ಈ ಹಿಂದೆ ಕಾರು ಅಂದರೆ ಲಕ್ಷುರಿ ಅಂತಾಗಿತ್ತು. ಆದರೆ ಈಗ ಅಗತ್ಯವಾಗಿದೆ. ಜತೆಗೆ ಬ್ಯಾಂಕ್ ಗಳಿಂದ ಕಾರು ಖರೀದಿಗೆ ಬಹಳ ಕಡಿಮೆ ಬಡ್ಡಿ ದರದ ಮತ್ತು ಸುದೀರ್ಘ ಅವಧಿಯ ಸಾಲ ದೊರೆಯುತ್ತಿದೆ. ಕೆಲವು ಕಾರುಗಳಂತೂ ಎಕ್ಸ್ ಶೋ ರೂಮ್ ದರದ ಮೇಲೆ ಶೇಕಡಾ ನೂರರಷ್ಟು ಹಣಕಾಸು ಸಾಲ ಸೌಲಭ್ಯ ಒದಗಿಸುತ್ತಿವೆ.
ಹಾಗಂತ ಕಾರು ಸಾಲ ಸಿಕ್ಕಿತು ಅಂತ ಎದ್ದುಬಿದ್ದು ಪಡೆಯಬೇಕು ಅಂತೇನೂ ಇಲ್ಲ. ಪ್ರೊಸೆಸಿಂಗ್ ಫೀ ಎಷ್ಟಿದೆ, ಅವಧಿ ಮುಗಿಯುವ ಮುನ್ನವೇ ಸಾಲ ತೀರಿಸಲು ಮುಂದಾದರೆ ಎಷ್ಟು ಶುಲ್ಕ ಪಾವತಿಸಬೇಕಾಗುತ್ತದೆ ಮತ್ತಿತರ ಮಾಹಿತಿಗಳನ್ನು ಪಡೆದುಕೊಂಡೇ ಮುಂದುವರಿಯಬೇಕು.

ಕನಿಷ್ಠ ಒಂದು ಲಕ್ಷ ರುಪಾಯಿ ಮೇಲ್ಪಟ್ಟು, ಐದು ವರ್ಷದ ಅವಧಿಗೆ ಯಾವ ಬ್ಯಾಂಕ್ ನಲ್ಲಿ ಕಾರು ಸಾಲದ ಮೇಲಿನ ಬಡ್ಡಿ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ:
* ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 6.85%- 7.80%
* ಬ್ಯಾಂಕ್ ಆಫ್ ಬರೋಡಾ 7.10%- 10.10%
* ಪಂಜಾಬ್ ಅಂಡ್ ಸಿಂದ್ ಬ್ಯಾಂಕ್ 7.10%- 7.90%
* ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 7.15%- 7.50%
* ಬ್ಯಾಂಕ್ ಆಫ್ ಮಹಾರಾಷ್ಟ್ರ 7.30%- 8.80%
* ಕೆನರಾ ಬ್ಯಾಂಕ್ 7.30%- 9.90%
* ಪಂಜಾಬ್ ನ್ಯಾಷನಲ್ ಬ್ಯಾಂಕ್ 7.30%- 7.80%
* ಬ್ಯಾಂಕ್ ಆಫ್ ಇಂಡಿಯಾ 7.35%- 8.05%
* ನೈನಿತಾಲ್ ಬ್ಯಾಂಕ್ 7.40%- 9.50%
* ಇಂಡಿಯನ್ ಓವರ್ ಸೀಸ್ ಬ್ಯಾಂಕ್ 7.55%
* ಐಡಿಬಿಐ ಬ್ಯಾಂಕ್ 7.75%- 8.35%
* ಇಂಡಿಯನ್ ಬ್ಯಾಂಕ್ 7.65%- 8.15%
* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 7.70%- 11.20%
* ಯುಕೋ ಬ್ಯಾಂಕ್ 7.70%
* ಐಸಿಐಸಿಐ ಬ್ಯಾಂಕ್ 7.90%- 9.85%


Click it and Unblock the Notifications