ಅಕ್ಷಯ ತೃತೀಯ ಮತ್ತೆ ಬಂದಿದೆ. ಭಾರತೀಯರು ಚಿನ್ನದ ಮೇಲೆ ಹೂಡಿಕೆ ಮಾಡಲು ಸಿದ್ಧರಾಗಿದ್ದಾರೆ. ಆದರೆ ಕಳೆದ ಎರಡು ವರ್ಷದ ಅವಧಿಯಲ್ಲಿ ಚಿನ್ನ ಹೇಳಿಕೊಳ್ಳುವಂಥ ರಿಟರ್ನ್ಸ್ ನೀಡುತ್ತಿಲ್ಲ. ಹಾಗಾದರೆ ಚಿನ್ನದ ಮೇಲೆ ಹೂಡಿಕೆ ಮಾಡುವುದು ನಿಜಕ್ಕೂ ಲಾಭದಾಯಕವೇ? ಅದಕ್ಕೆ ಉತ್ತರ ಇಲ್ಲಿದೆ.
ಭಾರತೀಯ ಚಿನ್ನದ ಮಾರುಕಟ್ಟೆ ಬೆಲೆ ಏರಿಕೆ ಮತ್ತು ಇಳಿಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸಿರುತ್ತದೆ. ಕೇಂದ್ರ ಸರ್ಕಾರ ಹೊರ ದೇಶದಿಂದ ಚಿನ್ನ ಆಮದಾಗುವುದನ್ನು ತಡೆಯಲು ಕೆಲ ಕ್ರಮಗಳನ್ನು ಕೈಗೊಂಡಿದೆ.[ನಾಲ್ಕು ಅತ್ಯುತ್ತಮ ಚಿನ್ನ ಉಳಿತಾಯ ಯೋಜನೆಗಳು]

ಈ ಬಾರಿಯ ಬಜೆಟ್ ನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಚಿನ್ನದ ಹೂಡಿಕೆ ಪತ್ರವನ್ನು ಪರಿಚಿಯಿಸಿದ್ದಾರೆ. ಇದಕ್ಕೆ ನಿರ್ದಿಷ್ಟ ಬಡ್ಡಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇಲ್ಲಿ ನೀವು ಚಿನ್ನವನ್ನು ಖರೀದಿ ಮಾಡದಿದ್ದರೂ ಚಿನ್ನದ ಬಾಂಡ್ ಖರೀದಿ ಮಾಡಿರುತ್ತೀರಿ. ಚಿನ್ನದ ಬೆಲೆ ಏರಿಕೆ ಮತ್ತು ಇಳಿಕೆ ಇದರ ಮೇಲೂ ಪರಿಣಾಮ ಬೀರುತ್ತಿರುತ್ತದೆ.
ನಿಮಗೆ ಚಿನ್ನವನ್ನೇ ಖರೀದಿಸಬೇಕು ಎಂಥಾದರೂ ಕೇಂದ್ರ ಸರ್ಕಾರ ಅದಕ್ಕೂ ಅವಕಾಶ ಮಾಡಿ ಕೊಟ್ಟಿದೆ. ಅಶೋಕ ಚಕ್ರ ಹೆಸರಿನ ಚಿನ್ನದ ನಾಣ್ಯಗಳನ್ನು ಖರೀದಿಸಬಹುದು. [ಅನುಮಾನವಿಲ್ಲ..ನಿಮ್ಮ ಆಭರಣ ಖರೀದಿ ಇಲ್ಲೇ ಕೊನೆ]
ನಿಜಕ್ಕೂ ಚಿನ್ನದ ಮೇಲೆ ಹೂಡಿಕೆ ಮಾಡುವುದು ಲಾಭದಾಯಕವೇ?
2012ರ ಆರಂಭದಲ್ಲಿ ಚಿನ್ನ 31 ಸಾವಿರದಲ್ಲಿತ್ತು. ಆದರೆ ಈಗ 26 ಸಾವಿರಕ್ಕೆ ಬಂದು ತಲುಪಿದೆ. ಏರಿಕೆ ಮತ್ತು ಇಳಿಕೆ ಹಾದಿಯಲ್ಲಿ ಸಾಗಿ ಬರುತ್ತಿರುವ ಚಿನ್ನದ ಮೇಲೆ ಹೂಡಿಕೆ ಮಾಡುವುದು ನಿಜಕ್ಕೂ ಲಾಭದಾಯಕವೇ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗುತ್ತದೆ.
ಅಮೆರಿಕದ ಯುಎಸ್ ಫೆಡರಲ್ ಬ್ಯಾಂಕ್ ತೆಗೆದುಕೊಳ್ಳುವ ಕ್ರಮಗಳು ಭಾರತೀಯ ಮಾರುಕಟ್ಟೆ ಮೇಲೆ ನೇರ ಪರಿಣಾಮ ಉಂಟುಮಾಡುತ್ತದೆ. ಡಾಲರ್ ಎದುರು ರೂಪಾಯಿ ಮೌಲ್ಯ ಸಹ ಚಿನ್ನದ ದರವನ್ನು ನಿರ್ಧರಿಸುತ್ತದೆ. 2008 ರಿಂದ 2012 ರ ಅವಧಿಯಲ್ಲಿ ಚಿನ್ನ ಖರೀದಿ ಪ್ರಮಾಣ ಅತಿ ಹೆಚ್ಚಾಗಿತ್ತು. ಈ ಕಾರಣಕ್ಕೆ ದರದಲ್ಲಿ ತೀವ್ರ ತೆರೆನಾದ ಏರಿಕೆ ಕಂಡುಬಂದಿತ್ತು.[ಭಾರತದಲ್ಲಿ ಚಿನ್ನಾಭರಣ ಪರಿಶುದ್ಧತೆ ಅಳೆಯುವುದು ಹೇಗೆ?]
ಹಣದುಬ್ಬರ ಏರಿಕೆ, ಆರ್ಥಿಕ ಕುಸಿತ, ಎಲ್ಲದಕ್ಕೂ ಚಿನ್ನದ ಮೇಲೆ ಹೂಡಿಕೆ ಮಾಡಿದರೆ ತಡೆ ಒಡ್ಡಬಹುದು ಎಂಬುದು ಅನೇಕ ಬಾರಿ ಸಾಬೀತಾಗಿದೆ. ನೀವು ಶುದ್ಧ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿರೋ ಅಥವಾ ಆಭರಣ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿರೋ? ಎಂಬುದು ಸಹ ಮುಖ್ಯವಾಗುತ್ತದೆ. ಉಳಿತಾಯ ಮತ್ತು ಲಾಭದ ದೃಷ್ಟಿಯಿಂದ ಹಣ ತೊಡಗಿಸುವುದಾದರೆ ಶುದ್ಧ ಚಿನ್ನ ಉತ್ತಮ. ಆಭರಣದ ಮೇಲೆ ತೊಡಗಿಸಿದರೆ ಮತ್ತೆ ಹಣ ಹಿಂದಕ್ಕೆ ಪಡೆಯಲು ಕೆಲ ಸಮಸ್ಯೆಗಳು ಎದುರಾಗಬಹುದು.[ವಿವಿಧ ನಗರಗಳ ಚಿನ್ನದ ದರ ಪರಿಶೀಲಿಸಿ]
ತೈಲ ಬೆಲೆ ನಿರಂತರ ಇಳಿಕೆ ಕಾಣುತ್ತಿರುವುದು ಚಿನ್ನದ ದರದ ಮೇಲೆ ಪರೋಕ್ಷ ಪರಿಣಾಮ ಉಂಟುಮಾಡುತ್ತಿದೆ. ಒಟ್ಟಿನಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವುದು ಅಪಾರ ಲಾಭ ತಂದು ಕೊಡುತ್ತದೆ ಎಂದು ಹೇಳುವುದಕ್ಕಿಂತ ನಷ್ಟವನ್ನೇನೂ ಮಾಡಲಾರದು.(ಗುಡ್ ರಿಟರ್ನ್ಸ್.ಇನ್)
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications