ನವದೆಹಲಿ, ಜೂನ್ 9: ಎಫ್ ಡಿ ಅಂದರೆ ನಿಶ್ಚಿತ ಠೇವಣಿಗಳಲ್ಲಿ ಹೂಡಿಕೆ ಮಾಡುವುದು ಅಂದ ತಕ್ಷಣ ನಾವೆಲ್ಲ ನಮ್ಮ ಹಣ ಒಂದಿಷ್ಟು ವರ್ಷ ಕಾಲ ಲಾಕ್ ಆಗುತ್ತದೆ. ಅಗತ್ಯ ಬಿದ್ದರೆ ಬಳಕೆ ಮಾಡಲು ಒಂದಿಷ್ಟು ನಿಯಮಗಳನ್ನು ಅನುಸರಿಸಿ ಹಣ ಹಿಂದಕ್ಕೆ ಪಡೆಯಬೇಕಾಗುತ್ತದೆ ಎಂದೇ ಭಾವಿಸುತ್ತೇವೆ. ಆದರೆ ಎಫ್ ಡಿಯಲ್ಲಿಯೂ ಹೂಡಿಕೆ ಮಾಡಿ ಪ್ರತಿ ತಿಂಗಳು ಆದಾಯ ಪಡೆಯಬಹುದು ಎನ್ನುವುದು ಹಲವರಿಗೆ ಗೊತ್ತಿಲ್ಲ.
ಫಿಕ್ಸೆಡ್ ಡೆಪಾಸಿಟ್ ಅಥವಾ ಎಫ್ ಡಿ ಗಳು ಯಾವಾಗಲೂ ಸುಭದ್ರ ಮತ್ತು ಜನಪ್ರಿಯ ಹೂಡಿಕೆ ವಿಧಾನವಾಗಿದೆ. ಅವು ಕೇವಲ ಸುರಕ್ಷಿತ ಮಾತ್ರ ಅಲ್ಲ, ಒಳ್ಳೆಯ ರಿಟರ್ನ್ಸ್ ಕೂಡ ಕೊಡುತ್ತವೆ. ಹಾಗಿದ್ದರೆ ಈ ಮಂತ್ಲಿ ಇನ್ ಕಂ ಎಫ್ ಡಿ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳೋಣ.

ನಿಮಗೆ ನಿಯಮಿತ ಅವಧಿಗೆ ಬಡ್ಡಿ ಹಣ ಬೇಕು ಎನ್ನುವುದಾದರೆ ಮಾಸಿಕ ಬಡ್ಡಿ ಪಾವತಿಯ ಎಫ್ ಡಿ ಆಯ್ಕೆ ಮಾಡಿಕೊಳ್ಳಬಹುದು. ಆಗ, ನಿಮ್ಮ ಎಫ್ ಡಿ ಗೆ ಲಿಂಕ್ ಆಗಿರೋ ಉಳಿತಾಯ ಖಾತೆಗೆ ಪ್ರತಿ ತಿಂಗಳು ಹಣ ಸೇರುತ್ತದೆ. ನಿರಂತರವಾಗಿ ಮಾಸಿಕ ಆದಾಯ ಬೇಕು ಎಂದು ಬಯಸುವವರಿಗೆ ಅಂತಾ ಯಾರು ಬಯಸ್ತಾರೋ ಅವರಿಗೆ ಮಂತ್ಲಿ ಇಂಟರೆಸ್ಟ್ ಪೇಔಟ್ ಆಪ್ಷನ್ ಸೂಕ್ತ. ಪಿಂಚಣಿ ರೀತಿಯಲ್ಲಿ ನಿಶ್ಚಿತ ಆದಾಯ ಇಲ್ಲಿ ಸಿಗುತ್ತದೆ.
ಮಾಸಿಕ ಬಡ್ಡಿ ಪಡೆಯಬಹುದಾದ ಎಫ್‌ಡಿ ಅನ್ನು ಅಲ್ಪಾವಧಿ ಮತ್ತು ದೀರ್ಘಾವಧಿ ಎರಡರಲ್ಲೂ ಇರಿಸಬಹುದು. ಅನೇಕ ಬ್ಯಾಂಕ್ ಗಳು ಹತ್ತು ವರ್ಷಗಳವರೆಗೆ ಇಂತಹ ಎಫ್ ಡಿ ಗಳನ್ನ ಆಫರ್ ಮಾಡುತ್ತವೆ. ಇದಲ್ಲದೇ, ಅವಧಿ ಪೂರ್ವ ಹಿಂಪಡೆಯುವಿಕೆ- ಪ್ರಿಮೆಚ್ಯೂರ್ ವಿತ್ ಡ್ರಾ ಸೌಲಭ್ಯ ಕೂಡ ಇಲ್ಲಿ ಸಿಗುತ್ತದೆ.
ಹಾಗಿದ್ದರೆ ಈ ಎಫ್ ಡಿ ಗಳ ಮೇಲಿನ ಬಡ್ಡಿ ಲೆಕ್ಕಾಚಾರ ಹೇಗೆ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಸರಳ ಬಡ್ಡಿ ಸೂತ್ರ ಅಥವಾ ಸಿಂಪಲ್ ಇಂಟರೆಸ್ಟ್ ಫಾರ್ಮುಲಾದೊಂದಿಗೆ ಸಾಮಾನ್ಯವಾಗಿ ಇದರ ಬಡ್ಡಿ ಲೆಕ್ಕ ಮಾಡಲಾಗುತ್ತದೆ. ಈ ರೀತಿಯಾಗಿ, ನಿಮಗೆ ನಿಯಮಿತ ಆದಾಯ ಸಿಗುತ್ತದೆ. ನೀವು ಹೂಡಿಕೆ ಮಾಡಿರುವ ಮೊತ್ತ ಹಾಗೆಯೇ ಇರುತ್ತದೆ.
ಒಂದು ವೇಳೆ, ನೀವು ಮಂತ್ಲಿ ಪೇ ಔಟ್ ಆಪ್ಷನ್ ಅಡಿಯಲ್ಲಿ ಹತ್ತು ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ವಾರ್ಷಿಕ ಬಡ್ಡಿ ದರ ಶೇಕಡ 6 ರಷ್ಟಿದೆ ಎಂದಾದರೆ, ಮಾಸಿಕ ಬಡ್ಡಿ ಶೇಕಡ 0.5 ರಷ್ಟಿರುತ್ತದೆ. ಅಂದರೆ ಶೇಕಡ 6 ರಷ್ಟನ್ನು 12 ತಿಂಗಳಿಗೆ ವಿಭಾಗ ಮಾಡಿದರೆ ಪ್ರತಿ ತಿಂಗಳಿಗೆ ಶೇಕಡ 0.5 ರಷ್ಟಾಗುತ್ತದೆ.
ಅಂದರೆ ಹತ್ತು ಲಕ್ಷ ರೂಪಾಯಿಯನ್ನ ಶೇಕಡ 0.5 ರಿಂದ ಗುಣಿಸಿದರೆ, ಐದು ಸಾವಿರ ರೂಪಾಯಿ ಆಗುತ್ತದೆ. ಅಂದ್ರೆ ತಿಂಗಳಿಗೆ 5 ಸಾವಿರ ರೂಪಾಯಿ ಬಡ್ಡಿ ಸಿಗುತ್ತದೆ. ಬಹುತೇಕ ಬ್ಯಾಂಕ್ ಗಳು ನಿಶ್ಚಿತ ಠೇವಣಿಗಳಿಗೆ ಈ ಸೌಲಭ್ಯ ಕೊಡುತ್ತವೆ. ಇನ್ನೊಂದು ವಿಚಾರ ಸಹ ನಿಮಗೆ ಗೊತ್ತಿರಬೇಕು. ಇಲ್ಲಿ ಸಿಗುವ ಬಡ್ಡಿಯನ್ನು ವ್ಯಕ್ತಿಯ ವಾರ್ಷಿಕ ಆದಾಯಕ್ಕೆ ಸೇರಿಸಿ ಅನ್ವಯವಾಗುವ ತೆರೆಗೆ ಸ್ಲ್ಯಾಬ್ ನಂತೆಯೇ ಟ್ಯಾಕ್ಸ್ ವಿಧಿಸಲಾಗುತ್ತದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಪ್ರಾಪ್ಶೇರ್ ಸೆಲೆಸ್ಟಿಯಾ ಐಪಿಒ: ಹೂಡಿಕೆಗೆ ಇಂದು ಕೊನೆಯ ಅವಕಾಶ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications