ಮೆಡಿಕ್ಲೈಮ್ ಆಸ್ಪತ್ರೆಯ ಖರ್ಚನ್ನು ಭರಿಸುವ ಪಾಲಿಸಿಯಾಗಿದ್ದು ಈ ಖರ್ಚುಗಳಲ್ಲಿ ಆಸ್ಪತ್ರೆಯ ಕೋಣೆಯ ಬಾಡಿಗೆ, ವೈದ್ಯರ ಚಿಕಿತ್ಸಾ ವೆಚ್ಚ, ದಾದಿಯರ ಸೇವಾ ವೆಚ್ಚ, ಶಸ್ತ್ರಚಿಕಿತ್ಸಾ ಕಾರ್ಯವಿಧಾನ, ಔಷಧಿಗಳು ಹಾಗೂ ತಪಾಸಣಾ ಪರೀಕ್ಷೆ ಸೇರಿಸುತ್ತವೆ.
ಆರೋಗ್ಯ ವಿಮೆ ಪ್ರತಿಯೊಬ್ಬರಿಗೂ ಅವಶ್ಯವಾಗಿ ಬೇಕಾಗಿರುವ ವಿಮೆಯಾಗಿದೆ. ನೀವು ಆರೋಗ್ಯ ವಿಮೆಯನ್ನು ಆಯ್ಕೆ ಮಾಡುವ ಮೊದಲು ಇದರ ಸೌಲಭ್ಯಗಳನ್ನು ಅರಿತುಕೊಂಡು ಈ ವಿಮೆಯಲ್ಲಿ ಅನ್ವಯವಾಗುವ ಹಾಗೂ ಅನ್ವಯವಾಗದೇ ಇರುವ ಸಂಗತಿಗಳ ಬಗ್ಗೆಯೂ ತಿಳಿದುಕೊಂಡಿರುವುದು ಅವಶ್ಯ. ವಿಶೇಷವಾಗಿ ಉಪ-ಪಾವತಿಯ ಮಿತಿ ಹಾಗೂ ಸಹ ಪಾವತಿಗಳ ಬಗ್ಗೆ ತಿಳಿದುಕೊಂಡಿರಬೇಕು. ಉಪ ಪಾವತಿಯ ಮಿತಿ ಎಂದರೆ ಆರೋಗ್ಯ ವಿಮೆಯ ಪಾಲಿಸಿ ಅಥವಾ ಕರಾರುಪತ್ರದಲ್ಲಿ ವಿವರಿಸಿರುವ ನಿಬಂಧನೆಗಳ ಪ್ರಕಾರ ಉಪ ಪಾವತಿಯ ಮಿತಿ ಎಂದರೆ ಕೆಲವು ಸೌಲಭ್ಯಗಳ ಮೇಲೆ ಹೇರಲಾಗುವ ಮಿತಿ. ಸಹ ಪಾವತಿ ಎಂದರೆ ಒಂದು ಸೌಲಭ್ಯದ ಹಕ್ಕು ಪಾವತಿಯನ್ನು ಪಡೆಯುವಾಗ ಇದರ ಪೂರ್ಣ ಮೊತ್ತದಲ್ಲಿ ಒಂದು ಭಾಗವನ್ನು ಮಾತ್ರವೇ ವಿಮಾ ಸಂಸ್ಥೆ ಭರಿಸಿ ಉಳಿದುದನ್ನು ರೋಗಿಯೇ ಭರಿಸಬೇಕಾಗಿ ಬರುವುದಾಗಿದೆ. ಬೆಸ್ಟ್ 8 ಲೈಪ್ ಇನ್ಸೂರೆನ್ಸ್ ಪಾಲಿಸಿಗಳು
ಉಪ-ಪಾವತಿಯ ಮಿತಿಯ ಬಗ್ಗೆ ಅರಿವಿರದೇ ಇದ್ದರೆ ಇದು ಅಗತ್ಯ ಸಂದರ್ಭದಲ್ಲಿ ರೋಗಿಯ ಅಥವಾ ರೋಗಿಯ ಮನೆಯವರ ಜೇಬಿಗೆ ಭಾರವಾಗಿ ಪರಿಣಮಿಸಬಹುದು. ಇದರಲ್ಲಿ ಪ್ರಮುಖವಾದುದು ಆಸ್ಪತ್ರೆಯ ಕೋಣೆಯ ದಿನಬಾಡಿಗೆಯ ಮಿತಿ. ಈ ಬಗ್ಗೆ ನೀವೇಕೆ ಈಗ ಚಿಂತಿಸಬೇಕು ಎಂದು ತಿಳಿಯುವ ಮುನ್ನ ಆರೋಗ್ಯ ವಿಮೆಯಲ್ಲಿ ನೀವು ಪಡೆದುಕೊಂಡ ಪಾಲಿಸಿಯಿಂದ ಏನು ಸಿಗುತ್ತದೆ ಎಂಬುದನ್ನು ನೋಡೋಣ..
