A Oneindia Venture
bredcrumb

Ayodhya Railway Junction: ಅಯೋಧ್ಯಾ ಧಾಮ ಜಂಕ್ಷನ್ ಹೇಗೆ ಕಾಣುತ್ತದೆ ಗೊತ್ತೆ? ಇಲ್ಲಿದೆ ಚಿತ್ರದೊಂದಿಗೆ ಪ್ರಮುಖ ಮಾಹಿತಿ

By Mayuri
| Published: Saturday, January 6, 2024, 10:22 [IST]
Ram-Temple Themed Ayodhya Railway Junction Look- In Pics.  
 Ayodhya Railway Junction: ಅಯೋಧ್ಯಾ ಧಾಮ ಜಂಕ್ಷನ್ ಹೇಗೆ ಕಾಣುತ್ತದೆ ಗೊತ್ತೆ? ಇಲ್ಲಿದೆ ಚಿತ್ರದೊಂದಿಗೆ ಪ್ರಮುಖ ಮಾಹಿತಿ
1/7
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಡಿಸೆಂಬರ್ 21, 2023 ರಂದು ಅಯೋಧ್ಯೆ ಜಿಲ್ಲೆಯ ರೈಲು ನಿಲ್ದಾಣದಲ್ಲಿ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದ ಕ್ಷಣ.
 Ayodhya Railway Junction: ಅಯೋಧ್ಯಾ ಧಾಮ ಜಂಕ್ಷನ್ ಹೇಗೆ ಕಾಣುತ್ತದೆ ಗೊತ್ತೆ? ಇಲ್ಲಿದೆ ಚಿತ್ರದೊಂದಿಗೆ ಪ್ರಮುಖ ಮಾಹಿತಿ
2/7
ಡಿಸೆಂಬರ್ 21, 2023 ರ ಗುರುವಾರದಂದು ಅಯೋಧ್ಯೆ ರೈಲು ನಿಲ್ದಾಣದಲ್ಲಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿರುವ ದೃಶ್ಯ ಇದಾಗಿದೆ. ಸುಮಾರು 240 ಕೋಟಿ ರೂಪಾಯಿ ವೆಚ್ಚದಲ್ಲಿ ರೈಲ್ವೇ ನಿಲ್ದಾಣವನ್ನು ನವೀಕರಣ ಮಾಡಲಾಗಿದೆ.
 Ayodhya Railway Junction: ಅಯೋಧ್ಯಾ ಧಾಮ ಜಂಕ್ಷನ್ ಹೇಗೆ ಕಾಣುತ್ತದೆ ಗೊತ್ತೆ? ಇಲ್ಲಿದೆ ಚಿತ್ರದೊಂದಿಗೆ ಪ್ರಮುಖ ಮಾಹಿತಿ
3/7
ಅಯೋಧ್ಯೆ ರೈಲು ನಿಲ್ದಾಣ ಉದ್ಘಾಟನೆಗೂ ಮುನ್ನ ಶುಚಿಗೊಳಿಸುತ್ತಿರುವ ದೃಶ್ಯ ಇದಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಡಿಸೆಂಬರ್ 30 ರಂದು ನವೀಕರಣಗೊಂಡ ಈ ಅಯೋಧ್ಯೆ ರೈಲು ನಿಲ್ದಾಣವನ್ನು ಉದ್ಘಾಟಿಸಿದ್ದಾರೆ.  
 Ayodhya Railway Junction: ಅಯೋಧ್ಯಾ ಧಾಮ ಜಂಕ್ಷನ್ ಹೇಗೆ ಕಾಣುತ್ತದೆ ಗೊತ್ತೆ? ಇಲ್ಲಿದೆ ಚಿತ್ರದೊಂದಿಗೆ ಪ್ರಮುಖ ಮಾಹಿತಿ
4/7
ಅಯೋಧ್ಯೆ ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ಡಿಸೆಂಬರ್ 27ರಂದು ರೈಲುಗಳಿಗಾಗಿ ಕಾಯುತ್ತಿರುವ ದೃಶ್ಯ ಇದಾಗಿದೆ. ನವೀಕರಣಗೊಂಡ ಅಯೋಧ್ಯೆ ಜಂಕ್ಷನ್ ಕಾರ್ಯವನ್ನು ವಿಶ್ವದ ಯಾವುದೇ ರೈಲ್ವೆ ನಿಲ್ದಾಣಗಳಲ್ಲಿ ಕೈಗೊಂಡ ಅತೀ ದೊಡ್ಡ ಅಭಿವೃದ್ಧಿ ಕಾರ್ಯ ಎಂದು ನಂಬಲಾಗಿದೆ.
 Ayodhya Railway Junction: ಅಯೋಧ್ಯಾ ಧಾಮ ಜಂಕ್ಷನ್ ಹೇಗೆ ಕಾಣುತ್ತದೆ ಗೊತ್ತೆ? ಇಲ್ಲಿದೆ ಚಿತ್ರದೊಂದಿಗೆ ಪ್ರಮುಖ ಮಾಹಿತಿ
5/7
ಅಯೋಧ್ಯೆ ರೈಲು ನಿಲ್ದಾಣವು ವರ್ಣರಂಜಿತ ದೀಪಗಳಿಂದ ಅಂಲಕರಿಸ್ಪಟ್ಟ ದೃಶ್ಯ ಇದಾಗಿದೆ. 2019 ರಲ್ಲಿ ಜಂಕ್ಷನ್‌ನ ವಿಸ್ತರಣೆ ಕಾರ್ಯವು ವೇಗವನ್ನು ಪಡೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಒಂದು ದೊಡ್ಡ ಕಾರ್ಯವಾಗಿರುವುದರಿಂದ, ಸಂಪೂರ್ಣ ಯೋಜನೆಯನ್ನು ಎರಡು ಹಂತಗಳಾಗಿ ವಿಂಗಡಿಸಲಾಗಿದೆ. ಮೊದಲ ಹಂತದಲ್ಲಿ ಹೊಸ ನಿಲ್ದಾಣದ ಕಟ್ಟಡ ನಿರ್ಮಾಣ ಸೇರಿದೆ. 
 Ayodhya Railway Junction: ಅಯೋಧ್ಯಾ ಧಾಮ ಜಂಕ್ಷನ್ ಹೇಗೆ ಕಾಣುತ್ತದೆ ಗೊತ್ತೆ? ಇಲ್ಲಿದೆ ಚಿತ್ರದೊಂದಿಗೆ ಪ್ರಮುಖ ಮಾಹಿತಿ
6/7
ಅಯೋಧ್ಯೆ ರೈಲು ನಿಲ್ದಾಣದ ಎರಡನೇ ಹಂತವು ಪ್ಲಾಜಾ ನಿರ್ಮಾಣ, ಪ್ಲಾಟ್‌ಫಾರ್ಮ್‌ಗಳಲ್ಲಿ ಏರ್ ಕಾನ್ಕೋರ್ಸ್‌ನ ಅಭಿವೃದ್ಧಿ, ಎಲಿವೇಟರ್‌ಗಳು, ಎಸ್ಕಲೇಟರ್‌ಗಳು ಮತ್ತು ಇತರ ಸಂಬಂಧಿತ ಕೆಲಸಗಳನ್ನು ಒಳಗೊಂಡಂತೆ ಪ್ರಯಾಣಿಕರ ಸೌಕರ್ಯಗಳನ್ನು ಒಳಗೊಂಡಿದೆ.
 Ayodhya Railway Junction: ಅಯೋಧ್ಯಾ ಧಾಮ ಜಂಕ್ಷನ್ ಹೇಗೆ ಕಾಣುತ್ತದೆ ಗೊತ್ತೆ? ಇಲ್ಲಿದೆ ಚಿತ್ರದೊಂದಿಗೆ ಪ್ರಮುಖ ಮಾಹಿತಿ
7/7
ಡಿಸೆಂಬರ್ 30, 2023 ರ ಶನಿವಾರದಂದು ಅಯೋಧ್ಯೆಯಲ್ಲಿ ಮರುಅಭಿವೃದ್ಧಿಪಡಿಸಿದ ಅಯೋಧ್ಯಾ ಧಾಮ ನಿಲ್ದಾಣದ (ಹೊಸ ಹೆಸರು) ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರೈಲಿಗೆ ಫ್ಲಾಗ್ ತೋರಿಸಿ ಚಾಲನೆ ನೀಡಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಉಪಸ್ಥಿತರಿದ್ದರು.