For Quick Alerts
ALLOW NOTIFICATIONS  
For Daily Alerts

ಸಿಪ್ ಬಗ್ಗೆ ನಿಮಗೆಷ್ಟು ಗೊತ್ತು?

ಸಿಪ್ (ವ್ಯವಸ್ಥಿತ ಹೂಡಿಕೆ ಯೋಜನೆ) ಎನ್ನುವುದು ಗೊಂದಲವಿಲ್ಲದ, ಬುದ್ದಿವಂತಿಕೆಯ ಹಣಕಾಸಿನ ಉಪಕರಣವಾಗಿದೆ. ಇದು ಮ್ಯುಚುವಲ್ ಫಂಡ್ ನ ಕೊಡುಗೆಯಾಗಿದ್ದು, ಹೂಡಿಕೆದಾರರಿಗೆ ಕಾಲಾನುಕಾಲಕ್ಕೆ ಕ್ರಮವಾಗಿ ಶಿಸ್ತಿನ ರೂಪದಲ್ಲಿ ಹಣ ಹೂಡುವ ಯೋಜನೆ.

By Siddu Thorvat
|

ಸಿಪ್ (ವ್ಯವಸ್ಥಿತ ಹೂಡಿಕೆ ಯೋಜನೆ) ಎನ್ನುವುದು ಗೊಂದಲವಿಲ್ಲದ, ಬುದ್ದಿವಂತಿಕೆಯ ಹಣಕಾಸಿನ ಉಪಕರಣವಾಗಿದೆ. ಇದು ಮ್ಯುಚುವಲ್ ಫಂಡ್ ನ ಕೊಡುಗೆಯಾಗಿದ್ದು, ಹೂಡಿಕೆದಾರರಿಗೆ ಕಾಲಾನುಕಾಲಕ್ಕೆ ಕ್ರಮವಾಗಿ ಶಿಸ್ತಿನ ರೂಪದಲ್ಲಿ ಹಣ ಹೂಡಲು ಸಹಾಯವಾಗಲೆಂದು ಮಾಡಿರುವ ಯೋಜನೆಯಾಗಿದೆ. ಇದರಲ್ಲಿ ಹಣವನ್ನು ಪ್ರತಿ ವಾರ, ತಿಂಗಳು ಅಥವಾ ಮೂರು ತಿಂಗಳಿಗೊಮ್ಮೆ ಹೂಡುವ ಅವಕಾಶವಿದೆ. ಸಿಪ್ ಯೋಜನೆ ರಿಕರಿಂಗ್ ಡಿಪಾಸಿಟ್ ಹಾಗೆ. ಅಲ್ಲಿ ಹೇಗೆ ಒಂದು ನಿರ್ದಿಷ್ಟ ಮೊತ್ತವನ್ನು ನಿರ್ದಿಷ್ಟ ಸಮಯಕ್ಕೆ ಕಟ್ಟುತ್ತಾ ಹೋಗುವೆವೊ ಹಾಗೆ ಇದು. ಸಿಪ್ (SIP) ಹೂಡಿಕೆಯಲ್ಲಿ ಒಂದು ಶಿಸ್ತನ್ನು ತರುತ್ತದೆ ಮತ್ತು ದೊಡ್ಡ ಮೊತ್ತದ ಹಣ ಒಂದೇ ಬಾರಿಗೆ ಹೂಡುವ ಬದಲಿಗೆ ಸಣ್ಣ ಮೊತ್ತದ ಹಣವನ್ನು ಕಾಲ ಕಾಲಕ್ಕೆ ಕಟ್ಟುವುದರ ಮೂಲಕ ನಮ್ಮ ಸಂಪತ್ತನ್ನು ಭವಿಷ್ಯದಲ್ಲಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಎಸ್‍ಐಪಿ ಆರಂಭಿಸುವುದು ಹೇಗೆ ?

ಸಿಪ್ (SIP) ಹೇಗೆ ಕೆಲಸ ಮಾಡುತ್ತದೆ?

ಸಿಪ್ (SIP) ಹೇಗೆ ಕೆಲಸ ಮಾಡುತ್ತದೆ?

ಸಿಪ್ ಕ್ರಮಬದ್ಧವಾಗಿ ಹಣ ಹೂಡುವ ಧ್ಯೇಯ ಹೊಂದಿದೆ. ಸಿಪ್ ನಲ್ಲಿ ನೀವು ನಿರ್ಧರಿಸಿದಷ್ಟು ಖಚಿತ ಮೊತ್ತ ನಿಮ್ಮ ಬ್ಯಾಂಕ್ ಖಾತೆಯಿಂದ ತಾನಾಗಿಯೇ ಕಳೆದು ನೀವು ಆಯ್ಕೆ ಮಾಡಿದ ನಿರ್ದಿಷ್ಟ ಮ್ಯೂಚುವಲ್ಲ್ ಫಂಡ್ ಯೊಜನೆಯಲ್ಲಿ ಹೂಡಿಕೆ ಆಗುತ್ತದೆ. ಆ ದಿನದ ಮಾರುಕಟ್ಟೆಯ ದರದ ಆಧಾರದ ಮೇಲೆ (ನೆಟ್ ಅಸೆಟ್ ವ್ಯಾಲ್ಯು) ಕೆಲ ಯುನಿಟ್ ಗಳು ನಿಮಗೆ ಮೀಸಲಾಗುತ್ತವೆ. ಪ್ರತಿ ಬಾರಿ ನೀವು ಹಣ ಹೂಡಿದಾಗ ಮಾರುಕಟ್ಟೆಯ ದರದ ಆಧಾರದ ಮೇಲೆ ಯುನಿಟ್ ಗಳು ನಿಮಗೆ ಮೀಸಲಾಗುತ್ತಾ ಹೋಗುತ್ತವೆ. ಸಿಪ್ ಹೆಚ್ಚಿನ ದರವಿದ್ದಾಗ ಕಡಿಮೆ ಯುನಿಟ್ ಹಾಗೂ ದರ ಕಡಿಮೆ ಇದ್ದಾಗ ಹೆಚ್ಚಿನ ಯುನಿಟ್ ಕೊಳ್ಳುವ ಸ್ವಾತಂತ್ರ್ಯ ಹೊಂದಿದೆ. ಹೀಗಾಗಿ ವಿಭಿನ್ನ ಮಾರುಕಟ್ಟೆ ದರದಲ್ಲಿ ಯುನಿಟ್ ಗಳು ದೊರೆಯುತ್ತವೆ. ನಿಮ್ಮ ಹಣದ ವ್ಯವಹಾರ ನೋಡಿಕೊಳ್ಳುವವರು ಮಾರುಕಟ್ಟೆ ತಜ್ಞರು ಹೀಗಾಗಿ ನಿಮ್ಮ ತಲೆ ನೋವು ಅಲ್ಲವೇ ಅಲ್ಲ. ಸಿಪ್ ಪ್ರಾರಂಭಿಸುವುದು ಹೇಗೆ?

ಸಿಪ್ ಲಾಭಗಳು
 

ಸಿಪ್ ಲಾಭಗಳು

ರೂಪಾಯಿ-ದರ ಸರಾಸರಿ
ಮಾರುಕಟ್ಟೆ ಚಂಚಲ, ಮಾರುಕಟ್ಟೆಯ ಸಮಯವನ್ನು ಅಂದಾಜು ಮಾಡುವುದು ಕಷ್ಟದ ಕೆಲಸ. ರೂಪಾಯಿ ದರ ಸರಾಸರಿ ಎನ್ನುವುದು ಸ್ವಯಂ ಹೂಡಿಕೆ ಯೋಜನೆ. ಇದು ಮಾರುಕಟ್ಟೆಯ ಸಮಯ ನೋಡುವುದನ್ನು ತೆಗೆಯುತ್ತದೆ. ನೀವು ನಿರ್ದಿಷ್ಟ ಮೊತ್ತವನ್ನು ಆಯ್ಕೆ ಮಾಡಿದ ಫಂಡ್ ನಲ್ಲಿ ನಿಯತಕಾಲಿಕವಾಗಿ ಕೆಲ ಸಮಯದ ವರೆಗೆ ಹೂಡುತ್ತಾ ಬಂದಾಗ ನೀವು ಹೆಚ್ಚು ಯುನಿಟ್ ಗಳನ್ನು ಪಡೆಯುವಿರಿ ದರ ಕಡಿಮೆ ಇದ್ದಾಗ ಮತ್ತು ಕಡಿಮೆ ಯುನಿಟ್ ಪಡೆಯುವಿರಿ ದರ ಹೆಚ್ಚಿದ್ದಾಗ. ಈ ರೀತಿಯಾಗಿ, ನೀವು ಪ್ರತಿ ಯುನಿಟ್ ನ ಸರಾಸರಿ ದರವನ್ನು ಸಮಯ ಹೋದಂತೆ ಕಡಿಮೆ ಮಾಡುವಿರಿ. ಈ ಯೋಜನೆಗೆ ರೂಪಾಯಿ ದರ ಸರಾಸರಿ ಎನ್ನುವರು.

ಕೂಡಿಕೆಯ (Compounding ) ಲಾಭಗಳು

ಕೂಡಿಕೆಯ (Compounding ) ಲಾಭಗಳು

ಹೂಡಿಕೆ ತಜ್ಞರು ಯಾವಾಗಲು ಶಿಫಾರಸು ಮಾಡುವುದೇನೆಂದರೆ ವ್ಯಕ್ತಿ ಎಂದಿಗೂ ಜೀವನದಲ್ಲಿ ಬೇಗನೆ ಹೂಡಿಕೆ ಮಾಡಲು ಆರಂಭಿಸಬೇಕು ಮತ್ತು ಹೂಡಿಕೆ ಆಗಿಂದಾಗ ಮಾಡುತ್ತಲಿರಬೇಕು. ಇದಕ್ಕೆ ಕಾರಣವೇನೆಂದರೆ ಕೂಡಿಕೆ ಯ ಲಾಭ. ಸಣ್ಣ ಮೊತ್ತದ ಹಣವನ್ನು ಕ್ರಮೇಣ ಹೂಡುತ್ತಾ ಬಂದಾಗ ದೊಡ್ಡ ಮೊತ್ತವಾಗಿ ಬೆಳೆಸಬಹುದು. ನಿಮ್ಮ ಚಿಕ್ಕ ಹೂಡಿಕೆ ಜೊತೆಗೆ ವರುಷಗಳವರೆಗೆ ನಿಮಗೆ ಬಂದ ಲಾಭ ಎರಡೂ ಸೇರಿ ನಿಮಗೆ ದೊಡ್ಡ ಮೊತ್ತದ ಸಂಪತ್ತನ್ನು ಮಾಡುವಲ್ಲಿ ಸಹಾಯ ಮಾಡುತ್ತದೆ. ಕೂಡಿಕೆ (ಕಂಪೌಂಡಿಂಗ್) ಎಂದರೆ ಲಾಭದ ಮೊತ್ತದಿಂದ ಪುನಃ ಸಂಪಾದಿಸುವುದು. ಎಷ್ಟು ಕಾಲದ ವರೆಗೆ ಕೂಡಿಕೆ ಇರುತ್ತದೆ ಅಷ್ಟು ಹೆಚ್ಚು ಲಾಭ. ಮ್ಯೂಚುವಲ್ ಫಂಡ್ ಎಂದರೇನು? ಅದರ ಪ್ರಕಾರಗಳ್ಯಾವವು?

ಶಿಸ್ತಿನ ಹೂಡಿಕೆ

ಶಿಸ್ತಿನ ಹೂಡಿಕೆ

ಸಫಲ ಹೂಡಿಕೆಗೆ ಶಿಸ್ತು ಆಧಾರ. ನಿಮಗೆ ಸಂಪತ್ತು ಮಾಡುವುದಿದ್ದರೆ ಇದರಲ್ಲಿನ ಮುಖ್ಯ ನಿಯಮವೆಂದರೆ ನಿಯಮಿತವಾಗಿ ಹಣ ಹೂಡುತ್ತಿರಬೇಕು ಮತ್ತು ಹೂಡಿಕೆಯ ರೀತಿಯಲ್ಲಿ ಶಿಸ್ತನ್ನು ಕಾದಿರಿಸಬೇಕು. ನೀವು ಸಿಪ್ ಮೂಲಕ ಹಣ ಹೂಡಿದಾಗ ನೀವು ನಿರ್ದಿಷ್ಟ ಮೊತ್ತವನ್ನು ನಿರ್ದಿಷ್ಟ ಕಾಲಕ್ಕೆ ನಿಯಮಿತವಾಗಿ ಕಟ್ಟಲು ಬದ್ಧರಾಗುವಿರಿ. ನಿಯಮಿತವಾಗಿ ಸಣ್ಣ ಮೊತ್ತದ ಹಣವನ್ನು ಹೂಡುವುದು ಹೆಚ್ಚಿನ ಒಂದೇ ಬಾರಿಗೆ ಕಟ್ಟುವ ಮೊತ್ತಕ್ಕಿಂತ ಉತ್ತಮ. ಪ್ರತಿ ಹೂಡಿಕೆ ನಿಮ್ಮ ಆರ್ಥಿಕ ಗುರಿಯನ್ನು ಮುಟ್ಟಲು ಮೆಟ್ಟಿಲಾಗುವುದು.

ಹೊಂದಿಕೊಳ್ಳುವಿಕೆ ಸ್ವಾತಂತ್ರ್ಯ

ಹೊಂದಿಕೊಳ್ಳುವಿಕೆ ಸ್ವಾತಂತ್ರ್ಯ

ಸಿಪ್ ಹೂಡಿಕೆಯನ್ನು ದೀರ್ಘಾವಧಿ ದೃಷ್ಟಿಯಿಂದ ಮಾಡಬೇಕು ಆದರೆ ಅದೇನು ಕಡ್ಡಾಯ ನಿಯಮವಲ್ಲ ಎನ್ನುವುದು ಯಾವಾಗಲೂ ಕೊಡುವ ಸಲಹೆ. ನೀವು ಬೇಕೆಂದಾಗ ನಿಮ್ಮ ಯೋಜನೆ ನಿಲ್ಲಿಸಬಹುದು. ಸಿಪ್ ಹಣವನ್ನು ಹೆಚ್ಚಿಸಬಹುದು ಇಲ್ಲವೇ ತಗ್ಗಿಸಬಹುದು.

ಸುಲಭ ಹಾಗೂ ಅನುಕೂಲಕರ

ಸುಲಭ ಹಾಗೂ ಅನುಕೂಲಕರ

ಸಿಪ್ ಹೂಡಿಕೆ ದೃಷ್ಟಿಯಲ್ಲಿ ನೋಡಿದರೆ ತುಂಬಾ ಸುಲಭ ಹಾಗೂ ಅನುಕೂಲಕರ. ಹಣ ಹೂಡಲು ನಿಮ್ಮ ಬಿಡುವಿಲ್ಲದ ಜೀವನದಿಂದ ಸಮಯ ತೆಗೆಯುವ ಅವಶ್ಯಕತೆ ಇಲ್ಲ. ಸಿಪ್ ಹಣ ನೀಡಲು ಸುಲಭ ಆಯ್ಕೆಗಳೊಂದಿಗೆ ಬರುತ್ತದೆ. ನೀವು ಅಂಚೆ ಮೂಲಕ ದಿನಾಂಕ ನಮೂದಿಸಿದ ಚೆಕ್ ಅನ್ನು ಅಯ್ಕೆ ಮಾಡಿದ ಫಂಡ್ ಗಾಗಿ ಕಳಿಸಬಹುದು ಇಲ್ಲವೆ ನಿಮ್ಮ ಖಾತೆಯಿಂದ ಸ್ವಯಂ ಹಣ (ನಮೂದಿಸಿದಷ್ಟು) ನಿರ್ದಿಷ್ಟ ದಿನಾಂಕ ದಂದು ಹೋಗುವ ಹಾಗೆ ಮಾಡಬಹುದು. ನೀವು ನಿಮ್ಮ ಹೂಡಿಕೆ ಮೇಲೆ ಆನ್‍ಲೈನ್ ಮೂಲಕ ಕಣ್ಣಿಡಬಹುದು ಅಥವಾ ತಿಂಗಳಿಗೆ ಖಾತೆಯ ವಿವರ ಪಡೆಯುವ ಮೂಲಕ ನೋಡಬಹುದು. ಆನ್ಲೈನ್ ಮೂಲಕ ಮ್ಯೂಚುವಲ್ ಫಂಡ್(SIP) ಪ್ರಾರಂಭಿಸುವುದು ಹೇಗೆ?

ದೀರ್ಘಾವಧಿಗೆ ಲಾಭ

ದೀರ್ಘಾವಧಿಗೆ ಲಾಭ

ಸಿಪ್ ದೀರ್ಘಾವಧಿ ಹೂಡಿಕೆಯಲ್ಲಿ ಒಳ್ಳೆ ಲಾಭವನ್ನು ನೀಡುವ ಸಾಮಾರ್ಥ್ಯವನ್ನು ಹೊಂದಿದೆ. ಅದಕ್ಕೆ ಕಾರಣ ಸರಾಸರಿ ರೂಪಾಯಿ-ವೆಚ್ಚ ಹಾಗೂ ಕೂಡಿಕೆ ಲಾಭ.

ಕೈಗೆಟಕುವ ಮೊತ್ತ

ಕೈಗೆಟಕುವ ಮೊತ್ತ

ಸಿಪ್ ಎಲ್ಲರ ಕೈಗೆಟಕುವ ಹೂಡಿಕಯಾಗಿದೆ. ಏಕೆಂದರೆ ನೀವು ಹೂಡಿಕೆಯನ್ನು ತಿಂಗಳಿಗೆ 500 ರೂಪಾಯಿ ಮೊತ್ತದಿಂದ ಆರಂಭಿಸಬಹುದು.

English summary

What is SIP or Systematic Investment Plan?

A SIP or Systematic Investment Plan is a smart and hassle free financial tool, offered by mutual funds to help investors invest regularly in the disciplined manner. SIP allows you to invest a pre-determined amount of money at a regular interval, over a period of time.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X