ಆಧುನಿಕ ಪ್ರಪಂಚದಲ್ಲಿ ವಿಲ್ ಮಾಡಿಸುವುದು ಮತ್ತು ಅದರ ನೋಂದಾವಣಿ ಮಾಡಿಸುವುದು ಬಹಳ ಮುಖ್ಯವಾಗುತ್ತದೆ. ನಿಮ್ಮ ಪ್ರೀತಿ ಪಾತ್ರರಿಗೆ ನಿಮ್ಮ ಆಸ್ತಿಯ ಎಲ್ಲ ಭಾಗ ಯಾವುದೋ ಗೊಂದಲವಿಲ್ಲದೇ ಸೇರುವಂತವಾಗಲು ವಿಲ್ ಅಗತ್ಯ.
ವಿಲ್ ನೋಂದಣಿ ಮಾಡಿಸದಿದ್ದರೆ ಅದಕ್ಕೆ ಯಾವುದೇ ಕಾನೂನು ಮಾನ್ಯತೆ ಇರುವುದಿಲ್ಲ. ವಿಲ್ ಮಾಡಿಸುವ ಮುನ್ನ ನಿಮ್ಮ ಎಲ್ಲ ಆಸ್ತಿಯ ಲೆಕ್ಕವನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ ನೋಂದಾವಣೆ ಮಾಡಿಸಬೇಕಾಗುತ್ತದೆ.[ವಿಲ್ ಮಾಡಿಸಿದರೆ ಸಾಲದು, ನೋಂದಣಿಯೂ ಆಗಿರಬೇಕು]

ವಿಲ್ ನಲ್ಲಿ ಸೇರಿಸಲೇಬೇಕಾದ 7 ಸಂಗತಿಗಳು
* ಭೋಗ್ಯಪತ್ರ ಹಕ್ಕು ಮತ್ತು ಆಸ್ತಿ ಯಾರಿಗೆ ಸೇರಬೇಕು ಎಂಬುದನ್ನು ಸ್ಪಷ್ಟವಾಗಿ ಹೇಳಿರಬೇಕು. ಅಥವಾ ಕೊಡುಗೆ ಎಂಬ ಹೆಸರಿನಲ್ಲೂ ನೀಡಿಕೆ ಮಾಡಬಹುದು.
* ನಿಮ್ಮ ಪೂರ್ವಜರಿಗೆ ಸೇರಿದ ಆಸ್ತಿಯನ್ನು ಕಾನೂನು ಬದ್ಧವಾಗಿ ವ್ಯಕ್ತಿಯೊಬ್ಬರಿಗೆ ನಾಮಕರಣ ಮಾಡಿ ನೀಡಬಹುದು.
* ನೀವು ಷೇರುಗಳನ್ನು ಹೊಂದಿದ್ದರೆ ಅಥವಾ ಕಂಪನಿಯೊಂದರಲ್ಲಿ ಪಾಲುದಾರಿಕೆ ಹೊಂದಿದ್ದರೆ ಅಥವಾ ಕಂಪನಿಯ ಮಾಲೀಕರಾಗಿದ್ದರೆ ಸಹ ವಿಲ್ ಮಾಡಿಸಬಹುದು. ಪಾಲುದಾರಿಕೆಹೊಂದಿದ್ದರೆ ಕೆಲ ನಿಬಂಧನೆಗಳನ್ನು ಅನುಸರಿಸಬೇಕಾಗುತ್ತದೆ.
* ಹಿಂದು ಅವಿಭಕ್ತ ಕುಟುಂಬಕ್ಕೆ ಸಂಬಂಧಿಸಿದ ಷೇರುಗಳಿದ್ದಲ್ಲಿ ವಿಲ್ ನಲ್ಲಿಯೇ ತಿಳಿಸಬೇಕಾಗುತ್ತದೆ.
* ಸ್ಥಳೀಯ ಕಾನೂನಿಗೆ ಅನ್ವಯವಾಗಿ ವಿದೇಶದಲ್ಲಿ ಹೊಂದಿರುವ ಆಸ್ತಿಯನ್ನು ವಿಲ್ ನಲ್ಲಿ ಇಂಥವರಿಗೆ ನೀಡುತ್ತೇನೆ ಎಂದು ಬರೆಸಬಹುದು.
* ಸಾಕು ಪ್ರಾಣಿ, ತೈಲ ವರ್ಣ ಚಿತ್ರಗಳು, ಇಲೆಕ್ಟ್ರಾನಿಕ್ ವಸ್ತುಗಳು, ಬೌಧ್ಧಿಕ ಆಸ್ತಿ, ಪುಸ್ತಕ, ಸಾಮಾಜಿಕ ಜಾಲತಾಣದ ಖಾತೆ, ವೈಯಕ್ತಿಕ ಸಾಮಗ್ರಿಗಳನ್ನು ಇಂಥವರಿಗೆ ನೀಡಬೇಕು ಎಂದು ಬರೆಸಬಹುದು.[ಅಕೌಂಟ್ ಕ್ಲೋಸ್ ಮಾಡುವ ಮುನ್ನ 6 ಅಂಶ ತಲೆಯಲ್ಲಿರಲಿ]
* ಆಸ್ತಿ ಸಾಮಾಜಿಕವಾಗಿದ್ದಾಗಿರಲಿ, ವೈಯಕ್ತಿಕವಾಗಿದ್ದಾಗಿರಲಿ, ಸಾಲವಾಗಿರಲಿ-ಸಂಪತ್ತಾಗಿರಲಿ ಎಲ್ಲವನ್ನು ವಿಲ್ ನಲ್ಲಿ ಸ್ಪಷ್ಟವಾಗ ಬರೆಸಬೇಕಾಗುತ್ತದೆ.
ಕೊನೆ ಮಾತು: ಸರಳವಾಗಿ ಹೇಳಬೇಕೆಂದರೆ ವಿಲ್ ನಲ್ಲಿ ಸ್ಥಿರಾಸ್ತಿ ಮತ್ತು ಚರಾಸ್ತಿ ಎಲ್ಲವನ್ನು ಚಾಚೂ ತಪ್ಪದೇ ಸೇರಿಸಿರಬೇಕು. ಅದು ವಾಹನ, ಆಭರಣ, ನಗದು, ವಿಮಾ ಪಾಲಿಸಿ ಆಗಿರಬಹುದು, ಇಲ್ಲವೇ ಜಮೀನಿ, ನಿವೇಶನ, ಕಟ್ಟಡ, ಅಂಗಡಿ ಆಗಿರಬಹದು(ಗುಡ್ ರಿಟರ್ನ್ಸ್.ಇನ್)


Click it and Unblock the Notifications