For Quick Alerts
ALLOW NOTIFICATIONS  
For Daily Alerts

ಮಹಿಳೆಯರಿಗೆ ಸಾಲ ಸೌಲಭ್ಯ ಒದಗಿಸುವ 9 ಯೋಜನೆಗಳು

ಭಾರತದ ಎಲ್ಲಾ ವಿಭಾಗದಲ್ಲೂ ಮಹಿಳಾ ಉದ್ಯಮಿಗಳು ತಮ್ಮನ್ನು ತೊಡಗಿಸಿರುವುದನ್ನು ನೋಡಬಹುದಾಗಿದೆ. ಉನ್ನತ ಉದ್ಯೋಗದಲ್ಲಿರುವ ಮಹಿಳೆಯರು ಮಾತ್ರವಲ್ಲದೆ ನಾಲ್ಕು ಗೋಡೆಯ ಮಧ್ಯೆ ಇರುವ ಮಹಿಳೆಯರೂ ಕೂಡಾ ಈಗ ಹೊರ ಜಗತ್ತಿಗೆ ಕಾಲಿಡುತ್ತಿದ್ದಾರೆ.

By Staff
|

ಭಾರತದ ಎಲ್ಲಾ ವಿಭಾಗದಲ್ಲೂ ಮಹಿಳಾ ಉದ್ಯಮಿಗಳು ತಮ್ಮನ್ನು ತೊಡಗಿಸಿರುವುದನ್ನು ನೋಡಬಹುದಾಗಿದೆ. ಉನ್ನತ ಉದ್ಯೋಗದಲ್ಲಿರುವ ಮಹಿಳೆಯರು ಮಾತ್ರವಲ್ಲದೆ ನಾಲ್ಕು ಗೋಡೆಯ ಮಧ್ಯೆ ಇರುವ ಮಹಿಳೆಯರೂ ಕೂಡಾ ಈಗ ಹೊರ ಜಗತ್ತಿಗೆ ಕಾಲಿಡುತ್ತಿದು, ಭಾರತದ ಉದ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ.

ಈ ಉನ್ನತಿಗೆ ಪ್ರಮುಖ ಕಾರಣವೇನೆಂದರೆ ಬಂಡವಾಳ. ಅನೇಕ ಬ್ಯಾಂಕುಗಳು ಮಹಿಳಾ ಉದ್ಯಮಿಗಳಿಗೆ ವಿಶೇಷ ಸಾಲಗಳನ್ನು ನೀಡುತ್ತಿರುವುದು. ಇದು ಮೇಲಾಧಾರದ ಭದ್ರತೆ ಬಡ್ಡಿಯ ದರಗಳು ಇತ್ಯಾದಿಗಳಿಗೆ ಸಂಬಂಧಿಸಿದ ವಿಷಯಗಳಿಗೆ ಹೋಲಿಸಿದರೆ ವಿಭಿನ್ನ ಮತ್ತು ಹೆಚ್ಚು ಅನುಕೂಲಕರವಾದಂತಹ ನಿಯಮಗಳು ಮತ್ತು ಷರತ್ತುಗಳನ್ನು ಹೊಂದಿವೆ.

ಮಹಿಳೆಯರಿಗಾಗಿ ಪ್ರತ್ಯೇಕವಾದ ವಿವಿಧ ಯೋಜನೆಗಳು ಮತ್ತು ಸಾಲಗಳ ಪಟ್ಟಿಗಳನ್ನು ಈ ಲೇಖನದಲ್ಲಿ ಹೇಳಲಾಗಿದೆ. ಇದು ಮಹಿಳೆಯರಿಗೆ ವ್ಯವಹಾರದ ಪ್ರಕ್ರಿಯೆಯನ್ನು ಉತ್ತೇಜಿಸಲು ಮತ್ತು ಸರಾಗಗೊಳಿಸುವ ಉದ್ದೇಶವನ್ನು ಹೊಂದಿದೆ. ಸ್ವಂತ ಉದ್ಯಮ(ಕಂಪನಿ) ಪ್ರಾರಂಭಿಸುವುದು ಹೇಗೆ?

1. ಅನ್ನಪೂರ್ಣ ಯೋಜನೆ

1. ಅನ್ನಪೂರ್ಣ ಯೋಜನೆ

ಊಟದ ಅಂದರೆ ಪ್ಯಾಕ್ ಮಾಡಲಾದ ಮಧ್ಯಾಹ್ನದ ಊಟ, ತಿಂಡಿಗಳು ಇತ್ಯಾದಿಗಳನ್ನು ತಯಾರಿಸಿ ಆಹಾರದ ಅಡುಗೆ ಉದ್ಯಮಗಳನ್ನು ಸ್ಥಾಪಿಸುವ ಮಹಿಳಾ ಉದ್ಯಮಿಗಳಿಗೆ ಸರ್ಕಾರ ವಿಶೇಷ ಯೋಜನೆಯನ್ನು ನೀಡಿದೆ. ಈ ಯೋಜನೆಯಡಿಯಲ್ಲಿ ನೀಡಲಾಗುವ ಸಾಲದ ಮೊತ್ತದಲ್ಲಿ ಪಾತ್ರೆಗಳು ಮತ್ತು ಇತರ ಅಡುಗೆ ಸಲಕರಣೆಗಳನ್ನು ಖರೀದಿಸಬಹುದಾಗಿದೆ ಮತ್ತು ಈ ಬಂಡವಾಳವನ್ನು ವ್ಯಾಪಾರದ ಅಗತ್ಯತೆಗಳನ್ನು ಪೂರೈಸಲು ಬಳಸಬಹುದಾಗಿದೆ.
ಈ ಸಾಲದ ಯೋಜನೆಯಡಿಯಲ್ಲಿ ಖಾತರಿದಾರರು ತಮ್ಮ ವ್ಯವಹಾರದ ಸೊತ್ತುಗಳನ್ನು ಮೇಲಾಧಾರ ಭದ್ರತೆಯ ರೂಪದಲ್ಲಿ ಇಡುವುದಾಗಿ ಗ್ಯಾರಂಟಿ ನೀಡಬೇಕಾಗುತ್ತದೆ. ಇದಲ್ಲದೆ, ನೀಡಲಾಗುವ ಗರಿಷ್ಠ ಮೊತ್ತವು ರೂ. 50,000 ಆಗಿದೆ. ಇದನ್ನು 36 ಮಾಸಿಕ ಕಂತುಗಳಲ್ಲಿ ಮರು ಪಾವತಿಸಬೇಕಾಗುತ್ತದೆ. ಸಾಲ ಮಂಜೂರು ಮಾಡಿದ ನಂತರ ಸಾಲಗಾರನು ಮೊದಲ ಕಂತು ಪಾವತಿಸಬೇಕಾಗಿರುವುದಿಲ್ಲ. ಮಾರುಕಟ್ಟೆಯ ದರವನ್ನು ಅವಲಂಬಿಸಿ ಬಡ್ಡಿ ದರವನ್ನು ನಿರ್ಧರಿಸಲಾಗುತ್ತದೆ. ಶೂನ್ಯ ಬಂಡವಾಳದಲ್ಲಿ ನಡೆಸಬಹುದಾದ 11 ಉದ್ಯಮಗಳು

2. ಮಹಿಳಾ ಉದ್ಯಮಿಗಳಿಗಾಗಿ ಸ್ತ್ರೀ ಶಕ್ತಿ ಯೋಜನೆ

2. ಮಹಿಳಾ ಉದ್ಯಮಿಗಳಿಗಾಗಿ ಸ್ತ್ರೀ ಶಕ್ತಿ ಯೋಜನೆ

ಒಂದು ವ್ಯವಹಾರ ನಡೆಸುತ್ತಿರುವ ಸಂಸ್ಥೆಯ ಅಥವಾ ವ್ಯವಹಾರದ ಶೇ. 50ರಷ್ಟು ಮಾಲೀಕತ್ವವನ್ನು ಹೊಂದಿರುವ ಮಹಿಳಾ ಉದ್ಯಮಿಗಳಿಗೆ ಭಾರತೀಯ ಸ್ಟೇಟ್ ಬ್ಯಾಂಕಿನ ಹೆಚ್ಚಿನ ಶಾಖೆಗಳು ಒಂದು ಯೋಜನೆಯನ್ನು ನೀಡಿದೆ. ಮತ್ತು ರಾಜ್ಯದ ಕೆಲವು ಸಂಸ್ಥೆಗಳಿಂದ ನಡೆಸಲಾಗುವ ಉದ್ಯಮಗಳ ಅಭಿವೃದ್ದಿ ಇಡಿಪಿ (Entrepreneurship Development Programmes ) ಕಾರ್ಯಕ್ರಮಗಳನ್ನೂ ಆಯೋಜಿಸಿದೆ.

3. ಭಾರತೀಯ ಮಹಿಳಾ ಬ್ಯಾಂಕ್ ಉದ್ಯಮ ಸಾಲ

3. ಭಾರತೀಯ ಮಹಿಳಾ ಬ್ಯಾಂಕ್ ಉದ್ಯಮ ಸಾಲ

ರಿಟೈಲ್ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಉದ್ಯಮಗಳನ್ನು ಪ್ರಾರಂಭಿಸಲು ಇಚ್ಚಿಸುವ ಮಹಿಳಾ ಉದ್ಯಮಿಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಈ ಸಾಲವನ್ನು ನೀಡಲಾಗುತ್ತದೆ. ಈ ಸಾಲವನ್ನು ಸ್ವತ್ತಿನ ಮೇಲೆ ಸಾಲ, ಮೈಕ್ರೋ ಸಾಲಗಳು ಮತ್ತು ಎಸ್ಎಮ್ಇ ಸಾಲಗಳು ಇತ್ಯಾದಿ ರೂಪಗಳಲ್ಲಿ ನೀಡಲಾಗುವುದು.
ಈ ಸಾಲದ ಅಡಿಯಲ್ಲಿ ಗರಿಷ್ಠ ಸಾಲದ ಮೊತ್ತವು ಉತ್ಪಾದನಾ ಕೈಗಾರಿಕೆಗಳ ಸಂದರ್ಭದಲ್ಲಿ ರೂ. 20 ಕೋಟಿ ವರೆಗೆ ಹೋಗುತ್ತದೆ ಮತ್ತು ಬಡ್ಡಿದರವು ಸಾಮಾನ್ಯವಾಗಿ 10.15% ಅಥವಾ ಅದಕ್ಕಿಂತ ಹೆಚ್ಚಿನದಾಗಿದ್ದು, ಕೆಲವೊಮ್ಮೆ ಬಡ್ಡಿದರಗಳ ಮೇಲೆ 0.25% ರಷ್ಟು ರಿಯಾಯತಿ ನೀಡಲಾಗುವುದು.
ಇದರ ಜೊತೆಗೆ, ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ ಫಾರ್ ಮೈಕ್ರೋ ಮತ್ತು ಸ್ಮಾಲ್ ಎಂಟರ್ಪ್ರೈಸಸ್ (ಸಿಜಿಟಿಎಮ್ಎಸ್ಇ) ಯೋಜನೆಯಡಿಯಲ್ಲಿ, 1 ಕೋಟಿ ವರೆಗಿನ ಸಾಲಕ್ಕೆ ಮೇಲಾಧಾರ ಭದ್ರತೆಯ (collateral security) ಅಗತ್ಯವಿರುವುದಿಲ್ಲ. ಸಣ್ಣ ಸ್ವಂತ ಉದ್ಯಮ (ಕಂಪನಿ) ಪ್ರಾರಂಭಿಸುವುದು ಹೇಗೆ?

