ಹೂಡಿಕೆ ಮಾಡುವ ವಿಚಾರಕ್ಕೆ ಬಂದಾಗ ಎಂದಿಗೂ ಕೂಡಾ ಎಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ ಎಂದು ನೋಡಲಾಗುತ್ತದೆ. ಸುರಕ್ಷಿತ ಹೂಡಿಕೆ ಜೊತೆಗೆ ನಾವು ಮಾಡಿದ ಹುಡಿಕೆಯಿಂದ ಅಧಿಕ ರಿಟರ್ನ್ ಅನ್ನು ಕೂಡಾ ಪಡೆಯುವುದು ಅತೀ ಮುಖ್ಯವಲ್ಲವೇ?. ಹಾಗಿರುವಾಗ ನಿಮಗೆ ಇಲ್ಲಿದೆ ಉತ್ತಮ ಆಯ್ಕೆ.
ಹೆಚ್ಚಿನ ಜನರು ಪ್ರತಿ ತಿಂಗಳು ಸಣ್ಣ ಹೂಡಿಕೆ ಮಾಡುವ ಮೂಲಕ ದೊಡ್ಡ ಮೊತ್ತವನ್ನು ರಿಟರ್ನ್ ಆಗಿ ಪಡೆಯಬಹುದು ಎಂದು ಲೆಕ್ಕಾಚಾರ ಮಾಡಿಕೊಂಡು ಹೂಡಿಕೆ ಮಾಡುತ್ತಾರೆ. ಉದ್ಯೋಗಿಗಳು ಪ್ರತಿ ತಿಂಗಳು ಹೂಡಿಕೆ ಮಾಡುವ ಮೂಲಕ 1 ಕೋಟಿ ರೂಪಾಯಿಗಿಂತ ಅಧಿಕ ಮೊತ್ತವನ್ನು ರಿಟರ್ನ್ ಪಡೆಯಲು ಸಾಧ್ಯವಾಗಲಿದೆ.

ಅಂಚೆ ಕಚೇರಿಯ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ದೊಡ್ಡ ಮೊತ್ತವನ್ನು ಉಳಿತಾಯ ಮಾಡಲು ನಿಮಗೆ ಸಹಾಯವಾಗಲಿದೆ. ಈ ಯೋಜನೆಯು ನಿಮಗೆ ಸುರಕ್ಷಿತ ಉಳಿತಾಯದ ಆಯ್ಕೆಯನ್ನು ನೀಡುವುದಲ್ಲದೆ, ಇದರಲ್ಲಿ ಲಭ್ಯವಿರುವ ಬಡ್ಡಿದರವು ನಿಮ್ಮ ಮಿಲಿಯನೇರ್ ಅನ್ನಾಗಿ ಮಾಡುತ್ತದೆ. ಪ್ರಸ್ತುತ ಶೇಕಡ 7.1ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ.
ಕನಿಷ್ಠ ಹೂಡಿಕೆ 500 ರೂಪಾಯಿ
ನೀವು ಕೇವಲ 500 ರೂಪಾಯಿ ಹೂಡಿಕೆ ಮಾಡುವ ಮೂಲಕ ಪಿಪಿಎಫ್ ಖಾತೆಯನ್ನು ತೆರೆಯಬಹುದಾಗಿದೆ. ನಿಮ್ಮ ಪಿಪಿಎಫ್ ಖಾತೆಯಲ್ಲಿ ನೀವು ವಾರ್ಷಿಕವಾಗಿ ಗರಿಷ್ಠ 1.5 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದಾಗಿದೆ. ನೀವು ಪ್ರತಿ ತಿಂಗಳು ನಿಮ್ಮ ಪಿಪಿಎಫ್ ಖಾತೆಗೆ 12,500 ರೂಪಾಯಿ ಡೆಪಾಸಿಟ್ ಮಾಡಿದರೆ, ನಂತರ ನೀವು ಮೆಚ್ಯೂರಿಟಿಯಲ್ಲಿ ಒಟ್ಟು 40.68 ಲಕ್ಷ ರೂಪಾಯಿಗಳನ್ನು ಪಡೆಯಬಹುದಾಗಿದೆ.
ಪಿಪಿಎಫ್ ಖಾತೆಯು 15 ವರ್ಷಗಳಲ್ಲಿ ಮೆಚ್ಯೂರ್ ಆಗುತ್ತದೆ. ಮೆಚ್ಯೂರ್ ಬಳಿಕ ಮತ್ತೆ ಐದು ವರ್ಷಗಳ ಕಾಲ ನೀವು ಈ ಖಾತೆಯನ್ನು ವಿಸ್ತರಣೆ ಮಾಡಬಹುದಾಗಿದೆ. ಅಂದರೆ, ನೀವು ಈ ಯೋಜನೆಯಲ್ಲಿ ಒಟ್ಟು 25 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ನೀವು 15, 20 ಅಥವಾ 25 ವರ್ಷಗಳ ನಂತರ ನಿಮ್ಮ ಹಣವನ್ನು ವಿತ್‌ಡ್ರಾ ಮಾಡಬಹುದಾಗಿದೆ.
ಒಂದು ಕೋಟಿ ರೂಪಾಯಿ ಪಡೆಯುವುದು ಹೇಗೆ?
ಪಿಪಿಎಫ್ ಉಳಿತಾಯದ ಮೂಲಕ ನೀವು ಮಿಲಿಯನೇರ್ ಆಗಲು ಬಯಸಿದರೆ, ನೀವು 25 ವರ್ಷಗಳ ಕಾಲ ಹೂಡಿಕೆ ಮಾಡಬೇಕಾಗುತ್ತದೆ. ಇದರಲ್ಲಿ, ನೀವು 37.50 ಲಕ್ಷ ರೂಪಾಯಿಗಳನ್ನು ಡೆಪಾಸಿಟ್ ಮಾಡಿದರೆ, ಪ್ರಸ್ತುತ ಶೇಕಡ 7.1 ವಾರ್ಷಿಕ ಬಡ್ಡಿ ದರದಲ್ಲಿ 65.58 ಲಕ್ಷ ರೂಪಾಯಿಯನ್ನು ಬಡ್ಡಿಯಾಗಿ ಪಡೆಯಬಹುದಾಗಿದೆ. ಅಂದರೆ ಮೆಚ್ಯೂರಿಟಿ ವೇಳೆ ನೀವು 1.02 ಕೋಟಿ ರೂಪಾಯಿಗಳನ್ನು ಪಡೆಯಬಹುದಾಗಿದೆ.
5 ವರ್ಷಗಳವರೆಗೆ ಹಣವನ್ನು ವಿತ್‌ಡ್ರಾ ಮಾಡಲಾಗದು!
ಪಿಪಿಎಫ್ ಖಾತೆಯನ್ನು ತೆರೆದ ವರ್ಷದಿಂದ ಮುಂದಿನ 5 ವರ್ಷಗಳವರೆಗೆ ನಿಮ್ಮ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ. 5 ವರ್ಷಗಳು ಪೂರ್ಣಗೊಂಡ ನಂತರ, ಫಾರ್ಮ್ 2 ಅನ್ನು ಭರ್ತಿ ಮಾಡುವ ಮೂಲಕ ಹಣವನ್ನು ಹಿಂಪಡೆಯಬಹುದು.
ಆದರೆ, ನೀವು 15 ವರ್ಷಗಳ ಮೊದಲು ಹಣವನ್ನು ಹಿಂಪಡೆದರೆ, ಶೇಕಡ 1 ರಷ್ಟು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಯಾವುದೇ ಅಂಚೆ ಕಚೇರಿ ಅಥವಾ ಬ್ಯಾಂಕ್‌ನಲ್ಲಿ ತನ್ನ ಹೆಸರಿನಲ್ಲಿ ಈ ಖಾತೆಯನ್ನು ತೆರೆಯಬಹುದಾಗಿದೆ. ಅಪ್ರಾಪ್ತರ ಪರವಾಗಿ ಇನ್ನೊಬ್ಬರು ಖಾತೆಯನ್ನು ತೆರೆಯಬಹುದು.


Click it and Unblock the Notifications