ಹೆಚ್ಚಿನ ತೆರಿಗೆದಾರರು ಈಗಾಗಲೇ ತಮ್ಮ ತೆರಿಗೆ ಉಳಿಸುವ ಹೂಡಿಕೆಯ ಮಿತಿಯನ್ನು ಮುಗಿಸಿದ್ದಾರೆ. ಸಾಧ್ಯವಾದಷ್ಟು ತೆರಿಗೆಯನ್ನು ಉಳಿಸುವ ನಿಟ್ಟಿನಲ್ಲಿ ವಿವಿಧ ಹೂಡಿಕೆ ಆಯ್ಕೆಗಳನ್ನು ಹುಡುಕಲು ನೀವು ಪ್ರಾರಂಭಿಸಿರಬಹುದು. ಹಾಗಿದ್ದಲ್ಲಿ ನೀವು ಈ ಲೇಖನವನ್ನು ಓದಲೇಬೇಕು.
ಸಂಬಳ ಪಡೆಯುವ ಜನರು ತಮ್ಮ ಎಚ್‌ಆರ್ ಇಲಾಖೆಗೆ ಹೂಡಿಕೆ ಪುರಾವೆಗಳನ್ನು ಸಲ್ಲಿಸಬೇಕಾಗಿದೆ. ಇದರಿಂದಾಗಿ ಪ್ರಸಕ್ತ ಹಣಕಾಸು ವರ್ಷಕ್ಕೆ ತೆರಿಗೆ ಉಳಿಸಲು ಇದು ಕೊನೆಯ ಅವಕಾಶವಾಗಿದೆ. ಇಲ್ಲದಿದ್ದರೆ ತೆರಿಗೆಯನ್ನು ಅವರ ಸಂಬಳದಿಂದ ಕಡಿತಗೊಳಿಸಲಾಗುತ್ತದೆ.

ಎರಡು ತೆರಿಗೆ ಪದ್ಧತಿ ಮೌಲ್ಯಮಾಪನ ಮಾಡಿ
ಪ್ರಸ್ತುತ 2024 ರಲ್ಲಿ ತೆರಿಗೆಗಳನ್ನು ಉಳಿಸಲು ಎಷ್ಟು ಮತ್ತು ಎಲ್ಲಿ ಹೂಡಿಕೆ ಮಾಡಬೇಕೆಂದು ನೀವು ನಿರ್ಧರಿಸುವ ಮೊದಲು, ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ನಿಮ್ಮ ತೆರಿಗೆ ಹೊಣೆಗಾರಿಕೆಗಳನ್ನು ಮೌಲ್ಯಮಾಪನ ಮಾಡುವುದು ಮುಖ್ಯವಾಗಿದೆ.
ಹೊಸ ತೆರಿಗೆ ಪದ್ಧತಿಯು ನಿಮಗೆ ಪ್ರಯೋಜನಕಾರಿಯಾಗಿದ್ದರೆ, ಹೊಸ ತೆರಿಗೆ ಪದ್ಧತಿಯಲ್ಲಿ ಸೆಕ್ಷನ್ 80ಸಿ ಮತ್ತು 80ಸಿಸಿಡಿ ಅಡಿಯಲ್ಲಿ ಕಡಿತಗಳು ಲಭ್ಯವಿಲ್ಲದ ಕಾರಣ ನೀವು ಯಾವುದೇ ಹೂಡಿಕೆಗಳನ್ನು ಮಾಡುವ ಅಗತ್ಯವಿಲ್ಲ. ನೀವು ಮಾಡಬೇಕಾದ ಹೂಡಿಕೆಗಳನ್ನು ಗಣನೆಗೆ ತೆಗೆದುಕೊಂಡ ನಂತರ ಹಳೆಯ ತೆರಿಗೆ ಪದ್ಧತಿಯು ನಿಮಗೆ ಪ್ರಯೋಜನಕಾರಿಯಾಗಿದ್ದರೆ ಅದನ್ನು ನೀವು ಪಾಲಿಸಬಹುದಾಗಿದೆ.
ಕೇವಲ ತೆರಿಗೆಗಳನ್ನು ಉಳಿಸುವ ಉದ್ದೇಶಕ್ಕಾಗಿ ಜೀವ ವಿಮಾ ಉತ್ಪನ್ನಗಳಲ್ಲಿ ಹೂಡಿಕೆ ಮಾಡಬೇಡಿ. ಯಾವುದೇ ಘಟನೆಯ ಸಂದರ್ಭದಲ್ಲಿ ನಿಮ್ಮ ಕುಟುಂಬದ ಸದಸ್ಯರ ಯೋಗಕ್ಷೇಮಕ್ಕಾಗಿಯೂ ನೀವು ಜೀವ ವಿಮೆಯಲ್ಲಿ ಹೂಡಿಕೆ ಮಾಡುವುದು ಅತೀ ಮುಖ್ಯವಾಗುತ್ತದೆ ಎಂಬುವುದು ತಿಳಿದಿರಬೇಕು.
"ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಸಿ ಅಡಿಯಲ್ಲಿ ಕಡಿತವನ್ನು ಪಡೆಯಲು ಹಲವು ಉತ್ಪನ್ನಗಳು ಲಭ್ಯವಿರುವುದರಿಂದ, ನಿರ್ದಿಷ್ಟ ಉತ್ಪನ್ನದಲ್ಲಿ ಹೂಡಿಕೆ ಮಾಡುವ ನಿರ್ಧಾರವು ವಿವಿಧ ಅಂಶಗಳನ್ನು ಅವಲಂಬಿಸಿರುತ್ತದೆ. ನೀವು ಚಿಕ್ಕವರಾಗಿದ್ದರೆ ಮತ್ತು ಅಪಾಯಗಳನ್ನು ತೆಗೆದುಕೊಳ್ಳಲು ಸಿದ್ಧರಾಗಿದ್ದರೆ, ಇಎಲ್‌ಎಸ್‌ಎಸ್ (ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್) ಅತ್ಯುತ್ತಮ ಉತ್ಪನ್ನವಾಗಿದೆ," ಎಂದು ತೆರಿಗೆ ಮತ್ತು ಹೂಡಿಕೆ ತಜ್ಞ ಬಲ್ವಂತ್ ಜೈನ್ ಹೇಳಿದ್ದಾರೆ.
ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಸಿದ್ಧರಿಲ್ಲದವರು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ), ಹಿರಿಯ ನಾಗರಿಕ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್) ಮತ್ತು ತೆರಿಗೆ-ಉಳಿತಾಯ ಎಫ್‌ಡಿ ಡೆಪಾಸಿಟ್ (ಎಫ್‌ಡಿ) ಗಳಂತಹ ಹೂಡಿಕೆಯ ಸಂಪೂರ್ಣ ಅವಧಿಗೆ ಸ್ಥಿರವಾದ ಬಡ್ಡಿದರವನ್ನು ನೀಡುವ ಯಾವುದೇ ಉತ್ಪನ್ನವನ್ನು ಖರೀದಿ ಮಾಡಬಹುದು.
"ಹೆಚ್ಚಿನ ತೆರಿಗೆ ಸ್ಲ್ಯಾಬ್‌ಗಳ ಅಡಿಯಲ್ಲಿ ಬರುವವರು ಮತ್ತು ದೀರ್ಘಾವಧಿಯವರೆಗೆ ತಮ್ಮ ಹಣವನ್ನು ಇರಿಸಲು ಸಿದ್ಧವಿರುವವರು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಅನ್ನು ಆಯ್ಕೆ ಮಾಡಬಹುದು. ಅಲ್ಲಿ ಗಳಿಸಿದ ಬಡ್ಡಿಯು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ. ನೀವು ಸಂಬಳ ಪಡೆಯುವವರಾಗಿದ್ದರೆ ನಿಮ್ಮ ಭವಿಷ್ಯ ನಿಧಿಗೆ ಹೆಚ್ಚಿನ ಕೊಡುಗೆ ನೀಡಲು ನೀವು ಸ್ವಯಂಪ್ರೇರಣೆಯಿಂದ ನಿರ್ಧರಿಸಬಹುದು. ಇದು ಯಾವುದೇ ಅಪಾಯವಿಲ್ಲದೆ ಹೆಚ್ಚಿನ ಆದಾಯವನ್ನು ನೀಡುತ್ತದೆ," ಎಂದು ಜೈನ್ ತಿಳಿಸುತ್ತಾರೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications