Gold Loan: ಚಿನ್ನದ ಮೇಲೆ ಸಾಲ ತಗೋತ್ತಿದ್ದೀರಾ..? ಹಾಗಿದ್ದರೆ ತಪ್ಪದೇ ಈ ವಿಷಯಗಳನ್ನು ತಿಳಿದುಕೊಳ್ಳಿ..!

ಚಿನ್ನದ ಬೆಲೆ ವ್ಯಾಮೋಹ ಎಂದಿಗೂ ಕಡಿಮೆಯಾಗುವುದೇ ಇಲ್ಲ ಅಷ್ಟಮಟ್ಟಿಗೆ ಚಿನ್ನ ಎಲ್ಲರಿಗೂ ಅಚ್ಚುಮೆಚ್ಚು. ಬೆಲೆ ಗಗನಕ್ಕೆ ಏರಲೇ ಆಭರಣ ಪ್ರಿಯರು ಖರೀದಿ ಮಾಡುಹವುದಂತೂ ತಪ್ಪುವುದಿಲ್ಲ.ಈ ತಿಂಗಳಲ್ಲಿ ಚಿನ್ನ ಬೆಲೆಗಳು
ದಿನೇ ದಿನೇ ಹೆಚ್ಚುತ್ತಿದೆ. ಚಿನ್ನದ ಬೆಲೆ ಏರಿಕೆಯೊಂದಿಗೆ, ಚಿನ್ನದ ಸಾಲವನ್ನು ಬಳಸುವ ಜನರ ಸಂಖ್ಯೆ ಕಡ ಹೆಚ್ಚಳವಾಗುತ್ತದೆ. ಜೀವನದಲ್ಲಿ ಬರುವಂತಹ ಅನಿರೀಕ್ಷಿತ ಆರ್ಥಿಕ ಅಗತ್ಯಗಳು, ವ್ಯವಹಾರ, ಮದುವೆ, ಶಿಕ್ಷಣ ಇತ್ಯಾದಿಗಳಿಗೆ ಜನರು ಚಿನ್ನದ ಮೇಲೆ ಸಾಲವನ್ನು ಮಾಡಲು ನಿರ್ಧಾರವನ್ನು ಮಾಡುತ್ತಾರೆ. ಈ ಸಾಲಗಳು ಇತರೆ ಸಾಲಗಳಿಗೆ ಹೋಲಿಸಿದರೆ ಬಹುಬೇಗನೆ ಹಣ ನಿಮ್ಮ ಕೈ ಸೇರುತ್ತದೆ. ಸಾಲವನ್ನು ತಗೆದುಕೊಳ್ಳಲು ಚಿನ್ನ ಒಂದು ಇದ್ದರೆ ಸಾಕು ಯಾವುದೇ ದಾಖಲೆಗಳ ಅವಶ್ಯಕತೆ ಇಲ್ಲ.

ಚಿನ್ನದ ಮೇಲೆ ಸಾಲ ತಗೋತ್ತಿದ್ದೀರಾ..? ಹಾಗಿದ್ದರೆ ಈ ವಿಷಯ ತಿಳಿಯಿರಿ

ಚಿನ್ನದ ಸಾಲ ಎಂದರೇನು?

ಚಿನ್ನದ ಸಾಲಗಳು ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಒದಗಿಸುವ ಸುರಕ್ಷಿತ ಸಾಲವಾಗಿದೆ. ಇಲ್ಲಿನ ಸಾಲದ ಹಣವು ಚಿನ್ನದ ಪ್ರಸ್ತುತ ಮಾರುಕಟ್ಟೆ ಮೌಲ್ಯವನ್ನು ಆಧರಿಸಿದೆ. ಸಾಲಕ್ಕಾಗಿ ಚಿನ್ನವನ್ನು ನೀಡಿದ ಅದೇ ದಿನದಂದು ಸಾಲದ ಮೊತ್ತವನ್ನು ವಿತರಿಸಲಾಗುತ್ತದೆ. ಭಾರತದಲ್ಲಿ ಚಿನ್ನದ ಸಾಲಗಳ ಪ್ರಮುಖ ಲಕ್ಷಣಗಳು ಮತ್ತು ಸಾಲಗಾರನು ತಿಳಿದಿರಬೇಕಾದ ಇತ್ತೀಚಿನ ಆರ್ ಬಿಐ ಮಾರ್ಗಸೂಚಿಗಳನ್ನು ತಿಳಿದುಕೊಳ್ಳಲು ಮುಂದೆ ಓದಿ.

ಚಿನ್ನದ ಸಾಲ ಪಡೆಯುವುದು ಹೇಗೆ..?

ಚಿನ್ನದ ಸಾಲಕ್ಕೆ ಅರ್ಜಿ: ನೀವು ಮೊದಲು ಚಿನ್ನವನ್ನು NBFC ಅಥವಾ ಬ್ಯಾಂಕ್‌ಗೆ ತೆಗೆದುಕೊಂಡು ಹೋದರೆ, ಅದರ ತೂಕ ಮತ್ತು ಶುದ್ಧತೆಗಳನ್ನು ಪಪರಿಶೀಲನೆ ಮಾಡುತ್ತಾರೆ.

ಮೌಲ್ಯಮಾಪನ ಪರಿಶೀಲನೆ: ಚಿನ್ನದ ಮೌಲ್ಯಮಾಪನಕ್ಕೆ ಪ್ರಸ್ತುತ ಮಾರುಕಟ್ಟೆ ಮೌಲ್ಯವನ್ನು ಹೋಲಿಕೆ ಮಾಡುತ್ತಾರೆ. ಎನ್‌ಬಿಎಫ್ ಸಿ ಅಥವಾ ಬ್ಯಾಂಕ್ 18 ಕ್ಯಾರೆಟ್‌ ರಿಂದ 24 ಕ್ಯಾರೆಟ್‌ಗಳ ಚಿನ್ದ ಮೇಲೆ ಮಾತ್ರ ಸಾಲವನ್ನು ನೀಡುತ್ತಾರೆ.

ಸಾಲದ ಮೊತ್ತ: ಚಿನ್ನದ ಸಾಲದ ಮೊತ್ತವನ್ನು ಸಾಮಾನ್ಯವಾಗಿ ಸಾಲಕ್ಕೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಚಿನ್ನದ ಮೌಲ್ಯದ ಶೇ. 75ವರೆಗಿನ ಎಲ್‌ಟಿವಿ ಅನುಪಾತವನ್ನು ಆಧರಿಸಿ ಲೆಕ್ಕವನ್ನು ಮಾಡಿ ನಿಮ್ಮಗೆ ಹಣವನ್ನು ನೀಡಲಾಗುತ್ತದೆ.

ಮರುಪಾವತಿ ಆಯ್ಕೆಗಳು: ನೀವು ಒಂದೇ ಬಟ್ಟಿ ಸಮೇತ ಹಣವನ್ನು ನೀಡಿ ಸಾಲದ ಹಣವನ್ನು ತೀರಿಸಬಹುದು ಅಥವಾ ಇಎಂಐ ರೂಪದಲ್ಲಿ ಸಹ ಹಣವನ್ನು ಕಟ್ಟಬಹುದು.

ಚಿನ್ನವನ್ನು ಹಿಂತಿರುಗಿಸಲಾಗುತ್ತದೆ: ಸಾಲವನ್ನು ಪೂರ್ಣವಾಗಿ ಮರುಪಾವತಿಸಿದ ನಂತರ ನಿಮ್ಮ ಚಿನ್ನವನ್ನು ಹಿಂತಿರುಗಿಸಲಾಗುತ್ತದೆ.

ಭಾರತದಲ್ಲಿ ಚಿನ್ನದ ಸಾಲಗಳು ಏಕೆ ಜನಪ್ರಿಯವಾಗಿವೆ?

ಅತಿ ಹೆಚ್ಚು ಚಿನ್ನ ಖರೀದಿಸಉವ ದೇಶ ಭಾರತ. ಆದರೆ ಚಿನ್ನ ಮೇಲೆ ಸಾಲ ತಗೆದುಕೊಳ್ಳವವರ ಸಂಖ್ಯೆ ಕೂಡ ಹೆಚ್ಚಾಗಿ ಇದೆ. ಭಾರತದಲ್ಲಿ ಕೃಷಿಕರು ಮಾಧ್ಯಮವರ್ಗದವರು ಅತಿ ಹೆಚ್ಚಾಗಿ ಇರುವುದರಿಂದ ಕಷ್ಟ ಬಂದಾಗ ಚಿನ್ನದ ಸಾಲದ ಮೋರೆಯನ್ನು ಹೋಗುತ್ತಾರೆ.

ಚಿನ್ನದ ಸಾಲದ ಮೊತ್ತ ತ್ವರಿತ

ಚಿನ್ನದ ಮೇಲೆ ಸಾಲದ ಮೊತ್ತವನ್ನು ತ್ವರಿತವಾಗಿ ನೀವು ಪಡೆದುಕೊಳ್ಳಬಹುದು. ಸಾಮಾನ್ಯವಾಗಿ 10 ನಿಮಿಷಗಳಲ್ಲಿ. ಚಿನ್ನವನ್ನು ಮೇಲಾಧಾರವಾಗಿ ಒದಗಿಸಲಾಗಿರುವುದರಿಂದ, ಆದಾಯದ ಪುರಾವೆಯನ್ನು ಒದಗಿಸುವ ಅಗತ್ಯವಿಲ್ಲ. ಸಾಮಾನ್ಯವಾಗಿ ಮೂರು ತಿಂಗಳಿಂದ ಮೂವತ್ತಾರು ತಿಂಗಳವರೆಗೆ ಹೊಂದಿಕೊಳ್ಳುವ ಅವಧಿ ಲಭ್ಯವಿದೆ. ಅಸುರಕ್ಷಿತ ಸಾಲಗಳಿಗೆ ಹೋಲಿಸಿದರೆ ಕಡಿಮೆ ಬಡ್ಡಿದರಗಳು ಇರುತ್ತಾವೆ.

ಚಿನ್ನದ ಸಾಲಗಳ ಕುರಿತು ಆರ್‌ಬಿಐ ನಿಯಮಗಳು ಏನು..?

ಚಿನ್ನದ ಸಾಲವನ್ನು ಹೆಚ್ಚಿನ ಪಾರದರ್ಶಕತೆಯನ್ನು ಉತ್ತೇಜಿಸಲು ಮತ್ತು ಸಾಲಗಾರರನ್ನು ರಕ್ಷಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಏಪ್ರಿಲ್ 2025 ರಲ್ಲಿ ಕರಡು ನಿಯಮಗಳನ್ನು ಬಿಡುಗಡೆ ಮಾಡಿತು. ಅದು ಈ ಕೆಳಗಿನಂತೆ ಇದೆ.

  • ಬ್ಯಾಂಕುಗಳು ಅಡವಿಟ್ಟ ಚಿನ್ನವನ್ನು ಆರ್‌ಬಿಐ ಅನುಮೋದಿತ ಸಂಸ್ಥೆಗಳು ಅಥವಾ ಸಂಸ್ಥೆಗಳಲ್ಲಿರುವ ಕಮಾನುಗಳು ಅಥವಾ ಲಾಕರ್‌ಗಳಲ್ಲಿ ಸಂಗ್ರಹಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕು.
  • ಚಿನ್ನದ ಮೌಲ್ಯಮಾಪನದ ಬಗ್ಗೆ ಮೂರನೇ ವ್ಯಕ್ತಿಯ ಲೆಕ್ಕಪರಿಶೋಧನೆಗಳನ್ನು ನಡೆಸುವುದು ಸಹ ಸೂಕ್ತವಾಗಿರುತ್ತದೆ.
  • ಸಾಲಗಾರರು ಸಾಲಕ್ಕೆ ಅರ್ಜಿ ಸಲ್ಲಿಸುವ ಕಾರಣವನ್ನು ವಿವರಿಸುವ ಡಿಜಿಟಲ್ ಸಮ್ಮತಿ ನಮೂನೆಯನ್ನು ಒದಗಿಸಬೇಕು.
  • ಇತರ ಅಪಾಯಗಳನ್ನು ಕಡಿಮೆ ಮಾಡಲು ಆರ್‌ಬಿಐ ಸಾಲದ ನಿಯಮಗಳ ಮೇಲೆ ಮಿತಿಗಳನ್ನು ನಿಗದಿಪಡಿಸಬಹುದು.
  • 20,000 ರೂ.ಗಿಂತ ಹೆಚ್ಚಿನ ಯಾವುದೇ ಸಾಲವನ್ನು ಬ್ಯಾಂಕುಗಳ ಮೂಲಕ ವಿತರಿಸಬೇಕು. ಸಾಲ ನೀಡುವವರು ಬಡ್ಡಿದರಗಳು, ಹರಾಜು ನಿಯಮಗಳು ಮತ್ತು ಸೇವಾ ಶುಲ್ಕಗಳನ್ನು ಸಾಲಗಾರರಿಗೆ ನಿಖರವಾಗಿ ಬಹಿರಂಗಪಡಿಸಬೇಕು.
  • ಹರಾಜುಗಳನ್ನು ನ್ಯಾಯಯುತ ಮತ್ತು ಪಾರದರ್ಶಕ ಪ್ರಕ್ರಿಯೆಯ ಮೂಲಕ ನಡೆಸಬೇಕು. ಅತಿಯಾದ ಹತೋಟಿ ತಡೆಯಲು LTV ಅನುಪಾತದ ಮೇಲೆ ಶೇ. 75ಮಿತಿಯನ್ನು ಪಾಲನೆ ಮಾಡಬೇಕು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+