್ಗೆ ಯೋಚಿಸುವವರಿಗೆ ಹಲವು ಗೊಂದಲಗಳು ಇರುತ್ತವೆ.

ಸಾರ್ವಜನಿಕ ಭವಿಷ್ಯ ನಿಧಿ ಅಥವಾ ಪಿಪಿಎಫ್ ನಿಸ್ಸಂದೇಹವಾಗಿ ಭಾರತದಲ್ಲಿ ಅತ್ಯಂತ ಜನಪ್ರಿಯ ದೀರ್ಘಕಾಲೀನ ಉಳಿತಾಯವಾಗಿದೆ. ಏಕೆಂದರೆ ಬಡ್ಡಿ, ತೆರಿಗೆ ವಿನಾಯಿತಿ ಸೇರಿದಂತೆ ಅನೇಕ ಕಾರಣಗಳಿಂದಾಗಿ ಪಿಪಿಎಫ್ ಒಂದು ಅತ್ಯುತ್ತಮ ಭರವಸೆ ಎಂದು ಹಣಕಾಸು ತಜ್ಞರು ಹೇಳುತ್ತಾರೆ.

ಖಾಸಗೀಕರಣಗೊಳ್ಳುತ್ತವೆಯೇ ಸಾರ್ವಜನಿಕ ವಲಯದ ಈ ಪ್ರಮುಖ ಬ್ಯಾಂಕುಗಳು?ಖಾಸಗೀಕರಣಗೊಳ್ಳುತ್ತವೆಯೇ ಸಾರ್ವಜನಿಕ ವಲಯದ ಈ ಪ್ರಮುಖ ಬ್ಯಾಂಕುಗಳು?

ದಶಕಗಳಿಂದ, ಪಿಪಿಎಫ್ ಅನ್ನು ಭಾರತೀಯರು ತಮ್ಮ ನಿವೃತ್ತಿ, ಮಕ್ಕಳ ಶಿಕ್ಷಣ ಮತ್ತು ವಿವಾಹದಂತಹ ಇತರ ದೀರ್ಘಕಾಲೀನ ಉದ್ದೇಶಗಳಿಗಾಗಿ ಉಳಿತಾಯ ಮಾಡಲು ಬಳಸುತ್ತಿದ್ದಾರೆ. ಪಿಪಿಎಫ್‌ನಲ್ಲಿ ಅತಿ ಹೆಚ್ಚು ಬಡ್ಡಿ ನಿಮಗೆ ಲಭಿಸಬೇಕಾದರೆ ಏನು ಮಾಡಬೇಕು ಎಂಬುದರ ಬಗ್ಗೆ ಕೆಲವು ಸಂಗತಿಗಳನ್ನು ನೀವು ತಿಳಿದುಕೊಳ್ಳಬೇಕಾಗುತ್ತದೆ. ಮುಂದೆ ಓದಿ...

ತುಲನಾತ್ಮಕವಾಗಿ ಹೆಚ್ಚಾಗಿದೆ

ತುಲನಾತ್ಮಕವಾಗಿ ಹೆಚ್ಚಾಗಿದೆ

ಪಿಪಿಎಫ್‌ನಲ್ಲಿ ನೀಡಲಾಗುವ ಬಡ್ಡಿದರವು ಇತರ ಸ್ಥಿರ ಹೂಡಿಕೆ ಉತ್ಪನ್ನಗಳಿಂದ ನೀಡಲಾಗುವ ಬಡ್ಡಿ ದರಕ್ಕಿಂತ ತುಲನಾತ್ಮಕವಾಗಿ ಹೆಚ್ಚಾಗಿದೆ. ಪಿಎಫ್‌ಎಫ್‌ನಲ್ಲಿ ಗಳಿಸಿದ ಬಡ್ಡಿ, ವಾರ್ಷಿಕ ಹೂಡಿಕೆ ಮತ್ತು ಮುಕ್ತಾಯದ ಮೊತ್ತವನ್ನು ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ.

ಮುಕ್ತಾಯದ ಸಮಯದಲ್ಲಿ ಹೆಚ್ಚಾಗಿರುತ್ತದೆ

ಮುಕ್ತಾಯದ ಸಮಯದಲ್ಲಿ ಹೆಚ್ಚಾಗಿರುತ್ತದೆ

ಪಿಪಿಎಫ್ ಖಾತೆಯ ಅವಧಿ 15 ವರ್ಷ ಆಗಿರುವುದರಿಂದ, ಕಳೆದ ಐದು ವರ್ಷಗಳಲ್ಲಿ ನೀವು ಕನಿಷ್ಟ 500 ರೂ. ಠೇವಣಿ ಇಟ್ಟರೂ ಸಹ, ಬಡ್ಡಿಯ ಸಂಯೋಜನೆಯ ಪರಿಣಾಮವು ಮುಕ್ತಾಯದ ಸಮಯದಲ್ಲಿ ಹೆಚ್ಚಾಗಿರುತ್ತದೆ.

ವಾರ್ಷಿಕವಾಗಿ ಲೆಕ್ಕಹಾಕಲಾಗುತ್ತದೆ

ವಾರ್ಷಿಕವಾಗಿ ಲೆಕ್ಕಹಾಕಲಾಗುತ್ತದೆ

ನಿಮ್ಮ ಪಿಪಿಎಫ್ ಖಾತೆಯ ಬಡ್ಡಿದರವನ್ನು ವಾರ್ಷಿಕವಾಗಿ ಲೆಕ್ಕಹಾಕಲಾಗುತ್ತದೆ ಇತರ ಹೂಡಿಕೆಗಳಿಗಿಂತ ಭಿನ್ನವಾಗಿ, ಪಿಎಫ್‌ಎಫ್‌ನಲ್ಲಿ ಬಡ್ಡಿ ಲೆಕ್ಕಾಚಾರದ ಪ್ರಕ್ರಿಯೆಯು ವಿಭಿನ್ನವಾಗಿರುತ್ತದೆ. ಪಿಪಿಎಫ್ ಬಡ್ಡಿಯನ್ನು ವಾರ್ಷಿಕವಾಗಿ ಜಮಾ ಮಾಡಲಾಗಿದ್ದರೂ, ಪ್ರತಿ ತಿಂಗಳ 5 ನೇ ತಾರೀಖಿಗೆ ಖಾತೆಯಲ್ಲಿನ ಕನಿಷ್ಠ ಬಾಕಿ ಆಧರಿಸಿ ಇದನ್ನು ಲೆಕ್ಕಹಾಕಲಾಗುತ್ತದೆ.

ಪ್ರತಿ ತಿಂಗಳ ಐದನೇ ತಾರೀಖಿನ ಮೊದಲು

ಪ್ರತಿ ತಿಂಗಳ ಐದನೇ ತಾರೀಖಿನ ಮೊದಲು

ಆದ್ದರಿಂದ, ನೀವು ಮಾಸಿಕ ಆಧಾರದ ಮೇಲೆ ಕೊಡುಗೆ ನೀಡುತ್ತಿದ್ದರೆ ನಿಮ್ಮ ಮಾಸಿಕ ಕೊಡುಗೆಯನ್ನು ಪ್ರತಿ ತಿಂಗಳ ಐದನೇ ತಾರೀಖಿನ ಮೊದಲು ಠೇವಣಿ ಇಡುವುದು ಮುಖ್ಯ. ಇದರಿಂದ ನೀವು ಖಂಡಿತವಾಗಿಯೂ ಪಿಪಿಎಫ್ ಮೇಲೆ ಹೆಚ್ಚು ಬಡ್ಡಿಯನ್ನು ಪಡೆಯಲು ಸಾಧ್ಯವಾಗುತ್ತದೆ

English summary

What Do You Need To Do To Get Maximum Interest On PPF?

What Do You Need To Do To Get Maximum Interest On PPF? here the 4 major points,
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X