ಮೆಡಿಕ್ಲೈಮ್ ಒದಗಿಸಿರುವ ವೈದ್ಯಕೀಯ ವೆಚ್ಚಗಳು
ಆರೋಗ್ಯ ವಿಮಾ ಪಾಲಿಸಿಯನ್ನು ಸುಲಭ ಪದಗಳಲ್ಲಿ ಮೆಡಿಕ್ಲೈಮ್ ಎಂದು ಹೇಳಲಾಗುತ್ತದೆ. ಈ ಮೆಡಿಕ್ಲೈಮ್ ಆಸ್ಪತ್ರೆಯ ಖರ್ಚನ್ನು ಭರಿಸುವ ಪಾಲಿಸಿಯಾಗಿದ್ದು ಈ ಖರ್ಚುಗಳಲ್ಲಿ ಆಸ್ಪತ್ರೆಯ ಕೋಣೆಯ ಬಾಡಿಗೆ, ವೈದ್ಯರ ಚಿಕಿತ್ಸಾ ವೆಚ್ಚ, ದಾದಿಯರ ಸೇವಾ ವೆಚ್ಚ, ಶಸ್ತ್ರಚಿಕಿತ್ಸಾ ಕಾರ್ಯವಿಧಾನ, ಔಷಧಿಗಳು ಹಾಗೂ ತಪಾಸಣಾ ಪರೀಕ್ಷೆಗಳು ಸೇರಿಸುತ್ತವೆ. ಹೆಚ್ಚಿನ ವೈದ್ಯಕೀಯ ವಿಮೆಗಳು ತುರ್ತುಕಾಲದಲ್ಲಿ ಸೇವೆ ಸಲ್ಲಿಸಿದ ಆಂಬ್ಯುಲೆನ್ಸ್ ವಾಹನದ ಖರ್ಚನ್ನೂ ಭರಿಸುತ್ತವೆ. ಈ ವೆಚ್ಚಗಳ ಒಟ್ಟು ಮೊತ್ತ ಒಂದು ಮಿತಿಯನ್ನು ಹೊಂದಿದ್ದು ಆಯಾ ದಿನದ ಕಾರ್ಯವಿಧಾನಗಳಿಗೆ ಬದ್ದವಾಗಿರುತ್ತವೆ. ಈ ವಿಮೆಯಲ್ಲಿ ಆಸ್ಪತ್ರೆಗೆ ದಾಖಲಿಸುವ ಮುನ್ನ ಹಾಗೂ ಆಸ್ಪತ್ರೆಯಿಂದ ಬಿಡುಗಡೆಯ ಬಳಿಕ ಎದುರಾಗುವ ವೆಚ್ಚವನ್ನೂ ಒಂದು ನಿಗದಿತ ಅವಧಿಯಲ್ಲಿ ಭರಿಸುವ ವ್ಯವಸ್ಥೆಯೂ ಇರುತ್ತದೆ.
ಆಸ್ಪತ್ರೆಗೆ ದಾಖಲಿಸುವ ಮುನ್ನ ಮತ್ತು ಬಳಿಕ ಎದುರಾಗುವ ಖರ್ಚುಗಳಲ್ಲಿ ವೈದ್ಯರ ಭೇಟಿಯ ಖರ್ಚು, ತಪಾಸಣಾ ಪರೀಕ್ಷೆಗಳು ಹಾಗೂ ಅವಶ್ಯಕ ಔಷಧಿಗಳ ಖರ್ಚುಗಳು ಒಳಗೊಂಡಿರುತ್ತವೆ. ಆದರೆ ಈ ಪಟ್ಟಿಯಲ್ಲಿ ಕೆಲವು ಖರ್ಚುಗಳು ಒಳಗೊಂಡಿರುವುದಿಲ್ಲ. ಕೆಲವು ಖಾಯಿಲೆಗಳು ತುಂಬಾ ಹಳೆಯದಾಗಿದ್ದರೆ ಅಥವಾ ಉಲ್ಬಣಗೊಳ್ಳುವ ಮುನ್ನ ಕಾಯಬೇಕಾದ ಅವಧಿಯಾಗಿದ್ದರೆ ಮೊದಲಾದ ವಿಶೇಷ ಸಂದರ್ಭಗಳಲ್ಲಿ ಎದುರಾಗುವ ಖರ್ಚುಗಳನ್ನು ವಿಮೆ ಭರಿಸುವುದಿಲ್ಲ. ಅಲ್ಲದೇ ವಿಮೆಯ ಕರಾರು ಪತ್ರದಲ್ಲಿ ಉಲ್ಲೇಖಿಸಿರದ ಕೆಲವು ವೈದ್ಯಕೀಯ ಕಾರ್ಯವಿಧಾನಗಳು ಹಾಗೂ ಔಷಧಿಗಳನ್ನೂ ವಿಮೆ ಭರಿಸುವುದಿಲ್ಲ. ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ
ಕೊಠಡಿ ಬಾಡಿಗೆಯ ಉಪ-ಪಾವತಿಯ ಮಿತಿ
ಉಪ ಪಾವತಿಯ ಮಿತಿ ಎಂದರೆ ಮೇಲೆ ತಿಳಿಸಿದಂತೆ ಆರೋಗ್ಯ ವಿಮೆಯನ್ನು ಪಡೆಯುವಾಗ ವಿಮಾಸಂಸ್ಥೆ ದಿನದ ಬಾಡಿಯಲ್ಲಿ ಹೇರುವ ಮಿತಿಯಾಗಿದೆ. ಅಂದರೆ ಈ ಮೊತ್ತ ವಿಮೆ ಇಳಿಸಿದ ಒಟ್ಟು ಮೊತ್ತದ ಒಂದು ಶೇಖಡಾವಾರು ಪ್ರಮಾಣವನ್ನು ಅವಲಂಭಿಸಿರುತ್ತದೆ ಹಾಗೂ ಈ ಮೊತ್ತ ನಿಗದಿತವಾಗಿದ್ದು ಒಂದು ವೇಳೆ ಇದಕ್ಕೂ ಹೆಚ್ಚು ಆಸ್ಪತ್ರೆಯ ದಿನ ಬಾಡಿಗೆಯಾದರೆ ರೋಗಿಯ ಕಡೆಯವರೇ ಇದನ್ನು ಭರಿಸಬೇಕಾಗುತ್ತದೆ.
ಉದಾಹರಣೆಗೆ ನೀವು ಪಡೆದ ವಿಮಾ ಮೊತ್ತ ಒಟ್ಟು ರೂ. ಮೂರು ಲಕ್ಷ ಆಗಿದ್ದು, ನಿಮ್ಮ ವಿಮೆಯ ಕರಾರು ಪತ್ರದಂತೆ ಪ್ರತಿದಿನದ ಉಪ ಪಾವತಿಯ ಮಿತಿ 1% ಆಗಿದ್ದರೆ ಆ ಪ್ರಕಾರ ದಿನಕ್ಕೆ ಮೂರು ಸಾವಿರ ರೂಪಾಯಿಯಷ್ಟು ಕೋಣೆಯ ಬಾಡಿಗೆಯನ್ನು ಮಾತ್ರವೇ ವಿಮಾ ಸಂಸ್ಥೆ ಭರಿಸುತ್ತದೆ. ಒಂದು ವೇಳೆ ದಿನ ಬಾಡಿಗೆ ಇದಕ್ಕೂ ಹೆಚ್ಚಾಗಿದ್ದರೆ ರೋಗಿಯ ಕಡೆಯವರೇ ಭರಿಸಬೇಕು.
