"ಸಂಬಳ ಒಂದರಿಂದಲೇ ಜೀವನ ಎಲ್ಲಿ ಮಾಡೋಕಾಗುತ್ತೆ? ಬಹಳ ಕಷ್ಟ ಆಗಿಬಿಟ್ಟಿದೆ" - ಈ ಮಾತನ್ನು ನೀವು ಪದೇ ಪದೇ ಕೇಳಿಸಿಕೊಂಡಿರಬಹುದು, ಆಡಿರಬಹುದು. ಹೌದು ಸಂಬಳ ಮಾತ್ರ ನೆಚ್ಚಿಕೊಂಡು, ಬದುಕಿನ ಬಂಡಿ ನೂಕುವುದು ಕಷ್ಟವೇ. ಹಾಗಂತ ಇರುವ ಕೆಲಸವನ್ನು ಬಿಟ್ಟು ಎಲ್ಲರೂ ಬಿಜಿನೆಸ್ ಮಾಡುವುದಕ್ಕೆ ಆಗುತ್ತಾ?
ಆದ್ದರಿಂದಲೇ ಹೆಚ್ಚುವರಿ ಆದಾಯಕ್ಕೆ ದಾರಿ ಮಾಡಿಕೊಳ್ಳುವಂಥ ಬೇಕಾದಷ್ಟು ದಾರಿಗಳಿವೆ. ಆ ಪೈಕಿ ಆಯ್ದ ಕೆಲವನ್ನು ಇಲ್ಲಿ ನೀಡಲಾಗುತ್ತಿದೆ. ಈ ಪೈಕಿ ಕೆಲವು ನಿಮ್ಮ ಹವ್ಯಾಸ ಆಗಿರಬಹುದು ಅಥವಾ ಆಸಕ್ತಿ ಆಗಿದ್ದಿರಬಹುದು. ಇದರ ಮೂಲಕವೇ ಆದಾಯ ಕೂಡ ಗಳಿಸಬಹುದು ಎಂದು ಆಲೋಚಿಸದಿದ್ದಲ್ಲಿ ಈ ಲೇಖನ ಓದಿದ ಮೇಲೆ ನಿರ್ಧಾರ ಕೈಗೊಳ್ಳಿ.
ಹಚ್ಚೆ ಹಾಕುವುದು
ಹಚ್ಚೆ ಹಾಕುವುದರಿಂದ ಆದಾಯಕ್ಕೆ ದಾರಿ ಮಾಡಿಕೊಳ್ಳಬಹುದಾ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಈಗೆಲ್ಲ ನಗರ- ಪಟ್ಟಣ ಪ್ರದೇಶಗಳಲ್ಲಿ "ಟ್ಯಾಟೂ" ಹಾಕಿಸಿಕೊಳ್ಳುವುದು ತುಂಬ ಸಾಮಾನ್ಯ ಹಾಗೂ ಇಷ್ಟದ ಫ್ಯಾಷನ್. ಅವುಗಳನ್ನು ಒಡವೆ ಎಂಬಂತೆ ನೋಡುತ್ತಾರೆ. ಎಷ್ಟು ದೊಡ್ಡ ಹಾಗೂ ಎಂಥ ಡಿಸೈನ್ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ ಎಂಬುದರ ಮೇಲೆ ರೇಟ್ ನಿಗದಿ ಆಗುತ್ತದೆ. ಇದೇನು ಅಷ್ಟು ಸುಲಭದ ವಿಚಾರ ಏನಲ್ಲ. ಚರ್ಮದ ಆರೋಗ್ಯದ ಬಗ್ಗೆ ಜ್ಞಾನ, ಕಲೆ, ಏಕಾಗ್ರತೆ ಎಲ್ಲ ಬೇಕಾಗುತ್ತದೆ. ವಾರಾಂತ್ಯದಲ್ಲಿ ಕೆಲವು ಗಂಟೆಗಳ ಕಾಲ ಇದಕ್ಕೆ ಅಂತ ಸಮಯ ಇಟ್ಟಲ್ಲಿ ಹೆಚ್ಚುವರಿಯಾಗಿ ಆದಾಯ ಮೂಲ ಮಾಡಿಕೊಳ್ಳಬಹುದು.
ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಆಗಾಗ ಶೆಫ್
ಕೆಲವರಿಗೆ ಅಡುಗೆ ಮಾಡುವುದರ ಬಗ್ಗೆ ಅಪರಿಮಿತವಾದ ಪ್ರೀತಿ ಇರುತ್ತದೆ. ಅಷ್ಟೇ ಅಲ್ಲ, ತುಂಬ ಚೆನ್ನಾಗಿ ಅಡುಗೆ ಮಾಡುತ್ತಾರೆ ಕೂಡ. ಆದರೆ ಯಾವುದೋ ಕಾರಣಕ್ಕೆ ಅದನ್ನು ವೃತ್ತಿಯಾಗಿ ಸ್ವೀಕರಿಸಲು ಸಾಧ್ಯವಾಗಿರುವುದಿಲ್ಲ. ಇನ್ನು ತಮ್ಮ ಕೆಲಸದ ಒತ್ತಡದ ಕಾರಣಕ್ಕೆ ವಾರದಲ್ಲಿ ಒಂದೆರಡು ದಿನ ಬಿಟ್ಟು, ಉಳಿದಂತೆ ಸಮಯ ಹೊಂದಿಸಿಕೊಳ್ಳಲು ಸಹ ಆಗಿರುವುದಿಲ್ಲ. ಅಂಥವರು ಫೈವ್ ಸ್ಟಾರ್ ಅಥವಾ ಅದಕ್ಕೂ ಮೇಲಿನ ಸ್ಟಾರ್ ಹೋಟೆಲ್ ಗಳಲ್ಲಿ ವಾರಾಂತ್ಯದಲ್ಲಿ ಕೆಲವು ಗಂಟೆಗಳು ಮಾತ್ರ ಶೆಫ್ ಆಗಿ ಹೋಗಬಹುದು. ಕೆಲವು ಗ್ರಾಹಕರಿಗೆ ಮನೆಯಲ್ಲಿ ಮಾಡಿದಂಥ ಅಥವಾ ನಿರ್ದಿಷ್ಟ ಖಾದ್ಯ- ಸ್ವಾದದಲ್ಲೇ ಇರಬೇಕಾಗುತ್ತದೆ. ಅಂಥವರು ಹೋಟೆಲ್ ಗಳಲ್ಲಿ ತಮ್ಮ ಅಗತ್ಯವನ್ನು ತಿಳಿಸಿ, ಶೆಫ್ ಗಳನ್ನು ಕರೆಸಿ, ತಮಗೆ ಮಾತ್ರ ಅಡುಗೆ ಸಿದ್ಧ ಮಾಡಿಸಿಕೊಳ್ಳುತ್ತಾರೆ.
ಸಂಗೀತ- ವಾದ್ಯ ಹೇಳಿಕೊಡುವವರಿಗೆ ಬೇಡಿಕೆ
ಸಂಗೀತ ಹಾಗೂ ಸಂಗೀತ ವಾದ್ಯಗಳು, ಅದರಲ್ಲೂ ಅಪರೂಪದ ವಾದ್ಯಗಳನ್ನು ಹೇಳಿಕೊಡುವವರಿಗೆ ಬೇಡಿಕೆ ಹೆಚ್ಚು. ಸಂಗೀತ ಕಲಿಯಲು ತರಗತಿಗಳಿಗೆ ಹೋಗುವ ಅಥವಾ ಮನೆಯ ಸದಸ್ಯರನ್ನು ತರಗತಿಗಳಿಗೆ ಕಳುಹಿಸುವುದು ನಾನಾ ಕಾರಣಗಳಿಗಾಗಿ ಕೆಲವರಿಗೆ ಸಾಧ್ಯವಾಗುವುದಿಲ್ಲ. ಅದೇ ರೀತಿ ವಾರದ ಎಲ್ಲ ದಿನವೂ ತರಗತಿಗಳಿಗೆ ಭಾಗವಹಿಸಲು ಸಹ ಸಾಧ್ಯ ಇರುವುದಿಲ್ಲ. ಅಂಥವರಿಗೆ ವಾರಾಂತ್ಯಗಳಲ್ಲಿ ಕ್ಲಾಸ್ ಗಳನ್ನು ಮಾಡುವ ಮೂಲಕ ಕೂಡ ಹೆಚ್ಚುವರಿ ಆದಾಯ ಮೂಲಕ್ಕೆ ದಾರಿ ಮಾಡಿಕೊಳ್ಳಬಹುದು. ಆದರೆ ನಿಮ್ಮ ಕಲೆ, ಸಾಮರ್ಥ್ಯದ ಬಗ್ಗೆ ಗೊತ್ತು ಮಾಡಿಕೊಡುವಂಥ ವಿಡಿಯೋವನ್ನು ಯೂಟ್ಯೂಬ್, ಫೇಸ್ ಬುಕ್, ಇನ್ ಸ್ಟಾಗ್ರಾಮ್ ನಂಥ ಕಡೆ ಪೋಸ್ಟ್ ಮಾಡಿದರೆ ಸಹಾಯ ಆಗುತ್ತದೆ.
ಭಾಷೆ ಕಲಿಸಿ, ಫೋಟೋಗ್ರಫಿ ಮಾಡಿ
ಕ್ರಿಯೇಟಿವ್ ಬರವಣಿಗೆ ಮಾಡಬಹುದು. ಬ್ಲಾಗ್, ವೆಬ್ ಸೈಟ್ ಮಾಡಬಹುದು. ಯೂಟ್ಯೂಬ್ ಚಾನೆಲ್ ಮಾಡಬಹುದು. ಟೇಬಲ್ ಟೆನಿಸ್, ಸ್ವಿಮ್ಮಿಂಗ್, ಫೋಟೋಗ್ರಫಿ ಹೇಳಿಕೊಡಬಹುದು. ಅದೇ ರೀತಿ ಭಾಷೆ, ಅದರಲ್ಲೂ ಬೇಡಿಕೆಯಲ್ಲಿ ಇರುವ ವಿದೇಶಿ ಭಾಷೆ ಮತ್ತು ಬೇರೆ ರಾಜ್ಯ ಹಾಗೂ ದೇಶಗಳಿಂದ ಬಂದವರಿಗೆ ಕನ್ನಡ ಹೇಳಿಕೊಡಬಹುದು. ಮದುವೆಗೆ ಮುಂಚೆ ಪ್ರೀ ವೆಡ್ಡಿಂಗ್ ಶೂಟ್ ಮತ್ತು ಗರ್ಭಿಣಿಯರ ಫೋಟೋ ಶೂಟ್ ಹಾಗೂ ಮಗು ಹುಟ್ಟಿದಾಗ ಕೆಲವರು ಫೋಟೋ ಶೂಟ್ ಮಾಡುತ್ತಾರೆ. ಇವುಗಳನ್ನು ನಿಮ್ಮ ಬಿಡುವಿನ ವೇಳೆಯಲ್ಲಿ ಹೆಚ್ಚಿನ ಒತ್ತಡ ಇಲ್ಲದೆ, ನೀವು ಈಗ ಮಾಡುತ್ತಿರುವ ಕೆಲಸದ ಜತೆ ಜತೆಗೆ ಮಾಡಬಹುದು.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications