For Quick Alerts
ALLOW NOTIFICATIONS  
For Daily Alerts

ಕನಸಿನ ಮನೆ ಖರೀದಿಸಬೇಕೆ? 35ನೇ ವಯಸ್ಸಿಗೆ 50 ಲಕ್ಷದ ಮನೆಯ ಮಾಲೀಕರಾಗಲು ಏನು ಮಾಡಬೇಕು?

ಅಂದದ ಚೆಂದದ ಕನಸಿನರಮನೆ ಹೊಂದುವುದು ಪ್ರತಿಯೊಬ್ಬರ ಸುಂದರ ಕನಸಾಗಿರುತ್ತದೆ. 'ಮನೆ ಕಟ್ಟಿ ನೋಡು ಒಮ್ಮೆ ಮದುವೆ ಮಾಡಿ ನೋಡು' ಎಂದು ಹಿರಿಯರು ಹೇಳಿದ್ದಾರೆ.

|

ಅಂದದ ಚೆಂದದ ಕನಸಿನರಮನೆ ಹೊಂದುವುದು ಪ್ರತಿಯೊಬ್ಬರ ಸುಂದರ ಕನಸಾಗಿರುತ್ತದೆ. 'ಮನೆ ಕಟ್ಟಿ ನೋಡು ಒಮ್ಮೆ ಮದುವೆ ಮಾಡಿ ನೋಡು' ಎಂದು ಹಿರಿಯರು ಹೇಳಿದ್ದಾರೆ. ಸ್ವಂತದ ಮನೆ ಕಟ್ಟಿಸಿಕೊಳ್ಳಲು ಜನ ಎಷ್ಟೊಂದು ಪರದಾಡುತ್ತಾರೆ, ಹಣ ಹೊಂದಿಸಲು ಎಷ್ಟೊಂದು ಕಷ್ಟ ಪಡುತ್ತಾರೆ ಎಂಬುದನ್ನು ನಾವು ನೋಡಿದ್ದೇವೆ.
ಇದಕ್ಕಾಗಿ ಸರ್ಕಾರಗಳು ಕೂಡ ಜನರಿಗೆ ಮನೆ ಸೌಲಭ್ಯ ಒದಗಿಸಲು ಹಲವಾರು ಯೋಜನೆಗಳನ್ನು ಪರಿಚಯಿಸಿದೆ. ಆದರೂ ತಮ್ಮ ಕನಸಿನ ಮನೆ ಹೊಂದುವುದು ದೊಡ್ಡ ಸವಾಲಾಗಿ ಉಳಿದಿದೆ. ದೇಶದಲ್ಲಿ ಇಲ್ಲಿಯವರೆಗೂ ಲಕ್ಷಾಂತರ ಜನರಿಗೆ ಸ್ವಂತದ ಸೂರು ಕೂಡ ಇಲ್ಲ.

ವಸತಿ ಸೌಕರ್ಯಗಳ ವೆಚ್ಚ ಏರಿಕೆ

ವಸತಿ ಸೌಕರ್ಯಗಳ ವೆಚ್ಚ ಏರಿಕೆ

ನಿಮಗೆ ಗೊತ್ತಿರುವ ಹಾಗೇ ದೇಶದ ಪ್ರಮುಖ ನಗರಗಳಲ್ಲಿ ವಸತಿ ಸೌಕರ್ಯಗಳ ವೆಚ್ಚ ಹೆಚ್ಚಾಗುತ್ತಿದೆ. ಹೆಚ್ಚು ಯುವಜನರು ತಮ್ಮ ಮನೆಗಳನ್ನು ಬಿಟ್ಟು ಉತ್ತಮ ಅವಕಾಶಗಳನ್ನು ಹುಡುಕುತ್ತಾ ನಗರಗಳಿಗೆ ವಲಸೆ ಹೋಗುತ್ತಿರುವುದರಿಂದ ವಸತಿ ಬೇಡಿಕೆ ಕೂಡ ಹೆಚ್ಚುತ್ತಿದೆ. ಬೆಂಗಳೂರು, ದೆಹಲಿ ಮತ್ತು ಮುಂಬೈ ಮುಂತಾದ ನಗರಗಳಲ್ಲಿ ಬಾಡಿಗೆ ಮನೆಗಳಿಗೆ ಖರ್ಚು ಮಾಡುವ ಅಂಕಿಅಂಶ ಗಮನಿಸಿದರೆ ಅದೇ ಹಣದಲ್ಲಿ ಸ್ವಂತ ಮನೆ ಹೊಂದಬಹುದು!

35ಕ್ಕೆ 50 ಲಕ್ಷದ ಕನಸಿನ ಮನೆ

35ಕ್ಕೆ 50 ಲಕ್ಷದ ಕನಸಿನ ಮನೆ

ಅಂಕಿಅಂಶಗಳ ಪ್ರಕಾರ ಬೆಂಗಳೂರು, ದೆಹಲಿ ಮತ್ತು ಮುಂಬೈ ಪ್ರಮುಖ ನಗರಗಳಲ್ಲಿ ಯೋಗ್ಯ ಫ್ಲಾಟ್ ಅಥವಾ ಮನೆ ಖರೀದಿಸಲು ಕೋಟಿ ಲೆಕ್ಕದಲ್ಲಿ ಖರ್ಚಾಗುತ್ತದೆ. ಅದಕ್ಕಾಗಿ ಸರಿಯಾದ ಯೋಜನೆಯೊಂದಿಗೆ ಹುಡುಕಾಟ ನಡೆಸಿದರೆ ಅದಕ್ಕಿಂತಲೂ ಕಡಿಮೆ ಬೆಲೆಗೆ ಮನೆ ಹೊಂದಬಹುದು ಎಂಬುದನ್ನು ಮರೆಯಬಾರದು. ನೀವು ಸರಿಯಾದ ಸಮಯದಲ್ಲಿ ಯೋಜನೆ ಪ್ರಾರಂಭಿಸಿದರೆ ನಿಮಗೆ ಕೇವಲ 35 ವರ್ಷ ವಯಸ್ಸು ಆಗುವುದರೊಳಗೆ ರೂ. 50 ಲಕ್ಷದ ಕನಸಿನ ಮನೆ ಹೊಂದಬಹುದು.

ಹೂಡಿಕೆ ಮಂತ್ರ
 

ಹೂಡಿಕೆ ಮಂತ್ರ

ಈ ಗುರಿಯನ್ನು ಸಾಧಿಸಲು ನಿಮ್ಮ ಮುಂದಿರುವ ಏಕೈಕ ಮಂತ್ರ ಹೂಡಿಕೆ. ನಮ್ಮಲ್ಲಿ ಹೆಚ್ಚಿನ ಜನರು ಹಣ ಉಳಿತಾಯ ಮಾಡುವ ಮೂಲಕ ಅಗತ್ಯ ಕಾರ್ಪಸ್ ನಿರ್ಮಿಸಲು ಪ್ರಯತ್ನಿಸುತ್ತಾರೆ. ಹಣದುಬ್ಬರಕ್ಕೆ ವಿರುದ್ದವಾಗಿ ಹಣ ಸಾಕಷ್ಟು ವೇಗವಾಗಿ ಬೆಳೆಯುವುದಿಲ್ಲ. ಮತ್ತೊಂದೆಡೆ ಹೂಡಿಕೆ ಹಣವನ್ನು ಉಳಿತಾಯ ಮಾಡುವ ಮೂಲಕ ಹಣದುಬ್ಬರ ತಡೆಯಲು ಸಹಾಯಮಾಡುತ್ತದೆ.

ಮ್ಯೂಚುವಲ್ ಫಂಡ್ ಉತ್ತಮ ಆಯ್ಕೆ

ಮ್ಯೂಚುವಲ್ ಫಂಡ್ ಉತ್ತಮ ಆಯ್ಕೆ

ಇಂತಹ ಸಂದರ್ಭಗಳಲ್ಲಿ, ನೀವು ದೀರ್ಘ ಹಾರಿಜಾನ್ ಹೊಂದುವುದರಿಂದ ಮ್ಯೂಚುವಲ್ ಫಂಡ್ ಹೂಡಿಕೆ ಉತ್ತಮ ಆಯ್ಕೆಯಾಗಿದೆ ಎಂದು FundsIndia.com ನ ಸಹಸಂಸ್ಥಾಪಕ ಶ್ರೀಕಾಂತ್ ಮೀನಾಕ್ಷಿ ಹೇಳುತ್ತಾರೆ.
10 ವರ್ಷಗಳಲ್ಲಿ ರೂ. 50 ಲಕ್ಷ ಮೊತ್ತ ಹೊಂದಿಸಲು ಹೂಡಿಕೆದಾರರು ಈ ಅವಧಿಯಲ್ಲಿ ತಿಂಗಳಿಗೆ ರೂ. 23,000 ಹೂಡಿಕೆ ಮಾಡಬೇಕು. ಸರಾಸರಿ ವಾರ್ಷಿಕ ಆದಾಯವು ಶೇ. 12 ರಷ್ಟಿದ್ದರೆ, ಹೂಡಿಕೆದಾರರು ಸುಲಭವಾಗಿ ಅಗತ್ಯವಿರುವ ಮೊತ್ತವನ್ನು ಉಳಿಸಿಕೊಳ್ಳುತ್ತಾರೆ ಎಂದಿದ್ದಾರೆ.

ತಿಂಗಳಿಗೆ 23,000 ಹೂಡಿಕೆ

ತಿಂಗಳಿಗೆ 23,000 ಹೂಡಿಕೆ

ಪ್ರಾರಂಭದಿಂದ ಶೇ. 12ರಷ್ಟು ಆಕ್ರಮಣಕಾರಿ ವಾರ್ಷಿಕ ಆದಾಯ ಪರಿಗಣಿಸಿ, ಹೂಡಿಕೆದಾರರು ಪ್ರತಿ ತಿಂಗಳು 23,000 ರೂಪಾಯಿಗಳನ್ನು ಉಳಿಸಲು ಮತ್ತು ಹೂಡಿಕೆ ಮಾಡಬೇಕಾಗುತ್ತದೆ ಎಂದು ಮೀನಾಕ್ಷಿ ತಿಳಿಸಿದ್ದಾರೆ. ಬಿಲ್ಟ್-ಅಪ್ ಕಾರ್ಪಸ್ (ಠೇವಣಿ ಅಥವಾ ಡೆಬ್ಟ್ ಫಂಡ್ ಮುಂತಾದ ಕಡಿಮೆ ಅಪಾಯದ ಬಂಡವಾಳ ಹೂಡಿಕೆಯಲ್ಲಿ ಬಂಡವಾಳ ಹೂಡುವುದರ ಮೂಲಕ)ಭದ್ರತೆಗೆ ಕನಿಷ್ಠ ಎರಡರಿಂದ ಮೂರು ವರ್ಷಗಳು ಬೇಕಾಗಬಹುದು. ಇದು ಒಟ್ಟಾರೆಯಾಗಿ ಕಡಿಮೆ ದರದ ಲಾಭವನ್ನು ಪಡೆದುಕೊಳ್ಳಲು ಹೆಚ್ಚು ವಿವೇಕಯುತವಾಗಿದೆ.
ನೀವು ಶೇ. 10ರಷ್ಟು ರಿಟರ್ನ್ ಊಹಿಸಿದರೆ ಈ ಅವಧಿಯಲ್ಲಿ 25 ಸಾವಿರ ಹಣ ಹೂಡಿಕೆ ಮಾಡಬೇಕಾಗುತ್ತದೆ.

ಎಷ್ಟು ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ?

ಎಷ್ಟು ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ?

ಈ ಗುರಿಸಾಧನೆಗಾಗಿ ನೀವು ಐದು ಫಂಡ್ ಗಳನ್ನು ಆರಿಸಿಕೊಳ್ಳಬಹುದು ಎಂದು ಮೀನಾಕ್ಷಿ ತಿಳಿಸಿದ್ದಾರೆ.
ಹೂಡಿಕೆದಾರರು ಸರಳವಾದ 5 ಫಂಡ್ ಬಂಡವಾಳವನ್ನು ಹೊಂದಬಹುದು. ಇದರಲ್ಲಿ ನಾಲ್ಕು ಇಕ್ವಿಟಿ ಫಂಡ್ ಮತ್ತು ಡೆಬ್ಟ್ ಫಂಡ್ ಆಯ್ಕೆ ಮಾಡಿ, ಪ್ರತಿ ಫಂಡ್ ಗಳಲ್ಲೂ ರೂ. 5,000 ಸಮಾನವಾಗಿ ಹೂಡಿಕೆ ಮಾಡಬೇಕು.
ಇಕ್ವಿಟಿ ಫಂಡ್ ಗಳಲ್ಲಿ ಒಂದು ಲಾರಜ್ ಕ್ಯಾಪ್ ಫಂಡ್, ಒಂದು ಮಲ್ಟಿಕಾಪ್ ಫಂಡ್ ಮತ್ತು ಎರಡು ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಫಂಡ್ ಆಗಿರಬಹುದು.
ಡೆಬ್ಟ್ ಫಂಡ್ ಕಡಿಮೆ ಅಪಾಯ ಹೊಂದಿರುವ ಅಲ್ಟ್ರಾ ಅಲ್ಪಾವಧಿಯ ಫಂಡ್ ಅಥವಾ ಅಲ್ಪಾವಧಿ ಫಂಡ್ ಆಯ್ಕೆ ಮಾಡಬಹುದು ಎಂದಿದ್ದಾರೆ. ಪ್ರಧಾನ ಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

English summary

Want to buy dream house? Be a proud owner of Rs 50 lakh house at 35

A number of schemes have been introduced by the government to make housing affordable for people.
Story first published: Wednesday, May 22, 2019, 11:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X