For Quick Alerts
ALLOW NOTIFICATIONS  
For Daily Alerts

ಈಕ್ವಿಟಿ ಆಧಾರಿತ ಉಳಿತಾಯ ಯೋಜನೆ (ELSS) ಎಂದರೇನು?

ಇದೊಂದು ವೈವಿಧ್ಯಮಯವಾದ ಈಕ್ವಿಟಿ ಆಧಾರಿತ ಮ್ಯೂಚುವಲ್ ಫಂಡ್ ಆಗಿದ್ದು, ಹೆಸರೇ ತಿಳಿಸುವಂತೆ ಈಕ್ವಿಟಿ ಹಾಗೂ ಈಕ್ವಿಟಿಗೆ ಸಂಬಂಧಿಸಿದ ಉತ್ಪನ್ನಗಳಲ್ಲಿ ಹೂಡಿಕೆ ಮಾಡಲಾಗುತ್ತದೆ.

|

ಇದೊಂದು ವೈವಿಧ್ಯಮಯವಾದ ಈಕ್ವಿಟಿ ಆಧಾರಿತ ಮ್ಯೂಚುವಲ್ ಫಂಡ್ ಆಗಿದ್ದು, ಹೆಸರೇ ತಿಳಿಸುವಂತೆ ಈಕ್ವಿಟಿ ಹಾಗೂ ಈಕ್ವಿಟಿಗೆ ಸಂಬಂಧಿಸಿದ ಉತ್ಪನ್ನಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಈ ನಿಧಿಯಲ್ಲಿ ತೊಡಗಿಸಿದ ಮೊತ್ತ ಮೂರು ವರ್ಷಗಳ ಅವಧಿಯವರೆಗೆ ಹಿಂಪಡೆಯುವಂತಿಲ್ಲ. ಈ ಅವಧಿಯನ್ನು lock in period ಎಂದು ಕರೆಯುತ್ತಾರೆ. ELSS ನಿಧಿಗಳ ಮೂಲಕ ಲಭಿಸಿದ ಲಾಭ ತೆರಿಗೆ ವಿನಾಯಿತಿಯನ್ನು ಹೊಂದಿದ್ದು ಈಕ್ವಿಟಿ ಮಾರುಕಟ್ಟೆಯಲ್ಲಿ ಗಳಿಸಿದ ಲಾಭವನ್ನು ಹಂಚಿಕೊಳ್ಳಲು ನೆರವಾಗುತ್ತದೆ. ಈ ನಿಧಿಯಲ್ಲಿ ತೊಡಗಿಸಿದರೆ ತೆರಿಗೆ ಉಳಿತಾಯ ಹಾಗೂ ಬಂಡವಾಳ ವೃದ್ದಿ, ಹೀಗೆ ಎರಡು ಬಗೆಯ ಲಾಭವಿದೆ. ಇದು ಈಕ್ವಿಟಿಯನ್ನು ಅವಲಂಬಿಸಿರುವ ಕಾರಣ ಈಕ್ವಿಟಿಮಾರುಕಟ್ಟೆಯ ಏರಿಳಿತಕ್ಕೆ ಅನುಗುಣವಾಗಿ ಲಭಿಸುವ ಲಾಭವೂ ಏರಿಳಿತಗೊಳ್ಳುತ್ತದೆ. ಈ ಯೋಜನೆ ಮುಕ್ತವಾಗಿ, ಯಾವಾಗ ಬೇಕಾದರೂ ಪ್ರಾರಂಭಿಸಬಹುದಾದ ಸುಲಭ ಯೋಜನೆಯಾಗಿದ್ದು ಇದರ ಆಗಿನ ಆಸ್ತಿ ಮೌಲ್ಯ (NAV ಅಥವಾ(Net Asset Value) ವನ್ನು ಆಯಾ ವ್ಯಾಪಾರ ದಿನಗಳಲ್ಲೇ ನಿಗದಿಪಡಿಸಲಾಗುತ್ತದೆ. ಮ್ಯೂಚುವಲ್ ಫಂಡ್ ಎಂದರೇನು? ಹೂಡಿಕೆಯ ಲಾಭ ಹಾಗು ನಷ್ಟಗಳೇನು?

