For Quick Alerts
ALLOW NOTIFICATIONS  
For Daily Alerts

ಉದ್ದೇಶಪೂರ್ವಕವಾಗಿ ತೆರಿಗೆ ಕದಿಯುವ ಪ್ರಯತ್ನಕ್ಕೆ 7 ವರ್ಷ ತನಕ ಜೈಲು

|

ತೆರಿಗೆ ಕಟ್ಟಬೇಕಾದಷ್ಟು ಆದಾಯ ಇದ್ದರೂ ಅದರಿಂದ ತಪ್ಪಿಸಿಕೊಳ್ಳುವುದು ಅಪರಾಧ. ಈ ರೀತಿ ತೆರಿಗೆ ಕದಿಯುವವರಿಗೆ ಆದಾಯ ತೆರಿಗೆ ಇಲಾಖೆಯಿಂದ ಕಠಿಣ ಶಿಕ್ಷೆಗೆ ಗುರಿ ಪಡಿಸಲಾಗುತ್ತದೆ. ಒಬ್ಬ ವ್ಯಕ್ತಿ ಉದ್ದೇಶಪೂರ್ವಕವಾಗಿ ತನ್ನ ಆದಾಯದ ಮೇಲೆ ತೆರಿಗೆ, ದಂಡ ಅಥವಾ ಬಡ್ಡಿ ತಪ್ಪಿಸಿದಲ್ಲಿ ಅಥವಾ ಆದಾಯವನ್ನು ಕಡಿಮೆ ತೋರಿಸಿದಲ್ಲಿ ಅಂಥವರಿಗೆ ಮೂರು ತಿಂಗಳಿಗೆ ಕಡಿಮೆ ಇಲ್ಲದಂತೆ ಏಳು ವರ್ಷದ ತನಕ ಜೈಲು ಶಿಕ್ಷೆ ವಿಧಿಸಬಹುದು.

ಆದಾಯ ತೆರಿಗೆ ಇಲಾಖೆ- ತನಿಖಾ ಸಂಸ್ಥೆಗಳ ಮಧ್ಯೆ ಮಹತ್ವದ ಒಪ್ಪಂದಆದಾಯ ತೆರಿಗೆ ಇಲಾಖೆ- ತನಿಖಾ ಸಂಸ್ಥೆಗಳ ಮಧ್ಯೆ ಮಹತ್ವದ ಒಪ್ಪಂದ

ಜೈಲು ಶಿಕ್ಷೆಯ ಪ್ರಮಾಣವು ನಿರ್ಧಾರ ಆಗುವುದು ಎಷ್ಟು ಮೊತ್ತದ ತೆರಿಗೆ ಕದಿಯಲಾಗಿದೆ ಅಥವಾ ಎಷ್ಟು ಮೊತ್ತದ ಆದಾಯವನ್ನು ಕಡಿಮೆ ತೋರಿಸಲಾಗಿದೆ ಎಂಬುದರ ಆಧಾರದಲ್ಲಿ. ಅಧಿಕಾರಿಗಳ ವಿವೇಚನೆ ಮೇಲೆ ತೆರಿಗೆದಾರರಿಗೆ ದಂಡ ಕೂಡ ವಿಧಿಸಬಹುದು. ಉದ್ದೇಶಪೂರ್ವಕವಾಗಿ ತೆರಿಗೆಯನ್ನು ಕದಿಯುವುದು ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 276C ಅಡಿಯಲ್ಲಿ ಬರುತ್ತದೆ.

25 ಲಕ್ಷ ರುಪಾಯಿ ಮೇಲ್ಪಟ್ಟ ಆದಾಯ ಮುಚ್ಚಿಟ್ಟರೆ...

25 ಲಕ್ಷ ರುಪಾಯಿ ಮೇಲ್ಪಟ್ಟ ಆದಾಯ ಮುಚ್ಚಿಟ್ಟರೆ...

