ಮ್ಯೂಚುವಲ್ ಫಂಡ್ ಎಂದರೇನು? ಹೂಡಿಕೆಯ ಲಾಭ ಹಾಗು ನಷ್ಟಗಳೇನು?

Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಮ್ಯೂಚುವಲ್ ಫಂಡ್ ಎಂದರೆ ಷೇರು ಮತ್ತು ಬಾಂಡುಗಳಲ್ಲಿ ಹೂಡಿಕೆ ಮಾಡುವ ವಿಧಾನವಾಗಿದೆ. ಮ್ಯೂಚುವಲ್ ಫಂಡ್ ಮೂಲಕ ಹಲವರಿಂದ ಹಣವನ್ನು ಚಿಕ್ಕ ಮೊತ್ತಗಳಲ್ಲಿ ಪಡೆದು ಒಂದು ದೊಡ್ಡ ಮೊತ್ತವಾಗಿಸಿ ಈ ದೊಡ್ಡ ಮೊತ್ತವನ್ನು ಷೇರು ಮಾರುಕಟ್ಟೆ, ಬಾಂಡುಗಳು, ಹಣದ ಮಾರುಕಟ್ಟೆಯ ಇತರ ವಿಧಾನಗಳಲ್ಲಿ ಹೂಡಲಾಗುತ್ತದೆ.

  ಈ ದೊಡ್ಡ ಮೊತ್ತವನ್ನು ಸಾಮಾನ್ಯವಾಗಿ ವೃತ್ತಿಪರ ನಿಧಿ ವ್ಯವಸ್ಥಾಪಕರೇ ನಿರ್ವಹಿಸುತ್ತಾರೆ. ಈ ಹೂಡಿಕೆಯಲ್ಲಿ ಹಣ ಹೂಡಿರುವ ಎಲ್ಲರಿಗೂ ಗರಿಷ್ಟವಾದ ಲಾಭ ಬರುವಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸುತ್ತಾರೆ. ಈ ಮೂಲಕ ಬರುವ ಲಾಭವನ್ನು ಹೂಡಿಕೆಯ ಎಲ್ಲಾ ಪಾಲುದಾರರಿಗೆ ಹೂಡಿಕೆಗನುಸಾರವಾಗಿ ಹಂಚಲಾಗುತ್ತದೆ. ಕೆಲವೊಮ್ಮೆ ಈ ಹೂಡಿಕೆ ನಷ್ಟವನ್ನೂ ಎದುರಿಸಬಹುದು. ಆಗ ಈ ನಷ್ಟವನ್ನೂ ಎಲ್ಲಾ ಹೂಡಿಕೆದಾರರ ಮೇಲೆ ವರ್ಗಾಯಿಸಲಾಗುತ್ತದೆ. ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡುವುದು ಯಾವುದೇ ಸಂಸ್ಥೆಯ ಷೇರು ಅಥವಾ ಬಾಂಡುಗಳನ್ನು ನೇರವಾಗಿ ಕೊಳ್ಳುವುದಕ್ಕಿಂತಲೂ ತುಂಬಾ ಸುಲಭವಾಗಿದೆ. ಅಲ್ಲದೇ ಹೂಡಿಕೆದಾರರು ಯಾವಾಗ ಬೇಕೋ ತಮ್ಮ ಹೂಡಿಕೆಗಳನ್ನು ಹಿಂಪಡೆಯಬಹುದಾಗಿದೆ. ಆನ್ಲೈನ್ ಮೂಲಕ ಮ್ಯೂಚುವಲ್ ಫಂಡ್(SIP) ಪ್ರಾರಂಭಿಸುವುದು ಹೇಗೆ?

  ಮ್ಯೂಚುವಲ್ ಫಂಡ್ ಗಳನ್ನು ಯಾರು ನಿಯಂತ್ರಿಸುತ್ತಾರೆ?

