ಅಸಂಖ್ಯಾತ ಭಾರತೀಯ ವಿದ್ಯಾರ್ಥಿಗಳು ವಿದೇಶದಲ್ಲಿ ಅಧ್ಯಯನ ಮಾಡಲು ಮುಂದಾಗುತ್ತಾರೆ. ಅದು ಹಲವಾರು ವಿದ್ಯಾರ್ಥಿಗಳ ಕನಸು ಕೂಡಾ ಹೌದು. ಆದರೆ ಅಂತರರಾಷ್ಟ್ರೀಯ ಕಾಲೇಜು/ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯುವುದು ಮಾತ್ರ ಅತೀ ದುಬಾರಿ ಎಂಬ ಮಾತುಗಳಿದೆ.
ಶಿಕ್ಷಣದ ವೆಚ್ಚ ಮತ್ತು ಜೀವನ ವೆಚ್ಚಗಳು ಒಂದು ದೇಶದಿಂದ ಇನ್ನೊಂದಕ್ಕೆ ಬದಲಾಗುತ್ತವೆ. ಆದರೆ ವಿದೇಶದಲ್ಲಿಯೂ ನಾವು ಕೈಗೆಟಕುವ ದರದಲ್ಲಿ ವಿದ್ಯಾರ್ಜನೆಯನ್ನು ಮಾಡಬಹುದಾಗಿದೆ. ಕೆಲವು ದೇಶಗಳು ಯಾವುದೇ ಶುಲ್ಕವಿಲ್ಲದ ಸಾರ್ವಜನಿಕ ವಿಶ್ವವಿದ್ಯಾನಿಲಯಗಳನ್ನು ಹೊಂದಿದ್ದು ಅದು ಉತ್ತಮ ಆಯ್ಕೆಯಾಗಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

1. ನಾರ್ವೆಯಲ್ಲಿ ಶಿಕ್ಷಣ
ನಾರ್ವೆಯನ್ನು ವಿಶ್ವದ ಅತ್ಯಂತ ದುಬಾರಿ ದೇಶಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಆದರೆ ಬೇರೆ ದೇಶದ ವಿದ್ಯಾರ್ಥಿಗಳು ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಯಾವುದೇ ಬೋಧನಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಜೊತೆಗೆ, ಅವರು ತಮ್ಮ ಮೊದಲ ವರ್ಷದ ಅಧ್ಯಯನದಲ್ಲಿ ವಾರಕ್ಕೆ 20 ಗಂಟೆಗಳವರೆಗೆ ಕೆಲಸ ಮಾಡಬಹುದು.
ಜೀವನ ವೆಚ್ಚ: ಸರಾಸರಿ ವಾರ್ಷಿಕ ಜೀವನ ವೆಚ್ಚಗಳು €9,600 (11,160 ಯುಎಸ್ ಡಾಲರ್)
ಉನ್ನತ ವಿಶ್ವವಿದ್ಯಾನಿಲಯಗಳು: ಓಸ್ಲೋ ವಿಶ್ವವಿದ್ಯಾನಿಲಯ, ಬರ್ಗೆನ್ ವಿಶ್ವವಿದ್ಯಾಲಯ, ನಾರ್ವೇಜಿಯನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಯೂನಿವರ್ಸಿಟಿ ಆಫ್ ಟ್ರೋಮ್ಸೋ, ದಿ ಆರ್ಕ್ಟಿಕ್ ಯೂನಿವರ್ಸಿಟಿ ಆಫ್ ನಾರ್ವೆ, ನಾರ್ವೇಜಿಯನ್ ಯೂನಿವರ್ಸಿಟಿ ಆಫ್ ಲೈಫ್ ಸೈನ್ಸಸ್
ಅತ್ಯುತ್ತಮ ವಿದ್ಯಾರ್ಥಿ ಸ್ನೇಹಿ ನಗರಗಳು: ಓಸ್ಲೋ, ಬರ್ಗೆನ್, ಟ್ರೋಮ್ಸೋ, ಟ್ರೊಂಡೆಮ್, ಕ್ರಿಸ್ಟಿಯಾನ್ಸನ್
2. ಜರ್ಮನಿಯಲ್ಲಿ ಶಿಕ್ಷಣ ವೆಚ್ಚ ಎಷ್ಟಿದೆ?
ಹೆಚ್ಚಿನ ಜರ್ಮನ್ ವಿಶ್ವವಿದ್ಯಾನಿಲಯಗಳು ಸಾರ್ವಜನಿಕವಾಗಿವೆ. ಆದ್ದರಿಂದ ವಿದ್ಯಾರ್ಥಿಗಳು ಅಡ್ಮಿಷನ್ ಶುಲ್ಕವನ್ನು ಮಾತ್ರ ಪಾವತಿಸಬೇಕಾಗುತ್ತದೆ. ಇದು ಸಾಮಾನ್ಯವಾಗಿ ಪ್ರತಿ ಸೆಮಿಸ್ಟರ್‌ಗೆ 100 ಮತ್ತು 350 ಡಾಲರ್ ವೆಚ್ಚವಾಗುತ್ತದೆ.
ಜೀವನ ವೆಚ್ಚ: ಡಿಎಎಡಿ ಅಂಕಿಅಂಶಗಳ ಪ್ರಕಾರ, ಸರಾಸರಿ ವಾರ್ಷಿಕ ಜೀವನ ವೆಚ್ಚ 10,368 ಯುರೋ (10,334 ಯುಎಸ್ ಡಾಲರ್)
ಉನ್ನತ ವಿಶ್ವವಿದ್ಯಾನಿಲಯಗಳು: ಮ್ಯೂನಿಚ್ ತಾಂತ್ರಿಕ ವಿಶ್ವವಿದ್ಯಾಲಯ, ಲುಡ್ವಿಗ್-ಮ್ಯಾಕ್ಸಿಮಿಲಿಯನ್ಸ್-ಯೂನಿವರ್ಸಿಟಾಟ್ ಮುಂಚೆನ್, ಯೂನಿವರ್ಸಿಟಾಟ್ ಹೈಡೆಲ್‌ಬರ್ಗ್, ಫ್ರೀ ಯೂನಿವರ್ಸಿಟೇಟ್ ಬರ್ಲಿನ್, ಆರ್‌ಡಬ್ಲ್ಯೂಟಿಎಚ್ ಆಚೆನ್ ವಿಶ್ವವಿದ್ಯಾಲಯ
ಅತ್ಯುತ್ತಮ ವಿದ್ಯಾರ್ಥಿ ಸ್ನೇಹಿ ನಗರಗಳು: ಮ್ಯೂನಿಚ್, ಹೈಡೆಲ್‌ಬರ್ಗ್, ಬರ್ಲಿನ್, ಡ್ರೆಸ್‌ಡೆನ್, ಫ್ರಾಂಕ್ಫರ್ಟ್ ಮತ್ತು ಮೇನ್, ಹ್ಯಾಂಬರ್ಗ್, ಲೀಪ್ಜಿಗ್
3. ಪೋಲೆಂಡ್‌ನಲ್ಲಿ ವಿದೇಶಿಗರಿಗೆ ಶಿಕ್ಷಣ
ವಿಶ್ವವಿದ್ಯಾನಿಲಯದ ಶುಲ್ಕಗಳು ಇತರ ಯುರೋಪಿಯನ್ ಯೂನಿಯನ್ (ಇಯು) ದೇಶಗಳಿಗೆ ಹೋಲಿಕೆ ಮಾಡಿದರೆ ಪೋಲೆಂಡ್‌ನಲ್ಲಿ ಕಡಿಮೆಯಾಗಿದೆ. ಸಾಮಾನ್ಯವಾಗಿ ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ 4,180 ಯುಎಸ್ ಡಾಲರ್ ಮತ್ತು ಖಾಸಗಿ ಸಂಸ್ಥೆಗಳಲ್ಲಿ 6,600 ಯುಎಸ್ ಡಾಲರ್‌ನಷ್ಟು ಪಾವತಿ ಮಾಡಬೇಕಾಗುತ್ತದೆ. ಅದಕ್ಕಿಂತ ಅಧಿಕ ಶುಲ್ಕವಿಲ್ಲ.
ಜೀವನ ವೆಚ್ಚ: ವರ್ಷಕ್ಕೆ ಸರಾಸರಿ 7,820 ಯುಎಸ್ ಡಾಲರ್
ಉನ್ನತ ವಿಶ್ವವಿದ್ಯಾನಿಲಯಗಳು: ವಾರ್ಸಾ ವಿಶ್ವವಿದ್ಯಾನಿಲಯ, ಜಾಗಿಲೋನಿಯನ್ ಯೂನಿವರ್ಸಿಟಿ, ವಾರ್ಸಾ ಯೂನಿವರ್ಸಿಟಿ ಆಫ್ ಟೆಕ್ನಾಲಜಿ, ಆಡಮ್ ಮಿಕ್ಕಿವಿಕ್ಜ್ ಯೂನಿವರ್ಸಿಟಿ, ಪೊಜ್ನಾನ್ ಲೈಫ್ ಸೈನ್ಸಸ್ ವಿಶ್ವವಿದ್ಯಾಲಯ
ಅತ್ಯುತ್ತಮ ವಿದ್ಯಾರ್ಥಿ ಸ್ನೇಹಿ ನಗರಗಳು: ವಾರ್ಸಾ, ಕ್ರಾಕೋವ್, ವ್ರೊಕ್ಲಾ
4. ತೈವಾನ್‌ನಲ್ಲಿ ಶಿಕ್ಷಣಕ್ಕೆ ಇಷ್ಟು ಬೇಕು
ಸರಾಸರಿಯಾಗಿ, ಮೊದಲ ನಾಲ್ಕು ಸೆಮಿಸ್ಟರ್‌ಗಳಿಗೆ ಪ್ರತಿ ಸೆಮಿಸ್ಟರ್‌ಗೆ 933-1,033 ಯುಎಸ್ ಡಾಲರ್ ಮತ್ತು ಪದವಿಯವರೆಗಿನ ಉಳಿದ ಸೆಮಿಸ್ಟರ್‌ಗಳಿಗೆ ಸುಮಾರು 533-666 ಡಾಲರ್ ಬೇಕಾಗುತ್ತದೆ. ವಿದ್ಯಾರ್ಥಿಗಳು ವಾರಕ್ಕೆ 20 ಗಂಟೆಗಳವರೆಗೆ ಮತ್ತು ಬೇಸಿಗೆ ಮತ್ತು ಚಳಿಗಾಲದ ರಜಾದಿನಗಳಲ್ಲಿ ಎಷ್ಟು ಗಂಟೆಗಳಾದರೂ ಕೆಲಸ ಮಾಡಬಹುದು.
ಜೀವನ ವೆಚ್ಚ: ಪ್ರತಿ ಸೆಮಿಸ್ಟರ್‌ಗೆ ಸರಾಸರಿ 1,600-2,400 ಯುಎಸ್ ಡಾಲರ್
ಉನ್ನತ ವಿಶ್ವವಿದ್ಯಾಲಯಗಳು: ನ್ಯಾಷನಲ್ ತೈವಾನ್ ಯೂನಿವರ್ಸಿಟಿ (ಎನ್‌ಟಿಯು), ನ್ಯಾಷನಲ್ ಯಾಂಗ್ ಮಿಂಗ್ ಚಿಯಾವೊ ತುಂಗ್ ಯೂನಿವರ್ಸಿಟಿ, ನ್ಯಾಷನಲ್ ಚೆಂಗ್ ಕುಂಗ್ ಯೂನಿವರ್ಸಿಟಿ (ಎನ್‌ಸಿಕೆಯು), ನ್ಯಾಷನಲ್ ತ್ಸಿಂಗ್ ಹುವಾ ಯೂನಿವರ್ಸಿಟಿ, ನ್ಯಾಷನಲ್ ತೈವಾನ್ ಸೈನ್ಸ್ ಆಂಡ್ ಟೆಕ್ನಾಲಜಿ ಯೂನಿವರ್ಸಿಟಿ (ತೈವಾನ್ ಟೆಕ್)
ಅತ್ಯುತ್ತಮ ವಿದ್ಯಾರ್ಥಿ ಸ್ನೇಹಿ ನಗರಗಳು: ತೈಪೆ, ತೈನಾನ್
5. ಮಲೇಷ್ಯಾದಲ್ಲಿ ಶಿಕ್ಷಣ
ಸರಾಸರಿಯಾಗಿ, ಪದವಿಪೂರ್ವ ವಿದ್ಯಾಭ್ಯಾಸ 11,500 ಡಾಲರ್‌ನಿಂದ ಪ್ರಾರಂಭವಾಗಬಹುದು. ಆದರೆ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ವರ್ಷಕ್ಕೆ 7,300 ಯುಎಸ್ ಡಾಲರ್‌ನಿಂದ ಶುಲ್ಕ ಪ್ರಾರಂಭವಾಗುತ್ತದೆ.
ಜೀವನ ವೆಚ್ಚ: ಸರಾಸರಿ ವಾರ್ಷಿಕ ಜೀವನ ವೆಚ್ಚ 3,900 ಯುಎಸ್ ಡಾಲರ್
ಉನ್ನತ ವಿಶ್ವವಿದ್ಯಾಲಯಗಳು: ಯೂನಿವರ್ಸಿಟಿ ಮಲಯಾ (ಯುಎಂ), ಯೂನಿವರ್ಸಿಟಿ ಸೇನ್ಸ್ ಮಲೇಷ್ಯಾ (ಯುಎಸ್‌ಎಂ), ಯೂನಿವರ್ಸಿಟಿ ಪುತ್ರ ಮಲೇಷ್ಯಾ (ಯುಪಿಎಂ), ಯೂನಿವರ್ಸಿಟಿ ಕೆಬಾಂಗ್ಸಾನ್ ಮಲೇಷಿಯಾ (ಯುಕೆಎಂ), ಯೂನಿವರ್ಸಿಟಿ ಟೆಕ್ನೋಲೋಗಿ ಮಲೇಷ್ಯಾ
ಅತ್ಯುತ್ತಮ ವಿದ್ಯಾರ್ಥಿ ಸ್ನೇಹಿ ನಗರಗಳು: ಕೌಲಾಲಂಪುರ್, ಪೆನಾಂಗ್, ಜೋಹರ್ ಬಹ್ರು, ಸೆಲಂಗೋರ್
6. ಡೆರ್ನಾರ್ಕ್‌ನಲ್ಲಿ ವಿದ್ಯಾಭ್ಯಾಸ
ಡೆರ್ನಾರ್ಕ್‌ನಲ್ಲಿ ಸರಾಸರಿ ವಾರ್ಷಿಕ ಬೋಧನಾ ಶುಲ್ಕವು 6,000 ಯುರೋದಿಂದ 16,000 ಯುರೋ ನಡುವೆ ಇರುತ್ತದೆ.
ಜೀವನ ವೆಚ್ಚ: ಮಾಸಿಕವಾಗಿ 900 ಯುರೋ ಅಥವಾ 800 ಡಾಲರ್ ಜೀವನ ವೆಚ್ಚಕ್ಕಾಗಿ ಬೇಕಾಗುತ್ತದೆ. ಕೋಪನ್ ಹ್ಯಾಗನ್‌ನಲ್ಲಿ ವಾಸಿಸುವುದು ಸಣ್ಣ ನಗರಗಳಿಗಿಂತ ಹೆಚ್ಚು ದುಬಾರಿಯಾಗಿದೆ. ಇಲ್ಲಿ ತಿಂಗಳಿಗೆ 1,200 ಯುರೋವರೆಗೆ ವೆಚ್ಚ ಮಾಡಬೇಕಾಗಬಹುದು.
ಉನ್ನತ ವಿಶ್ವವಿದ್ಯಾಲಯಗಳು: ಯೂನಿವರ್ಸಿಟಿ ಆಫ್ ಕೋಪನ್ ಹ್ಯಾಗನ್, ಟೆಕ್ನಿಕಲ್ ಯೂನಿವರ್ಸಿಟಿ ಆಫ್ ಡೆನ್ಮಾರ್ಕ್, ಆರ್ಹಸ್ ಯೂನಿವರ್ಸಿಟಿ, ಸೌತರ್ನ್ ಡೆನ್ಮಾರ್ಕ್ ಯೂನಿವರ್ಸಿಟಿ (ಎಸ್‌ಡಿಯು), ಆಲ್ಬೋರ್ಗ್ ಯೂನಿವರ್ಸಿಟಿ
ಅತ್ಯುತ್ತಮ ವಿದ್ಯಾರ್ಥಿ ಸ್ನೇಹಿ ನಗರಗಳು: ಕೋಪನ್ ಹ್ಯಾಗನ್
7. ದಕ್ಷಿಣ ಆಫ್ರಿಕಾದಲ್ಲಿ ಶಿಕ್ಷಣ ವೆಚ್ಚ
ಸರಾಸರಿಯಾಗಿ, ವಾರ್ಷಿಕ ಬೋಧನಾ ಶುಲ್ಕವು 799 ರಿಂದ 1,940 ಡಾಲರ್‌ವರೆಗೆ ಇರುತ್ತದೆ.
ಜೀವನ ವೆಚ್ಚ: ನಗರವನ್ನು ಅವಲಂಬಿಸಿ, ಮಾಸಿಕ ಜೀವನ ವೆಚ್ಚವು ಸುಮಾರು 302 ಡಾಲರ್‌ನಿಂದ 742 ಡಾಲರ್‌ವರೆಗೆ ಇರುತ್ತದೆ.
ಉನ್ನತ ವಿಶ್ವವಿದ್ಯಾನಿಲಯಗಳು: ಕೇಪ್ ಟೌನ್ ಯೂನಿವರ್ಸಿಟಿ, ವಿಟ್ವಾಟರ್‌ರಾಂಡ್ ಯೂನಿವರ್ಸಿಟಿ, ಸ್ಟೆಲೆನ್‌ಬೋಶ್ ಯೂನಿವರ್ಸಿಟಿ, ಜೋಹಾನ್ಸ್‌ಬರ್ಗ್ ಯೂನಿವರ್ಸಿಟಿ, ಪ್ರಿಟೋರಿಯಾ ಯೂನಿವರ್ಸಿಟಿ
ಅತ್ಯುತ್ತಮ ವಿದ್ಯಾರ್ಥಿ ಸ್ನೇಹಿ ನಗರಗಳು: ಕೇಪ್ ಟೌನ್, ಜೋಹಾನ್ಸ್‌ಬರ್ಗ್, ಪ್ರಿಟೋರಿಯಾ.
8. ಹಂಗೇರಿಯಲ್ಲಿ ಶಿಕ್ಷಣ ವೆಚ್ಚವೆಷ್ಟು?
ಬೋಧನಾ ಶುಲ್ಕಗಳು ಅಧ್ಯಯನ ವಿಧಾನ, ವಿಷಯ ಮತ್ತು ವಿಶ್ವವಿದ್ಯಾನಿಲಯವನ್ನು ಅವಲಂಬಿಸಿ ಬದಲಾಗುತ್ತವೆ. ಆದರೆ ಸರಾಸರಿ ವಾರ್ಷಿಕ ಬೋಧನಾ ಶುಲ್ಕವು 5,000 ಯುರೋದಿಂದ 7,500 ಯುರೋ ನಡುವೆ ಇರುತ್ತದೆ.
ಜೀವನ ವೆಚ್ಚ: ಸರಾಸರಿ ಮಾಸಿಕ ಜೀವನ ವೆಚ್ಚ 520 ಯುರೋ (560 ಯುಎಸ್ ಡಾಲರ್) ಆಗಿದೆ. ಬುಡಾಪೆಸ್ಟ್ ಹೊರತುಪಡಿಸಿ ಇತರ ನಗರಗಳಲ್ಲಿ ಜೀವನ ವೆಚ್ಚವು ತುಂಬಾ ಕಡಿಮೆಯಾಗಿದ್ದು ತಿಂಗಳಿಗೆ ಸರಾಸರಿ 300 ಯುರೋ (325 ಯುಎಸ್ ಡಾಲರ್) ಆಗಿದೆ.
ಉನ್ನತ ವಿಶ್ವವಿದ್ಯಾನಿಲಯಗಳು: ಯೂನಿವರ್ಸಿಟಿ ಆಫ್ ಸ್ಜೆಡ್, ಯೂನಿವರ್ಸಿಟಿ ಆಫ್ ಡೆಬ್ರೆಸೆನ್, ಇವೋಸ್ ಲೊರಾಂಡ್ ಯೂನಿವರ್ಸಿಟಿ, ಬುಡಾಪೆಸ್ಟ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಅಂಡ್ ಎಕನಾಮಿಕ್ಸ್, ಯುನಿವರ್ಸಿಟಿ ಆಫ್ ಪೆಕ್ಸ್
ಅತ್ಯುತ್ತಮ ವಿದ್ಯಾರ್ಥಿ ಸ್ನೇಹಿ ನಗರಗಳು: ಬುಡಾಪೆಸ್ಟ್, ಡೆಬ್ರೆಸೆನ್, ಸೆಜೆಡ್, ಮಿಸ್ಕೋಲ್ಕ್
9. ಫ್ರಾನ್ಸ್‌ನಲ್ಲಿ ಶಿಕ್ಷಣ ವೆಚ್ಚ ಇಷ್ಟಿದೆ
ಅಂತರರಾಷ್ಟ್ರೀಯ ಪದವಿಪೂರ್ವ ವಿದ್ಯಾರ್ಥಿಗಳಿಗೆ, ಸರಾಸರಿ ಶುಲ್ಕಗಳು ವರ್ಷಕ್ಕೆ 2,770 ಯುರೋ ಆಗಿದೆ. ಸ್ನಾತಕೋತ್ತರ ಅಧ್ಯಯನಕ್ಕಾಗಿ 3,770 ಯುರೋ ಮತ್ತು ಪಿಎಚ್‌ಡಿಗಾಗಿ ವರ್ಷಕ್ಕೆ 380 ಯುರೋ ಬೇಕಾಗುತ್ತದೆ. ಫ್ರಾನ್ಸ್‌ನ ಆಯ್ದ ಖಾಸಗಿ ಗ್ರಾಂಡ್ಸ್ ಎಕೋಲ್‌ಗಳು ಅಥವಾ ಗ್ರ್ಯಾಂಡ್ಸ್ ಎಟಾಬ್ಲಿಸ್‌ಮೆಂಟ್‌ಗಳಲ್ಲಿ ಶುಲ್ಕಗಳು ಹೆಚ್ಚು ದುಬಾರಿಯಾಗಬಹುದು.
ಜೀವನ ವೆಚ್ಚ (ತಿಂಗಳಿಗೆ): ಪ್ಯಾರಿಸ್‌ನಲ್ಲಿ 1,200 ಮತ್ತು 1,800 ಯುರೋ ನಡುವೆ (US$1,300-1,930), ನೈಸ್‌ನಲ್ಲಿ 900 ಮತ್ತು 1,400 ಯುರೋ ನಡುವೆ (US$970-1,500), ಲಿಯಾನ್, ನಾಂಟೆಸ್, ಬೋರ್ಡೆಕ್ಸ್ ಅಥವಾ ಟೌಲೌಸ್‌ನಲ್ಲಿ 800 ಮತ್ತು 1,000 ಯುರೋ ನಡುವೆ (US$860-1,080).
ಉನ್ನತ ವಿಶ್ವವಿದ್ಯಾನಿಲಯಗಳು: ಯೂನಿವರ್ಸಿಟಿ ಪಿಎಸ್ಎಲ್, ಇನ್ಸ್ಟಿಟ್ಯೂಟ್ ಪಾಲಿಟೆಕ್ನಿಕ್ ಡಿ ಪ್ಯಾರಿಸ್, ಸೊರ್ಬೊನ್ನೆ ಯೂನಿವರ್ಸಿಟಿ ಯೂನಿವರ್ಸಿಟಿ ಪ್ಯಾರಿಸ್-ಸಕ್ಲೇ, ಎಕೋಲ್ ನಾರ್ಮಲ್ ಸುಪರಿಯೂರ್ ಡಿ ಲಿಯಾನ್
ಅತ್ಯುತ್ತಮ ವಿದ್ಯಾರ್ಥಿ ನಗರಗಳು: ಪ್ಯಾರಿಸ್, ಸೊರ್ಬೊನ್ನೆ, ನೈಸ್
10. ಇಟಲಿಯಲ್ಲಿ ವಿದ್ಯಾಭ್ಯಾಸ ವೆಚ್ಚ ಎಷ್ಟಿದೆ?
ಇಟಲಿಯಲ್ಲಿ ಒಂದು ಶೈಕ್ಷಣಿಕ ವರ್ಷಕ್ಕೆ ಸರಾಸರಿ ಶುಲ್ಕ 0-5,000 ಯುರೋ ನಡುವೆ ಇರುತ್ತದೆ. ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಸರಾಸರಿ ಬೋಧನಾ ಶುಲ್ಕಗಳು ವರ್ಷಕ್ಕೆ 3,000-35,000 ಯುರೋ ನಡುವೆ ಇರುತ್ತದೆ. ಪಾಲಿಟೆಕ್ನಿಕೊ ಡಿ ಮಿಲಾನೊ, ಪಡೋವಾ ಯೂನಿವರ್ಸಿಟಿ, ಬೊಕೊನಿ ಯೂನಿವರ್ಸಿಟಿ, ಬೊಲೊಗ್ನಾ ಯೂನಿವರ್ಸಿಟಿಯಂತಹ ಕೆಲವು ಇಟಾಲಿಯನ್ ವಿಶ್ವವಿದ್ಯಾಲಯಗಳು ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತದೆ. ಇವುಗಳು ಸಾಮಾನ್ಯವಾಗಿ ವರ್ಷಕ್ಕೆ 5,000 ಮತ್ತು 12,000 ಯುರೋ ನಡುವೆ ಇರುತ್ತದೆ.
ಜೀವನ ವೆಚ್ಚ: ವಾರ್ಷಿಕವಾಗಿ 850-2,400 ಯುರೋ (900-2,590 ಯುಎಸ್ ಡಾಲರ್). ರೋಮ್ ಮತ್ತು ಮಿಲನ್ ಇಟಾಲಿಯನ್ ಅತ್ಯಂತ ದುಬಾರಿ ನಗರಗಳಾಗಿವೆ.
ಉನ್ನತ ವಿಶ್ವವಿದ್ಯಾನಿಲಯಗಳು: ಪೊಲಿಟೆಕ್ನಿಕೊ ಡಿ ಮಿಲಾನೊ, ಸಪಿಯೆಂಜಾ ಯೂನಿವರ್ಸಿಟಿ ರೋಮ್, ಅಲ್ಮಾ ಮೇಟರ್ ಸ್ಟುಡಿಯೊರಮ್ - ಬೊಲೊಗ್ನಾ ಯೂನಿವರ್ಸಿಟಿ, ಯೂನಿವರ್ಸಿಟಿ ಡಿ ಪಡೋವಾ, ಪೊಲಿಟೆಕ್ನಿಕೊ ಡಿ ಟೊರಿನೊ.
ಅತ್ಯುತ್ತಮ ವಿದ್ಯಾರ್ಥಿ ಸ್ನೇಹಿ ನಗರಗಳು: ರೋಮ್, ಮಿಲನ್, ಪಡೋವಾ, ಬೊಲೊಗ್ನಾ.


Click it and Unblock the Notifications