For Quick Alerts
ALLOW NOTIFICATIONS  
For Daily Alerts

ಅಟಲ್ ಪಿಂಚಣಿ ಯೋಜನೆ ಮಾಡಿಸಿ, ತಿಂಗಳಿಗೆ 5000 ಪಡೆಯೋದು ಹೇಗೆ?

By Siddu
|

ದೇಶದಲ್ಲಿ ಕೋಟ್ಯಂತರ ಜನ ಕಾರ್ಮಿಕರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂಥ ಅಸಂಘಟಿತ ಕಾರ್ಮಿಕರ ವೃದ್ಧಾಪ್ಯ ಜೀವನವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರ 'ಅಟಲ್ ಪಿಂಚಣಿ ಯೋಜನೆ' (Atal Pension Yojana - APY) ಯನ್ನು ಜಾರಿಗೆ ತಂದಿದೆ. ೨೦೧೫ ರಲ್ಲಿ ಜಾರಿಯಾದ ಈ ಪಿಂಚಣಿ ಯೋಜನೆಯನ್ನು 18 ರಿಂದ 40 ವಯೋಮಾನದ ಭಾರತದ ನಾಗರಿಕರು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.

ಯೋಜನೆಯನ್ನು ಪಡೆದ ನಂತರ ಪ್ರತಿ ತಿಂಗಳು ನಿಗದಿತ ವಂತಿಗೆಯನ್ನು ಪಾವತಿಸುವ ಮೂಲಕ ನಿವೃತ್ತಿಯ ನಂತರ ಮಾಸಿಕವಾಗಿ ಒಂದು ಸಾವಿರದಿಂದ ಐದು ಸಾವಿರ ರೂಪಾಯಿಗಳವರೆಗೆ (ಸಾವಿರದ ದ್ವಿಗುಣಗಳಲ್ಲಿ) ಪಿಂಚಣಿ ಪಡೆಯಬಹುದು ಎಂದು ಪಿಂಚಣಿ ಯೋಜನೆಗಳ ನಿಯಂತ್ರಕ ಸಂಸ್ಥೆ 'ಪಿಂಚಣಿ ಯೋಜನೆ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ' (Penson Fund Regulatory and Development Authority - PFRDA) ತನ್ನ ವೆಬ್‌ಸೈಟ್ pfrda.org.in ನಲ್ಲಿ ತಿಳಿಸಿದೆ. ಭಾರತವನ್ನು ಶಾಶ್ವತವಾಗಿ ಬದಲಾಯಿಸಿದ ವಾಜಪೇಯಿ ಸರ್ಕಾರದ ಟಾಪ್ 13 ಯೋಜನೆಗಳು

 

ಅಟಲ್ ಪಿಂಚಣಿ ಯೋಜನೆಗೆ ಒಳಪಡಲು ಬಯಸುವವರು ಈ ಕೆಳಗಿನ ಐದು ಪ್ರಮುಖ ಅಂಶಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ.

ಮಾಸಿಕ ವಂತಿಗೆ ನಿರ್ಧಾರ

ಮಾಸಿಕ ವಂತಿಗೆ ನಿರ್ಧಾರ

ಯೋಜನೆಯಲ್ಲಿ ಮಾಸಿಕ ವಂತಿಗೆಯ ಮೊತ್ತ ಎರಡು ಅಂಶಗಳನ್ನು ಆಧರಿಸಿ ನಿರ್ಧರಿಸಲ್ಪಡುತ್ತದೆ.

- ಯೋಜನೆಗೆ ಒಳಪಡುವ ಸಮಯದಲ್ಲಿ ವಂತಿಗೆದಾರನ ವಯಸ್ಸು

- ಮಾಸಿಕವಾಗಿ ಪಡೆಯಬಯಸುವ ಪಿಂಚಣಿ ಮೊತ್ತ (ತಿಂಗಳಿಗೆ ರೂ. 1000, ರೂ. 2000, ರೂ. 3000, ರೂ. 4000 ಅಥವಾ ರೂ. 5000).

ಕನಿಷ್ಠ ವಂತಿಗೆ ಪಾವತಿ, ಗರಿಷ್ಠ ಪಿಂಚಣಿ ಮೊತ್ತ

ಕನಿಷ್ಠ ವಂತಿಗೆ ಪಾವತಿ, ಗರಿಷ್ಠ ಪಿಂಚಣಿ ಮೊತ್ತ

ಅಟಲ್ ಪಿಂಚಣಿ ಯೋಜನೆಗೆ ಒಳಪಡುವವರು ಕನಿಷ್ಠ 20 ವರ್ಷಗಳವರೆಗೆ ವಂತಿಗೆ ಪಾವತಿಸುವುದು ಕಡ್ಡಾಯವಾಗಿದೆ. ಯೋಜನೆಯ ಗರಿಷ್ಠ ಪಿಂಚಣಿ ಮೊತ್ತವನ್ನು 10 ಸಾವಿರ ರೂಪಾಯಿಗಳವರೆಗೆ ಹೆಚ್ಚಿಸುವ ಪ್ರಸ್ತಾವನೆ ಸರಕಾರದ ಮುಂದಿದೆ ಎಂದು ಕೇಂದ್ರ ಸರಕಾರದ ಉನ್ನತ ಮೂಲಗಳನ್ನು ಆಧರಿಸಿ ಕಳೆದ ತಿಂಗಳು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿತ್ತು.