 
ಈಕ್ವಿಟಿ ಆಧಾರಿತ ಉಳಿತಾಯ ಯೋಜನೆ (ELSS) ಎಂದರೇನು?

ಅಷ್ಟಕ್ಕೂ ELSS ನಲ್ಲಿಯೇ ಏಕೆ ಹೂಡಿಕೆ ಮಾಡಬೇಕು?
ಆದಾಯ ತೆರಿಗೆ ವಿಧಿ 80C ಪ್ರಕಾರ ಈ ಯೋಜನೆಯಿಂದ ಪಡೆದ ಲಾಭ ತೆರಿಗೆಯಿಂದ ವಿನಾಯಿತಿ ಪಡೆದಿದೆ ಹಾಗೂ ಭಾರತೀಯ ಈಕ್ವಿಟಿ ಮಾರುಕಟ್ಟೆಯೊಂದಿಗೇ ಬೆಳೆಯುವ ಕ್ಷಮತೆಯನ್ನೂ ಪಡೆದಿದೆ. ಇತರ ತೆರಿಗೆ ಉಳಿತಾಯ ಯೋಜನೆಗಳಾದ ಸಾರ್ವಜನಿಕ ಭವಿಷ್ಯ ನಿಧಿ, ರಾಷ್ಟ್ರೀಯ ಉಳಿತಾಯ ಯೋಜನೆ ಹಾಗೂ ಬ್ಯಾಂಕ್ ಠೇವಣಿಗಳಿಗೆ ಹೋಲಿಸಿದರೆ ಈ ಹೂಡಿಕೆಯಲ್ಲಿ ಹೂಡಬೇಕಾದ ಕನಿಷ್ಟ ಅವಧಿಯಾದ ಮೂರು ವರ್ಷಗಳು ಕಡಿಮೆಯೇ ಇದೆ. ಹೂಡಿಕೆಯ ದಿನದಿಂದ ಮೂರು ವರ್ಷಗಳವರೆಗೆ ಹೂಡಿಕೆದಾರ ಈ ಮೊತ್ತವನ್ನು ಹಿಂಪಡೆಯಲು ಸಾಧ್ಯವಿಲ್ಲವಾದರೂ ಇದರ ಲಾಭಾಂಶವನ್ನು ಪಡೆಯುವ ಅವಕಾಶವಿದೆ. ಈ ಲಾಭಾಂಶಗಳು ತೆರಿಗೆಯಿಂದ ವಿನಾಯಿತಿ ಪಡೆದಿವೆ. ಈ ಹೂಡಿಕೆಯಲ್ಲಿ ಹೂಡಲು ಮೊತ್ತದ ಮಿತಿಯಿಲ್ಲ. ಆದರೆ ತೆರಿಗೆ ವಿನಾಯಿತಿ ಮಾತ್ರ ಒಂದೂವರೆ ಲಕ್ಷದ ಮಿತಿಗೆ ಮಾತ್ರವೇ ಲಭ್ಯವಾಗುತ್ತದೆ.

 

ಇದಕ್ಕೆ ನಿಯಮಿತವಾದ ಸಿಪ್ ಹೂಡಿಕೆ ಒಳ್ಳೆಯದೇ ಅಥವಾ ಒಮ್ಮೆಲೇ ಹೂಡುವ ಹೂಡಿಕೆಯೇ?
ಈ ಯೋಜನೆಯಲ್ಲಿ ಎರಡೂ ಬಗೆಯ ಹೂಡಿಕೆ ಹೂಡಬಹುದು. ಒಮ್ಮೆಲೇ ದೊಡ್ಡ ಮೊತ್ತವನ್ನು ಅಥವಾ ವ್ಯವಸ್ಥಿತ ಹೂಡಿಕೆ ಯೋಜನೆಯಾದ ಸಿಪ್ (systematic investment plan (SIP) ಮೂಲಕವೂ ಹೂಡಿಕೆಯಲ್ಲಿ ತೊಡಗಿಸಬಹುದು. ಆದರೆ ಸಾಧ್ಯವಿದ್ದರೆ ಒಮ್ಮೆಲೇ ದೊಡ್ಡ ಮೊತ್ತ ಹೂಡುವುದೇ ಉತ್ತಮ. ಏಕೆಂದರೆ ಈ ಮೂಲಕ ಚಕ್ರಬಡ್ಡಿಯಲ್ಲಿ ದೊರಕುವ ಲಾಭಾಂಶ ಹೂಡಿಕೆಯ ಅವಧಿಯ ಕೊನೆಯಲ್ಲಿ ಹೆಚ್ಚೇ ಇರುತ್ತದೆ. ಒಂದು ವೇಳೆ ನೀವು ಚಿಕ್ಕ ಮೊತ್ತದ ಹೂಡಿಕೆದಾರರಾಗಿದ್ದರೆ ನಿಮಗೆ ಸಿಪ್ ELSS ಅಥವಾ ಬೇರಾವುದೇ ಹೂಡಿಕೆಗೆ ಅನಿವಾರ್ಯ ಆಯ್ಕೆಯಾಗಿದೆ. ಈ ಹೂಡಿಕೆಯಲ್ಲಿ ಕೇವಲ ಐನೂರು ರೂಪಾಯಿಗಳಷ್ಟು ಕನಿಷ್ಟ ಮೊತ್ತದ ಹೂಡಿಕೆಯಿಂದ ಪ್ರಾರಂಭಿಸಬಹುದು ಹಾಗೂ ಪ್ರತಿ ತಿಂಗಳೂ ಒಂದು ನಿಗದಿತ ದಿನಾಂಕಕ್ಕೆ ನಿಗದಿತ ಮೊತ್ತ ಪಾವತಿಯಾಗುವಂತೆ ಬ್ಯಾಂಕ್ ನಿರ್ದೇಶನ ನೀಡಬೇಕಾಗುತ್ತದೆ. ಈ ಮೂಲಕ ಶಿಸ್ತುಬದ್ದವಾಗಿ ಉಳಿತಾಯ ಸಾಧಿಸಲು ಸಾಧ್ಯವಾಗುತ್ತದೆ ಹಾಗೂ ತೆರಿಗೆಯ ಹೊರೆಯನ್ನು ಇಡಿಯ ವರ್ಷದಲ್ಲಿ ಹಂಚಿಕೊಳ್ಳಲು ಸಾಧ್ಯವಾಗುತ್ತದೆ.

ಸಿಪ್ ಮೂಲಕ ಹೆಚ್ಚು ಹೂಡಿಕೆದಾರರು ಹಣ ಹೂಡಲು ಸಾಧ್ಯವಾಗುತ್ತದೆ ಹಾಗೂ ಎಲ್ಲರ ಹೂಡಿಕೆಯ ಸರಾಸರಿಯನ್ನು ಪರಿಗಣಿಸಿದಾಗ ಒಳ್ಳೆಯ ಮೊತ್ತವೇ ದೊರಕುತ್ತದೆ. ಹೆಚ್ಚಿನ NAV ಮೂಲಕ ಹೂಡಿಕೆದಾರರಿಗೆ ಕಡಿಮೆ ಯೂನಿಟ್ಟುಗಳು ದೊರಕುತ್ತವೆ ಹಾಗೂ ಕಡಿಮೆ ಬೆಲೆಯ ಹೆಚ್ಚಿನ ಯೂನಿಟ್ಟುಗಳನ್ನು ಹೂಡಿಕೆದಾರರ ಸರಾಸರಿಯೊಂದಿಗೆ ತೂಗಿಸಿದಾಗ ಬರುವ ಫಲ ಉತ್ತಮವೇ ಆಗಿರುತ್ತದೆ. ಆದರೆ ನೆನಪಿರಲಿ, ಮೂರು ವರ್ಷಗಳ ಕನಿಷ್ಟ ಅವಧಿ ಪ್ರತಿ ಬಾರಿಯ ಸಿಪ್ ಕಂತಿಗೂ ಅನ್ವಯವಾಗುತ್ತದೆ. ಅಂದರೆ ಪ್ರತಿ ಕಂತೂ ಕನಿಷ್ಟ ಮೂರು ವರ್ಷಗಳನ್ನು ಕಳೆಯಲೇಬೇಕಾಗುತ್ತದೆ.

