ಭಾರತ ಸೇರಿದಂತೆ ವಿಶ್ವದಾದ್ಯಂತ ಹಲವಾರು ದೇಶಗಳು ವಿಶ್ವ ಈರುಳ್ಳಿ ಬಿಕ್ಕಟ್ಟಿನಿಂದ ಬಳಲುತ್ತಿದೆ. ಈ ನಡುವೆ ರೈತರಿಗೆ ಲಭಿಸುವ ತರಕಾರಿ ಬೆಲೆಗಳು ದಿನದಿಂದ ದಿನಕ್ಕೆ ಕುಸಿಯುತ್ತಿದೆ. ತಾವು ಕಷ್ಟಪಟ್ಟು ಬೆಳೆದ ಈರುಳ್ಳಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಕ್ಕಿಂತ ಆ ಈರುಳ್ಳಿಯನ್ನು ಎಸೆಯುವ ದಾರಿಯನ್ನು ತುಳಿದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಭಾರತದಲ್ಲಿ ಈರುಳ್ಳಿ ಬೆಲೆಯು ಭಾರೀ ಇಳಿಕೆಯಾಗಿರುವುದು. ಕಡಿಮೆ ಬೆಲೆ ಲಭಿಸುವುದಕ್ಕೆ ರೈತರು ಬೆಲೆಯನ್ನೆ ಎಸೆಯುತ್ತಿದ್ದಾರೆ. ಏನೇ ಆದರೂ ಜನರ ಜೇಬಿಗೂ ಏಟು ಬೀಳಲಿದೆ.
ಇದು ರೈತರ ಒಂದು ರೀತಿಯ ಪ್ರತಿಭಟನೆಯೂ ಹೌದು. ಆದರೆ ವಿಶ್ವ ಬ್ಯಾಂಕ್‌ಗೆ ವಿಶ್ವ ಈರುಳ್ಳಿ ಬಿಕ್ಕಟ್ಟಿನ ನಡುವೆ ಭಾರತದಲ್ಲಿನ ಸ್ಥಿತಿ ಆತಂಕಕ್ಕೆ ಕಾರಣವಾಗಿದೆ. ರೈತರಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರ ಮುಂದಾಗಲು ನಿರ್ಧರಿಸಿದೆ. ರೈತರಿಂದ ಲಾಭವನ್ನು ಹಿಡಿಯದೆ ಈರುಳ್ಳಿ ಖರೀದಿಸುವಂತೆ ನ್ಯಾಷನಲ್ ಅಗ್ರಿಕಲ್ಚರ್ ಕಾಪೋರೇಷನ್ ಮಾರ್ಕೆಟಿಂಗ್ ಫೆಡರೇಷನ್ ಆಫ್ ಇಂಡಿಯಾಕ್ಕೆ (ಎನ್‌ಎಎಫ್‌ಇಡಿ) ಕೇಂದ್ರ ತಿಳಿಸಿದೆ. ಈ ವಿಶ್ವ ಈರುಳ್ಳಿ ಬಿಕ್ಕಟ್ಟಿನ ಬಗ್ಗೆ ಪ್ರಮುಖ ಮಾಹಿತಿ ಇಲ್ಲಿದೆ.

ವಿಶ್ವ ಈರುಳ್ಳಿ ಬಿಕ್ಕಟ್ಟಿಗೆ ಕಾರಣವೇನು?
ಭಾರತದಲ್ಲಿ ಈರುಳ್ಳಿ ಬೆಲೆಯ ಮೇಲೆ ಭಾರೀ ಏರಿಳಿತ ಕಂಡು ಬಂದಿದೆ. ವಿಶ್ವದ ಹಲವಾರು ದೇಶಗಳಲ್ಲಿ, ಪ್ರದೇಶಗಳಲ್ಲಿ ರೈತರು ಹಾಗೂ ಮಾರಾಟಗಾರರು ಪ್ರತಿ ಕೆಜಿ ಈರುಳ್ಳಿಗೆ 1-2 ರೂಪಾಯಿಯಷ್ಟೆ ಲಾಭವನ್ನು ಪಡೆಯುತ್ತಿದ್ದಾರೆ. ಕೆಲವೊಮ್ಮೆ ಈ ಲಾಭ ಶೂನ್ಯವೂ ಆಗಿರುವ ಸನ್ನಿವೇಶಗಳು ಹಲವಾರು ಇದೆ. ನಿರೀಕ್ಷೆಗೂ ಅಧಿಕ ಈರುಳ್ಳಿ ಬೆಲೆ ಉತ್ಪಾದನೆಯಾಗಿರುವುದು ಈರುಳ್ಳಿ ಬೆಲೆ ದಿಢೀರ್ ಆಗಿ ಭಾರೀ ಪ್ರಮಾಣ ಇಳಿಕೆಯಾಗಲು ಮುಖ್ಯ ಕಾರಣವಾಗಿದೆ.
ಇದರಿಂದಾಗಿ ಮುಖ್ಯವಾಗಿ ರೈತರು ಭಾರೀ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬೆಲೆ ಇದ್ದರೂ ಕೂಡಾ ಲಾಭ ಏನು ಇಲ್ಲದಂತಾಗಿದೆ. ರೈತರ ಲಾಭಾಂಶವು ಭಾರೀ ಇಳಿಕೆಯಾಗಿದೆ. ಭಾರತದಲ್ಲಿ ಪ್ರತಿ ಆಹಾರ ಪದಾರ್ಥಕ್ಕೂ ಈರುಳ್ಳಿ ಪ್ರಮುಖವಾಗಿದೆ. ಆದರೆ ಈಗ ಈ ಬಿಕ್ಕಟ್ಟು ಆತಂಕಕ್ಕೆ ಕಾರಣವಾಗಿದೆ. 500 ಕೆಜಿ ಈರುಳ್ಳಿಗೆ ಬರೀ 2 ರೂಪಾಯಿಯಂತೆ ಲಭ್ಯವಾಗಿರುವ ಬಗ್ಗೆ ವರದಿಯು ಹಲವಾರು ಮಾಧ್ಯಮಗಳಲ್ಲಿ ಕಂಡುಬಂದಿದೆ. ಈರುಳ್ಳಿ ಬೆಳೆದ ರೈತರು ಭಾರೀ ಆತಂಕಕ್ಕೆ ಒಳಗಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ರೈತರು 500 ಕೆಜಿ ಈರುಳ್ಳಿಗೆ 2 ರೂಪಾಯಿ ಚೆಕ್ ಅನ್ನು ಪಡೆದಿರುವ ವರದಿಯು ಕಂಡುಬಂದಿದೆ. ಭಾರೀ ದರ ಇಳಿಕೆ, ಬೇಡಿಕೆ ಕಡಿಮೆಯಾದ ಕಾರಣದಿಂದ ರೈತರಿಗೆ ನಷ್ಟವಾಗಿದ್ದು, ಇದೀಗ ಈರುಳ್ಳಿ ಬಿಕ್ಕಟ್ಟಿಗೆ ನಾಂದಿ ಹಾಡಿದಂತಾಗಿದೆ. ಭವಿಷ್ಯದಲ್ಲಿ ಬೆಳೆ ಕಡಿಮೆಯಾಗುವ ಸಾಧ್ಯತೆ ಕಂಡು ಬಂದಿದೆ. ಇದರಿಂದಾಗಿ ಈರುಳ್ಳಿ ಬೆಲೆ ಭಾರೀ ಏರಿಕೆಯಾಗುವ ಸಾಧ್ಯತೆಯಿದೆ. ಕೆಲವೆಡೆ ಈರುಳ್ಳಿ ಬೆಲೆ ಕಡಿಮೆಯಾಗಿರುವಾಗ, ಹಲವಾರು ದೇಶಗಳಲ್ಲಿ ಈರುಳ್ಳಿ ದುಬಾರಿಯಾಗಿದೆ. ಇದು ಜಾಗತಿಕ ಈರುಳ್ಳಿ ಬಿಕ್ಕಟ್ಟಿಗೆ ಕಾರಣವಾಗಿದೆ.


Click it and Unblock the Notifications