ಕಳೆದ ಹಲವಾರು ತಿಂಗಳುಗಳಿಂದ ಏರುಗತಿಯಲ್ಲಿ ಸಾಗುತ್ತಿದ್ದ ಸಗಟು ಹಣದುಬ್ಬರವು (wholesale inflation) ಏರುಗತಿಯಲ್ಲಿ ಸಾಗುತ್ತಿದೆ. ಆದರೆ ಡಿಸೆಂಬರ್‌ನಲ್ಲಿ ಸಗಟು ಹಣದುಬ್ಬರ ಇಳಿಕೆಯಾಗಿದೆ. 2022ರ ನವೆಂಬರ್‌ನಲ್ಲಿ ಶೇಕಡ 5.85ರಷ್ಟಿದ್ದ ಸಗಟು ಹಣದುಬ್ಬರ, ಡಿಸೆಂಬರ್‌ಗೆ ಶೇಕಡ 4.95ಕ್ಕೆ ಇಳಿಕೆಯಾಗಿದೆ.
ಪ್ರಮುಖವಾಗಿ ಆಹಾರ ಪದಾರ್ಥಗಳ ಬೆಲೆ ಹಾಗೂ ಕಚ್ಚಾತೈಲ ದರವು ಇಳಿಕೆಯಾದ ಕಾರಣದಿಂದಾಗಿ ಸಗಟು ಹಣದುಬ್ಬರವು ಇಳಿಕೆಯಾಗಿದೆ. ಇನ್ನು 2021ರ ಡಿಸೆಂಬರ್‌ನಲ್ಲಿ ವೋಲ್‌ಸೇಲ್ ಪ್ರೈಸ್ ಇಂಡೆಕ್ಸ್ (ಡಬ್ಲ್ಯೂಪಿಎಸ್) ಹಣದುಬ್ಬರವು ಶೇಕಡ 14.27ರಷ್ಟಿತ್ತು. ಆದರೆ ಈಗ ಶೇಕಡ 10ರಷ್ಟು ಕುಸಿತ ಕಂಡಿದೆ.
ಆಹಾರ ಹಣದುಬ್ಬರವು ಶೇಕಡ 1.25ರಷ್ಟಿದ್ದು, ಇಂಧನ ಹಾಗೂ ಶಕ್ತಿ ಹಣದುಬ್ಬರವು ಡಿಸೆಂಬರ್‌ನಲ್ಲಿ ಶೇಕಡ 18.09ರಷ್ಟಾಗಿದೆ. ಉತ್ಪಾದನಾ ವಸ್ತುಗಳ ಹಣದುಬ್ಬರವು ತಿಂಗಳಲ್ಲಿ ಶೇಕಡ 3.37ಕ್ಕೆ ತಲುಪಿದೆ ಎಂದು ವಾಣಿಜ್ಯ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಸಗಟು ಹಣದುಬ್ಬರ ಇಳಿಕೆಗೆ ಮುಖ್ಯ ಕಾರಣ
ಆಹಾರ ಉತ್ಪನ್ನಗಳ ಬೆಲೆ ಇಳಿಕೆ, ಕಚ್ಚಾ ಎಣ್ಣೆಗಳ ಬೆಲೆ ಇಳಿಕೆ, ಕಚ್ಚಾ ತೈಲ, ನೈಸರ್ಗಿಕ ಅನಿಲ, ಆಹಾರ ಉತ್ಪನ್ನ, ಜವಳಿ, ರಾಸಾಯನಿಕ ಮತ್ತು ರಾಸಾಯನಿಕ ಉತ್ಪನ್ನಗಳ ಬೆಲೆ ಇಳಿಕೆಯಾದ ಕಾರಣದಿಂದಾಗಿ ಡಿಸೆಂಬರ್ 2022ರಲ್ಲಿ ಸಗಟು ಹಣದುಬ್ಬರವು ಇಳಿದಿದೆ ಎಂದು ಸಚಿವಾಲಯವು ಹೇಳಿದೆ. ಹಣದುಬ್ಬರವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಸರ್ಕಾರವು ಕ್ರಮವನ್ನು ಕೈಗೊಳ್ಳುತ್ತಿದೆ ಎಂದು ಈ ಹಿಂದೆ ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದರು.
ರಿಟೇಲ್ ಹಣದುಬ್ಬರ ಇಳಿಕೆ
ಡಿಸೆಂಬರ್‌ನಲ್ಲಿ ಭಾರತದಲ್ಲಿ ರಿಟೇಲ್ ಹಣದುಬ್ಬರವು ಶೇಕಡ 5.72ಕ್ಕೆ ಇಳಿಕೆಯಾಗಿದೆ. ಪ್ರಮುಖವಾಗಿ ದೇಶದಲ್ಲಿ ಆಹಾರ ಸಾಮಾಗ್ರಿಗಳ, ವಸ್ತುಗಳ ಬೆಲೆಯು ಇಳಿಯುತ್ತಿದೆ. ಇದರಿಂದಾಗಿ ರಿಟೇಲ್ ಹಣದುಬ್ಬರವು ಕುಸಿಯುತ್ತಿದೆ. ಸತತ ಎರಡು ತಿಂಗಳುಗಳಿಂದ ಆರ್‌ಬಿಐನ ಸಹಿಷ್ಣು ಮಟ್ಟಕ್ಕಿಂತ (ಶೇಕಡ 6) ಕೆಳಕ್ಕೆ ರಿಟೇಲ್ ಹಣದುಬ್ಬರವಿದೆ. ಆದರೆ ಗ್ರಾಮೀಣ ಹಣದುಬ್ಬರವು ಇನ್ನೂ ಕೂಡಾ ಹೆಚ್ಚಳವಾಗಿಯೇ ಉಳಿದಿದೆ. ನವೆಂಬರ್‌ನಲ್ಲಿ ಶೇಕಡ 6.09ರಷ್ಟಿದ್ದ ಗ್ರಾಮೀಣ ಹಣದುಬ್ಬರ ಡಿಸೆಂಬರ್‌ನಲ್ಲಿ ಶೇಕಡ 6.05ರಷ್ಟಿದೆ.
ಡಿಸೆಂಬರ್‌ನಲ್ಲಿ ಆಹಾರ ಹಾಗೂ ಪಾನೀಯಗಳ ಬೆಲೆಯು ಇಳಿದಿದೆ. ಇದರಿಂದಾಗಿ ಕಳೆದ ಒಂದು ವರ್ಷದಲ್ಲೇ ಡಿಸೆಂಬರ್‌ನಲ್ಲಿ ಹಣದುಬ್ಬರ ಭಾರೀ ಇಳಿಕೆಯಾಗಿದೆ. ಈ ನಡುವೆ ಆಹಾರ ಹಣದುಬ್ಬರವು ಕೂಡಾ ಇಳಿಕೆಯಾಗಿದೆ. ಸತತ ಎರಡನೇ ತಿಂಗಳು ಹಣದುಬ್ಬರ ಕುಸಿದಿದೆ.


Click it and Unblock the Notifications