ಈಗಾಗಲೇ ಡಿಸೆಂಬರ್ ಬಂದಿದೆ. ಈ ತಿಂಗಳ ಎಂಟು ದಿನಗಳು ಕಳೆದಿದೆ. ಕೆಲವೇ ವಾರಗಳು ಕಳೆದಾಗ ಹೊಸ ವರ್ಷ ಆರಂಭವಾಗಲಿದೆ. ಅಂದರೆ ನೀವು 2023 ಕ್ಕೆ ವಿದಾಯವನ್ನು ಶೀಘ್ರದಲ್ಲೇ ಹೇಳಲಿದ್ದೀರಿ. ಆದರೆ ನೀವು ಈ ವರ್ಷ ಕೊನೆಯಾಗುವ ಮುನ್ನ ಕೆಲವೊಂದು ಕಾರ್ಯಗಳನ್ನು ಮಾಡಿ ಮುಗಿಸಬೇಕಾಗುತ್ತದೆ.
ಕಳೆದ ವರ್ಷ ನೀವು ಸಾಧನೆಗಳನ್ನು ಪರಿಶೀಲಿಸುವ ಮೂಲಕ ಮತ್ತು ಮುಂದಿನ ವರ್ಷದ ಯೋಜನೆಗಳನ್ನು ಈಗಾಗಲೇ ಲೆಕ್ಕಾಚಾರ ಮಾಡಿಕೊಳ್ಳಲು ಇದು ಅತೀ ಉತ್ತಮವಾದ ಸಮಯವಾಗಿದೆ. ಸುಗಮ ಹಣಕಾಸು ಯೋಜನೆ ಪ್ರಯಾಣಕ್ಕಾಗಿ ನೀವು ಈ ಕೆಳಗಿನ ಆರು ಹಂತಗಳನ್ನು ಕೈಗೊಳ್ಳಬೇಕಾಗುತ್ತದೆ.

1. ಬಜೆಟ್ ಅನ್ನು ಪಾಲಿಸಿಕೊಳ್ಳಿ
ನಿಮ್ಮ ಆದಾಯವನ್ನು ವೆಚ್ಚಗಳು, ಉಳಿತಾಯಗಳು ಮತ್ತು ಹೂಡಿಕೆಗಳಿಗೆ ಹಂಚಿಕೆ ಮಾಡಲು ನಿಮಗೆ ಬಜೆಟ್ ಸಹಾಯ ಮಾಡುತ್ತದೆ. ನೀವು ಬಜೆಟ್ ಅನ್ನು ಪಾಲಿಸದಿದ್ದರೆ, ಮುಂದಿನ ವರ್ಷದಿಂದ ನೀವು 50/30/20 ಬಜೆಟ್‌ನೊಂದಿಗೆ ಆರಂಭವನ್ನು ಮಾಡಬಹುದಾಗಿದೆ. ನಿಮ್ಮ ಆದಾಯವನ್ನು ಈ ಕೆಳಗಿನಂತೆ ಹಂಚಿಕೆ ಮಾಡಬಹುದು:
* ಶೇಕಡ 50 ರಷ್ಟು ಆದಾಯವನ್ನು ನೀವು ಅಗತ್ಯವಾದ ವೆಚ್ಷಗಳಿಗಾಗಿ ಇಟ್ಟುಕೊಳ್ಳಬೇಕು. ಆಹಾರ, ಬಟ್ಟೆ, ಯುಟಿಲಿಟಿ ಬಿಲ್ ಪಾವತಿಗಳು, ಔಷಧಗಳು, ಸಾರಿಗೆ, ಬಾಡಿಗೆ, ಇಎಂಐಗಳು, ಶಾಲಾ ಶುಲ್ಕಗಳು ಇತ್ಯಾದಿಗಳಿಗಾಗಿ ಶೇಕಡ 50 ರಷ್ಟು ಆದಾಯವನ್ನು ಉಳಿಸಿಕೊಳ್ಳಬೇಕು.
* ನೀವು ಶೇಕಡ 30 ರಷ್ಟು ನಿಮ್ಮ ಬಯಕೆಗಳಿಗಾಗಿ ಉಳಿಸಿಕೊಳ್ಳಬೇಕು. ಅಂದರೆ ನೀವು ಊಟ, ಶಾಪಿಂಗ್, ಮನರಂಜನೆ (ಚಲನಚಿತ್ರಗಳು, ಕ್ರೀಡೆಗಳು, ಒಟಿಟಿ ಚಂದಾದಾರಿಕೆ, ಇತ್ಯಾದಿ), ರಜಾದಿನಗಳು, ಹವ್ಯಾಸಗಳ ಮೇಲಿನ ಖರ್ಚಿಗಾಗಿ ಈ ಮೊತ್ತವನ್ನು ಉಳಿಸಿಕೊಳ್ಳಬೇಕಾಗುತ್ತದೆ.
* ನಿಮ್ಮ ಹಣಕಾಸಿನ ಗುರಿಗಳನ್ನು ಸಾಧಿಸಲು ಉಳಿತಾಯ ಮತ್ತು ಹೂಡಿಕೆಗಳಿಗಾಗಿ ಶೇಕಡ 20 ರಷ್ಟು ಆದಾಯವನ್ನು ಉಳಿಸಿಕೊಳ್ಳಿ.
2. ಎಮರ್ಜನ್ಸಿ ಫಂಡ್ ಅನ್ನು ಇಟ್ಟುಕೊಳ್ಳಿ
ನೀವು ವರ್ಷಾಂತ್ಯಕ್ಕೂ ಮುನ್ನ ನೀವು ಕೆಲವು ಹಣಕಾಸು ಕಾರ್ಯಗಳನ್ನು ಮಾಡುವ ವಿಚಾರಕ್ಕೆ ಬಂದಾಗ ನೀವು ಮೊದಲು ತುರ್ತು ಸಂದರ್ಭಕ್ಕಾಗಿ ಹಣವನ್ನು ಉಳಿತಾಯ ಮಾಡುವುದು ಅತೀ ಮುಖ್ಯವಾಗುತ್ತದೆ. ತುರ್ತು ನಿಧಿಯು ಯಾವುದೇ ಯೋಜಿತವಲ್ಲದ ಅಥವಾ ಅನಿರೀಕ್ಷಿತ ಹಣಕಾಸಿನ ತುರ್ತುಸ್ಥಿತಿಗಳನ್ನು ಎದುರಿಸಲು ನಿಮಗೆ ಸಹಾಯ ಮಾಡುತ್ತದೆ.
ಮೊತ್ತವು ನಿಮ್ಮ ಪ್ರಸ್ತುತ ಹಣಕಾಸಿನ ಸ್ಥಿತಿಯನ್ನು ಅವಲಂಬಿಸಿರುತ್ತದೆ. ನೀವು ಸಂಬಳ ಪಡೆಯುವ ಅಥವಾ ಸ್ವಯಂ ಉದ್ಯೋಗಿಯಾಗಿದ್ದರೂ, ನಿಮ್ಮ ಕಂಪನಿ ಅಥವಾ ವ್ಯವಹಾರದ ಆರ್ಥಿಕ ಸ್ಥಿತಿ, ಆರ್ಥಿಕ ವಾತಾವರಣ, ಇತ್ಯಾದಿಯು ಇದರ ಮೇಲೆ ಅವಲಂಬಿಸುತ್ತದೆ. ನೀವು ಈಗಾಗಲೇ ತುರ್ತು ನಿಧಿಯನ್ನು ಹೊಂದಿದ್ದರೆ, ಅದರಲ್ಲಿರುವ ಮೊತ್ತವು ಸಮರ್ಪಕವಾಗಿದೆಯೇ ಅಥವಾ ನೀವು ಅದನ್ನು ಹೆಚ್ಚಿಸುವ ಅಗತ್ಯವಿದೆಯೇ ಎಂದು ಪರಿಶೀಲಿಸಿ.
3. ವಿಮಾ ಯೋಜನೆ
ನೀವು ಎಂದಿಗೂ ವಿಮಾ ಯೋಜನೆಯ ಅಗತ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಮನೆಯ ಎಲ್ಲರಿಗೂ ಜೀವ ವಿಮೆ ಇದೆಯೇ ಎಂದು ಖಚಿತಪಡಿಸಿಕೊಳ್ಳಿ. ಈಗಾಗಲೇ ಜೀವ ವಿಮೆಯನ್ನು ಹೊಂದಿದ್ದರೆ, ಕವರ್ ಮೊತ್ತವು ಸಮರ್ಪಕವಾಗಿದೆಯೇ ಅಥವಾ ಹೆಚ್ಚಿಸಬೇಕಾಗಿದೆಯೇ ಎಂದು ಪರಿಶೀಲಿಸಿ. ಟರ್ಮ್ ಪ್ಲಾನ್ ಅತೀ ಉತ್ತಮ ಆಯ್ಕೆಯಾಗಿದೆ. ಇದು ನಿಮಗೆ ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ಕವರ್ ನೀಡುತ್ತದೆ. ಆರೋಗ್ಯ ವಿಮೆ, ಗೃಹ, ವಾಹನ ವಿಮೆಯನ್ನು ಖರೀದಿ ಮಾಡಿದರೆ ನೀವು ಸುರಕ್ಷಿತ.
4. ಗುರಿ ಯೋಜನೆ ತಿಳಿಯಿರಿ
ನಿಮ್ಮ ಹಣಕಾಸಿನ ಗುರಿಗಳ ವರ್ಷಾಂತ್ಯದ ಪರಿಶೀಲನೆಯ ಸಮಯದಲ್ಲಿ, ವ್ಯವಸ್ಥಿತ ವಿಧಾನವನ್ನು ತೆಗೆದುಕೊಳ್ಳಿ. ಉದಾಹರಣೆಗೆ, ನಿಮ್ಮ ಮಗುವಿನ ಉನ್ನತ ಶಿಕ್ಷಣವನ್ನು ಯೋಜಿಸುವಾಗ, ನೀವು ಈ ಕೆಳಗಿನ ಹಂತಗಳನ್ನು ತೆಗೆದುಕೊಳ್ಳಬಹುದು:
* ಕೋರ್ಸ್‌ನ ಪ್ರಸ್ತುತ ವೆಚ್ಚ ಮತ್ತು ಯೋಜನೆಗಾಗಿ ನೀವು ಎಷ್ಟು ವರ್ಷಗಳನ್ನು ಹೊಂದಿದ್ದೀರಿ ಎಂಬುದನ್ನು ಕಂಡುಹಿಡಿಯಿರಿ.
* ಹಣದುಬ್ಬರ ದರ ಮತ್ತು ವರ್ಷಗಳ ಸಂಖ್ಯೆಯನ್ನು ಆಧರಿಸಿ ಕೋರ್ಸ್‌ನ ಭವಿಷ್ಯದ ವೆಚ್ಚವನ್ನು ಲೆಕ್ಕಾಚಾರ ಮಾಡಿ.
* ನೀವು ಮೊತ್ತವನ್ನು ಹೊಂದಿದ್ದೀರಿ ಎಂದುಕೊಳ್ಳಿ. ಹಾಗಿದ್ದಾಗ ಹೂಡಿಕೆಯ ಅವಧಿ, ನಿರೀಕ್ಷಿತ ಆದಾಯದ ದರ ಮತ್ತು ಗುರಿ ಮೊತ್ತದ ಆಧಾರದ ಮೇಲೆ ಪ್ರತಿ ತಿಂಗಳು ಹೂಡಿಕೆ ಮಾಡಲು ಅಗತ್ಯವಿರುವ ಮೊತ್ತವನ್ನು ಲೆಕ್ಕ ಹಾಕಿ.
* ಎಸ್‌ಐಪಿ ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆಯನ್ನು ಪ್ರಾರಂಭಿಸಿ.
* ಗುರಿಯನ್ನು ಸಾಧಿಸುವವರೆಗೆ ಪ್ರತಿ ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಗುರಿ ಯೋಜನೆಯ ಪ್ರಗತಿಯನ್ನು ಪರಿಶೀಲಿಸಿ.
ನಿವೃತ್ತಿ ನಿಧಿ, ವ್ಯಾಪಾರವನ್ನು ಪ್ರಾರಂಭಿಸಲು ನಿಧಿ, ಮನೆ ಖರೀದಿಗೆ ಮುಂಗಡ ಪಾವತಿಯನ್ನು ಸಂಗ್ರಹಿಸುವುದು ಮುಂತಾದ ಇತರ ಹಣಕಾಸಿನ ಗುರಿಗಳಿಗಾಗಿ ನೀವು ಅದೇ ಗುರಿ-ಯೋಜನಾ ವಿಧಾನವನ್ನು ತೆಗೆದುಕೊಳ್ಳಬಹುದು.
5. ತೆರಿಗೆ ಪ್ಲ್ಯಾನಿಂಗ್ ಮಾಡಿಕೊಳ್ಳಿ
ಗುರಿ ಯೋಜನೆ ರೂಪಿಸುತ್ತಿರುವ ಜೊತೆಗೆ ನೀವು ತೆರಿಗೆ ಪ್ಲ್ಯಾನಿಂಗ್ ಮಾಡಿಕೊಳ್ಳುವುದು ಅತೀ ಮುಖ್ಯವಾಗುತ್ತದೆ. ನಿಮ್ಮ ಹಣಕಾಸಿನ ಗುರಿಗಳ ಕಡೆಗೆ ಹೂಡಿಕೆ ಮಾಡುವಾಗ, ಆಯ್ಕೆ ಮಾಡಿದ ಹಣಕಾಸು ಉತ್ಪನ್ನಗಳು ತೆರಿಗೆಯನ್ನು ಖಚಿತಪಡಿಸಿಕೊಳ್ಳಿ. ಆದಾಯ ತೆರಿಗೆ ಕಾಯಿದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಲಭ್ಯವಿರುವ ಎಲ್ಲಾ ಸಂಭಾವ್ಯ ಕಡಿತಗಳನ್ನು ಬಳಸಿಕೊಳ್ಳಿ.
* ಜೀವ ವಿಮಾ ಕಂತುಗಳು,ಪಿಪಿಎಫ್, ಇಪಿಎಫ್, ಇಎಲ್‌ಎಸ್‌ಎಸ್, ಎನ್‌ಎಸ್‌ಸಿ, ಎಸ್‌ಎಸ್‌ಎ, ಗೃಹ ಸಾಲದ ಅಸಲು, ತೆರಿಗೆ ಉಳಿಸುವ ಎಫ್‌ಡಿ ಇತ್ಯಾದಿಗಳಿಗೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ 1,50,000 ರೂಪಾಯಿ ವಿನಾಯಿತಿ ಲಭ್ಯವಾಗುತ್ತದೆ.
* ಸ್ವಯಂ, ಸಂಗಾತಿ ಮತ್ತು ಮಕ್ಕಳಿಗಾಗಿ ಪಾವತಿಸಿದ ಆರೋಗ್ಯ ವಿಮಾ ಪ್ರೀಮಿಯಂಗಳಿಗಾಗಿ ಸೆಕ್ಷನ್ 80D ಅಡಿಯಲ್ಲಿ 50,000 ರೂಪಾಯಿವರೆಗೆ ಕಡಿತ ಪಡೆಯಬಹುದು. ಪೋಷಕರಿಗೆ ಪಾವತಿಸಿದ ಆರೋಗ್ಯ ವಿಮಾ ಕಂತುಗಳಿಗೆ ಹೆಚ್ಚುವರಿಯಾಗಿ 50 ಸಾವಿರ ರೂಪಾಯಿ ಕಡಿತ ಪಡೆಯಬಹುದು.
* ಸೆಕ್ಷನ್ 80ಸಿಸಿಡಿ ಅಡಿಯಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಕೊಡುಗೆಗೆ ತೆರಿಗೆ ಕಡಿತ ಲಭ್ಯವಿದೆ.
* ಸೆಕ್ಷನ್ 24 ರ ಅಡಿಯಲ್ಲಿ ಗೃಹ ಸಾಲಕ್ಕೆ ಪಾವತಿಸಿದ ಬಡ್ಡಿಯ ಮೇಲೆ ತೆರಿಗೆ ಕಡಿತ ಲಭ್ಯವಿದೆ.
6. ಯಶಸ್ವಿ ಯೋಜನೆ ಮಾಡಿಕೊಳ್ಳಿ
ನೀವು ತೆರಿಗೆ-ಸಮರ್ಥ ರೀತಿಯಲ್ಲಿ ನಿಮ್ಮ ಹಣಕಾಸಿನ ಗುರಿಗಳ ಕಡೆಗೆ ಹೂಡಿಕೆ ಮಾಡುತ್ತಿದ್ದೀರಿ. ಆದರೂ ನೀವು ಅಕಾಲಿಕ ಮರಣ ಹೊಂದಿದ್ದರೆ ಏನು ಮಾಡುವುದು?. ನಿಮ್ಮ ಆಸ್ತಿಯನ್ನು ನಿಮ್ಮ ನಂತರ ನಿಮ್ಮ ಉದ್ದೇಶಿತ ಫಲಾನುಭವಿಗಳಿಗೆ ರವಾನಿಸಲಾಗುತ್ತದೆಯೇ ಎಂದು ಖಚಿತಪಡಿಸಿಕೊಳ್ಳಲು ವಿಲ್ ಅನ್ನು ಮಾಡಿಕೊಳ್ಳಿ. ಈಗಾಗಲೇ ವಿಲ್ ಇದ್ದರೆ ಅದನ್ನು ಅಪ್‌ಡೇಟ್ ಮಾಡಿಕೊಳ್ಳಿ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್‌ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!



Click it and Unblock the Notifications