Englishहिन्दी മലയാളം தமிழ் తెలుగు

ಡಿಮ್ಯಾಟ್, ಡಿಜಿಟಲ್ ರೂಪದ ಡಿಫೆಂಡರ್

Written By: Siddu
Subscribe to GoodReturns Kannada

ಡಾಕ್ಯುಮೆಂಟ್ ಗಳನ್ನು ಫಿಸಿಕಲ್ ಆಗಿ ಹೊಂದಿದ್ದು, ಅವುಗಳನ್ನು ಕಾಪಾಡಿಕೊಂಡು ಬರುವುದು ಈಗಿನ ದಿನಗಳಲ್ಲಿ ಸ್ವಲ್ಪ ತೊಂದರೆಯ ಕೆಲಸವೇ ಆಗಿದೆ. ಕೆಲವು ಬಾರಿ ಮಿಸ್ ಪ್ಲೇಸ್ ಆಗಬಹುದು. ಕೆಲ ಬಾರಿ ಕಳುವಾಗಬಹುದು ಇಲ್ಲವೇ ಅಡ್ರೆಸ್ಸ್ ಬದಲಾವಣೆಯಾಗಿ ಕೈಯಿಂದ ಜಾರಿಹೋಗುವ ಸಾಧ್ಯತೆಗಳು ಉಂಟು. ಷೇರುಗಳು, ಡಿಬೆಂಚರ್ ಗಳು, ಮ್ಯೂಚುಯಲ್ ಫಂಡ್ ನ ಯುನಿಟ್ ಗಳು, ವಿಮಾ ಪಾಲಿಸಿಗಳು ಮುಂತಾದವುಗಳಲ್ಲದೆ, ಈಗ ಹೊಸದಾಗಿ ಶೈಕ್ಷಣಿಕ ದಾಖಲೆಗಳನ್ನು ಸಹ ಡಿಮ್ಯಾಟ್ ರೂಪದಲ್ಲಿ ಹೊಂದಲು ಅವಕಾಶ ಮಾಡಿಕೊಡಲಾಗಿದೆ. ಷೇರುಗಳನ್ನು ಒಂದು ಡಿಮ್ಯಾಟ್ ಖಾತೆಯಿಂದ ಇನ್ನೊಂದು ಖಾತೆಗೆ ವರ್ಗಾವಣೆ ಮಾಡುವುದು ಹೇಗೆ?

ಇವುಗಳನ್ನು ಫಿಸಿಕಲ್ ಆಗಿ ಹೊಂದುವುದಕ್ಕಿಂತ ಡಿಜಿಟಲ್ ರೂಪದಲ್ಲಿ, ಡಿಮ್ಯಾಟ್ ಖಾತೆಯಲ್ಲಿ ಹೊಂದುವುದು ಸುರಕ್ಷಿತ. (ಡಿಮ್ಯಾಟ್ ಖಾತೆ)

ಡಿಮ್ಯಾಟ್ ಖಾತೆ

ಡಿಮ್ಯಾಟ್ ರೂಪದ ಚಟುವಟಿಕೆ ಹೆಸರು ಹೊಸದಾಗಿದ್ದರೂ ಎಲ್ಲರೂ ಪರೋಕ್ಷವಾಗಿ ಅಳವಡಿಸಿಕೊಂಡಿರುತ್ತಾರೆ. ನಗದು ಹಣವನ್ನು ಫಿಸಿಕಲ್ ಆಗಿ ಹೊಂದುವುದಕ್ಕಿಂತ ಬ್ಯಾಂಕ್ ನಲ್ಲಿನ ತಮ್ಮ ಖಾತೆಗೆ ಜಮೆ ಮಾಡಿಕೊಂಡು ಪಾಸ್ ಬುಕ್ ಮತ್ತು ಚೆಕ್ ಬುಕ್ ಪಡೆದುಕೊಂಡು, ಅವಶ್ಯಕತೆಯಿದ್ದಾಗ ಹಣವನ್ನು ಚೆಕ್ ಮೂಲಕ ವಿತ್ ಡ್ರಾ ಮಾಡಬಹುದು. ಅದೇ ರೀತಿ ಹಣದ ಬದಲು ಷೇರುಗಳು, ಡಿಬೆಂಚರ್ ಗಳು, ಮ್ಯೂಚುವಲ್ ಫಂಡ್ ನ ಯುನಿಟ್ ಗಳು, ವಿಮಾ ಪಾಲಿಸಿಗಳು, ಶೈಕ್ಷಣಿಕ ದಾಖಲೆಗಳು ಮುಂತಾದವನ್ನು ಡಿಜಿಟಲ್ ರೂಪದಲ್ಲಿ ಹೊಂದಲು ತೆರೆಯಬೇಕಾದ ಖಾತೆಯೇ ಡಿಮ್ಯಾಟ್ ಖಾತೆ. ಡಿಮ್ಯಾಟ್ ಅಂದರೆ ಡಿಮೆಟಿರಿಯಲೈಸೇಶನ್ ಎಂಬುದಾಗಿದೆ.

ವಹಿವಾಟು ಸುರಕ್ಷಿತ

ಷೇರುಗಳಲ್ಲಿ ವ್ಯವಹರಿಸಬೇಕಾದರೆ ಷೇರುಗಳು ಡಿಮ್ಯಾಟ್ ರೂಪದಲ್ಲಿರುವುದು ಕಡ್ಡಾಯವಾಗಿದೆ. ಡಿಮ್ಯಾಟ್ ಖಾತೆ ತೆರೆಯಬೇಕಾದರೆ ಪ್ಯಾನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಹೊಂದಿರಲೇಬೇಕು. ಷೇರುಗಳ ಬೆಲೆಗಳಲ್ಲಿ ಹೆಚ್ಚಿನ ಏರಿಳಿತಗಳು ಉಂಟಾಗುವುದರಿಂದ ಡಿಮ್ಯಾಟ್ ರೂಪದ ವಹಿವಾಟು ಸುರಕ್ಷಿತವಾಗಿದೆ.

ಡಿಮ್ಯಾಟ್ ಜಾರಿ ಮುನ್ನ ಮತ್ತು ಈಗ

ಡಿಮ್ಯಾಟ್ ಟ್ರೇಡಿಂಗ್ ಜಾರಿಯಾಗುವ ಮುನ್ನ ಷೇರುಗಳನ್ನು ಫಿಸಿಕಲ್ ಸರ್ಟಿಫಿಕೇಟ್ ಮೂಲಕ ಸೆಟ್ಲ್ ಮೆಂಟ್ ಮಾಡಬೇಕಿತ್ತು. ಆಗ ಒಂದೊಂದು ಕಂಪನಿಯ ಷೇರುಗಳು ಒಂದೊಂದು ತರಹ ಮಾರ್ಕೆಟ್ ಲಾಟ್ ನಲ್ಲಿ ವಹಿವಾಟು ನಡೆಸಬೇಕಾಗಿತ್ತು. ಕೆಲವು 25 ಷೇರುಗಳಲ್ಲಿ ಟ್ರೇಡ್ ಮಾಡಿದರೆ, ಮತ್ತೆ ಕೆಲವು 50, 100 ಷೇರುಗಳ ಗುಣಕಗಳಲ್ಲಿ ವಹಿವಾಟು ನಡೆಸಬೇಕಾಗಿತ್ತು. ಅಂದರೆ ಹೆಚ್ಚಿನ ಮಾರ್ಕೆಟ್ ವ್ಯಾಲ್ಯೂ ಹೊಂದಿರುವ ಷೇರುಗಳು ಜನಸಾಮಾನ್ಯರಿಗೆ ಕೈಗೆಟುಕದಂತಿತ್ತು. ಮಾರ್ಕೆಟ್ ಲಾಟ್ ಗಳಿಗಿಂತ ಕಡಿಮೆ ಸಂಖ್ಯೆಯಲ್ಲಿ ಷೇರ್ ಸರ್ಟಿಫಿಕೇಟ್ ಇದ್ದಲ್ಲಿ ಅದು ಸ್ಮಾಲ್ ಲಾಟ್ ಎಂದು ಅದಕ್ಕೆ ಪೇಟೆಯ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಕೊಳ್ಳುವುದಾಗಲಿ ಅಥವಾ ಮಾರಾಟ ಮಾಡುವುದಾಗಲಿ ಮಾಡಬೇಕಿತ್ತು. ಈಗ ಡಿಮ್ಯಾಟ್ ರೂಪದಲ್ಲಿ ಇಂತಹ ಷೇರುಗಳಾಗಲಿ ಕನಿಷ್ಠ ಒಂದು ಷೇರಿನಲ್ಲಾದರು ವ್ಯವಹರಿಸಬಹುದಾಗಿರುವುದು. ಪೇಟೆಯ ಚಟುವಟಿಕೆಯಲ್ಲಿ ಸಾಮಾನ್ಯರು ಭಾಗವಹಿಸಲು ಅನುವು ಮಾಡಿಕೊಟ್ಟಂತಾಗಿದೆ.

ಡಿಮ್ಯಾಟ್ ಪರಿವರ್ತನೆ ಮತ್ತು ವಹಿವಾಟು ಸರಳ

ಷೇರುಪೇಟೆ ವಹಿವಾಟು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮತ್ತದಕ್ಕೆ ಹರಡಿಕೊಂಡಿರುವುದಕ್ಕೆ ಡಿಜಿಟಲೈಸೇಶನ್ ಮೂಲಕ ಡಿಮ್ಯಾಟ್ ರೂಪದಲ್ಲಿ ನಡೆಯುವ ಡಾಕ್ಯುಮೆಂಟ್ ಡೆಲಿವರಿ ಸಿಸ್ಟಮ್ ಮೂಲ ಕಾರಣವಾಗಿದೆ. ಷೇರು, ಡಿಬೆಂಚರ್, ಬಾಂಡ್, ಮ್ಯೂಚುವಲ್ ಫಂಡ್ ಯುನಿಟ್ ಗಳು ಮುಂತಾದವು ಫಿಸಿಕಲ್ ಮಾಡ್ ನಿಂದ ಡಿಮ್ಯಾಟ್ ಗೆ ಪರಿವರ್ತಿಸಿಕೊಳ್ಳುವ ಪ್ರಕ್ರಿಯೆಯು ಸರಳವಾಗಿದೆ. ಈ ಪ್ರಕ್ರಿಯೆಯಲ್ಲಿ ಮೊದಲಿಗೆ ಡಿಮ್ಯಾಟ್ ಸಂಸ್ಥೆ, ನಮ್ಮಲ್ಲಿ ಎರಡು ಡಿಮ್ಯಾಟ್ ಸಂಸ್ಥೆಗಳು ರೆಗ್ಯುಲೇಟರ್ ಸೆಬಿಯಲ್ಲಿ ನೋಂದಾಯಿಸಿಕೊಂಡಿವೆ. ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಜಿಟರಿ ಲಿಮಿಟೆಡ್ ಮತ್ತು ಸೆಂಟ್ರಲ್ ಡಿಪಾಜಿಟರಿ ಸರ್ವಿಸಸ್ ಲಿಮಿಟೆಡ್ ಗಳೇ ಆ ಡಿಮ್ಯಾಟ್ ಸಂಸ್ಥೆಗಳಾಗಿವೆ. ಈ ಸಂಸ್ಥೆಗಳು ತಮ್ಮ ಅಂಗ ಸಂಸ್ಥೆಗಳಾದ ಡಿಪಾಜಿಟರಿ ಪಾರ್ಟಿಸಿಪಂಟ್ಸ್ ಮೂಲಕ ರಾಷ್ಟ್ರವ್ಯಾಪಿ ಜಾಲ ನಿರ್ಮಿಸಿಕೊಂಡು ಅವುಗಳ ಮೂಲಕ ಅವಶ್ಯಕವಾದ ಸೇವೆಗಳನ್ನು ಒದಗಿಸುತ್ತಿವೆ.

ಡಿಮ್ಯಾಟ್ ಖಾತೆ ಅತ್ಯಗತ್ಯ

ಬ್ಯಾಂಕ್ ಗಳು, ಫೈನಾನ್ಷಿಯಲ್ ಇನ್ಸ್ಟಿಟ್ಯೂಶನ್ ಗಳು, ವಿದೇಶಿ ಬ್ಯಾಂಕ್ ಗಳು ಸ್ಟಾಕ್ ಬ್ರೋಕರ್ ಗಳು, ಕ್ಲಿಯರಿಂಗ್ ಕಾರ್ಪೊರೇಷನ್ ಗಳು ನಾನ್ ಬ್ಯಾಂಕಿಂಗ್ ಸಂಸ್ಥೆಗಳು ಡಿಪಾಜಿಟರಿ ಸೇವೆ ಒದಗಿಸಲು ನೋಂದಾಯಿಸಿಕೊಂಡಿರುತ್ತವೆ. ಷೇರುಪೇಟೆ ವ್ಯವಹಾರ ಆರಂಭಿಸುವ ಮುನ್ನ ಫಲಾನುಭವಿ ಡಿಮ್ಯಾಟ್ ಖಾತೆಯನ್ನು ತೆರೆದಿರುವುದು ಅತ್ಯಗತ್ಯ.

