ನಮ್ಮ ದೇಶದ ಬೆಳವಣಿಗೆಗೆ ಆಗಲಿ ಅಥವಾ ನಮ್ಮ ವೈಯಕ್ತಿಕ ಬೆಳವಣಿಗೆಗೆ ಆಗಲಿ ಹಣವನ್ನು ಉಳಿತಾಯ ಮಾಡುವುದು ಅತೀ ಮುಖ್ಯವಾಗಿದೆ. ನಾವು ಇಂದು ಉಳಿತಾಯ ಮಾಡಿದ ಹಣ ಮುಂದೊಂದು ದಿನ ನಮ್ಮ ಕಷ್ಟ ಕಾಲದಲ್ಲಿ ಸಹಾಯಕ್ಕೆ ಬರಲಿದೆ. ಈ ನಡುವೆ ವಿಶ್ವ ಉಳಿತಾಯ ದಿನ ಆಚರಣೆ ಮಾಡಲಾಗುತ್ತದೆ ಎಂಬುವುದು ನಿಮಗೆ ತಿಳಿದಿದೆಯೇ?
ಹೌದು, ಪ್ರತಿ ವರ್ಷವು ವಿಶ್ವ ಉಳಿತಾಯ ದಿನವನ್ನು ಆಚರಣೆ ಮಾಡಲಾಗುತ್ತದೆ. ಇದನ್ನು ವಿಶ್ವ ಮಿತವ್ಯಯ ದಿನ ಎಂದು ಕೂಡಾ ಕರೆಯಲಾಗುತ್ತದೆ. ಉಳಿತಾಯದ ಪ್ರಾಮುಖ್ಯತೆಯನ್ನು ಈ ದಿನ ಸಾರುತ್ತದೆ. ವಿಶ್ವದಾದ್ಯಂತ ಈ ಮಿತವ್ಯಯ ದಿನ ಅಥವಾ ಉಳಿತಾಯ ದಿನವನ್ನು ಈ ವರ್ಷ ಅಕ್ಟೋಬರ್ 31ರಂದು ಆಚರಣೆ ಮಾಡಲಾಗುತ್ತದೆ. ಆದರೆ ಭಾರತದಲ್ಲಿ ಅಕ್ಟೋಬರ್ 30ರಂದು ಆಚರಣೆ ಮಾಡಲಾಗುತ್ತದೆ. ಅಕ್ಟೋಬರ್ 30ರಂದು ಭಾರತದ ಮಾಜಿ ಪ್ರಧಾನ ಮಂತ್ರಿ ಇಂದಿಯಾ ಗಾಂಧಿ ಸ್ವರ್ಗಸ್ಥರಾದ ದಿನವಾಗಿದ್ದು, ಈ ಕಾರಣದಿಂದಾಗಿ ಆ ದಿನ ಯಾವುದೇ ಆಚರಣೆಗಳನ್ನು ಮಾಡುವುದಿಲ್ಲ.
ನಾವು ಹಣಕಾಸು ಬಿಕ್ಕಟ್ಟಿನಲ್ಲಿ ಇದ್ದಾಗ ನಮಗೆ ಈ ಉಳಿತಾಯ ಮಾಡಿದ ಹಣವೇ ಸಹಾಯಕವಾಗಲಿದೆ. ಹಲವಾರು ಮಂದಿ ಹಣವನ್ನು ತಮ್ಮ ಭವಿಷ್ಯಕ್ಕಾಗಿ, ಕಷ್ಟ ಕಾಲಕ್ಕಾಗಿ ಉಳಿತಾಯ ಮಾಡುತ್ತಾರೆ. ಆದರೆ ವಿಶ್ವ ಉಳಿತಾಯ ದಿನವನ್ನು ಯಾಕಾಗಿ ಆಚರಣೆ ಮಾಡಲು ಆರಂಭಿಸಲಾಯಿತು, ಇದರೆ ಪ್ರಾಮುಖ್ಯತೆ ಏನು ಎಂಬುವುದು ನಿಮಗೆ ಗೊತ್ತಿದಿದೆಯೇ? ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ..
ವಿಶ್ವ ಉಳಿತಾಯ ದಿನದ ಇತಿಹಾಸ
ವಿಶ್ವ ಉಳಿತಾಯ ದಿನವನ್ನು ವಿಶ್ವ ಮಿತವ್ಯಯ ದಿನ ಎಂದು ಕೂಡಾ ಕರೆಯಲಾಗುತ್ತದೆ. ಇದರ ಆಚರಣೆಯನ್ನು ಮೊದಲ ಬಾರಿಗೆ ಅಕ್ಟೋಬರ್ 24, 1924ರಲ್ಲಿ ಇಟಲಿಯ ಮಿಲನ್‌ನಲ್ಲಿ ಆರಂಭ ಮಾಡಲಾಗಿದೆ. ಮೊದಲ ಅಂತಾರಾಷ್ಟ್ರೀಯ ಉಳಿತಾಯ ಬ್ಯಾಂಕ್ ಕಾಂಗ್ರೆಸ್‌ನಲ್ಲಿ ಈ ಆಚರಣೆ ಮಾಡಲಾಯಿತು. ಈ ಕಾಂಗ್ರೆಸ್ ಅಥವಾ ಸಮ್ಮೇಳನದ ಕೊನೆಯ ದಿನದಂದು ಇಟಲಿಯ ಪ್ರೋಫೆಸರ್ ಆದ ಫಿಲಿಪೋ ರವಿಝಾ ಈ ದಿನವನ್ನು ಘೋಷಣೆ ಮಾಡಿದ್ದಾರೆ. ಉಳಿತಾಯದ ಪ್ರಾಮುಖ್ಯತೆಯನ್ನು ಸಾರುವ ನಿಟ್ಟಿನಲ್ಲಿ ಈ ದಿನವನ್ನು ಆಚರಣೆ ಮಾಡಲು ಆರಂಭ ಮಾಡಲಾಗಿದೆ. ಮೊದಲನೆಯ ವಿಶ್ವಯುದ್ಧದ ಬಳಿಕ ಹಣ ಉಳಿತಾಯದ ಪ್ರಾಮುಖ್ಯತೆಯ ಬಗ್ಗೆ ಈ ಮಿತವ್ಯಯ ಕಾಂಗ್ರೆಸ್ ಚರ್ಚಿಸಿದೆ ಹಾಗೂ ಇದರ ಆಚರಣೆಗಾಗಿ ದಿನವನ್ನು ಘೋಷಿಸಿದೆ. ಆದರೆ ಎರಡನೇ ವಿಶ್ವಯುದ್ಧದ ಬಳಿಕವೇ ಈ ದಿನದ ಪ್ರಾಮುಖ್ಯತೆ ಅಧಿಕವಾಗಿದೆ.
ವಿಶ್ವ ಉಳಿತಾಯ ದಿನದ ಪ್ರಾಮುಖ್ಯತೆ
ನಾವು ಹಣವನ್ನು ಉಳಿತಾಯ ಮಾಡುವುದು ಅತೀ ಮುಖ್ಯವಾಗಿದೆ. ಉತ್ತಮ ಭವಿಷ್ಯಕ್ಕಾಗಿ, ಮಕ್ಕಳ ಶಿಕ್ಷಣಕ್ಕಾಗಿ ಹಣದ ಉಳಿತಾಯ ಅತ್ಯಗತ್ಯ. ವಿಶ್ವಕ್ಕೆ ಹಣ ಉಳಿತಾಯದ ಪ್ರಾಮುಖ್ಯತೆಯನ್ನು ಸಾರುವುದೇ ಈ ದಿನದ ಉದ್ದೇಶವಾಗಿದೆ. ಪ್ರಮುಖವಾಗಿ ವಿಶ್ವ ಮಿತವ್ಯಯ ದಿನ ಎಂದೇ ಈ ದಿನ ಖ್ಯಾತಿ ಗಳಿಸಿದೆ. ನಮ್ಮ ಉತ್ತಮ ಹಾಗೂ ಸುರಕ್ಷಿತ ಜೀವನಕ್ಕಾಗಿ ಹಣಕಾಸು ಸುರಕ್ಷತೆ ಇರುವುದು ಅತೀ ಮುಖ್ಯ. ನಾವು ಹಲವಾರು ಕಾರಣಗಳಿಗಾಗಿ ಹಣವನ್ನು ಉಳಿತಾಯ ಮಾಡಬಹುದು. ಮಕ್ಕಳ ಭವಿಷ್ಯ, ನಮ್ಮ ವೃದ್ಧಾಪ್ಯ, ನಮ್ಮ ವಿವಾಹ, ನಿವೃತ್ತಿ, ಜ್ಯುವೆಲ್ಲರಿ, ವಾಹನ ಖರೀದಿ ಮೊದಲಾದವುಗಳಿಗಾಗಿ ಹಣವನ್ನು ಉಳಿತಾಯ ಮಾಡಬಹುದು. ಆದರೆ ಇದರಲ್ಲಿ ಶಿಸ್ತು ಇರುವುದು ಮುಖ್ಯ. ಆ ಉಳಿತಾಯದ ಹಣವನ್ನೇ ನಾವು ಖರ್ಚು ಮಾಡಬಾರದು ಎಂಬುವುದೇ ಈ ದಿನ ಆಚರಣೆಯ ಪ್ರಾಮುಖ್ಯತೆಯಾಗಿದೆ.
ವಿಶ್ವ ಮಿತವ್ಯಯ ದಿನ 2022ರ ಥೀಮ್
"ಉಳಿತಾಯ ನಿಮ್ಮನ್ನು ಭವಿಷ್ಯಕ್ಕೆ ಸಿದ್ಧರಾಗಿಸುತ್ತದೆ" ( "Saving prepares you for the future") ಎಂಬುವುದು ಈ ವರ್ಷದ ಉಳಿತಾಯ ದಿನದ ಥೀಮ್ ಆಗಿದೆ. ಮಿತವ್ಯಯ ಎಂಬ ಶಬ್ದವೇ ನಾವು ದುಂದುವೆಚ್ಚ ಮಾಡಬಾರದು ಎಂಬುವುದನ್ನು ಪ್ರತಿನಿಧಿಸುತ್ತದೆ. ನಾವು ಹಣ ಖರ್ಚು ಮಾಡುವಾಗ ನೋಡಿಕೊಂಡು ಖರ್ಚು ಮಾಡಬೇಕು ಎಂಬುವುದು ಇದರ ಅರ್ಥವಾಗಿದೆ. ಈ ವರ್ಷದ ಥೀಮ್ ಕೂಡಾ ಅದನ್ನೇ ಹೇಳುತ್ತದೆ. ಹಾಗೆಯೇ ಹಣ ಉಳಿತಾಯದ ಪ್ರಾಮುಖ್ಯತೆಯನ್ನು ಸಾರುತ್ತದೆ. ಹಾಗೆಯೇ ಈ ದಿನವು ಬ್ಯಾಂಕ್‌ನ ಮೇಲೆ ಜನರ ನಂಬಿಕೆಯನ್ನು ಹೆಚ್ಚಿಸುವ ಉದ್ದೇಶ ಒಂದಿದೆ. ಕಳೆದ ಕೆಲವು ವರ್ಷದ ಥೀಮ್ ಈ ಕೆಳಗಿದೆ..
2021: ಉಳಿತಾಯದ ಪ್ರಾಮುಖ್ಯತೆ ಅರ್ಥಮಾಡಿಕೊಳ್ಳುವುದು (Understanding the Importance of Savings)
2020: ಕೊಂಚ ಕೊಂಚವೇ ಉಳಿತಾಯ ಮಾಡಿದಾಗ ದೊಡ್ಡದಾದ ಮೊತ್ತವಾಗುತ್ತದೆ (When you save a bit, big things follow)
2018: ನೀವು ಏನು ಬಯಸುತ್ತೀರಿ (What do you wish for?)
2017: ಉತ್ತಮ ಜೀವನಕ್ಕಾಗಿ ನಿಮ್ಮ ಹಣಕಾಸನ್ನು ತಿಳಿಯಿರಿ ಹಾಗೂ ಪ್ಲ್ಯಾನ್ ಮಾಡಿಕೊಳ್ಳಿ (Know and Plan your finances to live a better life)
ವಿಶ್ವ ಮಿತವ್ಯಯ ದಿನ ಆಚರಣೆ ಮಾಡುವುದು ಹೇಗೆ?
- ಮಕ್ಕಳಿಗೆ ಈ ದಿನದ ಪ್ರಾಮುಖ್ಯತೆಯನ್ನು ತಿಳಿಸಿ ಸಣ್ಣ ಮೊತ್ತವಾದರೂ ಉಳಿತಾಯ ಮಾಡುವುದನ್ನು ಹೇಳಿಕೊಡಬೇಕು. ಈ ದಿನ ನೀವು ಮಕ್ಕಳಿಗೆ ಹಣ ಉಳಿತಾಯ ಮಾಡುವ ಬಾಕ್ಸ್ ಅಥವಾ ಪಿಗ್ಗಿ ಬ್ಯಾಂಕ್ ನೀಡುವ ಮೂಲಕ ಆಚರಣೆ ಮಾಡಬಹುದು.
- ಹಲವಾರು ಕಡೆಗಳಲ್ಲಿ ಪೋಸ್ಟರ್ ತಯಾರಿ ಸ್ಪರ್ಧೆಯನ್ನು ಏರ್ಪಡಿಸುವುದು.
- ಉಳಿತಾಯದ ಪ್ರಾಮುಖ್ಯತೆಯನ್ನು ಮುಖ್ಯವಾಗಿ ಯುವಜನರಿಗೆ ತಿಳಿಸುವ ನಿಟ್ಟಿನಲ್ಲಿ ಶಾಲೆ, ಕಾಲೇಜುಗಳಲ್ಲಿ ಡಿಬೆಟ್, ಭಾಷಣ, ಕ್ವಿಜ್ ಮೊದಲಾದ ಸ್ಪರ್ಧೆಯನ್ನು ಏರ್ಪಡಿಸುವುದು.
- ಇನ್ನು ಹಣಕಾಸು ಸಂಸ್ಥೆಗಳು ಅಥವಾ ಬ್ಯಾಂಕ್‌ಗಳು ಈ ದಿನದಂದೇ ಉಳಿತಾಯ ಪ್ರಾಮುಖ್ಯತೆಯನ್ನು ಸಾರುವ ನಿಟ್ಟಿನಲ್ಲಿ ಹೊಸ ಉಳಿತಾಯ ಯೋಜನೆಯನ್ನು ಪರಿಚಯಿಸುತ್ತದೆ.
- ಬ್ಯಾಂಕ್‌ಗಳು ಕ್ಯಾಪೇನ್, ಇತರೆ ಚಟುವಟಿಕೆಗಳನ್ನು ನಡೆಸುತ್ತದೆ.
- ಲಾಟರಿ, ಗಾಂಬ್ಲಿಂಗ್‌ನಂತಹ ದುಡ್ಡು ನಷ್ಟ ಮಾಡಬಹುದಂತಹ ಕಾರ್ಯದಲ್ಲಿ ತೊಡಗದಂತೆ ಎಚ್ಚರಿಕೆ ನೀಡುವುದು. ಸಿನೆಮಾ ಪ್ರದರ್ಶನ ಮಾಡಬಹುದು.
ಹಣವನ್ನು ಹೇಗೆ ನಾವು ಉಳಿತಾಯ ಮಾಡಬಹುದು?
- ನಿಮ್ಮ ಖರ್ಚಿನ ಮೇಲೆ ನಿಗಾ ಇರಿಸುವುದರ ಮೂಲಕ ನೀವು ಹಣವನ್ನು ಉಳಿತಾಯ ಮಾಡಲು ಸಾಧ್ಯವಿದೆ. ಮಾಸಿಕ ಖರ್ಚಿನ ಬಗ್ಗೆ ಬಜೆಟ್ ತಯಾರಿ ಮಾಡಿಕೊಂಡರೆ ಖರ್ಚು ಸರಿದೂಗಿಸಲು ಸಾಧ್ಯವಾಗುತ್ತದೆ.
- ನಿಮಗೆ ತೀರಾ ಅಗತ್ಯವಾಗಿರುವ ವಸ್ತುಗಳನ್ನು ಲೀಸ್ಟ್ ಮಾಡಿಕೊಳ್ಳಿ. ಖರೀದಿ ಮಾಡುವಾಗ ಅದನ್ನು ಮಾತ್ರ ಖರೀದಿ ಮಾಡಿ.
- ಕ್ರೆಡಿಟ್ ಕಾರ್ಡ್ ಬಳಕೆ ಮಾಡುವ ಅಭ್ಯಾಸವನ್ನು ಸಾಧ್ಯವಾದಷ್ಟು ಬಿಟ್ಟುಬಿಡಿ. ಕ್ರೆಡಿಟ್ ಕಾರ್ಡ್ ಇದೆ ಎಂಬ ಕಾರಣದಿಂದಾಗಿ ಒಟ್ಟಾರೆ ಖರ್ಚು ಮಾಡಿಕೊಂಡು ಲಕ್ಷಾಂತರ ರೂಪಾಯಿ ಸಾಲಕ್ಕೆ ಬಿದ್ದವರು ಹಲವಾರು ಮಂದಿ ಇದ್ದಾರೆ.
- ನಿಮ್ಮ ಎಲೆಕ್ಟ್ರಿಸಿಟಿ ಬಿಲ್, ನೀರಿನ ಬಿಲ್‌ನ ಲೆಕ್ಕಾಚಾರ ಸರಿದೂಗಿಸಿಕೊಳ್ಳಿ.
- ಪ್ರತಿ ದಿನ ಅಥವಾ ಹೆಚ್ಚಾಗಿ ಹೊಟೇಲ್, ರೆಸ್ಟೋರೆಂಟ್‌ಗಳಲ್ಲಿ ಆಹಾರ ಸೇವಿಸುವುದನ್ನು ನಿಲ್ಲಿಸಿ. ಮಾಸಿಕ ಅಥವಾ ವಾರದಲ್ಲಿ ಒಮ್ಮೆಯಾದರೆ ಉತ್ತಮ.
- ವಿಮೆ, ಷೇರು, ಎಫ್‌ಡಿ ಮೊದಲಾದವುಗಳಲ್ಲಿ ಹೂಡಿಕೆ ಮಾಡಿ. ಆದರೆ ಹೂಡಿಕೆ ಸುರಕ್ಷಿತವೇ ಎಂದು ನೋಡಿಕೊಳ್ಳಿ.
- ಹಣವನ್ನು ದುಂದುವೆಚ್ಚ ಮಾಡಬೇಡಿ. ವೇತನ ಬಂದ ಕೂಡಲೇ ಖರ್ಚು ಮಾಡಿ ಹಣ ಮುಗಿಸುವುದನ್ನು ನಿಲ್ಲಿಸಿ. ಖರ್ಚು ಮಿತವಾಗಿರಲಿ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications