For Quick Alerts
ALLOW NOTIFICATIONS  
For Daily Alerts

ತೀರಾ ಕಡಿಮೆ ಬೆಲೆಗೆ ಸಿಗುತ್ತಿವೆ ಈ ಕಂಪನಿಗಳ ಷೇರು; ಈಗ ಕೊಳ್ಳಬೇಕಾ?

|

ಷೇರುಪೇಟೆ ವಹಿವಾಟೇ ಒಂದು ದೊಡ್ಡ ಪ್ರಪಂಚ. ಹಲವು ಕಂಪನಿಗಳಿಗೆ ಬಂಡವಾಳ ಸಂಗ್ರಹಿಸಲು ಇರುವ ಮಾರುಕಟ್ಟೆ. ಸೆನ್ಸೆಕ್ಸ್, ನಿಫ್ಟಿ ಇತ್ಯಾದಿ ಷೇರುಪೇಟೆ ಸೂಚ್ಯಂಕಗಳು ನಿತ್ಯ ಅಲುಗಾಡುತ್ತಿರುತ್ತವೆ. ಕಂಪನಿಗಳ ಷೇರು ನಿತ್ಯವೂ ಏರಿಳಿತ ಆಗುತ್ತಲೇ ಇರುತ್ತದೆ. ಪೆಟ್ರೋಲ್ ಏರಿಕೆಯಾದರೆ ಷೇರುಪೇಟೆಯಲ್ಲಿ ಸಂಚಲನ ಆಗುತ್ತದೆ. ಎಲ್ಲೇ ಏನೇ ಮಹತ್ವದ ಬೆಳವಣಿಗೆಯಾದರೆ ಈ ಬೆಳವಣಿಗೆಗೆ ಸಂಬಂಧಿಸಿದ ಕಂಪನಿಗಳ ಷೇರುಗಳ ಬೆಲೆಯಲ್ಲಿ ವ್ಯತ್ಯಯವಾಗುತ್ತಿರುತ್ತದೆ.

ಅಮೆರಿಕದಲ್ಲಿ ಬಡ್ಡಿ ದರ ಹೆಚ್ಚಾದರೆ ಭಾರತದ ಸೆನ್ಸೆಕ್ಸ್ ಕುಸಿಯುತ್ತದೆ. ಹೀಗಾಗಿ ಷೇರುಪೇಟೆ ಏರಿಳಿತ ದೇಶ ವಿದೇಶ ವಿದ್ಯಮಾನಗಳ ಮೇಲೆ ಅವಲಂಬಿತವಾಗಿರುವುದು ಹೌದು. ಕೋವಿಡ್ ಸಂದರ್ಭದಲ್ಲಿ ಭಾರೀ ಕುಸಿದಿದ್ದ ಭಾರತೀಯ ಷೇರುಪೇಟೆ ಬಹುತೇಕ ಈಗ ಚೇತರಿಸಿಕೊಂಡು ಗೂಳಿಯಂತೆ ಮೈಕೊಡವಿ ಓಡುತ್ತಿದೆ. ವಿವಿಧ ಕಾರಣಗಳಿಗೆ ಹಲವು ಕಂಪನಿಗಳು ಷೇರುಪೇಟೆಯಲ್ಲಿ ಭಾರೀ ಕುಸಿತ ಕಂಡು ಕಡಿಮೆ ಬೆಲೆಗೆ ಸಿಗುತ್ತಿವೆ.

ಕ್ರಿಪ್ಟೋ ಜಗತ್ತು ಭಯಾನಕ; ಭಾರತದ ಹೂಡಿಕೆ ವ್ಯವಸ್ಥೆ ಅದ್ಭುತ: ಕನ್ನಡಿಗ ಸಿಇಒ ನಿತಿನ್ ಕಾಮತ್ಕ್ರಿಪ್ಟೋ ಜಗತ್ತು ಭಯಾನಕ; ಭಾರತದ ಹೂಡಿಕೆ ವ್ಯವಸ್ಥೆ ಅದ್ಭುತ: ಕನ್ನಡಿಗ ಸಿಇಒ ನಿತಿನ್ ಕಾಮತ್

ಇದರಲ್ಲಿ ಲಕ್ಸ್ ಇಂಡಸ್ಟ್ರೀಸ್ ಷೇರು ಶೇ. 62ರಷ್ಟು ಕುಸಿತ ಕಂಡಿದೆ. ಗರಿಷ್ಠ ಮಟ್ಟ 4,641 ರೂಪಾಯಿಗೆ ಬಿಕರಿಯಾಗುತ್ತಿದ್ದ ಲಕ್ಸ್ ಷೇರು ಈಗ 1735 ರೂಪಾಯಿಗೆ ಬಂದು ನಿಂತಿದೆ. ಹಾಗೆಯೇ, ಜಿಂದಾಲ್ ಪಾಲಿಫಿಲಂ, ಎಂಫೇಸಿಸ್, ವಿಪ್ರೋ ಷೇರುಗಳು ಶೇ. 40ಕ್ಕಿಂತ ಹೆಚ್ಚು ಬೆಲೆ ಇಳಿಕೆ ಕಂಡಿವೆ.

ತೀರಾ ಕಡಿಮೆ ಬೆಲೆಗೆ ಸಿಗುತ್ತಿವೆ ಈ ಕಂಪನಿಗಳ ಷೇರು; ಈಗ ಕೊಳ್ಳಬೇಕಾ?

ಆರು ಪ್ರಮುಖ ಕಂಪನಿಗಳ ಷೇರು ಬೆಲೆ ಸ್ಥಿತಿ
1) ಲಕ್ಸ್ ಇಂಡಸ್ಟ್ರೀಸ್: ಗರಿಷ್ಠ ಮಟ್ಟ 4641 ರೂನಿಂದ ಈಗ 1735 ರೂಗೆ ಇಳಿಕೆ: ಶೇ. 62 ಕುಸಿತ
2) ಎಂಫೇಸಿಸ್: ಗರಿಷ್ಠ 3491 ರೂನಿಂದ ಈಗ 1931 ರೂಗೆ ಇಳಿಕೆ: ಶೇ. 44 ಕುಸಿತ
3) ಜಿಂದಾಲ್ ಪಾಲಿಫಿಲಂ: ಗರಿಷ್ಠ 1444 ರೂನಿಂದ ಈಗ 867 ರೂಗೆ ಇಳಿಕೆ: ಶೇ. 40.17 ಕುಸಿತ
4) ಬಿಎಸ್‌ಇ: ಗರಿಷ್ಠ 1045 ರೂನಿಂದ ಈಗ 585 ರೂಗೆ ಇಳಿಕೆ: ಶೇ. 44 ಕುಸಿತ
5) ಶಾರ್ದಾ ಕ್ರಾಪ್‌ಕೆಮ್: ಗರಿಷ್ಠ 767 ರೂನಿಂದ ಈಗ 391 ರೂಪಾಯಿಗೆ ಇಳಿಕೆ: ಶೇ. 48 ಕುಸಿತ
6) ವಿಪ್ರೋ: ಗರಿಷ್ಠ 726 ರೂನಿಂದ ಈಗ 389 ರೂಪಾಯಿಗೆ ಇಳಿಕೆ: ಶೇ. 46.46 ಕುಸಿತ

ಡಿಜಿಟಲ್ ರುಪಾಯಿ ಯಾಕೆ ಮುಖ್ಯ? ಪ್ರಮುಖ ಕಾರಣಗಳು ಇಲ್ಲಿವೆಡಿಜಿಟಲ್ ರುಪಾಯಿ ಯಾಕೆ ಮುಖ್ಯ? ಪ್ರಮುಖ ಕಾರಣಗಳು ಇಲ್ಲಿವೆ

ವಿಪ್ರೋ ಷೇರು ಖರೀದಿಸಿ
ಇದರಲ್ಲಿ ವಿಪ್ರೋ ಮತ್ತು ಎಂಫೇಸಿಸ್ ಐಟಿ ಕ್ಷೇತ್ರದ ಕಂಪನಿಗಳಾಗಿವೆ. ಆರ್ಥಿಕ ತಜ್ಞರ ಒಟ್ಟಾರೆ ಮುನ್ನೋಟದಲ್ಲಿ ಐಟಿ ಕ್ಷೇತ್ರದ ಬೆಳವಣಿಗೆ ತುಸು ಕಡಿಮೆ ನಿರೀಕ್ಷೆ ಇದೆ. ಆದರೆ, ವಿಪ್ರೋ ಷೇರುಗಳು ವೃದ್ಧಿಸುವ ಸಾಧ್ಯತೆ ಇದೆ. ಎಂಕೇ ಗ್ಲೋಬಲ್ ಎಂಬ ಬ್ರೋಕರ್ ಸಂಸ್ಥೆಯು ವಿಪ್ರೋ ಷೇರು ಬೆಲೆ ಕೆಲ ತಿಂಗಳಲ್ಲಿ 389ರಿಂದ 460 ರೂಗೆ ಏರಿಕೆ ಆಗಬಹುದು ಎಂದು ಅಂದಾಜು ಮಾಡಿದೆ. ಹೀಗಾಗಿ, ವಿಪ್ರೋ ಮೇಲೆ ಹಣ ಹೂಡಲು ಇದು ಸಕಾಲ ಎಂದು ಭಾವಿಸಬಹುದು.

ತೀರಾ ಕಡಿಮೆ ಬೆಲೆಗೆ ಸಿಗುತ್ತಿವೆ ಈ ಕಂಪನಿಗಳ ಷೇರು; ಈಗ ಕೊಳ್ಳಬೇಕಾ?

ಲಕ್ಸ್ ಮತ್ತು ಅದೃಷ್ಟ
ಇನ್ನು, ಲಕ್ಸ್ ಇಂಡಸ್ಟ್ರೀಸ್ ಜವಳಿ ಉದ್ಯಮದ ಸಂಸ್ಥೆ. ಹತ್ತಿ ಬೆಲೆ ತೀರಾ ಹೆಚ್ಚಿದ್ದರಿಂದ ಲಕ್ಸ್ ಇಂಡಸ್ಟ್ರೀಸ್ ಆದಾಯ ಕಡಿಮೆಯಾಗಿ ಷೇರುಪೇಟೆಯಲ್ಲಿ ಬೆಲೆ ಕುಸಿದಿತ್ತು. ಈಗ ಕಾಟನ್ ಬೆಲೆ ಏನಾದರೂ ಇಳಿಕೆ ಕಾಣತೊಡಗಿದರೆ ಈ ಷೇರಿಗೆ ಮತ್ತೆ ಬೇಡಿಕೆ ಸೃಷ್ಟಿಯಾಗಬಹುದು. ದೂರಗಾಮಿ ಆಸಕ್ತಿಯಿಂದ ಲಕ್ಸ್ ಇಂಡಸ್ಟ್ರೀಸ್ ಮೇಲೆ ಹಣ ಹೂಡಿದರೆ ಲಾಭ ಉಂಟು. ಆದರೆ, ತತ್‌ಕ್ಷಣದ ಲಾಭ ನಿರೀಕ್ಷೆಯಲ್ಲಿ ಹೂಡಿಕೆ ಮಾಡುವುದು ಅದೃಷ್ಟ ಪರೀಕ್ಷೆಯಾಗಬಹುದು.

ಎಂಫೇಸಿಸ್ ಖರೀದಿಸಿ
ಮೋತಿಲಾಲ್ ಓಸ್ವಾಲ್ ಎಂಬ ಬ್ರೋಕರ್ ಸಂಸ್ಥೆ ಎಂಫೇಸಿಸ್‌ನ ಷೇರು ಕೊಳ್ಳಲು ಇದು ಸಕಾಲ ಎಂದು ಶಿಫಾರಸು ಮಾಡಿದೆ. ಸದ್ಯ 1931 ರೂ ಹೊಂದಿರುವ ಎಂಫೇಸಿಸ್ ಷೇರು ಬೆಲೆ ಕೆಲ ತಿಂಗಳ ಬಳಿಕ 2,430 ರೂಪಾಯಿಗೆ ಏರಿಕೆಯಾಗಬಹುದು ಎಂಬುದು ಓಸ್ವಾಲ್ ನಿರೀಕ್ಷೆ. ಹೀಗಾಗಿ, ಎಂಫೇಸಿಸ್ ಷೇರು ಖರೀದಿಸಿ ಎಂದು ಹೂಡಿಕೆದಾರರಿಗೆ ಮೋತಿಲಾಲ್ ಓಸ್ವಾಲ್ ಆತ್ಮವಿಶ್ವಾಸದಿಂದ ಸಲಹೆ ನೀಡಿದೆ.

English summary

Wipro And Other Big Companies Shares Selling At Cheap Price, Is This Right Time To Buy?

Even as the markets continue to look bullish, apart from intermittent profit booking, many stocks have fallen sharply on the back of poor quarterly numbers.
Story first published: Thursday, November 10, 2022, 20:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X