ಅಪಾಯ ಕಟ್ಟಿಟ್ಟ ಬುತ್ತಿ

ಷೇರುಗಳನ್ನು ಫಿಸಿಕಲ್ ಆಗಿ ಹೊಂದಿದ್ದರೆ ವಿಶೇಷವಾಗಿ ಹೆಚ್ಚಿನ ಮೌಲ್ಯದ ಷೇರುಗಳನ್ನು ಹೊಂದಿದ್ದರೆ ಅಪಾಯದ ಮಟ್ಟ ಹೆಚ್ಚಿರುತ್ತದೆ. ಕೆಲವು ಅಚಾತುರ್ಯಗಳಿಗೆ ಬಲಿಯಾಗಿ ಹಾನಿಗೊಳಗಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ ವಹಿವಾಟಾಗುವ ಎಲ್ಲಾ ಷೇರುಗಳು ಡಿಮ್ಯಾಟ್ ನಲ್ಲಿದ್ದಾಗ ಫಿಸಿಕಲ್ ಸರ್ಟಿಫಿಕೇಟ್ ಗಳು ಷೇರುಪೇಟೆಯ ವಿಶೇಷ ಗುಣವಾದ 'ರೆಡಿ ಲಿಕ್ವಿಡಿಟಿ' ಸೌಲಭ್ಯದಿಂದ ವಂಚಿತರಾಗುವರು. ಮುಂದೆ ಎಂದಾದರೂ ಫಿಸಿಕಲ್ ಸರ್ಟಿಫಿಕೇಟ್ ಗಳನ್ನೂ ವರ್ಗಾಯಿಸಿಕೊಳ್ಳಲು ಹಿಂದಿನಂತೆ ಟ್ರಾನ್ಸ್ಫರ್ ಫಾರ್ಮ್ ಈಗ ಇಲ್ಲ. ನಿಗದಿತ ಫಾರ್ಮ್ ನ್ನು ಮಿನಿಸ್ಟ್ರಿ ಆಫ್ ಕಾರ್ಪೊರೇಟ್ ಅಫೇರ್ಸ್ ಮೂಲಕ ಫಾರ್ಮ್ ಪ್ರಿಂಟ್ ತೆಗೆದುಕೊಂಡು ಮುಂದುವರಿಯಬೇಕಾಗಿದೆ. ಇನ್ನು ಮುಂದೆ ಈ ವ್ಯವಸ್ಥೆಯು ಕೊನೆಗೊಳ್ಳಲೂಬಹುದು. ಟ್ರಾನ್ಸ್ಫರ್ ಎಜೇಂಟ್ ಗಳು ತಮ್ಮ ಹಿತ ರಕ್ಷಣೆಯ ದೃಷ್ಟಿಯಿಂದ ಹೆಚ್ಚಿನ ಫಿಲ್ಟರ್ ಅಳವಡಿಸಿದಾಗ ಕಿರಿ ಕಿರಿಯುಂಟಾಗುವುದು. ಇವೆಲ್ಲದರಿಂದ ಮುಕ್ತಿ ಪಡೆಯಲು ಫಿಸಿಕಲ್ ಆಗಿ ಹೊಂದಿರುವ ಷೇರುಪತ್ರಗಳನ್ನು ಡಿಮ್ಯಾಟ್ ಮಾಡಿಸಿಕೊಳ್ಳುವುದು ಸುರಕ್ಷಿತ ಕ್ರಮವಾಗಿದೆ.

ಎಷ್ಟು ಡಿಮ್ಯಾಟ್ ಖಾತೆ ಹೊಂದಬಹುದು?