ಎಪಿವೈ ವಯೋಮಾನದ ಅರ್ಹತೆ
 

ಎಪಿವೈ ವಯೋಮಾನದ ಅರ್ಹತೆ

ಪಿಎಫ್‌ಆರ್‌ಡಿಎ ನಿರ್ದೇಶನದ ಪ್ರಕಾರ ಈ ಯೋಜನೆಗೆ ಒಳಪಡಲು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವಯಸ್ಸು ನಿಗದಿಪಡಿಸಲಾಗಿದೆ. ವಂತಿಗೆದಾರನಿಗೆ 60 ವರ್ಷಗಳಾದ ತಕ್ಷಣ ಪಿಂಚಣಿ ಆರಂಭವಾಗುತ್ತದೆ.

ಹೂಡಿಕೆ ಮಾಡಬಹುದಾದ ಕನಿಷ್ಠ ಮೊತ್ತ

ಹೂಡಿಕೆ ಮಾಡಬಹುದಾದ ಕನಿಷ್ಠ ಮೊತ್ತ

ಮಾಸಿಕ, ತ್ರೈಮಾಸಿಕ ಅಥವಾ ಅರ್ಧವಾರ್ಷಿಕ ಅವಧಿಗಳಲ್ಲಿ ಕಂತು ಪಾವತಿಸಬಹುದು. ಅಂದರೆ ಪ್ರತಿ ವರ್ಷ ಕನಿಷ್ಠ ಎರಡು ವಂತಿಗೆಗಳನ್ನು ವಂತಿಗೆದಾರ ಪಾವತಿಸಬೇಕಾಗುತ್ತದೆ. ಕಡಿಮೆ ವಯೋಮಾನದಲ್ಲಿರುವಾಗಲೇ ಈ ಯೋಜನೆಗೆ ಒಳಪಟ್ಟರೆ ಕಡಿಮೆ ಮೊತ್ತದ ಕಂತು ಪಾವತಿಸಿ ಹೆಚ್ಚು ಮೊತ್ತದ ಪಿಂಚಣಿ ಪಡೆಯಬಹುದಾಗಿದೆ. ಉದಾಹರಣೆಗೆ- 18 ವರ್ಷದ ವ್ಯಕ್ತಿ ಪ್ರತಿ ತಿಂಗಳು ಕೇವಲ ೪೨ ರೂಪಾಯಿ ಪಾವತಿಸಿದರೆ 60ನೇ ವರ್ಷದಿಂದ 1000 ರೂಪಾಯಿ ಮಾಸಿಕ ಪಿಂಚಣಿ ಪಡೆಯಬಹುದಾಗಿದೆ.

ಎಪಿವೈಗೆ ಸೇರುವ ವಿಧಾನ

ಎಪಿವೈಗೆ ಸೇರುವ ವಿಧಾನ

ಅಟಲ್ ಪಿಂಚಣಿ ಯೋಜನೆಗೆ ಒಳಪಡುವ ಬಯಸುವ ವ್ಯಕ್ತಿಯು ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರಬೇಕಾಗುತ್ತದೆ. ಒಮ್ಮೆ ಯೋಜನೆಗೆ ಒಳಪಟ್ಟ ನಂತರ ೬೦ನೇ ವಯಸ್ಸಿನ ಒಳಗೆ ಕೆಲ ನಿರ್ದಿಷ್ಟ ನಿಯಮಗಳಿಗೆ ಒಳಪಟ್ಟು ಅಂದರೆ, ಮರಣ ಅಥವಾ ಗಂಭೀರ ಸ್ವರೂಪದ ಕಾಯಿಲೆಗಳ ಸಂದರ್ಭದಲ್ಲಿ ಯೋಜನೆಯಿಂದ ನಿರ್ಗಮಿಸಬಹುದಾಗಿದೆ ಎಂದು ಪಿಎಫ್‌ಆರ್‌ಡಿಎ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

ಗರಿಷ್ಠ ಎಷ್ಟು ಮೊತ್ತದ ಪಿಂಚಣಿ ಪಡೆಯಬಹುದು?

ಗರಿಷ್ಠ ಎಷ್ಟು ಮೊತ್ತದ ಪಿಂಚಣಿ ಪಡೆಯಬಹುದು?

ಪ್ರಸ್ತುತ ಅಟಲ್ ಪಿಂಚಣಿ ಯೋಜನೆಯಲ್ಲಿ ನಿಶ್ಚಿತ ಐದು ಮೊತ್ತದ ಪಿಂಚಣಿ ಪಡೆಯಲು ಅವಕಾಶವಿದೆ. ಮಾಸಿಕ ರೂ. 1000, ರೂ. 2000, ರೂ. 3000, ರೂ. 4000 ಹಾಗೂ ರೂ. 5000 ಪಿಂಚಣಿ ಮೊತ್ತಗಳನ್ನು ನಿಗದಿಪಡಿಸಲಾಗಿದೆ. ಕಡಿಮೆ ವಯೋಮಾನದಲ್ಲಿಯೇ ಈ ಯೋಜನೆಗೆ ಒಳಪಡುವುದರಿಂದ ಯೋಜನೆಯ ಗರಿಷ್ಠ ಲಾಭ ಪಡೆಯಬಹುದು ಎಂದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.

5 ಸಾವಿರ ಪಿಂಚಣಿ ಪಡೆಯೋದು ಹೇಗೆ?

5 ಸಾವಿರ ಪಿಂಚಣಿ ಪಡೆಯೋದು ಹೇಗೆ?

ಯಾವುದೇ ವ್ಯಕ್ತಿ ತನ್ನ 18 ನೇ ವರ್ಷದಿಂದ ಮಾಸಿಕ 210 ರೂಪಾಯಿಗಳಂತೆ 42 ವರ್ಷಗಳ ಕಾಲ ವಂತಿಗೆ ಪಾವತಿಸಿದರೆ ಪಕ್ವತಾ ಅವಧಿಯ ನಂತರ ಮಾಸಿಕ ೫ ಸಾವಿರ ಪಿಂಚಣಿ ಪಡೆಯಲು ಅರ್ಹನಾಗುತ್ತಾನೆ. ಇದನ್ನು ಲೆಕ್ಕಾಚಾರ ಮಾಡಿದರೆ 18 ನೇ ವಯಸ್ಸಿನಲ್ಲಿ ಯೋಜನೆಗೆ ಒಳಪಡುವ ವ್ಯಕ್ತಿ ಒಟ್ಟಾರೆ ೧,೦೫,೮೪೦ ರೂ. ಪಾವತಿಸಿ 5 ಸಾವಿರ ರೂ. ಪಿಂಚಣಿ ಪಡೆಯುತ್ತಾನೆ. ಆದರೆ ಅದೇ 40ನೇ ವಯಸ್ಸಿನಲ್ಲಿ ಯೋಜನೆಗೆ ಒಳಪಟ್ಟರೆ ೫ ಸಾವಿರ ರೂಪಾಯಿ ಪಿಂಚಣಿ ಪಡೆಯಲು ಒಟ್ಟಾರೆ ೩,೪೮,೯೬೦ ರೂ. ವಂತಿಗೆ ನೀಡಬೇಕಾಗುತ್ತದೆ.

ಎಪಿವೈ ತೆರಿಗೆ ವಿನಾಯಿತಿಗಳು

ಎಪಿವೈ ತೆರಿಗೆ ವಿನಾಯಿತಿಗಳು

ಆದಾಯ ತೆರಿಗೆ ಕಾಯ್ದೆ 80 ಸಿಸಿಡಿ (1ಬಿ) ಪ್ರಕಾರ ಈ ಯೋಜನೆಯಲ್ಲಿ ಹೂಡಿಕೆ ಮಾಡಲಾಗುವ ಮೊತ್ತದ ಗರಿಷ್ಠ 50 ಸಾವಿರ ರೂಪಾಯಿಗಳಿಗೆ ಆದಾಯ ತೆರಿಗೆ ವಿನಾಯಿತಿ ಹಾಗೂ ಕಾಯ್ದೆ 80ಸಿ ಪ್ರಕಾರ ಪ್ರತಿ ವರ್ಷ 1.5 ಲಕ್ಷ ರೂ. ಅಥವಾ ಅದಕ್ಕೂ ಮೇಲ್ಪಟ್ಟ ಮೊತ್ತಕ್ಕೆ ಆದಾಯ ತೆರಿಗೆ ವಿನಾಯಿತಿಯನ್ನು ಪಡೆದುಕೊಳ್ಳಬಹುದು.

English summary

Atal Pension Scheme: How to get 5000 Pension Every Month?

APY or Atal Pension Yojana is a pension scheme focused on the unorganised sector in the country.
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more