ಭಾರತದ ಯಾವ ನಗರದಲ್ಲಿ ಚಿನ್ನದ ದರ ಕಡಿಮೆ ಮತ್ತು ಯಾಕೆ?

ಚಿನ್ನದ ದರವು ಭಾರತದ ಎಲ್ಲ ನಗರಗಳಲ್ಲೂ ಒಂದೇ ರೀತಿಯಾಗಿ ಇರುವುದಿಲ್ಲ. 22 ಹಾಗೂ 24 ಕ್ಜಾರೆಟ್ ಚಿನ್ನದ ದರವು ಒಂದೊಂದು ನಗರದಲ್ಲಿ ಒಂದೊಂದು ಇರುತ್ತದೆ. ಖಂಡಿತಾ ಕೆಲವು ನಗರಗಳಲ್ಲಿ ಅಗ್ಗವಾಗಿ ಇದ್ದೇ ಇರುತ್ತದೆ. ಭಾರತದಲ್ಲಿ ಚಿನ್ನದ ನಿಕ್ಷೇಪ ಹೆಚ್ಚಿಗೆ ಇಲ್ಲ. ಬಹುತೇಕ ಎಲ್ಲ ಚಿನ್ನವನ್ನು ಆಮದು ಮಾಡಿಕೊಳ್ಳಲಾಗುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್, ಯೆಸ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಮುಂತಾದವು ಚಿನ್ನವನ್ನು ಆಮದು ಮಾಡಿಕೊಳ್ಳುತ್ತವೆ. ಅದರ ಹೊರತಾಗಿ ಎಂಎಂಟಿಸಿ, ಎಸ್ ಟಿಸಿ ಮುಂತಾದವು ಸಹ ಚಿನ್ನವನ್ನು ಆಮದು ಮಾಡಿಕೊಳ್ಳುತ್ತವೆ.

ಒಂದೊಂದು ನಗರದಲ್ಲಿ ಒಂದೊಂದು ದರ

ಒಂದೊಂದು ನಗರದಲ್ಲಿ ಒಂದೊಂದು ದರ

ಆದರೂ ಭಾರತದಲ್ಲಿ ಚಿನ್ನದ ದರವು ಒಂದೇ ರೀತಿ ಇಲ್ಲ. ದೇಶದ ಪ್ರತಿ ರಾಜ್ಯ ಅಥವಾ ನಗರದಲ್ಲಿ ಚಿನ್ನದ ದರ ಬೇರೆ ಬೇರೆ ಇರುತ್ತದೆ. ಹೀಗೆ ಒಂದೊಂದು ಕಡೆಗೆ ಒಂದೊಂದು ದರ ಇರುವುದಕ್ಕೆ ಹಲವು ಕಾರಣಗಳಿವೆ. ಸ್ಥಳೀಯ ತೆರಿಗೆಗಳು, ಶುಲ್ಕ ಇವೆಲ್ಲವೂ ಸೇರಿ ಒಂದೊಂದು ಕಡೆ ಒಂದೊಂದು ಬೆಲೆ ಇರುವುದಕ್ಕೆ ಕಾರಣವಾಗಿದೆ. ಇದರ ಹೊರತಾಗಿ ಸ್ಥಳೀಯ ಚಿನ್ನ ಮಾರಾಟಗಾರರ ಒಕ್ಕೂಟ ಕೂಡ ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ. ಇದು ಕೂಡ ಚಿನ್ನದ ಬೆಲೆ ಒಂದು ಕಡೆಯಿಂದ ಮತ್ತೊಂದು ಕಡೆ ಬೆಲೆ ಬದಲಾಗುತ್ತದೆ. ಪ್ರತಿ ದಿನ ಎರಡು ಬಾರಿ ಚಿನ್ನದ ದರ ಪರಿಷ್ಕರಣೆ ಆಗುತ್ತದೆ ಮತ್ತು ಅದು ಅಂತರರಾಷ್ಟ್ರೀಯ ಮಾರುಕಟ್ಟೆ ದರವನ್ನು ಅವಲಂಬಿಸಿರುತ್ತದೆ.

ಕೇರಳದಲ್ಲಿ ಚಿನ್ನದ ದರ ಕಡಿಮೆ ಇದೆ

ಕೇರಳದಲ್ಲಿ ಚಿನ್ನದ ದರ ಕಡಿಮೆ ಇದೆ

22 ಹಾಗೂ 24 ಕ್ಯಾರೆಟ್ ಚಿನ್ನದ ದರದ ವಿಚಾರಕ್ಕೆ ಬಂದರೆ, ಕೇರಳದಲ್ಲಿ ಸದ್ಯಕ್ಕೆ ಬಹಳ ಕಡಿಮೆ ಇದೆ. ಮುಂಬೈ ಅಥವಾ ದೆಹಲಿಗೆ ಹೋಲಿಸಿದಲ್ಲಿ ಕರ್ನಾಟಕದ ನಗರಗಳಲ್ಲೂ ಚಿನ್ನದ ಬೆಲೆ ಕಡಿಮೆ ಇದೆ. ಉದಾಹರಣೆಗೆ ಬೆಂಗಳೂರಿನಲ್ಲಿನ 22 ಕ್ಯಾರೆಟ್ ಚಿನ್ನದ ದರವು ಉತ್ತರಕ್ಕಿಂತ ಕಡಿಮೆ. ಉತ್ತರ ಹಾಗೂ ಪಶ್ಚಿಮ ಭಾರತಕ್ಕೆ ಹೋಲಿಸಿದಲ್ಲಿ ದಕ್ಷಿಣದ ಕೆಲವು ನಗರಗಳಲ್ಲಿ ಚಿನ್ನದ ದರ ಕಡಿಮೆ ಇದೆ. 22 ಕ್ಯಾರೆಟ್ ಚಿನ್ನದ ದರವು ಯಾವ ನಗರದಲ್ಲಿ ಎಷ್ಟಿದೆ ಎಂಬ ಮಾಹಿತಿ ಹೀಗಿದೆ: ಮುಂಬೈ- 49,460, ದೆಹಲಿ- 48,910, ಕೋಲ್ಕತ್ತಾ- 49,530, ಬೆಂಗಳೂರು- 47,410, ಹೈದರಾಬಾದ್- 48,010, ಚೆನ್ನೈ- 48,010, ಅಹ್ಮದಾಬಾದ್- 48,870, ಕೇರಳ- 46,510.

ನಿಯಮಾವಳಿಗಳ ಬಗ್ಗೆ ಕೇಳಿ ತಿಳಿದುಕೊಳ್ಳಿ

ನಿಯಮಾವಳಿಗಳ ಬಗ್ಗೆ ಕೇಳಿ ತಿಳಿದುಕೊಳ್ಳಿ

ಕೇರಳದಲ್ಲಿ ಚಿನ್ನದ ದರವು ಅತ್ಯಂತ ಕಡಿಮೆ ಇರುವುದನ್ನು ಸದ್ಯದ ಮಟ್ಟಿಗೆ ನೋಡಬಹುದು. ಆದ್ದರಿಂದ ಚಿನ್ನ ಖರೀದಿಗೆ ಅದೇ ಅತ್ಯುತ್ತಮ ನಗರ. ಆದರೂ ನಾವು ಯಾವುದೇ ತೂಕದ ಚಿನ್ನವನ್ನು ಕಡಿಮೆ ಬೆಲೆ ಇರುವ ಕಡೆಗೆ ಆರಾಮವಾಗಿ ಖರೀದಿ ಮಾಡಬಹುದಾ? ಈ ವಿಚಾರದಲ್ಲಿ ಎಷ್ಟು ಪ್ರಮಾಣದ ಚಿನ್ನವನ್ನು ಖರೀದಿ ಮಾಡಬಹುದು ಹಾಗೂ ಎಷ್ಟು ಚಿನ್ನವನ್ನು ಒಯ್ಯಬಹುದು ಎಂಬ ಬಗ್ಗೆ ನಿಯಮಗಳು ಹೇಳುತ್ತವೆ ಎಂಬ ಬಗ್ಗೆ ನಮಗೆ ಖಾತ್ರಿ ಇಲ್ಲ. ಚಿನ್ನದ ದರ ಕಡಿಮೆ ಇದೆ ಎಂದು ಖರೀದಿ ಮಾಡುವ ಮುನ್ನ ಆಯಾ ಜ್ಯುವೆಲ್ಲರ್ ಬಳಿ ಈ ಬಗ್ಗೆ ವಿಚಾರಿಸುವುದು ಮುಖ್ಯ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+