ಡಿಮ್ಯಾಟ್ ಖಾತೆ ಆರಂಭಿಸುವುದಕ್ಕಿಂತ ಮುಂಚೆ, ಷೇರುಪೇಟೆ ವಹಿವಾಟು ನಡೆಸಲು ನೀವು ಆಯ್ಕೆ ಮಾಡಿಕೊಂಡ ಬ್ರೋಕಿಂಗ್ ಸಂಸ್ಥೆಯೊಂದಿಗೆ ಚರ್ಚಿಸಿ ನಿರ್ಧರಿಸಿರಿ. ಕಾರಣ ಬ್ರೋಕಿಂಗ್ ಸಂಸ್ಥೆಗಳು ಡಿಮ್ಯಾಟ್ ಖಾತೆಯನ್ನು ತಮ್ಮಲ್ಲೇ ಮಾಡಬೇಕೆಂಬ ಕಂಡೀಷನ್ ವಿಧಿಸಿದಾಗ ಮತ್ತೊಮ್ಮೆ ಡಿಮ್ಯಾಟ್ ಆರಂಭಿಸಬೇಕಾಗುವುದು. ಡಿಮ್ಯಾಟ್ ಖಾತೆಗಳನ್ನು ಎಷ್ಟು ಸಂಸ್ಥೆಗಳಲ್ಲಿ ಬೇಕಾದರೂ ಆರಂಭಿಸಬಹುದಾಗಿದ್ದು, ಸಂಖ್ಯಾ ಮಿತಿಯಿಲ್ಲ. ಸಕಾರಣವಾಗಿ ಹೊಂದಿರುವ ಖಾತೆಗಳು ಅಭಾದಿತ. ದುರುದ್ದೇಶಪೂರಿತ, ಅಸಹಜ ಚಟುವಟಿಕೆಗಳಿಗೆ ಉಪಯೋಗಿಸುವ ದೃಷ್ಟಿಯಿಂದ ಹೊಂದುವುದು ನಿಷೇದ.

ಸಂಸ್ಥೆ, ವಾರಸುದಾರರ ಆಯ್ಕೆ

ಡಿಮ್ಯಾಟ್ ಖಾತೆಗಳಿಗೆ ಇಂತಿಷ್ಟೇ ಶುಲ್ಕ ವಿಧಿಸಬೇಕೆಂಬ ನಿಯಮವಿಲ್ಲ. ಒಂದೊಂದು ಸಂಸ್ಥೆಗಳು ಒಂದೊಂದು ರೀತಿಯ ಶುಲ್ಕವನ್ನು ವಿಧಿಸುತ್ತವೆ. ಮುಖ್ಯವಾಗಿ ಗ್ರಾಹಕರು ಗಮನದಲ್ಲಿಡಬೇಕಾದ ಅಂಶವೆಂದರೆ, ಇವೆಲ್ಲವೂ ವ್ಯಾವಹಾರಿಕ ಚಟುವಟಿಕೆಯಾಗಿದ್ದು, ಅವು ಸಹ ವ್ಯಾವಹಾರಿಕ ಸಂಸ್ಥೆಗಳಾಗಿವೆ. ಒಂದರಲ್ಲಿ ಕಡಿಮೆಯಾದರೆ ಅದನ್ನು ಸರಿದೂಗಿಸಲು ಮತ್ತೊಂದೆಡೆ ಹೆಚ್ಚಿಸಬೇಕಾಗುವುದು. ಪ್ರದರ್ಶಿಕ ವಿಧಾನ ಅಳವಡಿಕೆಯಿರುವ ಸಂಸ್ಥೆ ಆಯ್ಕೆ ಸೂಕ್ತ. ಖಾತೆದಾರರು ತಮಗೆ ಬೇಕಾದವರನ್ನು ವಾರಸುದಾರರನ್ನಾಗಿ ಮಾಡುವ, ಇಚ್ಚಿಸಿದಾಗ ವಾರಸುದಾರರನ್ನು ಬದಲಾಯಿಸುವ ವ್ಯವಸ್ಥೆಯನ್ನು ಡಿಮ್ಯಾಟ್ ವ್ಯವಸ್ಥೆಯಲ್ಲಿ ಪಡೆಯಬಹುದು. (Read more: Demat account)

English summary

Demat: It is digital form defender

Dematerialisation of documents is a process through which documents such as Shares, debentures, Tax free bonds, Insurance policies, Educational documents such as marks sheets, degree certificates etc can be held in digital form. Holding these in digital form means protection from loss, theft, misuse etc., besides providing facilities such as address change, change in bank name for ECS facility, change in nomination in a simplified mode.
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC