ಅಂಚೆ ಕಚೇರಿ ಉಳಿತಾಯ ಯೋಜನೆಗಳು ಎಂದಿಗೂ ಕೂಡಾ ಕಡಿಮೆ ಅಪಾಯದ ಹೂಡಿಕೆಯ ಆಯ್ಕೆಗಳನ್ನು ಹೂಡಿಕೆದಾರರಿಗೆ ನೀಡುತ್ತದೆ. ಈ ಯೋಜನೆಗಳು ಸರ್ಕಾರದಿಂದ ಬೆಂಬಲಿತವಾಗಿದೆ. ಈ ಅಂಚೆ ಕಚೇರಿ ಖಾತೆದಾರರಿಗೆ ಉತ್ತಮ ಬಡ್ಡಿದರಗಳನ್ನು ಒದಗಿಸಲಾಗುತ್ತದೆ.
ಅಂಚೆ ಕಚೇರಿ ಖಾತೆಯನ್ನು ತೆರೆಯುವುದು ತುಂಬಾ ಸುಲಭ. ಆದರೆ, ನೀವು ಖಾತೆಯನ್ನು ತೆರೆಯುವ ಮೊದಲು, ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಅಂಶಗಳಿವೆ. ಉಳಿತಾಯ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು, ನೀವು ನಿಮ್ಮ ಅಂಚೆ ಕಚೇರಿ ಖಾತೆಗೆ ಆಧಾರ್ ಸಂಖ್ಯೆಗೆ ಲಿಂಕ್ ಮಾಡಬೇಕು. ಸಣ್ಣ ಉಳಿತಾಯ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡಲು ಈ ವರ್ಷದ ಸೆಪ್ಟೆಂಬರ್ 30 ಗಡುವಾಗಿದೆ.

ಜನರು ಈ ಗಡುವಿಗೂ ಮುನ್ನ ತಮ್ಮ ಅಂಚೆ ಕಚೇರಿ ಖಾತೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ವಿಫಲವಾದರೆ, ಅಂಚೆ ಕಚೇರಿ ಖಾತೆಯು ನಿಷ್ಕ್ರೀಯವಾಗುತ್ತದೆ. ನೀವು ಅಂಚೆ ಕಚೇರಿ ಉಳಿತಾಯ ಯೋಜನೆಗೆ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಸಾಧ್ಯವಾಗದಿದ್ದರೆ, ಬೇರೆ ಏನು ಆಗುತ್ತದೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....
ಅಂಚೆ ಕಚೇರಿ ಖಾತೆಗೆ ಆಧಾರ್ ಲಿಂಕ್ ಆಗದಿದ್ರೆ ಏನಾಗುತ್ತದೆ?
ನಿಮ್ಮ ಅಂಚೆ ಕಚೇರಿ ಉಳಿತಾಯ ಯೋಜನೆಗಳು ಅಥವಾ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ಯಂತಹ ಯಾವುದೇ ಸಣ್ಣ ಉಳಿತಾಯ ಯೋಜನೆಗಳನ್ನು ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲು ನಿಮಗೆ ಸಾಧ್ಯವಾಗದಿದ್ದರೆ, ನಿಮ್ಮ ಖಾತೆಯನ್ನು ಫ್ರೀಜ್ ಮಾಡಲಾಗುತ್ತದೆ. ಹೂಡಿಕೆಯ ಆಯ್ಕೆಗಳ ಯಾವುದೇ ಪ್ರಯೋಜನವನ್ನು ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ.
ಆಧಾರ್ ಲಿಂಕ್ ಮಾಡುವ ನಿಯಮಗಳು
ಇತ್ತೀಚಿನ ಅಧಿಸೂಚನೆಯಲ್ಲಿ, ಹೊಸ ಹೂಡಿಕೆದಾರರು ತಮ್ಮ ಆಧಾರ್ ಮತ್ತು ಪ್ಯಾನ್ ಅನ್ನು ತಮ್ಮ ಸಣ್ಣ ಉಳಿತಾಯ ಯೋಜನೆಯ ಖಾತೆಗಳೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ ಎಂದು ಸರ್ಕಾರ ಘೋಷಿಸಿದೆ. ಅಸ್ತಿತ್ವದಲ್ಲಿರುವ ಹೂಡಿಕೆದಾರರಿಗೂ ಈ ನಿಮಯ ಅನ್ವಯವಾಗುತ್ತದೆ.
"ಡೆಪಾಸಿಟ್‌ದಾರರು ಈಗಾಗಲೇ ಖಾತೆಯನ್ನು ತೆರೆದಿದ್ದರೆ ಮತ್ತು ಅವರ ಆಧಾರ್ ಸಂಖ್ಯೆಯನ್ನು ಖಾತೆಗಳ ಕಚೇರಿಗೆ ಸಲ್ಲಿಸದಿದ್ದರೆ, ಅವರು 2023 ರ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಆರು ತಿಂಗಳ ಅವಧಿಯಲ್ಲಿ ತಮ್ಮ ಅಂಚೆ ಕಚೇರಿ ಖಾತೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬೇಕು," ಎಂದು ನೋಟಿಸ್ ಹೇಳಿದೆ. ಅಂದರೆ ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿದೆ.
ನಿಮ್ಮ ಅಂಚೆ ಕಚೇರಿ ಖಾತೆಯಲ್ಲಿನ ಬ್ಯಾಲೆನ್ಸ್ 50,000 ರೂಪಾಯಿಯನ್ನು ಮೀರಿದ್ದರೆ ಅಥವಾ ಖಾತೆಯಿಂದ ಒಂದು ತಿಂಗಳಲ್ಲಿ ಎಲ್ಲಾ ವರ್ಗಾವಣೆಗಳು ಮತ್ತು ಬ್ಯಾಲೆನ್ಸ್‌ಗಳ ಮೊತ್ತವು 10 ಸಾವಿರ ರೂಪಾಯಿಗಿಂತ ಅಧಿಕವಾಗಿದ್ದರೆ, ಅಂಚೆ ಕಚೇರಿ ಸಣ್ಣ ಉಳಿತಾಯ ಖಾತೆಯೊಂದಿಗೆ ಪ್ಯಾನ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಒಂದು ಹಣಕಾಸು ವರ್ಷಕ್ಕೆ ಖಾತೆಯಲ್ಲಿನ ಎಲ್ಲಾ ಕ್ರೆಡಿಟ್‌ಗಳ ಒಟ್ಟು ಮೊತ್ತವು 1 ಲಕ್ಷ ರೂಪಾಯಿಗಿಂತ ಹೆಚ್ಚಿದ್ದರೆ, ಪ್ಯಾನ್ ಲಿಂಕ್ ಕಡ್ಡಾಯವಾಗಿದೆ.
ಆಧಾರ್ ಲಿಂಕ್ ಮಾಡುವುದು ಹೇಗೆ?
ಅಂಚೆ ಕಚೇರಿ ಉಳಿತಾಯ ಯೋಜನೆಗಳೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಲು ಹಲವಾರು ಮಾರ್ಗಗಳಿವೆ. ಪ್ರಕ್ರಿಯೆಯನ್ನು ಪ್ರಾರಂಭಿಸಲು ನೀವು ಆಧಾರ್ ಕಾರ್ಡ್ ಮತ್ತು ಪಾಸ್‌ವರ್ಡ್‌ನೊಂದಿಗೆ ಹತ್ತಿರದ ಅಂಚೆ ಕಚೇರಿ ಅಥವಾ ಬ್ಯಾಂಕ್ ಶಾಖೆಗೆ ಭೇಟಿ ನೀಡಬಹುದು. ಅದರ ಹೊರತಾಗಿ, ನೀವು ನಿಮ್ಮ ಬ್ಯಾಂಕ್ ಖಾತೆಗೆ ಲಾಗ್ ಇನ್ ಆಗಿ, ಉಳಿತಾಯ ಯೋಜನೆಯನ್ನು ಲಿಂಕ್ ಮಾಡಲು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬಹುದು.
ಖಾತೆಯನ್ನು ಫ್ರೀಜ್ ಮಾಡಿದರೆ ಏನಾಗುತ್ತದೆ?
ನಿಮ್ಮ ಅಂಚೆ ಕಚೇರಿ ಉಳಿತಾಯ ಖಾತೆಯನ್ನು ಫ್ರೀಜ್ ಮಾಡಿದರೆ, ನೀವು ಡೆಪಾಸಿಟ್ ಮಾಡಲು ಸಾಧ್ಯವಾಗುವುದಿಲ್ಲ. ಹೂಡಿಕೆಯ ಮೆಚ್ಯೂರಿಟಿ ಪ್ರಯೋಜನಗಳನ್ನು ಪಡೆಯಲು ಯಾವುದೇ ಅವಕಾಶ ಇರುವುದಿಲ್ಲ. ನಿಮ್ಮ ಖಾತೆಗೆ ಯಾವುದೇ ಬಡ್ಡಿಯನ್ನು ಜಮೆ ಮಾಡಲಾಗುವುದಿಲ್ಲ.


Click it and Unblock the Notifications