For Quick Alerts
ALLOW NOTIFICATIONS  
For Daily Alerts

ಜೂ.1ರಿಂದ ಸೇವಾ ತೆರಿಗೆ ಏರಿಕೆ, ಏನೇನು ದುಬಾರಿ?

By Mahesh
|

ನವದೆಹಲಿ, ಮೇ.29: ವಿತ್ತ ಸಚಿವ ಅರುಣ್ ಜೇಟ್ಲಿ ಅವರು ನಿರೀಕ್ಷೆಯಂತೆ 2015-16ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಮಧ್ಯಮ ವರ್ಗದ ಜನತೆಗೆ ಹಲವಾರು ತೆರಿಗೆ ವಿನಾಯತಿ ನೀಡಿದರು. ಆದರೆ, ಆದಾಯದಲ್ಲಿ ವ್ಯತ್ಯಾಸ ಕಂಡು ಬಂದಿರುವುದರಿಂದ ಸೇವಾ ತೆರಿಗೆ ಹೆಚ್ಚಳ ಅನಿವಾರ್ಯ ಎಂದು ಸಮರ್ಥನೆ ನೀಡಿದರು. ಹೀಗಾಗಿ ಜೂ.1 ರಿಂದ ಹೊಟೆಲ್, ಮೊಬೈಲ್ ಬಿಲ್, ಪ್ರವಾಸ ದುಬಾರಿಯಾಗಲಿದೆ.

 

ಇದರ ಜೊತೆಗೆ ಕ್ಲಬ್, ವಿವಿಧ ಸಂಸ್ಥೆಗಳ ಸದಸ್ಯತ್ವ ವಕೀಲರ ಫೀಸ್ ನಿಮ್ಮ ಕೈ ಕಚ್ಚಲಿದೆ. ಏ.1, 2016ರಿಂದ ಅನ್ವಯವಾಗುವಂತೆ ಮೋದಿ ಸರ್ಕಾರ ಹೊಸ ಸರಕು ಹಾಗೂ ಸೇವಾ ತೆರಿಗೆ (ಜಿಎಸ್ ಟಿ) ಅನುಷ್ಠಾನಗೊಳಿಸಿದೆ. ಹಾಲಿ ಸೇವಾ ತೆರಿಗೆ ದರ ಶೇ 12ರಷ್ಟಿದೆ. ಜಿಎಸ್ ಟಿ ಅನುಷ್ಠಾನಗೊಂಡ ನಂತರಸೇವಾ ತೆರಿಗೆ ಶೇ 14ಕ್ಕೆ ಏರಿಕೆಯಾಗಿದೆ. [ಬಜೆಟ್ 2015-16: ಯಾವುದು ಏರಿಕೆ? ಯಾವ್ದು ಇಳಿಕೆ?]

ಗ್ರಾಹಕರ ಹಿತದೃಷ್ಟಿಯಿಂದ ಕಾಲಕಾಲಕ್ಕೆ ಸೇವಾ ತೆರಿಗೆ ದರ ಪರಿಷ್ಕರಣೆ ಮಾಡಲು ಸರ್ಕಾರ ಮುಂದಾಗಬಹುದು ಎಂಬ ನಿರೀಕ್ಷೆ ಇತ್ತು. ಸದ್ಯಕ್ಕಂತೂ ಗ್ರಾಹಕರು ಬೆಲೆ ಏರಿಕೆ ಅನುಭವಿಸಬೇಕು ಎಂದು ಕೆಪಿಎಂಜಿ ಸಂಸ್ಥೆಯ ಪ್ರತೀಕ್ ಜೈನ್ ಹೇಳಿದ್ದಾರೆ.

ಹೋಟೆಲ್ ಊಟ, ತಿಂಡಿ ದುಬಾರಿ

ಹೋಟೆಲ್ ಊಟ, ತಿಂಡಿ ದುಬಾರಿ

ಜೂ.1ರಿಂದ ಸೇವಾ ತೆರಿಗೆ ಶೇ 12.36 ರಿಂದ ಶೇ 14ಕ್ಕೆ ಏರಿಕೆಯಾಗಲಿದೆ. ಹೋಟೆಲ್ ಬಿಲ್ ದುಬಾರಿಯಾಗಲಿದೆ. ಇದು ಎಲ್ಲಾ ಸಣ್ಣ ಪುಟ್ಟ ಹೋಟೆಲ್, ದರ್ಶಿನಿ, ರೆಸ್ಟೋರೆಂಟ್, ಪಂಚತಾರಾ ಹೋಟೆಲ್ ಗಳಿಗೂ ಅನ್ವಯವಾಗಲಿದೆ.

ಮೊಬೈಲ್ ಬಿಲ್ ಬೆಲೆ ಏರಿಕೆ

ಮೊಬೈಲ್ ಬಿಲ್ ಬೆಲೆ ಏರಿಕೆ

ತಿಂಗಳ ಮೊಬೈಲ್ ಬಿಲ್ ಗೆ ಹೊಸದಾಗಿ ಸೇವಾ ತೆರಿಗೆ ಸೇರ್ಪಡೆಯಾಗಲಿದ್ದು, ಶೇ 14ರಷ್ಟು ಬಿಲ್ ಮೊತ್ತ ಹೆಚ್ಚಳವಾಗಲಿದೆ. ಬಿಲ್ ಮೊತ್ತ ಹೆಚ್ಚದಂತೆ ತೆರಿಗೆ ಮೊತ್ತವೂ ಏರಲಿದೆ. ರೇಟ್ ಪ್ಲ್ಯಾನ್ ಬದಲಾಯಿಸಿಕೊಳ್ಳಲು ಇದು ಸಕಾಲ.

ದೇಶಿ, ವಿದೇಶಿ ವಿಮಾನಯಾನ ದುಬಾರಿ
 

ದೇಶಿ, ವಿದೇಶಿ ವಿಮಾನಯಾನ ದುಬಾರಿ

ದೇಶಿ, ವಿದೇಶಿ ವಿಮಾನಯಾನ ಟಿಕೆಟ್ ದರದ ಜೊತೆಗೆ ಶೇ 14ರಷ್ಟು ಸೇವಾ ತೆರಿಗೆ ಸೇರ್ಪಡೆಗೊಳ್ಳಲಿದ್ದು, ವಿಮಾನದಲ್ಲಿ ಪ್ರಯಾಣ ದುಬಾರಿಯಾಗಲಿದೆ.

ಕ್ಯಾಬ್, ಡಿಟಿಎಚ್ ಇನ್ನಿತರೆ

ಕ್ಯಾಬ್, ಡಿಟಿಎಚ್ ಇನ್ನಿತರೆ

ಜೂ.1, 2015ರಿಂದ ಡಿಟಿಎಚ್, ಬ್ಯೂಟಿ ಪಾರ್ಲರ್, ಟ್ಯಾಕ್ಸಿ, ಕ್ಯಾಬ್ ಸೇವೆ, ವಿಮೆ, ಕೊರಿಯರ್, ಲಾಂಡ್ರಿ ಎಲ್ಲವೂ ದುಬಾರಿಯಾಗಲಿದೆ.

ಮನರಂಜನೆ ಪ್ಲಸ್ ಸೇವಾ ತೆರಿಗೆ

ಮನರಂಜನೆ ಪ್ಲಸ್ ಸೇವಾ ತೆರಿಗೆ

ಕೆಲ ರಾಜ್ಯಗಳಲ್ಲಿ ಮನರಂಜನೆ ತೆರಿಗೆ ವಿನಾಯತಿ ಇರುವುದರಿಂದ ಸಿನಿಮಾ ಟಿಕೆಟ್ ದರದಲ್ಲಿ ವ್ಯತ್ಯಾಸ ಕಂಡು ಬರಲಿದೆ. ಸೇವಾ ತೆರಿಗೆ ಮಾತ್ರ ಎಲ್ಲೆಡೆ ಅನ್ವಯವಾಗಲಿದ್ದು, ಸಿನಿಮಾ ಟಿಕೆಟ್ ಆನ್ ಲೈನ್ ಬುಕ್ಕಿಂಗ್ ದರ ಏರಿಕೆ ನಿರೀಕ್ಷಿಸಬಹುದು.

ಶೈಕ್ಷಣಿಕ ಸೆಸ್ ದರ ಏರಿಕೆ

ಶೈಕ್ಷಣಿಕ ಸೆಸ್ ದರ ಏರಿಕೆ

ಜೂ.1ರಿಂದ ಸೇವಾ ತೆರಿಗೆ ಶೇ 14ರಷ್ಟು ಹೆಚ್ಚಳದ ಜೊತೆಗೆ ಎಜುಕೇಷನ್ ಸೆಸ್ ಕೂಡಾ ಜಾಸ್ತಿಯಾಗಲಿದೆ. ಹೀಗಾಗಿ ಶಿಕ್ಷಣ ಸಂಸ್ಥೆಗಳಿಂದ ಹೆಚ್ಚಿನ ಬಿಲ್ ನಿರೀಕ್ಷಿಸಬಹುದು.

ಹಲವು ವಿಭಾಗಗಳಲ್ಲಿ ಈಗಾಗಲೇ ಹೆಚ್ಚಳ

ಹಲವು ವಿಭಾಗಗಳಲ್ಲಿ ಈಗಾಗಲೇ ಹೆಚ್ಚಳ

ಹಲವು ವಿಭಾಗಗಳಲ್ಲಿ ಈಗಾಗಲೇ ಮಾ.1ರಿಂದಲೇ ತೆರಿಗೆ ಹೆಚ್ಚಳ ಜಾರಿಗೊಳಿಸಲಾಗಿದೆ. ಹೀಗಾಗಿ ಜೂ.1ರಿಂದ ಸೇವಾ ತೆರಿಗೆ ಎಷ್ಟು ಹೆಚ್ಚಳವಾಗಿದೆ ಎಂಬುದನ್ನು ಗ್ರಾಹಕರು ಪರೀಕ್ಷಿಸುವುದು ಒಳ್ಳೆಯದು.

English summary

Here Are Things That Will Get More Expensive From June 1, 2015

The service tax hike as recommended in the Union Budget 2015-16 would take effect from June 1, 2015. Here are a few things that would get more expensive from June 1, 2015.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X