ದೇಶಾದ್ಯಂತ ಲಕ್ಷಾಂತರ ಬಳಕೆದಾರರನ್ನು ಹೊಂದಿರುವ ಭಾರತದಲ್ಲಿನ ಅತ್ಯಂತ ಜನಪ್ರಿಯ ಆಹಾರ ವಿತರಣಾ ಪ್ಲಾಟ್‌ಫಾರ್ಮ್‌ಗಳಲ್ಲಿ ಜೊಮ್ಯಾಟೊ ಕೂಡಾ ಒಂದಾಗಿದೆ. ಹೊಸ ವರ್ಷದ ಮುನ್ನಾದಿನದಂದು, ಜೊಮ್ಯಾಟೊದಲ್ಲಿ ದಾಖಲೆ ಪ್ರಮಾಣದ ಆರ್ಡರ್ ಲಭ್ಯವಾಗಿದೆ.
ಈ ಬೆನ್ನಲ್ಲೇ ಸಿಇಒ ದೀಪಿಂದರ್ ಗೋಯಲ್ ಪ್ಲಾಟ್‌ಫಾರ್ಮ್ ಹೊಸ ವರ್ಷದ ಮುನ್ನಾದಿನದಂದು 2023 ರ ಹಿಂದಿನ ಆರು ವರ್ಷಗಳಲ್ಲಿ ಮಾಡಿದಂತೆಯೇ ಹೆಚ್ಚಿನ ಆರ್ಡರ್‌ಗಳನ್ನು ವಿತರಣೆ ಮಾಡಿದೆ ಎಂದು ತಿಳಿಸಿದ್ದಾರೆ. ಆದರೆ ಹೊಸ ವರ್ಷದಿಂದಲೇ ಜೊಮ್ಯಾಟೊದಲ್ಲಿ ಆರ್ಡರ್ ಶುಲ್ಕವನ್ನು ದುಬಾರಿಗೊಳಿಸಿದ್ದಾರೆ.

ಇದರ ಜೊತೆಗೆ, ಜೊಮ್ಯಾಟೊ ಸಂಬಂಧಿಸಿದ ಡೆಲಿವರಿ ಪಾಲುದಾರರು ಆ ದಿನ 97 ಲಕ್ಷಕ್ಕೂ ಹೆಚ್ಚು ಹಣವನ್ನು ಟಿಪ್ಸ್‌ಗಳಾಗಿ ಸ್ವೀಕರಿಸಿದ್ದಾರೆ. ಹೊಸ ವರ್ಷದ ಮುನ್ನಾದಿನದಂದು ಆಹಾರದ ಆರ್ಡರ್‌ಗಳ ಹೆಚ್ಚಳದ ನಂತರ, ಪ್ರಮುಖ ಆಹಾರ ವಿತರಣಾ ವೇದಿಕೆಯಾದ ಜೊಮ್ಯಾಟೊ ತನ್ನ ಪ್ಲಾಟ್‌ಫಾರ್ಮ್ ಶುಲ್ಕ ಏರಿಸಿದೆ.
ಹೌದು, ಜೊಮ್ಯಾಟೊ ಪ್ರಮುಖ ಮಾರುಕಟ್ಟೆಗಳಲ್ಲಿ ತನ್ನ ಪ್ಲಾಟ್‌ಫಾರ್ಮ್ ಶುಲ್ಕವನ್ನು ಪ್ರತಿ ಆರ್ಡರ್‌ಗೆ 3 ರೂಪಾಯಿಯಿಂದ 4 ರೂಪಾಯಿಗೆ ಹೆಚ್ಚಳ ಮಾಡಿದೆ. ಈ ಬದಲಾವಣೆಯನ್ನು ಜನವರಿ 1 ರಿಂದ ಜಾರಿಗೆ ತರಲಾಗಿದೆ.
ಹೊಸ ವರ್ಷದ ಮುನ್ನಾದಿನದಂದು, ಜೊಮ್ಯಾಟೊ ತಾತ್ಕಾಲಿಕವಾಗಿ ಕೆಲವು ಪ್ರದೇಶಗಳಲ್ಲಿ ಪ್ಲಾಟ್‌ಫಾರ್ಮ್ ಶುಲ್ಕವನ್ನು ಪ್ರತಿ ಆರ್ಡರ್‌ಗೆ 9 ರೂಪಾಯಿಗೆ ಹೆಚ್ಚಿಸಿದೆ. ಅಂತಾರಾಷ್ಟ್ರೀಯ ಬ್ರೋಕರೇಜ್ ಸಂಸ್ಥೆ ಸಿಎಲ್‌ಎಸ್‌ಎಯ ಸಕಾರಾತ್ಮಕ ದೃಷ್ಟಿಕೋನದಿಂದ ಉತ್ತೇಜಿತಗೊಂಡ ಕಂಪನಿಯ ಷೇರುಗಳು ಮಂಗಳವಾರ ಬೆಳಿಗ್ಗೆ 126 ರೂಪಾಯಿಗಳ ಸುಮಾರಿಗೆ ವಹಿವಾಟು ನಡೆಸುತ್ತಿದ್ದಂತೆ ಶುಲ್ಕದಲ್ಲಿ ಹೊಂದಾಣಿಕೆ ಮಾಡಲಾಗಿದೆ.
ಆರಂಭದಲ್ಲಿ, ಹಿಂದಿನ ವರ್ಷದ ಆಗಸ್ಟ್‌ನಲ್ಲಿ, ಲಾಭಾಂಶವನ್ನು ಸುಧಾರಿಸುವ ಪ್ರಯತ್ನದಲ್ಲಿ ಜೊಮ್ಯಾಟೊ 2 ರೂಪಾಯಿ ಪ್ಲಾಟ್‌ಫಾರ್ಮ್ ಶುಲ್ಕವನ್ನು ಪರಿಚಯಿಸಿತು. ಈ ಶುಲ್ಕವನ್ನು ನಂತರ 3 ರೂಪಾಯಿಗೆ ಹೆಚ್ಚಿಸಿದೆ. ಈಗ ಜನವರಿ 2024ರಿಂದ 4 ರೂಪಾಯಿಗೆ ಏರಿಸಿದೆ. ಪರಿಷ್ಕೃತ ಶುಲ್ಕವು ಜೊಮ್ಯಾಟೊ ಗೋಲ್ಡ್‌ಗೆ ಚಂದಾದಾರರು ಸೇರಿದಂತೆ ಎಲ್ಲಾ ಗ್ರಾಹಕರಿಗೆ ಅನ್ವಯಿಸುತ್ತದೆ.
ಜೊಮ್ಯಾಟೊ ಅದರ ತ್ವರಿತ ವಾಣಿಜ್ಯ ವೇದಿಕೆ ಬ್ಲಿಂಕಿಟ್ ಜೊತೆಗೆ, ಹೊಸ ವರ್ಷದ ಮುನ್ನಾದಿನದಂದು ಆರ್ಡರ್‌ಗಳು ಮತ್ತು ಬುಕಿಂಗ್‌ಗಳಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ದಾಖಲಿಸಿದೆ. ಹಿಂದಿನ ವರ್ಷಗಳಲ್ಲಿ ಅವರ ಕಾರ್ಯಕ್ಷಮತೆಯನ್ನು ಮೀರಿಸಿದೆ.
ಜೊಮ್ಯಾಟೊದ ಸಂಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯಲ್, ಹೊಸ ವರ್ಷ 2023 ರಂದು ಸ್ವೀಕರಿಸಿದ ಗಮನಾರ್ಹ ಪ್ರಮಾಣದ ಆರ್ಡರ್‌ಗಳನ್ನು ಗಮನಿಸಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಭವಿಷ್ಯದ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ.
ಈ ಬೆಳವಣಿಗೆಗಳ ನಡುವೆ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಡಿಮೆ ಪಾವತಿ ಮಾಡಿದ ಆರೋಪದ ಮೇಲೆ ದೆಹಲಿ ಮತ್ತು ಕರ್ನಾಟಕದಲ್ಲಿ ಜೊಮ್ಯಾಟೊಗೆ ತೆರಿಗೆ ಅಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ. ಒಟ್ಟು 4.2 ಕೋಟಿ ರೂಪಾಯಿ ಜಿಎಸ್‌ಟಿ ನೋಟೀಸ್ ನೀಡಲಾಗಿದೆ. ಈ ತೆರಿಗೆ ಬೇಡಿಕೆ ನೋಟಿಸ್‌ಗಳ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಂಪನಿ ಯೋಜಿಸಿದೆ.


Click it and Unblock the Notifications