ಸುರಕ್ಷತೆ ಹಾಗೂ ಆದಾಯ ಖಾತರಿಯೊಂದಿಗೆ ಇವು ತೆರಿಗೆ ವಿನಾಯಿತಿ ಸೌಲಭ್ಯಗಳನ್ನು ಕೂಡ ಹೊಂದಿರುವುದು ಪ್ಲಸ್ ಪಾಯಿಂಟ್ ಆಗಿದೆ.
ಇಪಿಎಫ್ (ಕಾರ್ಮಿಕ ಭವಿಷ್ಯ ನಿಧಿ) ಹಾಗೂ ಪಿಪಿಎಫ್ (ಸಾರ್ವಜನಿಕ ಭವಿಷ್ಯ ನಿಧಿ) ಇವು ನಿವೃತ್ತಿಯ ನಂತರದ ಜೀವನೋಪಾಯಕ್ಕಾಗಿ ನಿಧಿ ಸಂಗ್ರಹಿಸುವ ಎರಡು ಪ್ರಮುಖ ಯೋಜನೆಗಳಾಗಿವೆ. ದೀರ್ಘಾವಧಿಯಲ್ಲಿ ಕಂತುಗಳ ರೂಪದಲ್ಲಿ ಹಣ ಉಳಿಸುವ ಮೂಲಕ ದೊಡ್ಡ ಮೊತ್ತದ ನಿವೃತ್ತಿ ನಿಧಿ ಕೂಡಿಸುವುದು ಇವುಗಳ ವೈಶಿಷ್ಟ್ಯವಾಗಿದೆ. ಸುರಕ್ಷತೆ ಹಾಗೂ ಆದಾಯದ ಖಾತರಿಗಳ ಕಾರಣದಿಂದ ಇವೆರಡು ನಿವೃತ್ತಿ ಫಂಡ್ ಯೋಜನೆಗಳು ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿವೆ.
ಸುರಕ್ಷತೆ ಹಾಗೂ ಆದಾಯ ಖಾತರಿಯೊಂದಿಗೆ ಇವು ತೆರಿಗೆ ವಿನಾಯಿತಿ ಸೌಲಭ್ಯಗಳನ್ನು ಕೂಡ ಹೊಂದಿರುವುದು ಪ್ಲಸ್ ಪಾಯಿಂಟ್ ಆಗಿದೆ. ಈ ಎರಡು ಯೋಜನೆಗಳ ಪೈಕಿ ಯಾವುದಾದರೂ ಯೋಜನೆಯಲ್ಲಿ ಹೂಡಿಕೆ ಮಾಡುವ ಮುನ್ನ ಎರಡರ ಮಧ್ಯದ ಪ್ರಮುಖ ವ್ಯತ್ಯಾಸಗಳೇನು ಎಂಬುದನ್ನು ತಿಳಿದುಕೊಳ್ಳಬೇಕು.
ಇಪಿಎಫ್ ಹಾಗೂ ಪಿಪಿಎಫ್ ನಡುವಿನ ಮುಖ್ಯ ವ್ಯತ್ಯಾಸಗಳು ಹೀಗಿವೆ:
1. ಅರ್ಹತೆಗಳು
ಇಪಿಎಫ್ ಇದು ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಷನ್ (ಇಪಿಎಫ್‌ಓ)ನ ನಿಯಂತ್ರಣಕ್ಕೊಳಪಟ್ಟಿದ್ದು ಮಾಸಿಕ ಸಂಬಳ ಪಡೆಯುವ ಉದ್ಯೋಗಿಗಳು ಮಾತ್ರ ಈ ಯೋಜನೆಯ ಸದಸ್ಯರಾಗಬಹುದು. 20ಕ್ಕೂ ಹೆಚ್ಚು ನೌಕರರು ಇರುವ ಕಂಪನಿಗಳ ಉದ್ಯೋಗಿಗಳು ಅಥವಾ ನಿಗದಿತ ಮಿತಿಗಿಂತಲೂ ಹೆಚ್ಚು ಸಂಬಳ ಪಡೆಯುವ ಉದ್ಯೋಗಿಗಳು ಇಪಿಎಫ್ ಮಾಡಿಸುವುದು ಕಡ್ಡಾಯವಾಗಿದೆ.
ಪಿಪಿಎಫ್ ಅನ್ನು ಬ್ಯಾಂಕ್ ಹಾಗೂ ಅಂಚೆ ಕಚೇರಿ ಶಾಖೆಗಳು ನಿರ್ವಹಣೆ ಮಾಡುತ್ತಿದ್ದು, ಸಂಬಳ ಪಡೆಯುವ ನೌಕರಿ ಮಾಡದೆ ಇರುವವರು ಸಹ ಇದರ ಸದಸ್ಯರಾಗಬಹುದು.
2. ವಂತಿಗೆಯ ನಿಬಂಧನೆಗಳು
ಇಪಿಎಫ್‌ಓ ನಿಯಮಾವಳಿಗಳ ಅಡಿ ಬರುವ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಇಪಿಎಫ್ ಸದಸ್ಯರಾಗಿ ಮಾಸಿಕ ವಂತಿಗೆ ಪಾವತಿಸುವುದು ಕಡ್ಡಾಯವಾಗಿದೆ. ಬೇಸಿಕ್ ಸ್ಯಾಲರಿ ಹಾಗೂ ಡಿಎ ಇವೆರಡನ್ನೂ ಸೇರಿಸಿ ಬರುವ ಮೊತ್ತದ ಶೇ.12 ರಷ್ಟು ಮೊತ್ತವನ್ನು ಇಪಿಎಫ್ ವಂತಿಗೆ ಸಲ್ಲಿಸಬೇಕು. ಉದ್ಯೋಗಿಯ ಇಪಿಎಫ್ ಖಾತೆಗೆ ಇಷ್ಟೇ ಮೊತ್ತದ ವಂತಿಗೆಯನ್ನು ಕೆಲಸ ಮಾಡುತ್ತಿರುವ ಕಂಪನಿ ಪಾವತಿಸುತ್ತದೆ.
ಒಂದು ವೇಳೆ ಉದ್ಯೋಗಿಯು ತನ್ನ ವಂತಿಗೆ ಪ್ರಮಾಣವನ್ನು ಹೆಚ್ಚಿಸಿ ಬೇಗ ನಿವೃತ್ತಿ ಪಡೆಯಲು ಇಚ್ಛಿಸಿದಲ್ಲಿ ವಿಪಿಎಫ್ (ಸ್ವಯಂ ನಿವೃತ್ತಿ ಯೋಜನೆ) ಗೆ ಒಳಪಡಬಹುದು. ಇಪಿಎಫ್ ವಂತಿಗೆ ಹೆಚ್ಚಿಸುವಂತೆ ಮಾಲೀಕರಿಗೆ ಅರ್ಜಿ ಸಲ್ಲಿಸಬಹುದು. ಆದರೆ ನೀವು ನಿಮ್ಮ ವಂತಿಗೆ ಹೆಚ್ಚಿಸಿದ ಮಾತ್ರಕ್ಕೆ ಉದ್ಯೋಗದಾತ ಸಂಸ್ಥೆಯು ತನ್ನ ವಂತಿಗೆ ಹೆಚ್ಚಿಸಬೇಕೆಂಬ ಯಾವುದೇ ಕಾನೂನು ಇಲ್ಲ ಎಂಬುದು ಗೊತ್ತಿರಲಿ.
ಪಿಪಿಎಫ್ ಇದೊಂದು ಸ್ವ ಇಚ್ಛೆಯಿಂದ ಪಡೆದುಕೊಳ್ಳುವ ನಿವೃತ್ತಿ ಹೂಡಿಕೆ ಯೋಜನೆಯಾಗಿದೆ. ಈ ಯೋಜನೆಯಲ್ಲಿ ವಾರ್ಷಿಕ ಕನಿಷ್ಠ ರೂ. 500 ಹಾಗೂ ಗರಿಷ್ಠ ರೂ. 1.5 ಲಕ್ಷ ಹೂಡಿಕೆ ಮಾಡಬಹುದು. ಏಕಗಂಟಿನಲ್ಲಿ ಅಥವಾ ಕಂತುಗಳಲ್ಲಿ ವಂತಿಗೆ ಪಾವತಿಸಬಹುದು.