ಬೆಳವಣಿಗೆ ಅಥವಾ ಲಾಭಾಂಶದ ಆಯ್ಕೆ
ಇತರ ಈಕ್ವಿಟಿ ನಿಧಿಗಳಂತೆಯೇ ELSSನಲ್ಲಿಯೂ ಎರಡು ಆಯ್ಕೆಗಳಿವೆ. ಬೆಳವಣಿಗೆ ಆಯ್ಕೆ ಅಥವಾ ಲಾಭಾಂಶ ಆಯ್ಕೆ. ಬೆಳವಣಿಗೆಯ ಆಯ್ಕೆಯಲ್ಲಿ ಹೂಡಿಕೆದಾರರಿಗೆ ಹೂಡಿಕೆಯ ಮೊತ್ತಕ್ಕನುಗುಣವಾದ ಯೂನಿಟ್ಟುಗಳು ದೊರಕುತ್ತವೆ ಹಾಗೂ ಅವಧಿ ಪರಿಪಕ್ವಗೊಳ್ಳುವವರೆಗೂ ಈ ಸಂಖ್ಯೆ ಅಷ್ಟೇ ಇರುತ್ತದೆ. NAV ಮಾತ್ರ ಪ್ರತಿದಿನವೂ ಮಾರುಕಟ್ಟೆಗೆ ಅನುಸಾರವಾಗಿ ಏರಿಳಿಯುತ್ತಿರುತ್ತದೆ. ಹೂಡಿಕೆದಾರನಿಗೆ ಮೂರು ವರ್ಷಗಳ ಬಳಿಕ ಒಂದು ದೊಡ್ಡ ಮೊತ್ತ ದೊರಕುತ್ತದೆ. ಲಾಭಾಂಶ ಆಯ್ಕೆಯಲ್ಲಿ ಹೂಡಿಕೆದಾರರಿಗೆ ನಿಯಮಿತವಾದ ಆದಾಯವಿರುತ್ತದೆ. ಹೂಡಿಕೆಯ ನಿಧಿ ನಿರ್ಧರಿಸಿದ ಈ ಲಾಭಾಂಶವನ್ನು ಮೂರು ವರ್ಷಗಳ ಕನಿಷ್ಟ ಅವಧಿಯಲ್ಲಿಯೂ ಪಡೆಯಬಹುದು. ಈ ಲಾಭಾಂಶ ತೆರಿಗೆ ಮುಕ್ತವಾಗಿದೆ. ಸಾಮಾನ್ಯವಾಗಿ ಹೆಚ್ಚು ಮೊತ್ತವನ್ನು ಒಮ್ಮೆಲೇ ಪಡೆಯಬಯಸುವ ವ್ಯಕ್ತಿಗಳು ಬೆಳವಣಿಗೆಯ ಆಯ್ಕೆಯನ್ನು ಆಯ್ದುಕೊಳ್ಳುತ್ತಾರೆ. ಆದರೆ ಅಗತ್ಯ ಕಾರ್ಯಗಳಿಗೆ ಬಳಸಲು ಹಣದ ಅಗತ್ಯವಿರುವವರು ಲಾಭಾಂಶವನ್ನು ಪಡೆಯುವ ಆಯ್ಕೆಯನ್ನು ಆಯ್ದುಕೊಳ್ಳಬಹುದು.

ELSS ಯೋಜನೆಯಲ್ಲಿ ಸೇರಿಕೊಳ್ಳುವುದು ಹೇಗೆ?
ಈ ಯೋಜನೆಯ ಬಗ್ಗೆ ಎಲ್ಲಾ ವಿವರಗಳನ್ನು ಅರಿತುಕೊಂಡ ಬಳಿಕ ನೀವು ಒಂದು ನಿರ್ಧಿಷ್ಟ ಮೊತ್ತವನ್ನು ಈ ಯೋಜನೆಯಲ್ಲಿ ಹೂಡಲು ನಿರ್ಧರಿಸಿದರೆ ಹೂಡಿಕೆಗೂ ಮುನ್ನ ಕೆವೈಸಿ (Know Your Customer (KYC) (ನಿಮ್ಮ ಗ್ರಾಹಕರನ್ನು ಅರಿಯಿರಿ) ಎಂಬ ಪರಿಶೀಲನೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಈ ವಿವರಗಳನ್ನು ಒಪ್ಪಿಕೊಂಡಿದ್ದೇನೆ ಎಂದು ಖಚಿತಪಡಿಸಿದ ಬಳಿಕ ELSS ಯೋಜನೆಯನ್ನು ಒದಗಿಸುವ ಸಂಸ್ಥೆಗಳ ಆಸ್ತಿ ನಿರ್ವಹಣೆ ವಿಭಾಗವನ್ನು ಸಂಪರ್ಕಿಸಬೇಕಾಗುತ್ತದೆ. ಹೂಡಿಕೆದಾರ ತನ್ನ ಪ್ಯಾನ್ (PAN - Permanent Account Number) ಕಾರ್ಡ್ ನ ಪ್ರತಿಯನ್ನು ಒದಗಿಸಬೇಕಾಗುತ್ತದೆ. ಇದರೊಂದಿಗೆ ಭರ್ತಿಮಾಡಿದ ಅರ್ಜಿ ನಮೂನೆಯನ್ನು ನೀಡಬೇಕಾಗುತ್ತದೆ ಹಾಗೂ ಒಂದು ವೇಳೆ ಸಿಪ್ ಆಯ್ಕೆ ಮಾಡಿದರೆ ಸಿಪ್ ದಿನಾಂಕವನ್ನು ನಮೂದಿಸಬೇಕಾಗುತ್ತದೆ ಒಂದು ವೇಳೆ ನೀವು ಈಗಾಗಲೇ ಕೆವೈಸಿ ಅಂಗೀಕೃತರಾಗಿದ್ದರೆ ನಿಮ್ಮ ಹೂಡಿಕೆಯನ್ನು ನಿಮ್ಮ ಮನೆ ಅಥವಾ ಕಛೇರಿಯಿಂದ ಎ ಎಂ ಸಿ ಜಾಲತಾಣದಲ್ಲಿ ಆನ್ಲೈನ್ ಮೂಲಕವೂ ಪಾವತಿಸಬಹುದು. ಆನ್ಲೈನ್ ಮೂಲಕ ಮ್ಯೂಚುವಲ್ ಫಂಡ್(SIP) ಪ್ರಾರಂಭಿಸುವುದು ಹೇಗೆ?

ELSS ಯೋಜನೆಯ ಅಪಾಯಸಾಧ್ಯತೆಗಳು:
ಈ ಯೋಜನೆಯಲ್ಲಿ ತೊಡಗಿಸುವ ಯಾವುದೇ ಮೊತ್ತಕ್ಕೆ ಅಪಾಯದ ಸಾಧ್ಯತೆಗಳು ಇದ್ದೇ ಇರುತ್ತವೆ. ಈಕ್ವಿಟಿ ಆಧಾರಿತ ಉಳಿತಾಯ ಹೋಜನೆಗಳು ಈಕ್ವಿಟಿ ಮಾರುಕಟ್ಟೆಯನ್ನು ಅವಲಂಬಿಸಿರುವ ಕಾರಣ ಹೆಚ್ಚಿನ ಅಪಾಯಸಾಧ್ಯತೆ ಅಥವಾ ರಿಸ್ಕ್ ಹೊಂದಿವೆ. ಆದ್ದರಿಂದ ಈ ಯೋಜನೆಯಲ್ಲಿ ತೊಡಗಿಸಿಕೊಳ್ಳುವ ಮುನ್ನ ವಿಶ್ವಾಸಾರ್ಹ ಆರ್ಥಿಕ ಸಲಹಕಾರರ ಸಲಹೆ ಪಡೆದುಕೊಳ್ಳಬೇಕು.

ELSS ಯಾರಿಗೆ ಸೂಕ್ತ?
ಈ ಯೋಜನೆ ಎಲ್ಲಾ ಬಗೆಯ ಹೂಡಿಕೆದಾರರಿಗೆ ಸೂಕ್ತವಾಗಿದ್ದು ಹೆಚ್ಚಿನ ಅಪಾಯಸಾಧ್ಯತೆಗಳನ್ನು ಬಯಸದ ಹಾಗೂ ತೆರಿಗೆ ಉಳಿಸುವ ಯೋಜನೆಗಳಲ್ಲಿ ಹಣ ಹೂಡಬಯಸುವ ವ್ಯಕ್ತಿಗಳಿಗೆ ಹೆಚ್ಚು ಸೂಕ್ತವಾಗಿದೆ. ಆದರೆ ಈ ಯೋಜನೆಯ ಲಾಭ ಈಕ್ವಿಟಿ ಮಾರುಕಟ್ಟೆಯನ್ನು ಅವಲಂಬಿಸಿರುವ ಕಾರಣ ಲಾಭಾಂಶವೂ ಇದರ ಏರಿಳಿತಕ್ಕೆ ಅನುಗುಣವಾಗಿ ಏರಿಳಿಯುತ್ತದೆ. ಅಂದರೆ ಈ ಯೋಜನೆ ನಿಮಗೆ ಖಚಿತವಾದ ಆದಾಯದ ಭರವಸೆ ನೀಡುವುದಿಲ್ಲ. ಈ ಯೋಜನೆಯಲ್ಲಿ ಭಾಗಿಯಾಗಲು ಯಾವುದೇ ವಯಸ್ಸಿನ ನಿರ್ಬಂಧವಿಲ್ಲ. ಆದರೆ ಈಗತಾನೇ ಉದ್ಯೋಗ ಪ್ರಾರಂಭಿಸಿರುವ ಯುವಜನತೆಗೆ ಇದು ಅತ್ಯಂತ ಸೂಕ್ತವಾಗಿದೆ. ELSSನ ಲಾಭಾಂಶ ಚಕ್ರಬಡ್ಡಿಯ ಮೂಲಕ ಹೆಚ್ಚುವ ಮೂಲಕ ದೀರ್ಘಾವಧಿಯ ಹೂಡಿಕೆಯಲ್ಲಿ ಹೆಚ್ಚು ಲಾಭಕರವಾಗಿದೆ. ಸಿಪ್ ಬಗ್ಗೆ ನಿಮಗೆಷ್ಟು ಗೊತ್ತು?

ELSS ಆಯ್ಕೆ ಮಾಡಿಕೊಳ್ಳುವುದು ಹೇಗೆ?
1. ಮೊದಲು ಹಿಂದಿನ ದಿನಗಳಲ್ಲಿ ಈ ಯೋಜನೆ ಹೇಗೆ ಕಾರ್ಯನಿರ್ವಹಿಸಿದೆ ಎಂಬುದನ್ನು ಪರಿಶೀಲಿಸಿ. ಭವಿಷ್ಯದಲ್ಲಿಯೂ ಹೀಗೇ ಮುಂದುವರೆಯುತ್ತದೆ ಎಂದು ಯಾವುದೇ ಯೋಜನೆಯ ಬಗ್ಗೆ ಹೇಳಲು ಸಾಧ್ಯವಿಲ್ಲ. ಆದರೆ ಹಿಂದಿನ ಪ್ರದರ್ಶನ ಚೆನ್ನಾಗಿದ್ದರೆ ಮುಂದಿನ ವರ್ಷಗಳಲ್ಲಿಯೂ ಇದೇ ರೀತಿ ಮುಂದುವರೆಯುವ ಭರವಸೆಯನ್ನು ಪಡೆಯಬಹುದು.
2. ಹೆಚ್ಚಿನ AUM (Asset Under Management) ಅಥವಾ ನಿರ್ವಹಣೆಯಲ್ಲಿರುವ ಆಸ್ತಿ ಇರುವ ಯೋಜನೆಗಳನ್ನು ಆರಿಸಿಕೊಳ್ಳಿ.
3. ಈ ಯೋಜನೆಯನ್ನು ನಿರ್ವಹಿಸುವ ಸಂಸ್ಥೆ ವಿಶ್ವಾಸಾರ್ಹವಾಗಿರಬೇಕು.
4. ನಿಧಿ ತಕ್ಷಣವೇ ಖಾಲಿಯಾಗುವಂತಿರಬಾರದು.
5. ಈ ಯೋಜನೆಯ ನಿಧಿ ನಿರ್ವಾಹಕರು ಸ್ಥಿರವಾಗಿದ್ದು ಯೋಜನೆಯನ್ನು ಮುನ್ನಡೆಸುವಂತಹವಾಗಿರಬೇಕು.

English summary

Equity Linked Saving Scheme (ELSS)

ELSS is a diversified equity mutual fund where most of the corpus is invested in equity and equity related products. An investment in ELSS comes with a lock in period of three years. ELSS funds offer a simple way to get tax benefits and at the same time get an opportunity to gain from the potential of equity markets.
Story first published: Tuesday, February 20, 2018, 16:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X