ಹೂಡಿಕೆ ಎಂದಾಗ ನಮ್ಮ ಮುಂದೆ ಬರುವ ಮೊದಲ ಪ್ರಶ್ನೆ ನಾವು ಮಾಡಿದ ಹೂಡಿಕೆ ಎಷ್ಟು ಸುರಕ್ಷಿತವಾಗಿರುತ್ತದೆ ಎಂಬುವುದು. ಇದರ ಜೊತೆಗೆ ಹೂಡಿಕೆಗೆ ಸಿಗುವ ರಿಟರ್ನ್ ಎಷ್ಟು ಎಂಬುವುದು ಆಗಿದೆ. ಆಗಿದ್ದಾಗ ನಮ್ಮ ಮುಂದೆ ಬರುವ ಸುರಕ್ಷಿತ ಹೂಡಿಕೆ ಆಯ್ಕೆಗಳಲ್ಲಿ ಫಿಕ್ಸಿಡ್ ಡೆಪಾಸಿಟ್ ಕೂಡಾ ಒಂದಾಗಿದೆ.
ಎಲ್ಲಾ ಬ್ಯಾಂಕ್ ವಿಭಾಗಗಳಲ್ಲಿ, ಸಣ್ಣ ಹಣಕಾಸು ಬ್ಯಾಂಕ್‌ಗಳು ಎಫ್‌ಡಿ ಮೇಲೆ ಅಧಿಕ ಬಡ್ಡಿದರವನ್ನು ನೀಡುತ್ತದೆ. ಅದರಲ್ಲೂ ಮುಖ್ಯವಾಗಿ ಹಿರಿಯ ನಾಗರಿಕರು ಸಾಮಾನ್ಯವಾಗಿ ಎಫ್‌ಡಿ ಮೇಲೆ 50 ಬಿಪಿಎಸ್ ಅಥವಾ ಅದಕ್ಕಿಂತ ಅಧಿಕ ಬಡ್ಡಿದರವನ್ನು ನೀಡುತ್ತದೆ. ಯಾವೆಲ್ಲ ಬ್ಯಾಂಕ್‌ಗಳಲ್ಲಿ ಎಫ್‌ಡಿ ಮೇಲೆ ಅಧಿಕ ಬಡ್ಡಿದರ ನೀಡಲಾಗುತ್ತದೆ ಎಂಬ ವಿವರ ಇಲ್ಲಿದೆ ಮುಂದೆ ಓದಿ....

ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಸಾಮಾನ್ಯ ಗ್ರಾಹಕರಿಗೆ ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಶೇಕಡ 4.5 ರಿಂದ ಶೇಕಡ 9 ರವರೆಗೆ ಬಡ್ಡಿದರವನ್ನು ನೀಡುತ್ತದೆ. ಏಳು ದಿನಗಳಿಂದ ಹತ್ತು ವರ್ಷಗಳಲ್ಲಿ ಮೆಚ್ಯೂರಿಟಿ ಆಗುವ ಡೆಪಾಸಿಟ್ ಮೇಲೆ ಹಿರಿಯ ನಾಗರಿಕರು ಈ ಬ್ಯಾಂಕ್‌ನಲ್ಲಿ ಶೇಕಡ 4.5 ರಿಂದ ಶೇಕಡ 9.5 ವರೆಗಿನ ಬಡ್ಡಿದರವನ್ನು ಪಡೆಯಬಹುದು. ಡೆಪಾಸಿಟ್ ಬಡ್ಡಿ ದರವನ್ನು ಅಕ್ಟೋಬರ್ 9 ರಂದು ಪರಿಷ್ಕರಿಸಲಾಗಿದೆ. 1001 ದಿನಗಳ ಎಫ್‌ಡಿಗೆ ಶೇಕಡ 9 ರಷ್ಟು ಅತ್ಯಧಿಕ ಬಡ್ಡಿದರ ನೀಡಲಾಗುತ್ತದೆ.
ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಏಳು ದಿನಗಳಿಂದ ಹತ್ತು ವರ್ಷಗಳಲ್ಲಿ ಮೆಚ್ಯೂರ್ ಆಗುವ ಡೆಪಾಸಿಟ್‌ಗಳ ಮೇಲೆ ಸಾಮಾನ್ಯ ಗ್ರಾಹಕರಿಗೆ ಶೇಕಡ 4 ರಿಂದ ಶೇಕಡ 8.6 ವರೆಗೆ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ನೀಡುತ್ತದೆ.
ಏಳು ದಿನಗಳಿಂದ ಹತ್ತು ವರ್ಷಗಳಲ್ಲಿ ಮೆಚ್ಯೂರ್ ಆಗುವ ಡೆಪಾಸಿಟ್‌ಗಳ ಮೇಲೆ ಹಿರಿಯ ನಾಗರಿಕರು ಶೇಕಡ 4.5 ರಿಂದ ಶೇಕಡ 9.1 ವರೆಗೆ ಬಡ್ಡಿದರ ಪಡೆಯಬಹುದಾಗಿದೆ. 2 ವರ್ಷಗಳಿಂದ 3 ವರ್ಷಗಳವರೆಗೆ ಮೆಚ್ಯೂರ್ ಆಗುವ ಡೆಪಾಸಿಟ್ ಮೇಲೆ ಶೇಕಡ 8.60 ರಷ್ಟು ಬಡ್ಡಿದರ ನೀಡಲಾಗುತ್ತದೆ. ಈ ದರಗಳು ಆಗಸ್ಟ್ 7 ರಿಂದ ಅನ್ವಯಿಸುತ್ತವೆ.
ಡಿಸಿಬಿ ಬ್ಯಾಂಕ್
ಡಿಸಿಬಿ ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ ಶೇಕಡ 3.75 ರಿಂದ ಶೇಕಡ 7.9 ಬಡ್ಡಿದರ ನೀಡುತ್ತದೆ. ಹಿರಿಯ ನಾಗರಿಕರಿಗೆ ಶೇಕಡ 4.25 ರಿಂದ ಶೇಕಡ 8.50 ವರೆಗೆ ಬಡ್ಡಿದರ ನೀಡುತ್ತದೆ. ಈ ದರಗಳು ಸೆಪ್ಟೆಂಬರ್ 27 ರಿಂದ ಜಾರಿಗೆ ಬರುತ್ತವೆ.
ಆರ್‌ಬಿಎಲ್ ಬ್ಯಾಂಕ್
ಸಾಮಾನ್ಯ ಗ್ರಾಹಕರು ಆರ್‌ಬಿಎಲ್ ಬ್ಯಾಂಕ್‌ನಲ್ಲಿ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲೆ ಶೇಕಡ 3.50 ರಿಂದ ಶೇಕಡ 7.80 ವರೆಗೆ ಬಡ್ಡಿಯನ್ನು ಪಡೆದರೆ, ಹಿರಿಯ ನಾಗರಿಕರು ಶೇಕಡ 4ರಿಂದ ಶೇಕಡ 8.30 ವರೆಗೆ ಬಡ್ಡಿದರವನ್ನು ಪಡೆಯುತ್ತಾರೆ. ಈ ದರಗಳು ಅಕ್ಟೋಬರ್ 16 ರಿಂದ ಜಾರಿಗೆ ಬರುತ್ತವೆ.
ಐಡಿಎಫ್‌ಸಿ ಫಸ್ಟ್ ಬ್ಯಾಂಕ್
ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ ಎಫ್‌ಡಿ ಮೇಲೆ ಶೇಕಡ 3.50 ರಿಂದ ಶೇಕಡ 7.75 ವರೆಗೆ ಬಡ್ಡಿದರವನ್ನು ನೀಡುತ್ತದೆ. ಮತ್ತೊಂದೆಡೆ, ಹಿರಿಯ ನಾಗರಿಕರಿಗೆ, ಬ್ಯಾಂಕ್ ಶೇಕಡ 4 ರಿಂದ ಶೇಕಡ 8.25 ವರೆಗೆ ಬಡ್ಡಿದರಗಳನ್ನು ನೀಡುತ್ತದೆ. 549 ದಿನಗಳಿಂದ ಎರಡು ವರ್ಷಗಳಲ್ಲಿ ಮೆಚ್ಯೂರ್ ಆಗುವ ಡೆಪಾಸಿಟ್‌ಗಳ ಮೇಲೆ ಗರಿಷ್ಠ ಶೇಕಡ 7.75 ಬಡ್ಡಿದರವನ್ನು ಬ್ಯಾಂಕ್ ನೀಡುತ್ತದೆ.
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್
ಸಾಮಾನ್ಯ ಗ್ರಾಹಕರು ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌ನಲ್ಲಿ ಶೇಕಡ 2.8 ರಿಂದ ಶೇಕಡ 7.40 ವರೆಗೆ ಬಡ್ಡಿಯನ್ನು ಪಡೆಯುತ್ತಾರೆ. 444 ದಿನಗಳಲ್ಲಿ ಮೆಚ್ಯೂರಿಟಿ ಆಗುವ ಡೆಪಾಸಿಟ್‌ಗಳ ಮೇಲೆ ಹೆಚ್ಚಿನ ಬಡ್ಡಿ ದರವನ್ನು ನೀಡಲಾಗುತ್ತದೆ. ಈ ದರಗಳು ಅಕ್ಟೋಬರ್ 1 ರಿಂದ ಜಾರಿಗೆ ಬರುತ್ತವೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲಾ ಗ್ರಾಹಕರಿಗೆ ಶೇಕಡ 3 ರಿಂದ ಶೇಕಡ 7.10 ರ ನಡುವೆ ಬಡ್ಡಿದರಗಳನ್ನು ನೀಡುತ್ತದೆ. ಹಿರಿಯ ನಾಗರಿಕರಿಗೆ ಶೇಕಡ 3.5 ರಿಂದ ಶೇಕಡ 7.6 ರವರೆಗೆ ಬಡ್ಡಿದರವನ್ನು ಬ್ಯಾಂಕ್ ನೀಡುತ್ತದೆ. ಈ ದರಗಳನ್ನು ಕೊನೆಯದಾಗಿ ಫೆಬ್ರವರಿ 15 ರಂದು ಪರಿಷ್ಕರಿಸಲಾಗಿತ್ತು.
ಐಸಿಐಸಿಐ ಬ್ಯಾಂಕ್
ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್ ಎಲ್ಲಾ ಗ್ರಾಹಕರಿಗೆ ಎಫ್‌ಡಿಗಳ ಮೇಲೆ ಶೇಕಡ 3 ರಿಂದ ಶೇಕಡ 7.1 ರ ನಡುವೆ ಬಡ್ಡಿದರವನ್ನು ನೀಡುತ್ತದೆ. ಮತ್ತೊಂದೆಡೆ, ಹಿರಿಯ ನಾಗರಿಕರಿಗೆ ಶೇಕಡ 3.50 ರಿಂದ ಶೇಕಡ 7.65 ರಷ್ಟು ಬಡ್ಡಿದರವನ್ನು ನೀಡುತ್ತದೆ. ಈ ನೂತನ ಎಫ್‌ಡಿ ಬಡ್ಡಿದರವು ಅಕ್ಟೋಬರ್ 16 ರಿಂದ ಜಾರಿಗೆ ಬರುತ್ತದೆ.
ಎಚ್‌ಡಿಎಫ್‌ಸಿ ಬ್ಯಾಂಕ್
ಎಚ್‌ಡಿಎಫ್‌ಸಿ ಬ್ಯಾಂಕ್ ವಿವಿಧ ಅವಧಿಯ ಎಫ್‌ಡಿಗಳಿಗೆ ಶೇಕಡ 3 ರಿಂದ ಶೇಕಡ 7.20 ವರೆಗೆ ಬಡ್ಡಿದರವನ್ನು ನೀಡುತ್ತದೆ. ಮತ್ತೊಂದೆಡೆ, ಹಿರಿಯ ನಾಗರಿಕರು ಈ ಬ್ಯಾಂಕ್‌ನಲ್ಲಿ ಶೇಕಡ 3.5 ರಿಂದ ಶೇಕಡ 7.75 ರವರೆಗೆ ಬಡ್ಡಿದರ ಪಡೆಯಬಹುದಾಗಿದೆ. ಈ ದರಗಳು ಅಕ್ಟೋಬರ್ 1 ರಿಂದ ಜಾರಿಗೆ ಬರುತ್ತದೆ.


Click it and Unblock the Notifications