ಹಣ ಬೇಕಾಗಿದೆಯೇ?, ಚಿನ್ನವನ್ನು ಇಲ್ಲಿ ಮಾರಾಟ ಮಾಡಿ..

ಚಿನ್ನವು ಅತೀ ಮುಖ್ಯ ಹೂಡಿಕೆ ಆಯ್ಕೆಯಾಗಿದೆ. ಭಾರತದಲ್ಲಿ ಜನರು ಹೆಚ್ಚಾಗಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಮದುವೆಯ ಸೀಸನ್‌ನಲ್ಲಂತೂ ಚಿನ್ನದ ಖರೀದಿ ಭರ್ಜರಿಯಾಗಿ ನಡೆಯುತ್ತದೆ. ನಾವು ಸಾಮಾನ್ಯವಾಗಿ ಚಿನ್ನದ ಮೇಲೆ ಹೂಡಿಕೆ ಮಾಡಿದಾಗ ನಮ್ಮ ಆದಾಯವು ನಗದುಯೇತರ ರೂಪದಲ್ಲಿ ಸುರಕ್ಷಿತವಾಗಿ ಇರಿಸಿದಂತಾಗುತ್ತದೆ.

ಭಾರತದಲ್ಲಿ ಹಲವಾರು ವರ್ಷಗಳಿಂದ ಜನರು ಚಿನ್ನವನ್ನು ಹೂಡಿಕೆಯ ಪ್ರಮುಖ ವಿಧಾನವನ್ನಾಗಿಸಿಕೊಂಡಿದ್ದಾರೆ. ಕೈಯಲ್ಲಿ ಹಣವಿದ್ದರೆ ಸಾಕು, ಚಿನ್ನದ ಆಭರಣ ಖರೀದಿ ಮಾಡಿ ಜೋಪಾನ ಮಾಡೋಣ, ಮುಂದೆ ನಮ್ಮ ಮಕ್ಕಳ ಮದುವೆಗೆ ಅಥವಾ ಕಷ್ಟ ಕಾಲಕ್ಕೆ ಸಹಾಯವಾದೀತು ಎಂಬ ನಂಬಿಕೆಯನ್ನು ಜನರು ಹೊಂದಿದ್ದಾರೆ. ಪ್ರಸ್ತುತ ಚಿನ್ನದ ದರವು ಅಧಿಕವಾಗಿದೆ. ಈ ಸಂದರ್ಭದಲ್ಲಿ ಹಲವಾರು ಮಂದಿ ಚಿನ್ನವನ್ನು ಮಾರಾಟ ಮಾಡಬೇಕು ಎಂದು ಅಂದುಕೊಂಡಿರಬಹುದು. ಆದರೆ ನಾವು ಚಿನ್ನವನ್ನು ಎಲ್ಲಿ ಮಾರಾಟ ಮಾಡುವುದು?

ಎಲ್ಲಾ ಜ್ಯುವೆಲ್ಲರಿಗಳಲ್ಲಿ ಚಿನ್ನವನ್ನು ಖರೀದಿ ಮಾಡುವುದಿಲ್ಲ. ಕೆಲವೆಡೆ ನಿಮ್ಮನ್ನು ಅವರ ಮಾತಿನ ಜಾಲಕ್ಕೆ ಸಿಲುಕಿಸಿ, ಕಡಿಮೆ ಹಣಕ್ಕೆ ಚಿನ್ನವನ್ನು ಕೊಳ್ಳಬಹುದು. ವೇಸ್ಟೇಜ್ ಜಾರ್ಚ್, ಬಿಲ್ ಇಲ್ಲ ಎಂಬ ಕಾರಣ ನೀಡಿ ನಿಮ್ಮ ಚಿನ್ನದ ನೈಜ ಮೌಲ್ಯಕ್ಕಿಂತ ಕಡಿಮೆ ಹಣವನ್ನು ನಿಮಗೆ ನೀಡಬಹುದು. ಆದರೆ ನೀವು ಚಿನ್ನವನ್ನು ಮಾರಾಟ ಮಾಡಲು ಇಚ್ಛಿಸಿದ್ದರೆ ನಾವು ನಿಮಗೆ ಕೆಲವು ಉತ್ತಮ ಆಯ್ಕೆಯನ್ನು ನೀಡುತ್ತೇವೆ. ಇಲ್ಲಿದೆ ವಿವರ ಮುಂದೆ ಓದಿ....

 ಮುತ್ತೂಟ್ ಗೋಲ್ಡ್ ಪಾಯಿಂಟ್

ಮುತ್ತೂಟ್ ಗೋಲ್ಡ್ ಪಾಯಿಂಟ್

ನೀವು ತಕ್ಷಣವೇ ಹಣವನ್ನು ಪಡೆಯಲು ನಿಮ್ಮ ಹಳೆಯ ಚಿನ್ನವನ್ನು ಮುತ್ತೂಟ್ ಗೋಲ್ಡ್ ಪಾಯಿಂಟ್‌ನಲ್ಲಿ ಮಾರಾಟ ಮಾಡಬಹುದು. ಈ ಸಂಸ್ಥೆಯ ವೆಬ್‌ಸೈಟ್ ಪ್ರಕಾರ, ಮುತ್ತೂಟ್ ಗೋಲ್ಡ್ ಪಾಯಿಂಟ್‌ ನಿಮ್ಮ ಚಿನ್ನದ ಪ್ಯೂರಿಟಿಯನ್ನು ಉಚಿತವಾಗಿ ಪರಿಶೀಲನೆ ಮಾಡುತ್ತಾರೆ. ಅದರ ಹಣವನ್ನು ನಿಮಗೆ ನೀಡುವ ಹಣದಿಂದ ಕಡಿತ ಮಾಡುವುದಿಲ್ಲ. ಇಲ್ಲಿ ಶೇಕಡ ನೂರಕ್ಕೆ ನೂರರಷ್ಟು ಪಾರದರ್ಶಕತೆಯನ್ನು ಕಾಯ್ದುಕೊಳ್ಳಲಾಗುತ್ತದೆ. ನೀವು ಇಲ್ಲಿ ಚಿನ್ನ ಮಾರಾಟ ಮಾಡಬೇಕಾದರೆ, ನಿಮ್ಮ ಸಮೀಪದ ಕಚೇರಿಗೆ ಭೇಟಿ ನೀಡಿ. ಅಲ್ಲಿ ನಿಮ್ಮ ಚಿನ್ನದ ಶುದ್ಧತೆ ಪರಿಶೀಲನೆ ಮಾಡಲಾಗುತ್ತದೆ. ನಿಮ್ಮ ಎದುರಲ್ಲೇ ಇದನ್ನು ಮಾಡಲಾಗುತ್ತದೆ. ಬಳಿಕ ಪ್ರಸ್ತುತ ಚಿನ್ನದ ದರವನ್ನು ಆಧಾರಿಸಿ ನಿಮಗೆ ನಗದು ನೀಡಲಾಗುತ್ತದೆ. ನಿಮಗೆ ಹತ್ತು ಸಾವಿರದವರೆಗೆ ಹಣವನ್ನು ಪಡೆಯಬಹುದು. ಕೂಡಲೇ ನಿಮ್ಮ ಖಾತೆಗೆ ಪಾವತಿ ಮಾಡಲಾಗುತ್ತದೆ.

 ಎಂಎಂಟಿಸಿ-ಪಿಎಎಂಪಿ

ಎಂಎಂಟಿಸಿ-ಪಿಎಎಂಪಿ

ನಗದು ಪಡೆಯಲು ನೀವು ನಿಮ್ಮ ಚಿನ್ನವನ್ನು ಎಂಎಂಟಿಸಿ-ಪಿಎಎಂಪಿಯಲ್ಲಿ ಮಾರಾಟ ಮಾಡಬಹುದು. ಇಲ್ಲಿಯೂ ನಿಮ್ಮ ಚಿನ್ನದ ಶುದ್ಧತೆ, ಮೌಲ್ಯವನ್ನು ಪರಿಶೀಲನೆ ಮಾಡಲಾಗುತ್ತದೆ. ನಿಮ್ಮ ಚಿನ್ನದ ಶುದ್ಧತೆ ಪರಿಶೀಲನೆ ಬಳಿಕ ಅವರು ನಿಮ್ಮ ಕಣ್ಣ ಎದುರಲ್ಲೇ ಚಿನ್ನವನ್ನು ಕರಗಿಸುತ್ತಾರೆ. ಚಿನ್ನವನ್ನು ನೀವು ಮತ್ತೆ ಖರೀದಿ ಮಾಡಬಹುದಾದ ದರ, ಸೇವಾ ಶುಲ್ಕವನ್ನು ಚಿನ್ನವನ್ನು ಕರಗಿಸುವ ಮುನ್ನವೇ ನಿಮಗೆ ತಿಳಿಸುತ್ತಾರೆ. ನಿಮ್ಮ ಚಿನ್ನದ ಸಂಪೂರ್ಣ ಮೌಲ್ಯವನ್ನು ನಿಮ್ಮ ಬ್ಯಾಂಕ್ ಖಾತೆಗೆ ತ್ವರಿತವಾಗಿ ಜಮೆ ಮಾಡುತ್ತಾರೆ.

 ಗೋಲ್ಡ್ ಮಾಕ್ಸ್‌ನಲ್ಲಿ ಚಿನ್ನ ಮಾರಾಟ

ಗೋಲ್ಡ್ ಮಾಕ್ಸ್‌ನಲ್ಲಿ ಚಿನ್ನ ಮಾರಾಟ

ಗೋಲ್ಡ್ ಮಾಕ್ಸ್‌ನಲ್ಲಿ ನಿಮ್ಮ ಹಳೆಯ ಚಿನ್ನದ ನಾಣ್ಯ, ಬಳಕೆ ಮಾಡದ ಸೆಕೆಂಡ್ ಹ್ಯಾಂಡ್ ಜ್ಯುವೆಲ್ಲರಿಯನ್ನು ಕೂಡಾ ಖರೀದಿ ಮಾಡಲಾಗುತ್ತದೆ. ನೀವು ಇದಕ್ಕೂ ಕೂಡಾ ಕೂಡಲೇ ಹಣವನ್ನು ಪಡೆಯಬಹುದು. ನಿಮ್ಮಲ್ಲಿ ಬೆಳ್ಳಿ, ಪ್ಲಾಟಿನಂ ನಾಣ್ಯಗಳು, ಜ್ಯುವೆಲ್ಲರಿಗಳು ಇದ್ದರೂ ಅದನ್ನು ಇಲ್ಲಿ ಖರೀದಿ ಮಾಡಿ, ಅದರ ಮೌಲ್ಯಕ್ಕೆ ಅನುಗುಣವಾಗಿ ಹಣವನ್ನು ನಿಮಗೆ ನೀಡಲಾಗುತ್ತದೆ. ಇದರ ವೆಬ್‌ಸೈಟ್ ಪ್ರಕಾರ, "ಚಿನ್ನವು ತುಂಡಾಗಿದ್ದರೂ, ಚಿನ್ನದ ಆಭರಣದಲ್ಲಿ ಯಾವುದಾದರೂ ಹಾನಿಯಾಗಿದ್ದರೂ, ಚಿನ್ನದ ನಾಣ್ಯವನ್ನೂ ನಾವು ಖರೀದಿ ಮಾಡುತ್ತೇವೆ. ತ್ವರಿತವಾಗಿ ನಿಮಗೆ ನಗದು ನೀಡಲಾಗುತ್ತದೆ."

 ಮೊಬಿಕ್ವಿಕ್ ( MobiKWiK)

ಮೊಬಿಕ್ವಿಕ್ ( MobiKWiK)

ನೀವು ಮೊಬಿಕ್ವಿಕ್ ( MobiKWiK) ಆಪ್‌ ಮೂಲಕವೂ ನಿಮ್ಮ ಚಿನ್ನವನ್ನು ಮಾರಾಟ ಮಾಡಬಹುದು. ಇದಕ್ಕಾಗಿ ನೀವು ಕೇವಲ ಎರಡೇ ಹಂತವನ್ನು ಪಾಲಿಸಬೇಕಾಗಿದೆ. ನಿಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು MobiKWiK ಆಪ್‌ಗೆ ಲಾಗಿನ್ ಆಗಿ. ನೀವು ಮಾರಾಟ ಮಾಡಲು ಬಯಸುವ ಚಿನ್ನದ ಮೌಲ್ಯವನ್ನು ನಮೂದಿಸಿ. ಬಳಿಕ ನಿಮ್ಮ ಖಾತೆಗೆ 48 ಗಂಟೆಯ ಒಳಗಾಗಿ ನಿಮ್ಮ ಖಾತೆಗೆ ಹಣವು ಜಮೆ ಆಗಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+