ನೌಕರರ ಭವಿಷ್ಯ ನಿಧಿ ಅಥವಾ ಇಪಿಎಫ್ ಭಾರತದಲ್ಲಿ ಜನಪ್ರಿಯ ಉಳಿತಾಯ ಯೋಜನೆ ಹಾಗೂ ನಿವೃತ್ತಿ ನಿಧಿಯಾಗಿದೆ. ಇದು ವೇತನ ಪಡೆಯುವ ನೌಕರರು ತಮ್ಮ ಬೇಸಿಕ್ ಸ್ಯಾಲರಿಯಿಂದ ಶೇಕಡ 12 ರಷ್ಟು ಕಡಿತಗೊಳಿಸುವ ಮೂಲಕ ಪ್ರತಿ ತಿಂಗಳು ಪಿಂಚಣಿ ಕಾರ್ಪಸ್ ಅನ್ನು ರಚಿಸಲಾಗುತ್ತದೆ.
ಉದ್ಯೋಗದಾತರ ಕೊಡುಗೆ ಕೂಡ ಈ ನಿಧಿಯಲ್ಲಿ ಪರಿಗಣಿತವಾಗುತ್ತದೆ. ಕಾಲಾನಂತರದಲ್ಲಿ, ಈ ನಿಧಿಗಳು ಸಂಗ್ರಹವಾಗಿ ನಿವೃತ್ತಿಯ ನಂತರ ಸಂಚಿತ ಬಡ್ಡಿಯೊಂದಿಗೆ ಹಿಂಪಡೆಯಬಹುದಾಗಿದೆ. ಆದರೂ ಇತರ ರೀತಿಯ ಆದಾಯಗಳಂತೆ, ಇಪಿಎಫ್ ಹಿಂಪಡೆಯುವಿಕೆಗಳು ಕೆಲವು ಸಂದರ್ಭಗಳಲ್ಲಿ ತೆರಿಗೆಗೆ ಒಳಪಟ್ಟಿರುತ್ತವೆ.

ವ್ಯಕ್ತಿಗಳು ಇಪಿಎಫ್ ಅನ್ನು ಭಾಗಶಃ ಅಥವಾ ಸಂಪೂರ್ಣವಾಗಿ ವಿದ್ ಡ್ರಾಗಳಿಗೆ ಮಾಡುವಾಗ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅವುಗಳೆಂದರೆ
* ನೌಕರ ನಿವೃತ್ತಿ ವಯಸ್ಸನ್ನು ತಲುಪಿದ ನಂತರ ಸಂಪೂರ್ಣ PF ಮೊತ್ತವನ್ನು ಹಿಂತೆಗೆದುಕೊಳ್ಳಬಹುದಾಗಿದೆ. ವಯಸ್ಸನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆಯೂ ನಿವೃತ್ತಿ ವಯಸನ್ನು 55 ವರ್ಷ ವರ್ಷಗಳಿಗೆ ನಿಗದಿಪಡಿಸಿದೆ.
* ಉದ್ಯೋಗಿಯು ನಿವೃತ್ತಿಗೆ ಒಂದು ವರ್ಷ ಬಾಕಿ ಇರುವಾಗಲೇ ತಮ್ಮ ಪಿಎಫ್ ಫಂಡ್‌ನ ಶೇಕಡ 90 ಅನ್ನು ಹಿಂಪಡೆಯಬಹುದು.
* ನಿರುದ್ಯೋಗದ ಸಂದರ್ಭದಲ್ಲಿ, ಒಬ್ಬ ವ್ಯಕ್ತಿಯು ಕೆಲಸ ತೊರೆದ ಒಂದು ತಿಂಗಳ ನಂತರ 75%ದಷ್ಟು ಹಾಗೂ ಎರಡು ತಿಂಗಳ ನಿರುದ್ಯೋಗದ ನಂತರ ಸಂಪೂರ್ಣ ಪಿಎಫ್ ಮೊತ್ತವನ್ನು ವಿದ್ ಡ್ರಾ ಮಾಡಬಹುದು.
ಉದ್ಯೋಗಿಯ ಹಣಕಾಸಿನ ತುರ್ತುಸ್ಥಿತಿಗಳು ಅಥವಾ ವಿವಾಹ, ಭೂಮಿ ಖರೀದಿಸಲು ಅಥವಾ ಮನೆ ನಿರ್ಮಿಸಲು ಹೀಗೆ ಮಹತ್ವಪೂರ್ಣವಾದ ವಿವಿಧ ಉದ್ದೇಶಗಳಿಗಾಗಿ ತಮ್ಮ ಪಿಎಫ್ ಹಣವನ್ನು ಹಿಂಪಡೆಯಲು ನಿಯಮಗಳು ಅನುವು ಮಾಡಿಕೊಡುತ್ತದೆ.
ಇಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ವಾಪಸಾತಿಗೆ ಇರುವ ನಿರ್ದಿಷ್ಟ ಷರತ್ತುಗಳು ಮತ್ತು ದಾಖಲಾತಿಗ ಅಗತ್ಯತೆಗಳು ಆಗ್ಗಾಗೆ ಬದಲಾಗಬಹುದು. ಹಾಗಾಗಿ ಫಂಡ್ ಹಿಂಪಡೆಯುವ ವ್ಯಕ್ತಿ ಸಮಗ್ರ ಮಾರ್ಗದರ್ಶನಕ್ಕಾಗಿ ತಮ್ಮ ಉದ್ಯೋಗದಾತರನ್ನು ಅಥವಾ ಇಪಿಎಫ್‌ಒ ಅನ್ನು ಸಂಪರ್ಕಿಸಬೇಕು.
ತೆರಿಗೆಗೆ ಸಂಬಂಧಿಸಿದಂತೆ ಹೇಳುವುದಾದರೆ, ಉದ್ಯೋಗಿಗಳು ತಮ್ಮ ಇಪಿಎಫ್ ಖಾತೆಗಳಿಗೆ ನೀಡಿದ ನಿಧಿಗಳಿಗೆ ಸಾಮಾನ್ಯವಾಗಿ ತೆರಿಗೆ ವಿಧಿಸಲಾಗುವುದಿಲ್ಲ. ಆದರೆ ಹಿಂದಿನ ವರ್ಷದಲ್ಲಿನ ಡೆಪಾಸಿಟ್‌ಗಳ ಮೇಲೆ ಸೆಕ್ಷನ್ 80C ಅಡಿಯಲ್ಲಿ ಕಡಿತವನ್ನು ಕ್ಲೈಮ್ ಮಾಡಬಹುದು. ಅಂತಹ ಸಂದರ್ಭಗಳಲ್ಲಿ, ಸೆಕ್ಷನ್ 80C ಅನ್ನು ಈ ಹಿಂದೆ ಕ್ಲೈಮ್ ಮಾಡದಿದ್ದರೆ ಹೆಚ್ಚುವರಿ ತೆರಿಗೆ ಅನ್ವಯಿಸಬಹುದು.
ಉದ್ಯೋಗಿಯು ಒಂದು ಅಥವಾ ಅದಕ್ಕಿಂತ ಹೆಚ್ಚಿನ ಸಂಸ್ಥೆಗಳೊಂದಿಗೆ ಐದು ವರ್ಷಗಳ ನಿರಂತರ ಸೇವೆಯನ್ನು ಪೂರ್ಣಗೊಳಿಸುವ ಮೊದಲು ತಮ್ಮ PF ಹಣವನ್ನು ಹಿಂಪಡೆಯಲು ನಿರ್ಧರಿಸಿದರೆ, ಟಿಡಿಎಸ್ (Tax Deducted at Source) ಅನ್ವಯವಾಗುತ್ತದೆ ಎಂಬುವುದನ್ನು ಇಲ್ಲಿ ಗಮನಿಸಬೇಕು.ವಿದ್ ಡ್ರಾ ಮಾಡುವ ಮೊತ್ತವು 50,000 ರೂಪಾಯಿಗಿಂತ ಕಡಿಮೆಯಿದ್ದರೆ ಇಲ್ಲಿ ವಿನಾಯಿತಿ ಇದೆ.
ಇನ್ನು ಉದ್ಯೋಗಿ ಐದು ವರ್ಷಗಳ ನಿರಂತರ ಸೇವೆಯ ಬಳಿಕ ಮೊತ್ತವನ್ನು ವಿದ್ ಡ್ರಾ ಮಾಡಿದರೆ ಇಪಿಎಫ್ ವಿದ್ ಡ್ರಾಗೆ ತೆರಿಗೆ ವಿನಾಯಿತಿ ಇರುತ್ತದೆ. ಒಂದು ವೇಳೆ ನೀವು ಹಳೆಯ ಉದ್ಯೋಗದಾತರಿಂದ ಹೊಸ ಉದ್ಯೋಗದಾತರೆಡೆಗೆ ಬದಲಾಗಿ EPF ಬ್ಯಾಲೆನ್ಸ್ ಅನ್ನು ವರ್ಗಾಯಿಸಿದ್ದರೆ ಇದನ್ನು ಒಳಗೊಂಡಂತೆ ಕಡ್ಡಾಯ "5 ವರ್ಷಗಳ ಸೇವೆಯ" ಲೆಕ್ಕಾಚಾರ ಹಾಕಲಾಗುತ್ತದೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications