ಚಿನ್ನ ಖರೀದಿ ಎಂದಿಗೂ ಕೂಡಾ ಭಾರತೀಯರಿಗೆ ಉಳಿತಾಯ ಮಾರ್ಗಗಳಲ್ಲಿ ಒಂದಾಗಿದೆ. ದೇಶದಲ್ಲಿ ಶೇಕಡ 90ರಷ್ಟು ಚಿನ್ನವನ್ನು ಆಮದು ಮಾಡುವ ಮೂಲಕ ಸಂಗ್ರಹಿಸಲಾಗುತ್ತದೆ. 2022ರಲ್ಲಿ ಹೊರದೇಶಗಳಿಂದ 706 ಟನ್ ಚಿನ್ನವನ್ನು ಆಮದು ಮಾಡಲಾಗಿದೆ. 2022ರಲ್ಲಿ ವಿದೇಶದಲ್ಲಿ ಚಿನ್ನ ಖರೀದಿಗಾಗಿ 36.6 ಬಿಲಿಯನ್ ಡಾಲರ್ ವ್ಯಯ ಮಾಡಲಾಗಿದೆ. ಈಗ ಒಂದು ದೇಶವು ಭಾರತೀಯರು ತೆರಿಗೆ ಇಲ್ಲದೆ ಚಿನ್ನ ಖರೀದಿಸುವ ಅವಕಾಶವನ್ನು ನೀಡಿದೆ.
ಹೌದು, ಬೂತಾನ್ ಸರ್ಕಾರವು ಭಾರತೀಯರಿಗೆ ತೆರಿಗೆ ಮುಕ್ತ ಚಿನ್ನ ಖರೀದಿಗೆ ಅವಕಾಶ ನೀಡಿದೆ. ತಮ್ಮ ದೇಶದ ಅತೀ ಪವಿತ್ರ ದಿನವಾದ (ಮೆಜೆಸ್ಟಿ ದಿ ಕಿಂಗ್ ಬರ್ತ್‌ಡೇ ಮತ್ತು ಲೋಸರ್, ಬೂತಾನ್‌ನ ಹೊಸ ವರ್ಷ) ಫೆಬ್ರವರಿ 21ರಂದು ತೆರಿಗೆ ರಹಿತದ ಚಿನ್ನ ಖರೀದಿಯ ಅವಕಾಶವನ್ನು ನೀಡಿದೆ. ಪ್ರವಾಸವನ್ನು ಉತ್ತೇಜನ ಮಾಡುವ ನಿಟ್ಟಿನಲ್ಲಿ ಬೂತಾನ್ ಸರ್ಕಾರವು ಘೋಷಣೆಯನ್ನು ಮಾಡಿದೆ ಎಂದು ವರದಿ ಉಲ್ಲೇಖಿಸಿದೆ.
ಬೂತಾನ್‌ನಲ್ಲಿ ಚಿನ್ನದ ದರ
ಭಾರತದಲ್ಲಿ ಪ್ರಸ್ತುತ 10 ಗ್ರಾಮ್‌ನ 22 ಕ್ಯಾರೆಟ್ ಚಿನ್ನದ ದರ 50,900 ರೂಪಾಯಿ ಆಗಿದೆ, 24 ಕ್ಯಾರೆಟ್ ಚಿನ್ನದ ದರವು 55,530 ರೂಪಾಯಿ ಆಗಿದೆ. ಬೂತಾನ್‌ನಲ್ಲಿ ಪ್ರಸ್ತುತ ಚಿನ್ನದ ದರವು ಬಿಟಿಎನ್ 37,588.59 ಭೂತಾನ್ ನಗುಲ್ಟ್ರಮ್ ಆಗಿದೆ. ಭಾರತೀಯರು 37,588.49 ರೂಪಾಯಿಗೆ ಚಿನ್ನ ಖರೀದಿಸಬಹುದು. ಅಂದರೆ ಒಂದು ಬಿಟಿಎನ್ ಅಂದರೆ ಒಂದು ರೂಪಾಯಿ ಆಗುತ್ತದೆ. ನಿಯಮಗಳ ಮಾಹಿತಿ ನಾವಿಲ್ಲಿ ನೀಡಿದ್ದೇವೆ.
ತೆರಿಗೆ ರಹಿತ ಚಿನ್ನ ಖರೀದಿಗೆ ನಿಯಮ
- ಭಾರತೀಯರು ಸಸ್ಟ್‌ನೇಬಲ್ ಡೆವಲಪ್‌ಮೆಂಟ್ ಫೀ (ಎಸ್‌ಡಿಎಫ್) ಪಾವತಿಸಬೇಕಾಗುತ್ತದೆ, ತೆರಿಗೆ ರಹಿತ ಚಿನ್ನ ಖರೀದಿಮಾಡಬೇಕಾದರೆ
1,200-1,800 ರೂಪಾಯಿವರೆಗೆ ಎಸ್‌ಡಿಎಫ್ ಪಾವತಿಸಬೇಕಾಗುತ್ತದೆ.
- ಬೂತಾನೀಸ್ ಸರ್ಕಾರದ ಪ್ರವಾಸಿ ಸರ್ಟಿಫೈಡ್ ಹೋಟೆಲ್‌ಗಳಲ್ಲಿ ಕನಿಷ್ಠ ಒಂದು ರಾತ್ರಿಯನ್ನು ಕಳೆಯಬೇಕಾಗುತ್ತದೆ.
- ಚಿನ್ನವನ್ನು ಖರೀದಿ ಮಾಡಲು ಪ್ರವಾಸಿಗರು ಯುಎಸ್ ಹಣವನ್ನು ಹೊಂದಿರಬೇಕಾಗುತ್ತದೆ.
ತೆರಿಗೆ ರಹಿತ ಚಿನ್ನ ಖರೀದಿಗೆ ಯಾರು ಅರ್ಹರು?
ಎಸ್‌ಡಿಎಫ್ ಅನ್ನು ಪಾವತಿಸುವ ಎಲ್ಲಾ ಪ್ರವಾಸಿಗರು ಬೂತಾನ್‌ನಲ್ಲಿ ತೆರಿಗೆ ರಹಿತ ಚಿನ್ನವನ್ನು ಖರೀದಿ ಮಾಡುವ ಅರ್ಹತೆಯನ್ನು ಹೊಂದಿದ್ದಾರೆ. ಪ್ರವಾಸೋದ್ಯಮ ಇಲಾಖೆಯಿಂದ ಅನುಮೋದನೆ ಮಾಡಲಾದ ಹೋಟೆಲ್‌ನಲ್ಲಿ ಉಳಿದುಕೊಳ್ಳಬೇಕಾಗುತ್ತದೆ. ಕನಿಷ್ಠ ಒಂದು ರಾತ್ರಿ ಸರ್ಕಾರಿ ಅನುಮೋದಿತ ಹೋಟೆಲ್‌ನಲ್ಲಿ ತಂಗಬೇಕಾಗುತ್ತದೆ. ಮಾರ್ಚ್ 1ರಿಂದ ಫುಯೆನ್‌ಶೋಲಿಂಗ್ ಮತ್ತು ಥಿಂಪುವಿನಲ್ಲಿ ಖರೀದಿ ಮಾಡಬಹುದು.
ಬೂತಾನ್‌ನಲ್ಲಿ ಭಾರತೀಯರು ಎಷ್ಟು ಚಿನ್ನ ಖರೀದಿಸಬಹುದು?
ಭಾರತೀಯ ಪುರುಷರು ಸುಮಾರು 50,000 ರೂಪಾಯಿ ಮೌಲ್ಯದ ಅಥವಾ 20 ಗ್ರಾಂ ಚಿನ್ನವನ್ನು ತೆರಿಗೆ ರಹಿತವಾಗಿ ಬೂತಾನ್ ದೇಶದಿಂದ ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಭಾರತೀಯ ಮಹಿಳೆಯರು ಸರಿಸುಮಾರು 40 ಗ್ರಾಂನ ಅಥವಾ 1 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಯಾವುದೇ ತೆರಿಗೆ ಇಲ್ಲದೆ ಖರೀದಿ ಮಾಡಲು ಸಾಧ್ಯವಾಗುತ್ತದೆ.


Click it and Unblock the Notifications