  ಎಲ್ಲಾ ಮ್ಯೂಚುವಲ್ ಪಂಡ್ ಗಳನ್ನು ಸೆಬಿ (SEBI (Securities and Exchange Board of India) ಎಂಬ ಸಂಸ್ಥೆ ನಿರ್ವಹಿಸುತ್ತದೆ. ಮ್ಯೂಚುವಲ್ ಪಂಡ್ ಗಳ ಬಗ್ಗೆ ನೀತಿ ನಿಯಮಗಳನ್ನು ರೂಪಿಸುತ್ತದೆ ಹಾಗೂ ಹೂಡಿಕೆದಾರರ ಹೂಡಿಕೆಯನ್ನು ಸುರಕ್ಷಿತವಾಗಿರಿಸಲು ನಿಯಂತ್ರಣಗಳನ್ನೂ ಹೇರುತ್ತದೆ. ಕಾಲಕಾಲಕ್ಕೆ ಈ ನಿಯಂತ್ರಣಗಳಲ್ಲಿ ಬದಲಾವಣೆಗಳನ್ನೂ ಮಾರ್ಪಾಡುಗಳನ್ನೂ ಅಳವಡಿಸುತ್ತದೆ. ಈ ಹಿಂದೆ 1993ರಲ್ಲಿ ಮೊದಲಾಗಿ ಪ್ರಾರಂಭಿಸಿ 1996ರಲ್ಲಿ ಪ್ರಮುಖ ಬದಲಾವಣೆಗಳನ್ನು ಸೂಚಿಸಿದೆ. ಸಿಪ್ ಬಗ್ಗೆ ನಿಮಗೆಷ್ಟು ಗೊತ್ತು?

  ಮ್ಯೂಚುವಲ್ ಫಂಡ್ ಯಾರು ನಿರ್ವಹಿಸುತ್ತಾರೆ?

  ಮ್ಯೂಚುವಲ್ ಫಂಡ್ ಗಳನ್ನು ಎಎಂಸಿ (AMC- Asset Management Company) ಎಂಬ ಸಂಸ್ಥೆ ನಿರ್ವಹಿಸುತ್ತದೆ. ಹೂಡಿಕೆದಾರರಿಂದ ಲಭಿಸಿದ ಮೊತ್ತವನ್ನು ಈ ಸಂಸ್ಥೆ ಉದ್ದೇಶವನ್ನು ಘೋಷಿಸಿದ ವಿವಿಧ ಹೂಡಿಕೆಗಳಾದ ಸುರಕ್ಷಾ ಬಾಂಡ್, ಶೇರು ಮಾರುಕಟ್ಟೆ, ಹಣದ ಮಾರುಕಟ್ಟೆಯ ಇತರ ವಿಧಾನಗಳು ಮೊದಲಾದವುಗಳಲ್ಲಿ ಹೂಡುತ್ತದೆ. ಇದಕ್ಕಾಗಿ ವೃತ್ತಿಪರ ನಿಧಿ ವ್ಯವಸ್ಥಾಪಕರ ನೆರವನ್ನು ಪಡೆದುಕೊಳ್ಳುತ್ತದೆ. ಈ ವ್ಯವಸ್ಥಾಪಕರು ಹೂಡಿಕೆದಾರರಿಗೆ ಗರಿಷ್ಟ ಮೊತ್ತದ ಆದಾಯವನ್ನು ಪಡೆಯಲು ತಮ್ಮ ಪರಿಣಿತಿಯನ್ನು ಬಳಸಿ ಹೆಚ್ಚಿನ ಲಾಭ ಪಡೆಯಲು ನೆರವಾಗುತ್ತಾರೆ.

  ಮ್ಯೂಚುವಲ್ ಫಂಡ್ ಲಾಭಗಳು

  ವೃತ್ತಿಪರರಿಂದ ನಿಮ್ಮ ಹಣದ ನಿರ್ವಹಣೆ

  ವೃತ್ತಿಪರ ನಿಧಿ ವ್ಯವಸ್ಥಾಪಕರು ವಿವಿಧ ಹೂಡಿಕೆದಾರರಿಂದ ಪಡೆದ ಮೊತ್ತವನ್ನು ನಿರ್ವಹಿಸಲು ಹೆಚ್ಚಿನ ಪರಿಣಿತಿಯನ್ನು ಪಡೆದಿರುತ್ತಾರೆ. ಇವರು ಮಾರುಕಟ್ಟೆಯನ್ನು ಸತತವಾಗಿ ಅಭ್ಯಸಿಸುತ್ತಾ ಆರ್ಥಿಕ ಏರಿಳಿತಗಳನ್ನು ಅಂಕಿ ಅಂಶಗಳ ಆಧಾರದ ಮೇಲೆ ಮುಂಬರುವ ದಿನಗಳಲ್ಲಿ ಯಾವ ಆಯ್ಕೆ ಅತ್ಯಂತ ಉಪಯುಕ್ತವಾಗಿರಬಹುದೆಂದು ಲೆಕ್ಕಾಚಾರ ಹಾಕಿ ಆ ಪ್ರಕಾರವೇ ಹೂಡಿಕೆಯಲ್ಲಿ ಹಣ ಹೂಡುತ್ತಾರೆ. ತನ್ಮೂಲಕ ಪಡೆಯುವ ಲಾಭಾಂಶವನ್ನು ಎಲ್ಲಾ ಹೂಡಿಕೆದಾರರಿಗೆ ಹಂಚಲಾಗುತ್ತದೆ. ಕೇವಲ 10 ಸಾವಿರ ಇದ್ರೆ ಈ ಬಿಸಿನೆಸ್ ಶುರು ಮಾಡಬಹುದು..

  ಚಿಕ್ಕ ಮೊತ್ತದ ಹೂಡಿಕೆಯೂ ಸಾಧ್ಯ

  ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡಲು ಅಗತ್ಯವಿರುವ ಕನಿಷ್ಟ ಮೊತ್ತ ಯಾವುದೇ ವ್ಯಕ್ತಿ ಭರಿಸುವಂತಿದೆ. ಈ ಹೂಡಿಕೆಯಲ್ಲಿ ಪ್ರಾರಂಭಿಸಲು ಕೇವಲ ಐನೂರು ರುಪಾಯಿ ಇದ್ದರೂ ಸಾಕು. ಈ ಚಿಕ್ಕ ಮೊತ್ತವೂ ದೀರ್ಘಾವಧಿ ಹೂಡಿಕೆಯಲ್ಲಿ ದೊಡ್ಡ ಮೊತ್ತವನ್ನೇ ತರಬಹುದು. ಮ್ಯೂಚುವಲ್ ಫಂಡ್ ಗಳ ಅನುಕೂಲತೆಯಲ್ಲಿ ಇದು ಅತ್ಯಂತ ಪ್ರಮುಖವಾಗಿದೆ. ಈ ಮೂಲಕ ಸಮಾಜದ ಎಲ್ಲಾ ವರ್ಗಕ್ಕೆ ಸೇರಿದ ವ್ಯಕ್ತಿಗಳೂ ಈ ಯೋಜನೆಯಲ್ಲಿ ಭಾಗಿಯಾಗಿ ವೃತ್ತಿಪರರಿಂದ ನಿರ್ವಹಿಸಲ್ಪಡುವ ನಿಧಿಯಲ್ಲಿ ಪಾಲುದಾರರಾಗಬಹುದು.

  ವಿಭಿನ್ನತೆ

  ಒಂದು ಸುಭಾಷಿತ ಹೀಗೆ ಹೇಳುತ್ತದೆ 'ಒಂದು ಬುಟ್ಟಿಯಲ್ಲಿರುವ ಎಲ್ಲಾ ಮೊಟ್ಟೆಗಳನ್ನು ಒಮ್ಮೆಲೇ ಸೆಳೆಯದಿರಿ' ಸೆಳೆದರೆ ಏನಾಗುತ್ತದೆ ಎಂದು ನಿಮಗೆ ಗೊತ್ತು. ಎಲ್ಲಾ ಮೊಟ್ಟೆಗಳೂ ಹಾಳಾಗುತ್ತವೆ. ಅಂತೆಯೇ ಮ್ಯೂಚುವಲ್ ಫಂಡ್ ಸಹಾ. ಶೇರು ಮಾರುಕಟ್ಟೆಯಲ್ಲಿ ಎಲ್ಲಾ ಶೇರುಗಳೂ ಏಕಪ್ರಕಾರವಾಗಿ ಲಾಭ ಪಡೆಯುವುದಿಲ್ಲ ಅಥವಾ ನಷ್ಟ ಅನುಭವಿಸುವುದಿಲ್ಲ. ಇವುಗಳ ಏರಿಳಿತ ಮಾರುಕಟ್ಟೆಯನ್ನು ಅವಲಂಬಿಸಿದ್ದು ಮುಂದಿನ ನಡೆಯನ್ನು ಊಹಿಸಲು ಸಾಧ್ಯವಿಲ್ಲ. ಆದ್ದರಿಂದ ಮ್ಯೂಚುವಲ್ ಫಂಡ್ ನ ಪರಿಣಿತರು ಈ ಹೂಡಿಕೆಯನ್ನು ಒಂದೇ ಕಡೆ ಹೂಡದೇ ಹಲವಾರು ಕಡೆ ಹೂಡುತ್ತಾರೆ. ಇದರಿಂದ ಒಂದರೆಡು ಹೂಡಿಕೆಗಳಲ್ಲಿ ನಷ್ಟವಾದರೂ ಉಳಿದ ಕಡೆಗಳಲ್ಲಿ ಲಾಭವಾದರೆ ಒಟ್ಟಾರೆ ಲಾಭಾಂಶ ಹೂಡಿಕೆದಾರರಿಗೆ ಲಾಭಕರವೇ ಆಗಿರುತ್ತದೆ. ಇದೇ ವಿಭಿನ್ನತೆಯ ಶಕ್ತಿಯಾಗಿದೆ.