4. ದೇನಾ ಶಕ್ತಿ ಯೋಜನೆ

4. ದೇನಾ ಶಕ್ತಿ ಯೋಜನೆ

ಆರ್ಥಿಕ ನೆರವು ಅಗತ್ಯವಿರುವ ಕೃಷಿ, ಉತ್ಪಾದನೆ, ಮೈಕ್ರೋಕ್ರೆಡಿಟ್, ಚಿಲ್ಲರೆ ಅಂಗಡಿಗಳು ಅಥವಾ ಸಣ್ಣ ಉದ್ಯಮಗಳ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಮಹಿಳಾ ಉದ್ಯಮಿಗಳಿಗೆ ದೇನಾ ಬ್ಯಾಂಕ್ ಈ ಯೋಜನೆಯನ್ನು ಒದಗಿಸಿದೆ.
ಬಡ್ಡಿದರದ ದರವು ಶೇ. 0.25ರಷ್ಟು ಕಡಿಮೆಯಾಗಿದ್ದು, ಗರಿಷ್ಠ ಠೇವಣಿ ಮೊತ್ತವನ್ನು ರೂ. 20 ಲಕ್ಷಗಳನ್ನು ರಿಟೈಲ್ (ಚಿಲ್ಲರೆ) ವ್ಯಾಪಾರಕ್ಕೆ ನೀಡಲಾಗುತ್ತದೆ. ಮೈಕ್ರೋ ಕ್ರೆಡಿಟ್ ಯೋಜನೆಯಡಿಯಲ್ಲಿ ರೂ. 50,000ಗಳನ್ನು ಶಿಕ್ಷಣ ಮತ್ತು ವಸತಿಗಳಿಗೆ ನೀಡಲಾಗುವುದು.

5. ಉದ್ಯೋಗಿನಿ ಯೋಜನೆ

5. ಉದ್ಯೋಗಿನಿ ಯೋಜನೆ

ಕೃಷಿ, ರಿಟೈಲ್ ಮತ್ತು ಸಣ್ಣ ಉದ್ಯಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮಹಿಳಾ ಉದ್ಯಮಿಗಳಿಗೆ ಆರ್ಥಿಕ ನೆರವನ್ನು ಅನುಕೂಲವಾದ ನಿಯಮಗಳು ಮತ್ತು ರಿಯಾಯಿತಿ ಬಡ್ಡಿ ದರಗಳಲ್ಲಿ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ನೀಡುತ್ತಿದೆ. 18-45 ವರ್ಷ ವಯಸ್ಸಿನ ಮಹಿಳೆಯರಿಗೆ ಈ ಯೋಜನೆಯಡಿಯಲ್ಲಿ ಸಾಲ ನೀಡುವ ಗರಿಷ್ಠ ಮೊತ್ತ ರೂ. 1 ಲಕ್ಷವಾಗಿರುತ್ತದೆ. ಆದರೆ ನಿಮ್ಮ ಕುಟುಂಬದ ಆದಾಯವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಮತ್ತು ಎಸ್ಸಿ/ ಎಸ್ಟಿ ಮಹಿಳೆಯರಿಗೆ ವಾರ್ಷಿಕ 45,000 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.

6. ಸೆಂಟ್ ಕಲ್ಯಾಣಿ ಯೋಜನೆ

6. ಸೆಂಟ್ ಕಲ್ಯಾಣಿ ಯೋಜನೆ

ಹೊಸ ವ್ಯವಹಾರವನ್ನು ಅಥವಾ ಇರುವ ವ್ಯವಹಾರವನ್ನು ನವೀಕರಿಸಿ ವಿಸ್ತರಿಸುವ ಇಚ್ಚೆಯನ್ನು ಹೊಂದಿರುವ ಮಹಿಳಾ ಉದ್ಯಮಿಗಳನ್ನು ಬೆಂಬಲಿಸುವ ಹಿನ್ನಲೆಯಲ್ಲಿ ಈ ಯೋಜನೆಯನ್ನು ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯಾ ಜಾರಿಗೊಳಿಸಿದೆ. ಗ್ರಾಮ ಮತ್ತು ಕಾಟೇಜ್ ಉದ್ಯಮಗಳು, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮಗಳು, ಸ್ವಯಂ ಉದ್ಯೋಗಿಗಳು, ಕೃಷಿ ಮತ್ತು ಮೈತ್ರಿ ಚಟುವಟಿಕೆಗಳು, ರಿಟೆಲ್ ವ್ಯಾಪಾರ ಮತ್ತು ಸರ್ಕಾರಿ-ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ತೊಡಗಿರುವ ಮಹಿಳೆಯರು ಈ ಸಾಲವನ್ನು ಪಡೆಯಬಹುದು.

