For Quick Alerts
ALLOW NOTIFICATIONS  
For Daily Alerts

ಸಾವಿನ ಬಳಿಕ ನಿಮ್ಮ ಸಾಲ ತೀರಿಸುವವರು ಯಾರು?

|

ನಾವು ನಮ್ಮ ಸಾವಿನ ನಂತರದ ಸ್ಥಿತಿಯ ಬಗ್ಗೆ ಯೋಚನೆ ಮಾಡಿದ್ದೇವೆಯೇ? ಇದೆಂಥ ಹುಚ್ಚು ಪ್ರಶ್ನೆ ಎಂದು ಭಾವಿಸಬೇಡಿ. ನಮ್ಮ ಆಸ್ತಿ ನಮ್ಮ ಸಾವಿನ ನಂತರ ಹೇಗೆ ಮಕ್ಕಳ ಪಾಲಾಗುತ್ತೆಯೋ,, ಅದೆ ರೀತಿ ನಾವು ಮಾಡಿದ ಸಾಲಕ್ಕೂ ಹಕ್ಕುದಾರರಿರಬೇಕಲ್ಲವೆ?

 

ಹೌದು... ನಾವು ಸಾಲ ಮಾಡಿಟ್ಟು ಸತ್ತರೆ ಅದನ್ನು ತೀರಿಸುವವರು ಯಾರು? ಬೇರೆ ಬೇರೆ ವಿಧದ ಸಾಲದಲ್ಲಿ ಬೇರೆ ಬೇರೆಯವರು ಪಾಲುದಾರರಾಗುತ್ತಾರೆ.[ಸ್ವಂತ ಮನೆ ಕಟ್ಟಲು ಹಣ ಹೊಂದಿಸುವುದು ಹೇಗೆ?]

 

* ಕ್ರೆಡಿಟ್ ಕಾರ್ಡ್
ಕ್ರೆಡಿಟ್ ಕಾರ್ಡ್ ಸಾಲವನ್ನು ನೀವು ಬಿಟ್ಟುಹೋಗಿದ್ದರೆ ಅದು ಸಹ ವಂಶಪಾರಂಪರ್ಯ ನೀತಿಗೆ ಒಳಪಡುತ್ತದೆ. ವಂಶಪಾರಂಪರ್ಯವಾಗಿ ನಿಮಗೆ 20 ಲಕ್ಷದ ಆಸ್ತಿ ಬಂದಿದೆ ಎಂದು ಅಂದುಕೊಂಡರೆ ಅದರಲ್ಲಿಯೇ ನಿಮ್ಮ ಕ್ರೆಡಿಟ್ ಕಾರ್ಡ್ ಹಣವನ್ನು ಮುರಿದುಕೊಳ್ಳಲಾಗುತ್ತದೆ.

ಸಾವಿನ ಬಳಿಕ ನಿಮ್ಮ ಸಾಲ ತೀರಿಸುವವರು ಯಾರು?

* ಗೃಹ ಸಾಲ ಬಾಕಿ
ನಿಮ್ಮ ತಂದೆ ಮಾಡಿಟ್ಟು ಹೋದ ಗೃಹ ಸಾಲಕ್ಕೆ ನೀವೆ ಜವಾಬ್ದಾರರು. ಇದು ನಿಮಗೂ ಅನ್ವಯಿಸುತ್ತದೆ. ಸಾಮಾನ್ಯವಾಗಿ ಇಂಥ ಸಾಲ ನೀಡುವಾಗ ಬ್ಯಾಂಕ್ ಗಳು ಗ್ಯಾರಂಟಿಗೋಸ್ಕರ ಒಂದು ವಿಮೆ ಮಾಡಿಸಿಕೊಳ್ಳುತ್ತವೆ.

ಒಂದು ವೇಳೆ ನಿಮಗೆ ಯಾವುದೇ ಕಾನೂನಾತ್ಮಕ ಉತ್ತರಾಧಿಕಾರಿ ಇಲ್ಲ, ವಿಮೆಯೂ ಇಲ್ಲ ಎಂದಾದಲ್ಲಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಸ್ವಾತಂತ್ರ್ಯ ಬ್ಯಾಂಕಿಗೆ ಲಭ್ಯವಾಗುತ್ತದೆ.[ಪರ್ಸನಲ್ ಲೋನ್ ಪಡೆಯುವ ಮುನ್ನ ಓದಿ]

* ವಾಹನ ಸಾಲ
ಪ್ರಮುಖವಾಗಿ ಆಟೋ ಸಾಲ ಗೃಹ ಸಾಲದ ನಿಯಮಗಳಿಗೆ ಬದ್ಧರಾಗಿ ತೋರುವುದು. ಇಲ್ಲಿಯೂ ಸಹ ವಿಮಾ ಕಂಪನಿಯ ಆಧಾರದಲ್ಲಿ ಹಣ ಪಡೆದುಕೊಳ್ಳಲಾಗುವುದು.

* ಪರ್ಸನಲ್ ಲೋನ್
ಇದಕ್ಕೂ ಮತ್ತು ವಿಮೆಗೂ ನಿಕಟ ಸಂಬಂಧವಿರುತ್ತದೆ. ಒಂದು ವೇಳೆ ಆಕಸ್ಮಿಕವಾಗಿ ಸಾಲ ಮರುಪಾವತಿ ಅಸಾಧ್ಯವಾದರೆ ಬ್ಯಾಂಕ್ ವಿಮಾ ಕಂಪನಿಯಿಂದ ನಷ್ಟ ಭರಿಸಿಕೊಳ್ಳುತ್ತದೆ.

* ಆದಾಯ ತೆರಿಗೆ ಬಾಕಿ
ಒಂದು ವೇಳೆ ಆದಾಯ ತೆರಿಗೆ ಬಾಕಿ ಉಳಿಸಿಕೊಂಡು ವ್ಯಕ್ತಿ ಸಾವನ್ನಪ್ಪಿದರೆ ಯಾವ ಕಾನೂನಿನ ಅನ್ವಯವೂ ಬಾಕಿ ತುಂಬಬೇಕಾಗಿಲ್ಲ.

* ಕುಟುಂಬ ಸದಸ್ಯರ ಪರ್ಸನಲ್ ಲೋನ್
ಇಲ್ಲಿ ಸಾವಿಗೀಡಾದ ವ್ಯಕ್ತಿಯ ಬಗ್ಗೆ ಕೆಲ ಅಧಿಕೃತ ದಾಖಲೆಗಳನ್ನು ಹಾಜರು ಪಡಿಸಿದ ನಂತರ ಸಾಲ ಮರುಪಾವತಿ ಕಾರ್ಯ ಆರಂಭವಾಗುತ್ತದೆ. ಪರ್ಸನಲ್ ಲೋನ್ ತೆಗೆದುಕೊಂಡಾಗ ಯಾವ ರೀತಿಯಾದ ಕ್ರಮಗಳನ್ನು ಅನುಸರಿಸಲಾಗುತ್ತದೆಯೋ ಅದನ್ನೇ ಇಲ್ಲಿಯೂ ಮಾಡಲಾಗುತ್ತದೆ.

ಕೊನೆ ಮಾತು: ಮಾಡಿದ ಸಾಲ ಎಲ್ಲಿಯೂ ಬಿಟ್ಟು ಹೋಗುವುದಿಲ್ಲ. ಆದಾಯ ತೆರಿಗೆ ಪಾವತಿ ಬಾಕಿ ಇದ್ದು ವ್ಯಕ್ತಿ ಸಾವನ್ನಪ್ಪಿದರೆ ಅದನ್ನು ತುಂಬುವ ಅಗತ್ಯ ಇರಲ್ಲ. ತಂದೆ-ತಾಯಿಯ ಆಸ್ತಿಗೆ ನಾವು ಹೇಗೆ ಹಕ್ಕುದಾರರಾಗುತ್ತೆವೆಯೋ ಹಾಗೆ ಸಾಲಕ್ಕೂ ಹೊಣೆಗಾರರಾಗುತ್ತೇವೆ,(ಗುಡ್ ರಿಟರ್ನ್ಸ್.ಇನ್)

English summary

Who Pays Your Debt Or Loan After You Die?

Death is the only certainty in life. Many individuals do question: what happens to my debt or loan after I die? Who pays? In fact, in most cases, if you do not pay your debt, others including your legal heirs may end-up paying the same.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X