ಅನಾವಶ್ಯಕ ಖರ್ಚುಗಳಿಂದ ತಪ್ಪಿಸಿಕೊಳ್ಳಿ
ಇದಕ್ಕೆಲ್ಲಾ ಮುಖ್ಯ ಕಾರಣ ವೈದ್ಯಕೀಯ ಕಾರ್ಯವಿಧಾನದ ವೆಚ್ಚಗಳೆಲ್ಲಾ ನೀವು ಆಯ್ದುಕೊಂಡ ಕೋಣೆಯನ್ನು ಅವಲಂಬಿಸಿರುವುದೇ ಆಗಿದೆ. ಹಾಗಾಗಿ ಚಿಕಿತ್ಸೆಗೂ ಮುನ್ನ ನಿಮ್ಮ ವಿಮೆ ಭರಿಸುವ ಕೋಣೆಯ ಬಾಡಿಗೆ ಒಂದು ಕೋಣೆಯಲ್ಲಿ ಒಬ್ಬರೇ ರೋಗಿಯದ್ದಾಗಿರುವ ವಿಶೇಷ ಕೋಣೆಯಾಗಿದ್ದರೆ ಅಥವಾ ಇಬ್ಬರು ಅಥವಾ ಹೆಚ್ಚಿನ ರೋಗಿಗಳು ಹಂಚಿಕೊಳ್ಳಬಹುದಾದ ಸಾಮಾನ್ಯ ದರ್ಜೆಯ ಕೋಣೆಯಾಗಿದ್ದರೆ ಭರಿಸಲು ಶಕ್ಯವೇ ಎಂದು ಪರಿಶೀಲಿಸಿಕೊಂಡು ಆ ಪ್ರಕಾರವೇ ಕೋಣೆಯನ್ನು ಆಯ್ದುಕೊಳ್ಳುವ ಮೂಲಕ ರೋಗಿಯ ಬಿಡುಗಡೆಯ ಸಮಯದಲ್ಲಿ ಅನಾವಶ್ಯಕ ಖರ್ಚುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ.
ಆಸ್ಪತ್ರೆಯ ಕೋಣೆಯ ಬಾಡಿಗೆಯ ಉಪ-ಪಾವತಿಯ ಮಿತಿಯ ಬಗ್ಗೆ ಅರಿವಿಲ್ಲದೇ ಇದ್ದರೆ ಇದು ರೋಗಿಯ ಕಡೆಯವರಿಗೆ ಗಾಯದ ಮೇಲೆ ಬರೆ ಎಳೆದಂತಾಗಬಹುದು. ಆದ್ದರಿಂದ ಈ ಮಿತಿಗಳನ್ನು ಹೇರುವ ವಿಮಾ ಪಾಲಿಸಿಗಳನ್ನು ಆಯ್ಕೆ ಮಾಡಿಕೊಳ್ಳದೇ ಇರುವುದು ಜಾಣತನದ ಕ್ರಮವಾಗಿದೆ.
ವಿಮಾ ಪಾಲಿಸಿ ಆಯ್ಕೆ ಮಾಡಿಕೊಳ್ಳಿ
ಈ ಸೌಲಭ್ಯವನ್ನು ಒದಗಿಸುವ ಹಾಗೂ ಕೊಂಚವೇ ವೆಚ್ಚದಲ್ಲಿ ಹೆಚ್ಚಿನ ದಿನದ ಮಿತಿಯನ್ನು ಒದಗಿಸುವ ವಿಮಾ ಪಾಲಿಸಿಗಳು ಈಗ ಲಭ್ಯವಿವೆ. ಈ ಸೌಲಭ್ಯವಿರುವ ವಿಮಾ ಪಾಲಿಸಿಗಳು ಈಗ ಜನಸಾಮಾನ್ಯರೂ ಭರಿಸುವಂತಿವೆ. ಒಂದು ವೇಳೆ ಈ ವಿಮೆಯನ್ನು ನೀವು ಭರಿಸಲು ಸಾಧ್ಯವಿಲ್ಲದಷ್ಟು ದುಬಾರಿ ಎನಿಸಿದರೆ ಈ ಮಿತಿಯನ್ನು ಹೇರುವ ವಿಮಾ ಪಾಲಿಸಿಗಳ ಬದಲಿಗೆ ನೀವು ನೀಡುವ ಮೊತ್ತಕ್ಕೆ ಯಾವ ಬಗೆಯ ಕೋಣೆ ದೊರಕುತ್ತದೆ ಎಂಬುದನ್ನು ಸ್ಪಷ್ಟವಾಗಿ ವಿವರಿಸಿರುವ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಿ. ಮಹಿಳೆಯರಿಗಾಗಿ ಪ್ರತ್ಯೇಕವಾದ ಸ್ಕೀಮ್ ಮತ್ತು ವಿವಿಧ ಸಾಲ ಸೌಲಭ್ಯ ಯೋಜನೆ


Click it and Unblock the Notifications