A Oneindia Venture
bredcrumb

ಜಪಾನ್‌ನಿಂದ 24 ಬುಲೆಟ್ ರೈಲುಗಳನ್ನು ಖರೀದಿಗೆ ಭಾರತ ಸರ್ಕಾರ ಒಪ್ಪಂದ

By Punith BU
| Published: Friday, March 8, 2024, 12:52 [IST]
ರಾಷ್ಟ್ರೀಯ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಎನ್‌ಎಚ್‌ಎಸ್‌ಆರ್‌ಸಿಎಲ್) ಈ ವರ್ಷದ ಆಗಸ್ಟ್ 15 ರೊಳಗೆ ರೈಲುಗಳ ಖರೀದಿ ಮತ್ತು ಆಪರೇಟಿಂಗ್ ಸಿಸ್ಟಮ್ ಸೇರಿದಂತೆ ಎಲ್ಲಾ ಒಪ್ಪಂದಗಳನ್ನು ಬಿಡ್ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಜಪಾನ್‌ನಿಂದ 24 ಬುಲೆಟ್ ರೈಲುಗಳನ್ನು ಖರೀದಿಗೆ ಭಾರತ ಸರ್ಕಾರ ಒಪ್ಪಂದ
1/7
ಭಾರತವು ಈ ತಿಂಗಳ ಅಂತ್ಯದ ವೇಳೆಗೆ ಜಪಾನ್‌ನಿಂದ 24 E5 ಸರಣಿಯ ಶಿಂಕನ್‌ಸೆನ್ ರೈಲುಗಳನ್ನು (ಬುಲೆಟ್ ರೈಲುಗಳು) ಖರೀದಿಸುವ ಒಪ್ಪಂದವನ್ನು ಮುಗಿಸಲಿದೆ.
ಜಪಾನ್‌ನಿಂದ 24 ಬುಲೆಟ್ ರೈಲುಗಳನ್ನು ಖರೀದಿಗೆ ಭಾರತ ಸರ್ಕಾರ ಒಪ್ಪಂದ
2/7
ಈ ಒಪ್ಪಂದದ ವೇಗವನ್ನು ಗಮನಿಸಿದರೆ ಗುಜರಾತ್‌ನಲ್ಲಿ ಜೂನ್-ಜುಲೈ 2026 ರಲ್ಲಿ ಮೊದಲ ಬುಲೆಟ್‌ ರೈಲು ಪ್ರಾರಂಭವಾಗುತ್ತದೆ ಎಂದು ರೈಲ್ವೆ ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ.
ಜಪಾನ್‌ನಿಂದ 24 ಬುಲೆಟ್ ರೈಲುಗಳನ್ನು ಖರೀದಿಗೆ ಭಾರತ ಸರ್ಕಾರ ಒಪ್ಪಂದ
3/7
ರಾಷ್ಟ್ರೀಯ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಎನ್‌ಎಚ್‌ಎಸ್‌ಆರ್‌ಸಿಎಲ್) ಈ ವರ್ಷದ ಆಗಸ್ಟ್ 15 ರೊಳಗೆ ರೈಲುಗಳ ಖರೀದಿ ಮತ್ತು ಆಪರೇಟಿಂಗ್ ಸಿಸ್ಟಮ್ ಸೇರಿದಂತೆ ಎಲ್ಲಾ ಒಪ್ಪಂದಗಳನ್ನು ಬಿಡ್ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಜಪಾನ್‌ನಿಂದ 24 ಬುಲೆಟ್ ರೈಲುಗಳನ್ನು ಖರೀದಿಗೆ ಭಾರತ ಸರ್ಕಾರ ಒಪ್ಪಂದ
4/7
ಅಹಮದಾಬಾದ್ ಮತ್ತು ಮುಂಬೈ ನಡುವಿನ 508 ಕಿಮೀ ಬುಲೆಟ್ ರೈಲು ಕಾರಿಡಾರ್ 'ಸೀಮಿತ ನಿಲುಗಡೆ' ಮತ್ತು 'ಆಲ್ ಸ್ಟಾಪ್' ಸೇವೆಗಳನ್ನು ಹೊಂದಿರುತ್ತದೆ. ಸೀಮಿತ ನಿಲುಗಡೆ ರೈಲುಗಳು ಮುಂಬೈ ಮತ್ತು ಅಹಮದಾಬಾದ್ ನಡುವಿನ ಅಂತರವನ್ನು ಕೇವಲ ಎರಡು ಗಂಟೆಗಳಲ್ಲಿ ಕ್ರಮಿಸಿದರೆ, ಇತರ ಸೇವೆಯು ಸುಮಾರು 2 ಗಂಟೆ 45 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
ಜಪಾನ್‌ನಿಂದ 24 ಬುಲೆಟ್ ರೈಲುಗಳನ್ನು ಖರೀದಿಗೆ ಭಾರತ ಸರ್ಕಾರ ಒಪ್ಪಂದ
5/7
ಜನವರಿವರೆಗೆ ಯೋಜನೆಯ ಒಟ್ಟಾರೆ ಭೌತಿಕ ಪ್ರಗತಿಯು ಸುಮಾರು 40%. ಈ ಪೈಕಿ ಗುಜರಾತ್‌ನಲ್ಲಿ (48.3%) ಪ್ರಗತಿ ಹೆಚ್ಚಿದ್ದರೆ ಮಹಾರಾಷ್ಟ್ರದಲ್ಲಿ ಸಾಧನೆ ಸುಮಾರು 22.5% ಆಗಿದೆ. ಕಳೆದ ಒಂದು ವರ್ಷದಲ್ಲಿ, ಯೋಜನೆಯಲ್ಲಿ 100 ಕಿ.ಮೀ ಗಿಂತ ಹೆಚ್ಚು ವಯಡಕ್ಟ್ (ಎಲಿವೇಟೆಡ್ ಸ್ಟ್ರೆಚ್) ಪೂರ್ಣಗೊಂಡಿದೆ. ಕಳೆದ ಒಂದು ವರ್ಷದಲ್ಲಿ ಆರು ನದಿ ಸೇತುವೆಗಳು ಪೂರ್ಣಗೊಂಡಿವೆ. ಗುಜರಾತ್‌ನ 20 ಸೇತುವೆಗಳ ಪೈಕಿ ಏಳು ಸೇತುವೆಗಳು ಪೂರ್ಣಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಪಾನ್‌ನಿಂದ 24 ಬುಲೆಟ್ ರೈಲುಗಳನ್ನು ಖರೀದಿಗೆ ಭಾರತ ಸರ್ಕಾರ ಒಪ್ಪಂದ
6/7
“ಮಹಾರಾಷ್ಟ್ರದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಗಮನಾರ್ಹ ಪ್ರಗತಿಯಾಗಿದೆ. ಈ ತಿಂಗಳ ಅಂತ್ಯದೊಳಗೆ ಭೂಮಿ ಹಸ್ತಾಂತರವನ್ನು ಪೂರ್ಣಗೊಳಿಸುವಂತೆ ರಾಜ್ಯ ಆಡಳಿತವು ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಜಪಾನ್‌ನಿಂದ 24 ಬುಲೆಟ್ ರೈಲುಗಳನ್ನು ಖರೀದಿಗೆ ಭಾರತ ಸರ್ಕಾರ ಒಪ್ಪಂದ
7/7
ಯೋಜನೆಯು ಶಾಸನಬದ್ಧ ಅನುಮತಿಗಳನ್ನು ಪಡೆದುಕೊಂಡಿದೆ. ಹಿಂದಿನ ಮಹಾರಾಷ್ಟ್ರ ಸರ್ಕಾರದಿಂದಾಗಿ ನಾವು ಕಳೆದುಕೊಂಡ ಸಮಯವನ್ನು ಸರಿದೂಗಿಸಲು ನಾವು ಭೌತಿಕ ಪ್ರಗತಿಯನ್ನು ಹೇಗೆ ತಳ್ಳಬಹುದು ಎಂಬುದನ್ನು ನೋಡಲು ನಾವು ಶ್ರಮಿಸುತ್ತಿದ್ದೇವೆ ಎಂದು ರೈಲ್ವೆ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.