  ಪಾರದರ್ಶಕತೆ

  ಮ್ಯೂಚುವಲ್ ಫಂಡ್ ಗಳ ಸ್ಥಿತಿಯ ಬಗ್ಗೆ ಮಾಹಿತಿಯನ್ನು ಆಗಾಗ ಹೂಡಿಕೆದಾರರಿಗೆ ಒದಗಿಸಲಾಗುತ್ತಿರುತ್ತದೆ. ದೈನಿಕ NAV(net asset value), ಇಂದಿನ ಒಟ್ಟು ಹೂಡಿಕೆಯ ಮೊತ್ತ ಹಾಗೂ ನಿಧಿ ನಿರ್ವಾಹಕರು ನಿಮ್ಮ ಹೂಡಿಕೆಗಳು ಹೇಗೆ ಕೆಲಸ ಮಾಡುತ್ತಿವೆ ಎಂಬುದನ್ನು ವಿವರಿಸುವ ವರದಿಗಳನ್ನು ಜಾಲತಾಣಗಳ ಮೂಲಕ ವಿವರಿಸಲಾಗುತ್ತದೆ. ಈ ನಿಧಿಗಳು ಹೇಗೆ ಕೆಲಸ ಮಾಡುತ್ತಿವೆ ಎಂದು ಪರಿಶೀಲಿಸಲೆಂದೇ ಕೆಲವು ಏಜೆನ್ಸಿಗಳಿವೆ. ಇವುಗಳನ್ನು rating agencies ಎಂದು ಕರೆಯುತ್ತಾರೆ. ವಿವಿಧ ಹೂಡಿಕೆಗಳಲ್ಲಿ ಯಾವ ನಿಧಿ ಹೇಗೆ ಲಾಭಗಳಿಸಿದೆ ಎಂಬ ಮಾಹಿತಿಯನ್ನು ಹೋಲಿಸಿ ಹೂಡಿಕೆದಾರರಿಗೆ ಇವು ಒದಗಿಸುತ್ತವೆ.

  ಸುರಕ್ಷತೆ

  ಎಲ್ಲಾ ಮ್ಯೂಚುವಲ್ ಫಂಡ್ ಗಳನ್ನು ಸೆಬಿಯೇ ನಿರ್ವಹಿಸುವ ಕಾರಣ ಈ ಹೂಡಿಕೆಗಳಲ್ಲಿ ಹೂಡಿದ ಹಣ ಸುರಕ್ಷಿತವಾಗಿದ್ದು ಎಲ್ಲಾ ಹೂಡಿಕೆಗಳನ್ನೂ ಶಿಸ್ತುಬದ್ದವಾಗಿ ಹಾಗೂ ಸಂಸ್ಥೆಯ ನಿಯಂತ್ರಣದಲ್ಲಿಯೇ ನಿರ್ವಹಿಸಲಾಗುತ್ತದೆ.

  ದ್ರವ್ಯತೆ

  ಮ್ಯೂಚುವಲ್ ಫಂಡ್ ಗಳ ಇನ್ನೊಂದು ಅನುಕೂಲತೆ ಎಂದರೆ ಇದನ್ನು ಒಂದು ಕನಿಷ್ಟ ಅವಧಿಯ ಬಳಿಕ (lock-in period) ಇದನ್ನು ಹಿಂಪಡೆಯಲು ಸಾಧ್ಯವಾಗುವುದು. ಇದನ್ನೇ ದ್ರವ್ಯತೆ ಅಥವಾ ಲಿಕ್ವಿಡಿಟಿ ಎಂದು ಕರೆಯಲಾಗುತ್ತದೆ. ಕನಿಷ್ಟ ಅವಧಿ ಮುಗಿದ ಬಳಿಕ ಈ ಫಂಡುಗಳು ಮಾರಾಟ ಮಾಡಲು ಅರ್ಹತೆ ಗಳಿಸುತ್ತವೆ. ಆದ ಈ ಬಾಂಡುಗಳಿಗೆ open-ended fund ಎಂದು ಕರೆಯಲಾಗುತ್ತದೆ. ಇವುಗಳನ್ನು NAV ಪ್ರಕಾರ ಅಂದಿನ ದಿನದ ದರವನ್ನನುಸರಿಸಿ ಮಾರಾಟ ಮಾಡಬಹುದು. ಇದಕ್ಕೆ ತದ್ವಿರುದ್ದವಾಗಿ ಸಂಸ್ಥೆ ಒಂದು ನಿಗದಿತ ಮೊತ್ತದ ಶೇರುಗಳನ್ನು ಹೂಡಿಕೆಯನ್ನು ಹಿಂಪಡೆಯಲಾಗದಂತೆ ಪರಿವರ್ತಿಸಿಡುತ್ತದೆ ಇದಕ್ಕೆ close-ended fund ಎಂದು ಕರೆಯುತ್ತಾರೆ. ಇದನ್ನು ಹಿಂಪಡೆಯಲು ಸಾಧ್ಯವಿಲ್ಲದಿದ್ದರೂ ಶೇರು ಮಾರುಕಟ್ಟೆಯಲ್ಲಿ ಇವನ್ನು ಮಾರಬಹುದು.

  ಆಯ್ಕೆಗಳು ಮತ್ತು ವೈವಿಧ್ಯತೆಗಳು

  ಹೂಡಿಕೆದಾರರಿಗೆ ತಮ್ಮ ಹಣವನ್ನು ಹೂಡಲು ಹಲವಾರು ಆಯ್ಕೆಗಳು ಲಭ್ಯವಿದೆ. ಇದರಿಂದ ಹೂಡಿಕೆದಾರನ ಇಷ್ಟದ ವಿಷಯಕ್ಕೆ ಸಂಬಂಧಿಸಿದ ಅಥವಾ ಹೂಡಿಕೆದಾರನು/ಳು ತನ್ನ ಮನಸ್ಸಿಗೆ ಒಪ್ಪುವ, ಹೆಚ್ಚಿನ ಲಾಭದ ಖಚಿತತೆ ಇರುವ ಹೂಡಿಕೆಯನ್ನು ಆರಿಸಿಕೊಳ್ಳಬಹುದಾಗಿದೆ.

  ಹಣದುಬ್ಬರಕ್ಕೆ ಉತ್ತರ

  ತಮ್ಮ ಉಳಿತಾಯದ ಹಣವನ್ನು ದೀರ್ಘಾವಧಿಯಲ್ಲಿ ಉಳಿಸಿ ಅಗತ್ಯ ಸಮಯದಲ್ಲಿ ಪಡೆಯಲು ಸಾಧ್ಯವಾಗಲು ಮ್ಯೂಚುವಲ್ ಫಂಡುಗಳು ಉತ್ತಮ ಆಯ್ಕೆಯಾಗಿದೆ. ಚಿಕ್ಕ ಪ್ರಮಾಣದಲ್ಲಿಯಾದರೂ ಸರಿ, ಸತತವಾಗಿ ಹಾಗೂ ದೀರ್ಘಾವಧಿಯಲ್ಲಿ ಹಣವನ್ನು ಹೂಡುವ ಮೂಲಕ ಭವಿಷ್ಯದ ಹಣದುಬ್ಬರವನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ.

  ಮ್ಯೂಚುವಲ್ ಫಂಡ್ ಗಳ ಅನಾನುಕೂಲತೆಗಳು

  ಅಪಾಯ ಹಾಗೂ ವೆಚ್ಚಗಳು

  ಈ ಹೂಡಿಕೆಯಲ್ಲಿ ಹೂಡಿದ ಹಣಕ್ಕೆ ಪಡೆಯುವ ಆದಾಯ ನೇರವಾಗಿ ಮಾರುಕಟ್ಟೆಯ ಏರಿಳಿತವನ್ನು ಅವಲಂಬಿಸಿದೆ. ಹೆಚ್ಚಿನ ಮ್ಯೂಚುವಲ್ ಫಂಡ್ ಗಳು ತಮ್ಮಲ್ಲಿ ವಿನಿಯೋಗಿಸುವ ಯಾವುದೇ ಹೂಡಿಕೆಗೆ ನಿಗದಿತ ಸೇವಾವೆಚ್ಚವನ್ನು ವಿಧಿಸುತ್ತವೆ. ಕೆಲವು ಹೂಡಿಕೆಗಳು ಮಾರಾಟದಿಂದ ಲಭಿಸಿದ ಆದಾಯದ ಮೇಲೆ ರುಸುಮು ಅಥವಾ ಕಮೀಶನ್ ಮುರಿದುಕೊಳ್ಳುತ್ತವೆ ಹಾಗೂ ಒಂದು ವೇಳೆ ಹೂಡಿಕೆದಾರ ತನ್ನ ಹೂಡಿಕೆಯನ್ನು ಹಿಂಪಡೆಯಬಯಸಿದರೆ ಇದಕ್ಕೂ ಒಂದು ವೆಚ್ಚವನ್ನು ವಿಧಿಸುತ್ತವೆ.

  ಆದಾಯದ ಬಗ್ಗೆ ಯಾವುದೇ ಖಾತರಿ ಇಲ್ಲ

  ಈ ಹೂಡಿಕೆಯಲ್ಲಿ ಹೂಡಿದ ಹಣವನ್ನು ವಿವಿಧ ಈಕ್ವಿಟಿ ಹಾಗೂ ಸಾಲಗಳಲ್ಲಿಯೂ ಹೂಡಲಾಗುತ್ತದೆ. ಈ ಹೂಡಿಕೆಗಳಲ್ಲಿ ಪಡೆಯುವ ಲಾಭ ಮಾರುಕಟ್ಟೆಯ ಸ್ಥಿತಿಯನ್ನು ಅವಲಂಬಿಸಿರುವ ಕಾರಣ ಲಾಭವಾಗಿಯೇ ಆಗುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.

  ಹೂಡಿಕೆಯ ಮೇಲೆ ನಿಯಂತ್ರಣವಿಲ್ಲ

  ಈ ಹೂಡಿಕೆಯಲ್ಲಿ ಹಣ ಹೂಡುವ ಹೊರತಾಗಿ ಹೂಡಿಕೆದಾರನಿಗೆ ಯಾವುದೇ ನಿಯಂತ್ರಣವಿರುವುದಿಲ್ಲ. ಎಲ್ಲಾ ಹೂಡಿಕೆಗಳನ್ನು ಎಲ್ಲಿ ಹೂಡಬೇಕು, ಎಷ್ಟು ಅವಧಿಗಾಗಿ ಹೂಡಬೇಕು, ಯಾವಾಗ ಹಿಂಪಡೆಯಬೇಕು ಎಂಬ ವಿಷಯಗಳನ್ನು ನಿಧಿ ವ್ಯವಸ್ಥಾಪಕರೇ ನಿರ್ಧರಿಸುತ್ತಾರೆ. ಅಂದರೆ ನಿಮ್ಮ ಹಣದ ಹೂಡಿಕೆಯನ್ನು ಇನ್ನೊಬ್ಬರು ನಿರ್ಧರಿಸುತ್ತಾರೆ. ಹೂಡಿಕೆದಾರನಿಗೆ ಇದನ್ನು ಪ್ರಶ್ನಿಸುವ ಹಕ್ಕಿಲ್ಲ.

  ಯಾವುದೇ ವಿಮೆ ಇಲ್ಲ

  ಈ ಹೂಡಿಕೆಗೆ ಯಾವುದೇ ವಿಮೆಯ ರಕ್ಷಣೆ ಇಲ್ಲ. ಸೆಬಿ (Securities and Exchange Board of India)ಯಿಂದಲೇ ಇದು ನಿಯಂತ್ರಿಸಲ್ಪಡುವ ಕಾರಣ ಆತಂಕಕ್ಕೆ ಕಾರಣವಿಲ್ಲವಾದರೂ ಇದಕ್ಕೆ ವಿಮೆ ಇಲ್ಲವಾದುದರಿಂದ ಸೆಬಿಯ ನಿಯಂತ್ರಣಕ್ಕೂ ಮೀರಿ ಮಾರುಕಟ್ಟೆ ಕೈ ಕೊಟ್ಟರೆ ಎದುರಾಗುವ ನಷ್ಟವನ್ನು ಸ್ವತಃ ಭರಿಸಬೇಕಾಗುತ್ತದೆ.

  ಮ್ಯೂಚುವಲ್ ಫಂಡ್ ಗಳ ವಿಧಗಳು

  ಇಂದು ಹೂಡಿಕೆದಾರರು ನಿರೀಕ್ಷಿಸುವ ವಿವಿಧ ಅಗತ್ಯತೆಗಳಿಗೆ ಅನುಸಾರವಾಗಿ (ಉದಾಹರಣೆಗೆ ಆರ್ಥಿಕ ಪರಿಸ್ಥಿತಿ, ಅಪಾಯವನ್ನು ಸಹಿಸಿಕೊಳ್ಳುವ ಹಾಗೂ ಆದಾಯದ ನಿರೀಕ್ಷೆ ಇತ್ಯಾದಿ) ಹಲವಾರು ಮ್ಯೂಚುವಲ್ ಫಂಡ್ ಗಳ ಯೋಜನೆಗಳು ಲಭ್ಯವಿವೆ.

  1. ತೆರೆದ-ಅಂತ್ಯದ ಯೋಜನೆಗಳು.
  2. ಮುಚ್ಚಿದ-ಅಂತ್ಯದ ಯೋಜನೆಗಳು
  3. ಮಧ್ಯಂತರ ಯೋಜನೆಗಳು
  4. ಬೆಳವಣಿಗೆ ಅಥವಾ ಇಕ್ವಿಟಿ-ಓರಿಯೆಂಟೆಡ್ ಯೋಜನೆಗಳು
  5. ಆದಾಯ ಅಥವಾ ಸಾಲ ಆಧಾರಿತ ಯೋಜನೆಗಳು
  6. ಸಮತೋಲಿತ ಯೋಜನೆಗಳು
  7. ಮನಿ ಮಾರ್ಕೆಟ್ ಅಥವಾ ಲಿಕ್ವಿಡ್ ಫಂಡ್ ಗಳು
  8. ಗಿಲ್ಟ್ ನಿಧಿಗಳು
  9. ನಿಧಿಯ ಯೋಜನೆಗಳ ನಿಧಿ
  10. ಚಿನ್ನದ ವಿನಿಮಯ ವ್ಯಾಪಾರದ ನಿಧಿಗಳು
  11. ಫ್ಲೋಟಿಂಗ್ ದರ ನಿಧಿಗಳು
  12. ತೆರಿಗೆ ಉಳಿಸುವ ಯೋಜನೆಗಳು
  13. ಸೂಚ್ಯಂಕ ಯೋಜನೆಗಳು
  14. ವಲಯ ನಿರ್ದಿಷ್ಟ ಯೋಜನೆಗಳು
  15. ಲೋಡ್ ಅಥವಾ ಲೋಡ್ ಇಲ್ಲದ ಫಂಡ್ ಗಳು
  16. ಡಿವಿಡೆಂಡ್ ಪಾವತಿಯ ಯೋಜನೆಗಳು
  17. ಡಿವಿಡೆಂಡ್ ಮರುಹೂಡಿಕೆ ಯೋಜನೆಗ

   

  English summary

  What are Mutual Funds? Benefits of investing in mutual funds

  Mutual fund is an investment vehicle for investing in stocks and bonds. Mutual funds pool money from a large number of investors and invests this money in securities such as stocks, bonds, money markets instruments and similar securities.
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more