ಸೆಕ್ಷನ್ 276C ಮತ್ತಷ್ಟು ವ್ಯಾಖ್ಯಾನ ನೀಡುತ್ತಾ, ಯಾವುದೇ ವ್ಯಕ್ತಿ 25 ಲಕ್ಷ ರುಪಾಯಿ ಮೇಲ್ಪಟ್ಟ ಆದಾಯವನ್ನು ಮುಚ್ಚಿಟ್ಟಿದ್ದಲ್ಲಿ ಅಥವಾ ಆ ಬಗ್ಗೆ ಮಾಹಿತಿ ಬಹಿರಂಗ ಪಡಿಸದೆ ಇದ್ದಲ್ಲಿ ಅಂಥ ತಪ್ಪಿಗೆ ಕನಿಷ್ಠ ಆರು ತಿಂಗಳಿಂದ ಏಳು ವರ್ಷದ ತನಕ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು. ಒಂದು ವೇಳೆ ಮೊತ್ತವು ಇಪ್ಪತ್ತೈದು ಲಕ್ಷಕ್ಕಿಂತ ಕಡಿಮೆ ಇದ್ದಲ್ಲಿ ಕನಿಷ್ಠ ಮೂರು ತಿಂಗಳಿಂದ ಎರಡು ವರ್ಷದ ತನಕ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು.

ಕೋರ್ಟ್ ವಿವೇಚನೆಗೆ ತಕ್ಕಂತೆ ದಂಡ ವಿಧಿಸಬಹುದು

ಕೋರ್ಟ್ ವಿವೇಚನೆಗೆ ತಕ್ಕಂತೆ ದಂಡ ವಿಧಿಸಬಹುದು

ಇನ್ನೂ ಕೆಲ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯು ಉದ್ದೇಶಪೂರ್ವಕವಾಗಿ ತೆರಿಗೆ ಪಾವತಿ ಅಥವಾ ಬಡ್ಡಿ ಕಟ್ಟುವುದನ್ನು ತಪ್ಪಿಸಿದಲ್ಲಿ ಹೆಚ್ಚುವರಿಯಾಗಿ ಕನಿಷ್ಠ ಮೂರು ತಿಂಗಳಿಂದ ಎರಡು ವರ್ಷದ ತನಕ ಜೈಲು ಶಿಕ್ಷೆ ವಿಧಿಸಬಹುದು. ಆದಾಯ ತೆರಿಗೆ ಕಾಯ್ದೆ 276C (2) ಅಡಿಯಲ್ಲಿ ಅದಕ್ಕೆ ಅವಕಾಶ ಇದೆ. ಕೋರ್ಟ್ ವಿವೇಚನೆಗೆ ತಕ್ಕಂತೆ ದಂಡವನ್ನು ಕೂಡ ಹಾಕಬಹುದು.

ಉದ್ದೇಶಪೂರ್ವಕವಾಗಿ ತೆರಿಗೆ ಕದಿಯುವುದು ಅಂದರೇನು?

ಉದ್ದೇಶಪೂರ್ವಕವಾಗಿ ತೆರಿಗೆ ಕದಿಯುವುದು ಅಂದರೇನು?

ಈ ಸೆಕ್ಷನ್ ನಲ್ಲಿ ತೆರಿಗೆ ಕದಿಯಲು ಉದ್ದೇಶಪೂರ್ವಕ ಪ್ರಯತ್ನ ಅಂದರೆ, ಆ ವ್ಯಕ್ತಿಯ ಬಳಿ ಲೆಕ್ಕದ ಪುಸ್ತಕ ಅಥವಾ ಇನ್ಯಾವುದೇ ದಾಖಲೆಗಳು ಇದ್ದು, ಅದರಲ್ಲಿ ತಪ್ಪಾದ ಮಾಹಿತಿ ಅಥವಾ ಹೇಳಿಕೆ ಇರುವುದು. ಜತೆಗೆ ಯಾವುದೇ ವ್ಯಕ್ತಿ ತಪ್ಪಾದ ದಾಖಲೆ ಸೃಷ್ಟಿಸಿರುವುದು, ಹೇಳಿಕೆ ನೀಡಿರುವುದು ಅಥವಾ ಲೆಕ್ಕದ ಪುಸ್ತಕದಲ್ಲಿ ಯಾವುದಾದರೂ ಮಾಹಿತಿಯನ್ನು ಕೈ ಬಿಟ್ಟಿರುವುದು ಅಥವಾ ದಾಖಲೆ ಬಿಟ್ಟಿರುವುದು ಕಂಡುಬಂದಲ್ಲಿ ಅಂಥವನ್ನು ಉದ್ದೇಶಪೂರ್ವಕವಾಗಿ ತೆರಿಗೆ ತಪ್ಪಿಸುವ ಪ್ರಯತ್ನ ಎಂದು ಪರಿಗಣಿಸಲಾಗುತ್ತದೆ.

English summary

Wilful Income Tax Evasion May Land In Jail Up To 7 Years

If any person evade tax wilfully may land in jail up to 7 years. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X