ಈ ಯೋಜನೆಗೆ ಮೇಲಾಧಾರ ಭದ್ರತೆ ಅಥವಾ ಖಾತರಿ ಅಗತ್ಯವಿಲ್ಲ ಮತ್ತು ಪ್ರಕ್ರಿಯೆ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಯೋಜನೆಯಡಿಯಲ್ಲಿ ಗರಿಷ್ಠ ರೂ. 100 ಲಕ್ಷ ಮೊತ್ತ ಪಡೆಯಹುದಾಗಿದೆ.

7. ಮಹಿಳಾ ಉದ್ಯಮ ನಿಧಿ ಯೋಜನೆ

7. ಮಹಿಳಾ ಉದ್ಯಮ ನಿಧಿ ಯೋಜನೆ

ಈ ಯೋಜನೆಯನ್ನು ಪಂಜಾಬ್ ನ್ಯಾಶನಲ್ ಬ್ಯಾಂಕ್ ಪ್ರಾರಂಭಿಸಿದ್ದು, ಸಣ್ಣ ಪ್ರಮಾಣದ ಉದ್ಯಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮಹಿಳಾ ಉದ್ಯಮಿಗಳಿಗೆ ನೆರವು ನೀಡುವ ಉದ್ದೇಶ ಈ ಯೋಜನೆಯದ್ದಾಗಿದೆ. ಇದರಲ್ಲಿ ಅವರಿಗೆ ಅನುಕೂಲವಾಗುವಂತಹ ಹತ್ತು ವರ್ಷಗಳ ಅವಧಿಯಲ್ಲಿ ಮರುಪಾವತಿ ಮಾಡಬಹುದಾದ ಮೃದು ಸಾಲ ನೀಡುವ ಮೂಲಕ ಮಹಿಳಾ ಉದ್ಯಮಿಗಳನ್ನು ಬೆಂಬಲಿಸಲಾಗುತ್ತದೆ.

8. ಮಹಿಳೆಯರಿಗಾಗಿ ಮುದ್ರಾ ಯೋಜನೆ

8. ಮಹಿಳೆಯರಿಗಾಗಿ ಮುದ್ರಾ ಯೋಜನೆ

ಈ ಯೋಜನೆ ಭಾರತ ಸರ್ಕಾರದಿಂದ ಪ್ರಾರಂಭಿಸಲ್ಪಟ್ಟಿದೆ. ಸಣ್ಣ ಹೊಸ ಉದ್ಯಮಗಳು ಮತ್ತು ಬ್ಯೂಟಿ ಪಾರ್ಲರ್, ಟೈಲರಿಂಗ್ ಘಟಕಗಳು, ಬೋಧನಾ ಕೇಂದ್ರಗಳು ಇತ್ಯಾದಿಗಳನ್ನು ಪ್ರಾರಂಭಿಸಲು ಬಯಸುತ್ತಿರುವ ಪ್ರತ್ಯೇಕ ಮಹಿಳೆಯರಿಗೆ ಮತ್ತು ಒಟ್ಟಿಗೆ ಉದ್ಯಮವನ್ನು ಪ್ರಾರಂಭಿಸಲು ಬಯಸುವ ಮಹಿಳೆಯರ ಗುಂಪುಗಳಿಗೆ ಈ ಸಾಲವನ್ನು ನೀಡಲಾಗುತ್ತದೆ. ಈ ಸಾಲಕ್ಕೆ ಮೇಲಾದಾರದ ಭದ್ರತೆಯ ಅವಶ್ಯಕತೆ ಇರುವುದಿಲ್ಲ. ಕೆಳಗಿನ ಮೂರು ಯೋಜನೆಗಳಡಿಯಲ್ಲಿ ಸಾಲ ನೀಡಲಾಗುತ್ತದೆ.

i. ಶಿಶು
ಈ ಯೋಜನೆಯಡಿಯಲ್ಲಿ ಸಾಲದ ಮೊತ್ತವನ್ನು 50,000 ರೂಪಾಯಿಗಳಿಗೆ ಸೀಮಿತಗೊಳಿಸಲಾಗಿದೆ. ವ್ಯವಹಾರ ಪ್ರಾರಂಭಿಸಿದ ಆರಂಭಿಕ ಹಂತಗಳಲ್ಲಿ ಇರುವವರು ಈ ಸಾಲವನ್ನು ಪಡೆಯಬಹುದು.

ii. ಕಿಶೋರ್
ಈ ಯೋಜನೆಯಡಿಯಲ್ಲಿ ಸಾಲದ ಮೊತ್ತವು 50,000 ರೂಪಾಯಿಗಳಿಂದ 5 ಲಕ್ಷಗಳ ವರೆಗೆ ಇರುತ್ತದೆ. ಇದನ್ನು ಸುಸ್ಥಾಪಿತ ಉದ್ಯಮ ಹೊಂದಿರುವವರಿಗೆ ನೀಡಲಾಗುತ್ತದೆ.

iii. ತರುಣ್
ಈ ಯೋಜನೆಯಲ್ಲಿ 10 ಲಕ್ಷಗಳಷ್ಟು ಸಾಲ ನೀಡಲಾಗುತ್ತದೆ. ಇದನ್ನು ಸುಸ್ಥಾಪಿತ ಉದ್ಯಮವನ್ನು ಹೊಂದಿರುವ ಮತ್ತು ಇದನ್ನು ಇನ್ನೂ ವಿಸ್ತಾರ ಮಾಡ ಬಯಸುವ ಮಹಿಳಾ ಉದ್ಯಮಿಗಳಿಗೆ ನೀಡಲಾಗುತ್ತದೆ.
ಸಾಲ ನೀಡಿದ ನಂತರ, ಕ್ರೆಡಿಟ್ ಕಾರ್ಡ್ ರೀತಿಯಲ್ಲಿಯೇ ಕಾರ್ಯ ನಿರ್ವಹಿಸುವ ಮುದ್ರಾ ಕಾರ್ಡ್ ನಿಮಗೆ ನೀಡಲಾಗುವುದು.

 

9. ಓರಿಯಂಟ್ ಮಹಿಳಾ ವಿಕಾಸ್ ಯೋಜನೆ

9. ಓರಿಯಂಟ್ ಮಹಿಳಾ ವಿಕಾಸ್ ಯೋಜನೆ

ಈ ಯೋಜನೆಯನ್ನು ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ನಿಂದ ನೀಡಲಾಗಿದ್ದು, ಈ ಯೋಜನೆಯ 51% ಪಾಲು ಬಂಡವಾಳವನ್ನು ವೈಯಕ್ತಿಕ ಅಥವಾ ಜಂಟಿ ಸ್ವಾಮ್ಯದ ಸಂಸ್ಥೆಯನ್ನು ಹೊಂದಿರುವ ಮಹಿಳೆಯರಿಗೆ ನೀಡಲಾಗುತ್ತದೆ. ಈ ಯೋಜನೆಯಡಿಯಲ್ಲಿ ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಹೊಂದಿರುವ ಸಂದರ್ಭದಲ್ಲಿ 10 ರೂಪಾಯಿಗಳಿಂದ 25 ಲಕ್ಷ ರೂಪಾಯಿಗಳವರೆಗೆ ಸಾಲ ನೀಡಲಾಗುತ್ತದೆ. ಈ ಸಾಲಕ್ಕೆ ಮೇಲಾಧಾರ ಭದ್ರತೆಯ ಅವಶ್ಯಕತೆ ಇರುವುದಿಲ್ಲ. ಮರುಪಾವತಿಯ ಅವಧಿಯು 7 ವರ್ಷಗಳು ಆಗಿದ್ದು,ಶೇ. 2 ವರೆಗೆ ಬಡ್ಡಿದರದ ಮೇಲೆ ರಿಯಾಯಿತಿ ನೀಡಲಾಗುತ್ತದೆ.

Read more about: business start up
English summary

9 Schemes For Women Entrepreneurs In India

Women Entrepreneurs can be seen everywhere in the startup-up ecosystem of India. Women too are seen leaving their high-profile jobs as well as some stepping out of the four walls of their homes and joining the pool of Entrepreneurship in India.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X