3. ಬಡ್ಡಿ ದರ
ಪ್ರತಿವರ್ಷ ಇಪಿಎಫ್‌ಓ ಇಪಿಎಫ್ ಬಡ್ಡಿ ದರಗಳನ್ನು ಪ್ರಕಟಿಸುತ್ತದೆ. 2017-18ನೇ ಸಾಲಿಗಾಗಿ ಇದನ್ನು ಶೇ.8.55 ಎಂದು ಘೋಷಿಸಲಾಗಿದೆ.
ಆದರೆ ಪಿಪಿಎಫ್ ಯೋಜನೆಯು ಸರಕಾರದ ಹತ್ತು ವರ್ಷಗಳ ಬಾಂಡ್ ಯೋಜನೆಯ ಆದಾಯವನ್ನು ಆಧರಿಸಿದೆ. ಕೇಂದ್ರ ಸರಕಾರ ಪ್ರತಿ ತ್ರೈಮಾಸಿಕಕ್ಕೊಮ್ಮೆ ಪಿಪಿಎಫ್ ಬಡ್ಡಿ ದರಗಳನ್ನು ಪರಿಷ್ಕರಿಸುತ್ತದೆ. 2018-19 ರ ಕಳೆದ ತ್ರೈಮಾಸಿಕಕ್ಕಾಗಿ ಶೇ.8 ರಷ್ಟು ಬಡ್ಡಿದರ ನಿಗದಿಪಡಿಸಲಾಗಿದೆ.
4. ತೆರಿಗೆ ವಿನಾಯಿತಿ ಸೌಲಭ್ಯಗಳು
ಇಪಿಎಫ್ ಖಾತೆಯ ಮ್ಯಾಚುರಿಟಿ ಸಂದರ್ಭದಲ್ಲಿ ಸಿಗುವ ಮ್ಯಾಚುರಿಟಿ ಮೊತ್ತವು ಸಂಪೂರ್ಣ ತೆರಿಗೆ ವಿನಾಯಿತಿಗೆ ಒಳಪಟ್ಟಿದೆ. ಆದರೆ ಮ್ಯಾಚುರಿಟಿಗೂ ಹಿಂದಿನ 5 ವರ್ಷಗಳ ಕಾಲ ಸತತವಾಗಿ ಸೇವಾವಧಿ ಹೊಂದಿದ್ದರೆ ಮಾತ್ರ ಈ ಸೌಲಭ್ಯ ಪಡೆಯಬಹುದು. ಒಂದೊಮ್ಮೆ ಈ ಅವಧಿಯಲ್ಲಿ ನೀವು ಕೆಲಸ ಬದಲಾಯಿಸಿದಲ್ಲಿ ಹೊಸ ಉದ್ಯೋಗದಾತ ಸಂಸ್ಥೆಗೆ ಇಪಿಎಫ್ ಖಾತೆಯನ್ನು ವರ್ಗಾಯಿಸುವ ಮೂಲಕ ತೆರಿಗೆ ಪಾವತಿಸುವುದರಿಂದ ಪಾರಾಗಬಹುದು. ಹಾಗೆಯೇ ಯಾವುದೇ ಅವಧಿಯಲ್ಲಿ ನಿರುದ್ಯೋಗಿಯಾಗಿದ್ದಲ್ಲಿ ಆ ಅವಧಿಗೆ ತೆರಿಗೆ ಪಾವತಿಸುವುದು ಕಡ್ಡಾಯ.
ಆದರೆ ಪಿಪಿಎಫ್‌ನಲ್ಲಿ ಈ ನಿಯಮಗಳು ಬೇರೆಯಾಗಿವೆ. ಪಿಪಿಎಫ್ ಮೂರು ಹಂತದ ತೆರಿಗೆ ವಿನಾಯಿತಿ ಸೌಲಭ್ಯ ಹೊಂದಿದ್ದು, ಎಲ್ಲ ವಂತಿಗೆ, ಹೂಡಿಕೆ ಮೊತ್ತ, ಸಂಗ್ರಹವಾದ ಮೊತ್ತ ಹಾಗೂ ಮ್ಯಾಚುರಿಟಿ ಮೊತ್ತಗಳು ತೆರಿಗೆ ವಿನಾಯಿತಿಗೆ ಒಳಪಟ್ಟಿವೆ.
5. ಲಾಕ್ ಇನ್ ಅವಧಿ
ತೆರಿಗೆ ವಿನಾಯಿತಿಯ ಲಾಭ ಪಡೆಯುವಂತಾಗಲು ಇಪಿಎಫ್ ಖಾತೆಗಳಿಗೆ 5 ವರ್ಷಗಳ ಲಾಕ್ ಇನ್ ಅವಧಿ ವಿಧಿಸಲಾಗಿದೆ. ಪ್ರತಿ ಬಾರಿ ಕೆಲಸ ಬದಲಾಯಿಸಿದಾಗ ಅದೇ ಖಾತೆಯನ್ನು ಹೊಸ ಕಂಪನಿಯೊಂದಿಗೆ ಮುಂದುವರಿಸಬಹುದು. 55 ವರ್ಷ ವಯಸ್ಸಿನ ನಂತರ ಅಥವಾ ನಿವೃತ್ತಿಯ ನಂತರ ಇಪಿಎಫ್ ಖಾತೆಯಲ್ಲಿನ ಮೊತ್ತವನ್ನು ಹಿಂಪಡೆಯಬಹುದು. ಪಿಪಿಎಫ್ ಖಾತೆಯು 15 ವರ್ಷಗಳ ಲಾಕ್ ಇನ್ ಅವಧಿ ಹೊಂದಿದ್ದು, ಖಾತೆ ಆರಂಭಿಸಿದ 15 ವರ್ಷಗಳ ಬಳಿಕವಷ್ಟೆ ಹಣ ಹಿಂಪಡೆಯಬಹುದು.
6. ಅವಧಿಪೂರ್ವ ಹಿಂಪಡೆಯುವಿಕೆ
೫ ವರ್ಷಗಳ ಕಾಲ ಸತತವಾಗಿ ಸೇವಾವಧಿಯನ್ನು ಪೂರೈಸಿದ್ದಲ್ಲಿ ನೀವು ತೆರಿಗೆ ಮುಕ್ತವಾಗಿ ಇಪಿಎಫ್‌ನಲ್ಲಿನ ಮೊತ್ತವನ್ನು ಹಿಂಪಡೆಯಬಹುದು. ಒಂದೊಮ್ಮೆ 5 ವರ್ಷಗಳ ಸೇವಾವಧಿ ಪೂರೈಸಿರದಿದ್ದಲ್ಲಿ ಶೇ.30 ರಷ್ಟು ಮೊತ್ತವನ್ನು ಟಿಡಿಎಸ್ (ಪ್ಯಾನ್ ನಂಬರ್ ಇಲ್ಲದಿದ್ದಲ್ಲಿ) ಕಡಿತ ಮಾಡಲಾಗುವುದು. ಹಾಗೆಯೇ ಪ್ಯಾನ್ ನಂಬರ್ ಅನ್ನು ಈಗಾಗಲೇ ಇಪಿಎಫ್‌ಓ ಗೆ ನೀಡಿದ್ದರೆ ಶೇ.10 ರಷ್ಟು ಟಿಡಿಎಸ್ ಪಾವತಿಸಬೇಕಾಗುವುದು. ಮಕ್ಕಳ ಮದುವೆ, ಗೃಹಸಾಲ ಮರುಪಾವತಿ, ಗಂಭೀರ ಕಾಯಿಲೆಯ ಚಿಕಿತ್ಸೆ ಹೀಗೆ ಕೆಲವೇ ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಇಪಿಎಫ್ ಮೊತ್ತವನ್ನು ಅವಧಿಪೂರ್ವವಾಗಿ ಹಿಂಪಡೆಯಬಹುದು ಎಂಬುದು ಗಮನದಲ್ಲಿರಲಿ.
ಕೆಲ ನಿರ್ದಿಷ್ಟ ನಿಯಮಗಳನ್ನು ನೋಡುವುದಾದರೆ, ಇಪಿಎಫ್ ಖಾತೆ ಆರಂಭಿಸಿದ 7 ವರ್ಷಗಳ ನಂತರ ಮಾತ್ರ ಮಕ್ಕಳ ಮದುವೆಗಾಗಿ ಅವಧಿಪೂರ್ವ ಹಣ ಹಿಂಪಡೆಯಲು ಅರ್ಜಿ ಸಲ್ಲಿಸಬಹುದು. ಇತ್ತೀಚಿನ ಹೊಸ ನಿಯಮಾವಳಿಯ ಪ್ರಕಾರ ಕನಿಷ್ಠ ಒಂದು ತಿಂಗಳವರೆಗೆ ನೀವು ನಿರುದ್ಯೋಗಿಯಾಗಿದ್ದಲ್ಲಿ ಇಪಿಎಫ್‌ನ ಶೇ.75 ರಷ್ಟು ಮೊತ್ತವನ್ನು ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ನೀವು ಮತ್ತೊಂದು ಕೆಲಸಕ್ಕೆ ಸೇರುವವರೆಗೆ ನಿಮ್ಮ ಖಾತೆಯು ಇಪಿಎಫ್‌ಓ ನಲ್ಲಿ ಚಾಲ್ತಿಯಲ್ಲಿರುತ್ತದೆ. ಹಾಗೆಯೇ ಮತ್ತೂ ಎರಡು ತಿಂಗಳವರೆಗೆ ನಿರುದ್ಯೋಗಿಯಾಗಿ ಮುಂದುವರೆದಲ್ಲಿ ಇನ್ನುಳಿದ ಹಣವನ್ನು ಸಹ ಹಿಂಪಡೆಯಬಹುದಾಗಿದೆ.
ಕೊನೆ ಮಾತು
ಏಳನೇ ವರ್ಷದ ಆರಂಭದಿಂದ ಪಿಪಿಎಫ್ ಖಾತೆಯಿಂದ ಭಾಗಶಃ ಮೊತ್ತವನ್ನು ಹಿಂಪಡೆಯಲು ಕೆಲ ಷರತ್ತುಗಳನ್ನು ಪಾಲಿಸಬೇಕಾಗುತ್ತದೆ. ನಾಲ್ಕನೇ ವರ್ಷದ ಕೊನೆಯಲ್ಲಿ ಖಾತೆಯಲ್ಲಿ ಇರುವ ಒಟ್ಟು ಮೊತ್ತದ ಶೇ.50 ರಷ್ಟು ಅಥವಾ ಮೊತ್ತ ಹಿಂಪಡೆಯಲು ಬಯಸಿರುವ ವರ್ಷದ ಕೊನೆಯಲ್ಲಿ ಖಾತೆಯಲ್ಲಿ ಇರುವ ಮೊತ್ತದ ಶೇ.50 ರಷ್ಟು ಹಣ ಇದರಲ್ಲಿ ಯಾವುದೋ ಕಡಿಮೆಯೋ ಅಷ್ಟನ್ನು ಹಿಂಪಡೆಯಲು ಅವಕಾಶವಿದೆ. ವರ್ಷಕ್ಕೊಮ್ಮೆ ಈ ರೀತಿ ಹಣ ಹಿಂಪಡೆಯುವ ಅವಕಾಶವಿದ್ದು ಹೀಗೆ ಹಿಂಪಡೆಯಲಾಗುವ ಮೊತ್ತಕ್ಕೆ ನಿಯಮಾವಳಿಗಳಂತೆ ತೆರಿಗೆ ವಿನಾಯಿತಿ ಸೌಲಭ್ಯ ಅನ್ವಯಿಸುತ್ತದೆ. ಇಪಿಎಫ್ (EPF) ಬಗ್ಗೆ ತಪ್ಪದೇ ತಿಳಿದುಕೊಳ್ಳಲೇಬೇಕಾದ 10 ಸಂಗತಿಗಳು
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications