ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಲು ಇನ್ನು ಬರೀ ಒಂದು ವಾರಗಳು ಮಾತ್ರ ಉಳಿದಿದೆ. ಮಾರ್ಚ್ 31 ಎರಡೂ ಪ್ರಮುಖ ದಾಖಲೆಗಳ ಲಿಂಕಿಂಗ್‌ಗೆ ಕೊನೆಯ ದಿನಾಂಕವಾಗಿದೆ. ನೀವು ಈ ಗಡುವಿಗೂ ಮುನ್ನ ಪ್ಯಾನ್- ಆಧಾರ್ ಅನ್ನು ಲಿಂಕ್ ಮಾಡಿದ್ದರೆ ನಿಮ್ಮ ಪರ್ಮನೆಂಟ್ ಅಕೌಂಟ್ ನಂಬರ್ ಅಥವಾ ಪ್ಯಾನ್ ಕಾರ್ಡ್ ಏಪ್ರಿಲ್ 1ರಿಂದ ನಿಷ್ಕ್ರೀಯವಾಗಲಿದೆ. ಅಷ್ಟು ಮಾತ್ರವಲ್ಲದೆ ನೀವು ಸರ್ಕಾರಕ್ಕೆ ಹೆಚ್ಚುವರಿ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ.
ಹೌದು, ಮಾರ್ಚ್ 30, 2022ರ ಸಿಬಿಡಿಟಿ ಸುತ್ತೋಲೆಯಲ್ಲಿ, "ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಅನ್ನು ಗಡುವಿಗೂ ಮುನ್ನ ಲಿಂಕ್ ಮಾಡಿದಿದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ. ಪ್ಯಾನ್ ಕಾರ್ಡ್ ನಿಷ್ಕ್ರೀಯವಾದರೆ, ಹೆಚ್ಚುವರಿ ತೆರಿಗೆಯನ್ನು ಸರ್ಕಾರಕ್ಕೆ ಪಾವತಿ ಮಾಡಬೇಕಾಗುತ್ತದೆ," ಎಂದು ಉಲ್ಲೇಖ ಮಾಡಲಾಗಿದೆ. ಈ ಬಗ್ಗೆ ವಿವರಣೆ ನೀಡಿದ ಐಪಿ ಪಸ್ರಿಚಾ & ಕೋ ನಲ್ಲಿ ಪಾಲುದಾರ ಮನೀತ್ ಪಾಲ್ ಸಿಂಗ್, "ಮಾರ್ಚ್ 31, 2023ಕ್ಕೂ ಮುನ್ನ ನಿಮ್ಮ ಪ್ಯಾನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ," ಎಂದು ತಿಳಿಸಿದ್ದಾರೆ.

"ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗುವುದು ಮಾತ್ರವಲ್ಲದೆ, ನೀವು ಟಿಡಿಎಸ್ ಅಥವಾ ತೆರಿಗೆಯನ್ನು ಹೆಚ್ಚುವರಿಯಾಗಿ ಪಾವತಿ ಮಾಡಬೇಕಾಗುತ್ತದೆ. ಹೆಚ್ಚುವರಿ ಶೇಕಡ 20ರಷ್ಟು ಅಥವಾ ಅನ್ವಯವಾಗುವ ದರ ಇವೆರಡಲ್ಲಿ ಯಾವುದು ದೊಡ್ಡದೋ ಅಷ್ಟು ತೆರಿಗೆ ಅಧಿಕವಾಗಲಿದೆ. ಪ್ಯಾನ್ ಲಿಂಕ್ ಮಾಡಿದವರಿಗೆ ವಿಧಿಸಲಾಗುವ ಸಾಮಾನ್ಯ ತೆರಿಗೆಯು ಪ್ಯಾನ್ ಲಿಂಕ್ ಮಾಡದವರಿಗೆ ಅನ್ವಯವಾಗುವುದಿಲ್ಲ," ಎಂದು ಕೂಡಾ ಐಪಿ ಪಸ್ರಿಚಾ & ಕೋ ನಲ್ಲಿ ಪಾಲುದಾರ ಮನೀತ್ ಪಾಲ್ ಸಿಂಗ್ ತಿಳಿಸಿದ್ದಾರೆ.
ಸಾಮಾನ್ಯ ಟಿಡಿಎಸ್ ಎಷ್ಟಿರುತ್ತದೆ?
ವಿವಿಧ ಆದಾಯಗಳು ಮತ್ತು ಹೂಡಿಕೆಗಳ ಮೇಲೆ ಸಾಮಾನ್ಯ ಟಿಡಿಎಸ್ ದರವು ಶೇಕಡ 1 ಆಗಿರುತ್ತದೆ. ಬ್ಯಾಂಕ್ ಠೇವಣಿ ಬಡ್ಡಿ, ಬಾಡಿಗೆಗಳು, ಕನ್ಸಲ್ಟೇಷನ್ ಶುಲ್ಕಗಳು, ಕಮಿಷನ್, ಕ್ರಿಪ್ಟೋಕರೆನ್ಸಿ ಅಥವಾ ವರ್ಚುವಲ್ ಡಿಜಿಟಲ್ ಸ್ವತ್ತುಗಳಿಂದ ಟಿಡಿಎಸ್ ಅನ್ನು ಕಡಿತಗೊಳಿಸಲಾಗುತ್ತದೆ. ಈ ಬಗ್ಗೆ ಉದಾಹರಣೆಯನ್ನು ಕೂಡಾ ಮನೀತ್ ಪಾಲ್ ಸಿಂಗ್ ನೀಡಿದ್ದಾರೆ. ಇನ್ನು ಸಿಬಿಡಿಟಿ ಪ್ಯಾನ್ ಆಧಾರ್ ಲಿಂಕ್ ಆಗದಿದ್ದರೆ ಯಾವೆಲ್ಲ ತೊಂದರೆಗಳು ಉಂಟಾಗಲಿದೆ ಎಂದು ಕೂಡಾ ತಿಳಿಸಿದೆ.
ಉದಾಹರಣೆ: ನಿಮ್ಮ ವಾರ್ಷಿಕ ಆದಾಯ 10 ಲಕ್ಷ ರೂಪಾಯಿ ಆಗಿದೆ ಎಂದುಕೊಳ್ಳಿ, ಹಾಗಿದ್ದರೆ ನಿಮ್ಮ ಸಾಮಾನ್ಯ ಟಿಡಿಎಸ್ ಶೇಕಡ 10ರಷ್ಟು ಇರುತ್ತದೆ. ನಿಮ್ಮ ಪ್ಯಾನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಅನ್ನು ಮಾರ್ಚ್ 31ಕ್ಕೂ ಮುನ್ನ ಲಿಂಕ್ ಮಾಡದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ. ಅಂದರೆ ನಿಮಗೆ ಹೆಚ್ಚುವರಿಯಾಗಿ ಅಂದರೆ 10 ಲಕ್ಷ ರೂಪಾಯಿ ಆದಾಯದ ಮೇಲೆ ಶೇಕಡ 20ರಷ್ಟು ಟಿಡಿಎಸ್ ವಿಧಿಸಲಾಗುತ್ತದೆ.
ಆಧಾರ್ ಪ್ಯಾನ್ ಲಿಂಕ್ ಆಗದಿದ್ದರೆ ಏನಾಗುತ್ತದೆ?
1. ಗಡುವಿಗೂ ಮುನ್ನ ಪ್ಯಾನ್ ಆಧಾರ್ ಲಿಂಕ್ ಮಾಡದಿದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ.
2. ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರೀಯವಾದ ಬಳಿಕ ನೀವು ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಲು ಸಾಧ್ಯವಾಗುವುದಿಲ್ಲ.
3. ಬಾಕಿಯುಳಿದ ತೆರಿಗೆ ರಿಟರ್ನ್ ಪ್ರಕ್ರಿಯೆ ಮುಂದುವರಿಸಲು ಸಾಧ್ಯವಾಗುವುದಿಲ್ಲ
4. ಪ್ಯಾನ್ ನಿಷ್ಕ್ರೀಯವಾದರೆ ಬಾಕಿಯುಳಿದ ತೆರಿಗೆ ರಿಫಂಡ್ ಅನ್ನು ಮಾಡಲಾಗುವುದಿಲ್ಲ.
5. ರಿಟರ್ನ್ ಸಲ್ಲಿಸುವಾಗ ಆದ ತಪ್ಪನ್ನು ಸರಿಪಡಿಸಲು ಸಾಧ್ಯವಾಗುವುದಿಲ್ಲ.
6. ಪ್ಯಾನ್ ನಿಷ್ಕ್ರೀಯವಾದರೆ ಅಧಿಕ ತೆರಿಗೆಯನ್ನು ನೀವು ಪಾವತಿಸಬೇಕಾಗುತ್ತದೆ.


Click it and Unblock the Notifications