ಈ ವರ್ಷ ಕೊನೆಯಾಗುತ್ತಿದ್ದು, ಹೊಸ ವರ್ಷ ಆರಂಭವಾಗಲು ಇನ್ನು ಕೆಲವೇ ವಾರಗಳು ಬಾಕಿ ಉಳಿದಿದೆ. ಈ ನಡುವೆ 2023 ರಲ್ಲಿ ಭಾರತದಲ್ಲಿ ಮತ್ತು ಜಗತ್ತಿನಾದ್ಯಂತ ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ.
ಭಾರತದಲ್ಲಿ, ಅತಿ ಹೆಚ್ಚು ಹುಡುಕಿದ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ನಟರು ಮಾತ್ರವಲ್ಲದೆ ಕ್ರೀಡಾ ಲೋಕದವರು ಕೂಡಾ ಇದ್ದಾರೆ. ಇನ್ನು ವಿಶ್ವದ ಟಾಪ್ ಸೆಲೆಬ್ರೆಟಿಗಳಲ್ಲಿ ನಮ್ಮ ಭಾರತೀಯರು ಕೂಡಾ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಅತೀ ಹೆಚ್ಚು ಹುಡುಕಲ್ಪಟ್ಟ ಭಾರತದ ಸೆಲೆಬ್ರೆಟಿಗಳು
1. ಕಿಯಾರಾ ಅಡ್ವಾಣಿ: ಆಲಿಯಾ ಅಡ್ವಾಣಿ ಅವರನ್ನು (ಜನನ 31 ಜುಲೈ 1991), ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ಎಂದು ಕರೆಯಲಾಗುತ್ತದೆ. ಹಿಂದಿ ಮತ್ತು ತೆಲುಗು ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ ಇವರಾಗಿದ್ದಾರೆ.
2. ಶುಭಮನ್ ಗಿಲ್: ಶುಭಮನ್ ಗಿಲ್ (ಜನನ 8 ಸೆಪ್ಟೆಂಬರ್ 1999) ಒಬ್ಬ ಭಾರತೀಯ ಅಂತರಾಷ್ಟ್ರೀಯ ಕ್ರಿಕೆಟಿಗರಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಗುಜರಾತ್ ಟೈಟಾನ್ಸ್‌ನ ನಾಯಕರಾಗಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಪಂಜಾಬ್ ಪರ ಆಡುತ್ತಾರೆ. ವಿಶ್ವ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ಗುರುತಿಸಲ್ಪಟ್ಟಿದ್ದಾರೆ.
3. ರಚಿನ್ ರವೀಂದ್ರ: ರಚಿನ್ ರವೀಂದ್ರ (ಜನನ 18 ನವೆಂಬರ್ 1999) ಒಬ್ಬ ನ್ಯೂಜಿಲೆಂಡ್ ಅಂತರಾಷ್ಟ್ರೀಯ ಕ್ರಿಕೆಟಿಗರಾಗಿದ್ದಾರೆ. ಸೆಪ್ಟೆಂಬರ್ 2021 ರಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡದಲ್ಲಿ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದರು.
4. ಮುಹಮ್ಮದ್ ಶಮಿ: ಮೊಹಮ್ಮದ್ ಶಮಿ (ಜನನ 3 ಸೆಪ್ಟೆಂಬರ್ 1990) ಒಬ್ಬ ಭಾರತೀಯ ಅಂತರಾಷ್ಟ್ರೀಯ ಕ್ರಿಕೆಟಿಗ, ಬೌಲರ್. ದೇಶೀಯ ಕ್ರಿಕೆಟ್‌ನಲ್ಲಿ ಬಂಗಾಳಕ್ಕಾಗಿ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ನಾಲ್ಕು ತಂಡಗಳಿಗಾಗಿ ಆಡಿದ್ದಾರೆ. ಇತ್ತೀಚೆಗೆ ಹಲವಾರು ಪಂದ್ಯಗಳಲ್ಲಿ ಅದ್ಭುತ ಕೊಡುಗೆಯನ್ನು ನೀಡಿದ್ದಾರೆ.
5. ಎಲ್ವಿಶ್ ಯಾದವ್: ಎಲ್ವಿಶ್ ಯಾದವ್ (ಜನನ 14 ಸೆಪ್ಟೆಂಬರ್ 1997) ಭಾರತೀಯ ಯೂಟ್ಯೂಬರ್, ಸ್ಟ್ರೀಮರ್ ಮತ್ತು ಗಾಯಕರಾಗಿದ್ದಾರೆ. ತಮ್ಮ ಯೂಟ್ಯೂಬ್ ವೀಡಿಯೊಗಳಿಗೆ ಹೆಸರುವಾಸಿಯಾಗಿದ್ದಾರೆ ಮತ್ತು ಬಿಗ್ ಬಾಸ್ ಒಟಿಟಿಯ ಎರಡನೇ ಸೀಸನ್ ಗೆದ್ದಿದ್ದಾರೆ.
ಇನ್ನುಳಿದಂತೆ ಸಿದ್ಧಾರ್ಥ್ ಮಲ್ಹೋತ್ರಾ, ಗ್ಲೆನ್ ಮ್ಯಾಕ್ಸ್‌ವೆಲ್, ಡೇವಿಡ್ ಬೆಕ್ಹ್ಯಾಮ್, ಸೂರ್ಯಕುಮಾರ್ ಯಾದವ್, ಟ್ರಾವಿಸ್ ಹೆಡ್ ಹೆಸರನ್ನು ಗೂಗಲ್‌ನಲ್ಲಿ ಅಧಿಕ ಸರ್ಚ್ ಮಾಡಲಾಗಿದೆ.
ಜಾಗತಿಕವಾಗಿ ಅಧಿಕ ಸರ್ಚ್ ಮಾಡಿದ ಹೆಸರು
ಡಮರ್ ಹ್ಯಾಮ್ಲಿನ್, ಜೆರೆಮಿ ರೆನ್ನರ್, ಆಂಡ್ರ್ಯೂ ಟೇಟ್, ಕೈಲಿಯನ್ ಎಂಬಪ್ಪೆ, ಟ್ರಾವಿಸ್ ಕೆಲ್ಸೆ, ಜೆನ್ನಾ ಒರ್ಟೆಗಾ, ಲಿಲ್ ಟೇ, ಡ್ಯಾನಿ ಮಾಸ್ಟರ್ಸನ್, ಡೇವಿಡ್ ಬೆಕ್ಹ್ಯಾಮ್, ಪೆಡ್ರೊ ಪ್ಯಾಸ್ಕಲ್ ಹೆಸರನ್ನು ಜಾಗತಿಕವಾಗಿ ಅಧಿಕ ಸರ್ಚ್ ಮಾಡಲಾಗಿದೆ.
ಜೆರೆಮಿ ರೆನ್ನರ್, ಜೆನ್ನಾ ಒರ್ಟೆಗಾ, ಇಚಿಕಾವಾ ಎನ್ನೋಸುಕೆ IV, ಡ್ಯಾನಿ ಮಾಸ್ಟರ್ಸನ್, ಪೆಡ್ರೊ ಪ್ಯಾಸ್ಕಲ್, ಜೇಮೀ ಫಾಕ್ಸ್, ಬ್ರೆಂಡನ್ ಫ್ರೇಸರ್, ರಸ್ಸೆಲ್ ಬ್ರಾಂಡ್, ಕಿಯಾರಾ ಅಡ್ವಾಣಿ, ಮ್ಯಾಟ್ ರೈಫ್ ಹೆಸರನ್ನು ಗೂಗಲ್‌ನಲ್ಲಿ ಅಧಿಕವಾಗಿ ಸರ್ಚ್ ಮಾಡಲಾದ ನಟರುಗಳು ಆಗಿದ್ದಾರೆ.


Click it and Unblock the Notifications