ಬೆಂಗಳೂರು, ಸೆಪ್ಟೆಂಬರ್ 26: ನೌಕರರಿಗೆ ಸಂಬಳ ನೀಡುವ ಪ್ರಕ್ರಿಯೆ ವಿಳಂಬವಾದ ನಂತರ ತ್ವರಿತ ದಿನಸಿ ಡೆಲಿವರಿ ಮಾಡುವ ಸಂಸ್ಥೆಯಾದ ಡೊನ್ಜೊ ರಿಲಯನ್ಸ್ ಹಾಗೂ ಗೂಗಲ್ ಸೇರಿದಂತೆ ಇತರೆ ಹೂಡಿಕೆದಾರರಿಂದ 35 ಮಿಲಿಯನ್ ಡಾಲರ್ ಅಂದರೆ ಸುಮಾರು 290 ಕೋಟಿ ರೂಪಾಯಿ ಹಣವನ್ನು ಸಂಗ್ರಹಿಸಲಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
ದಿ ಆರ್ಕ್ ಪ್ರಕಾರ, ಕಂಪನಿಯು ಹಣಕಾಸು ಮೌಲ್ಯ ಮಾಪನ ನಿಯಮಗಳನ್ನು ಶೀಘ್ರವೇ ನಿರ್ಧರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಡೊನ್ಜೊ ಮೌಲ್ಯವು 800 ಮಿಲಿಯನ್ ಡಾಲರ್‌ಗಿಂತ ಕೆಳಗಿಳಿಯುವ ಸಾಧ್ಯತೆ ಇದೆ. ಕಂಪನಿಯು ಇದುವರೆಗೆ 500 ಮಿಲಿಯನ್ ಡಾಲರ್ ಸಂಗ್ರಹಿಸಿದೆ. ಇದು 2022ರ ಮೊದಲು 300 ಮಿಲಿಯನ್ ಅಷ್ಟೇ ಸಂಗ್ರಹಿಸಿತ್ತು.

ಡೊನ್ಜೊ ನಗದು ಕೊರತೆಯನ್ನು ಸರಿದೂಗಿಸಲು ಮುಂದಾಗಿದ್ದು, ಜೂನ್‌ನಿಂದಲೇ ನೌಕರರಿಗೆ ವೇತನ ಪಾವತಿಯಲ್ಲಿ ವಿಳಂಬ ಮಾಡಿತ್ತು. ಅಲ್ಲದೆ ಮಾರಾಟಗಾರರ ಬಿಲ್‌ಗಳನ್ನು ನೀಡಲು ವಿಫಲವಾಗಿತ್ತು. ಇದಲ್ಲದೆ ಕಂಪನಿಯ ಹಲವಾರು ಮಂದಿಯನ್ನು ಕೆಲಸದಿಂದ ತೆಗೆದು ಹಾಕಿತ್ತು.
ಈಗ ಹೂಡಿಕೆ ಹಣ ಬಂದರೆ ಉದ್ಯೋಗಿಗಳಿಗೆ ವೇತನ ಪಾವತಿಸಲು ಸಾಧ್ಯವಾಗುತ್ತದೆ ಹಾಗೂ ಕಂಪನಿಗೆ ನಿರ್ವಹಣೆಯು ಸುಗಮವಾಗುತ್ತದೆ ಎಂದು ತಿಳಿದು ಬಂದಿದೆ. ಈ ತಿಂಗಳ ಆರಂಭದಲ್ಲಿ ಡೊನ್ಜೊ ತನ್ನ ನೌಕರರಿಗೆ ಜೂನ್ ಹಾಗೂ ಜುಲೈ ತಿಂಗಳ ಸಂಬಳವನ್ನು ಕೊಡಲು ವಿಳಂಬ ಮಾಡಿತ್ತು. ಈ ಬಾರಿ ನವೆಂಬರ್‌ವರೆಗೂ ಈ ಸಂಬಳದ ಸಮಸ್ಯೆ ಮುಂದುವರೆದಿತ್ತು.
ವೆಚ್ಚ ಕಡಿತ ಸರಿದೂಗಿದಲು ಡೊನ್ಜೊ ಬೆಂಗಳೂರಿನಲ್ಲಿ ತನ್ನ ಕಚೇರಿಯನ್ನು ಖಾಲಿ ಮಾಡಬಹುದು ಎಂದು ಅದರ ಸಿಇಒ ಕಬೀರ್ ಬಿಸ್ವಾಸ್ ಹೇಳಿದ್ದಾರೆ. ಸಿಇಒ ಬಿಸ್ವಾಸ್ ಅವರು ತಮ್ಮ ಉದ್ಯೋಗಿಗಳಿಗೆ ಜೂನ್ ಹಾಗೂ ಜುಲೈ ತಿಂಗಳ ವೇತನವನ್ನು ನವೆಂಬರ್‌ನಲ್ಲಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಹಣವನ್ನು ಸಂಗ್ರಹಿಸಲು ವಿಫಲವಾದ ನಂತರ ಡೊನ್ಜೊ ಅಕ್ಟೋಬರ್ ಮೊದಲ ವಾರ ವೇತನ ಪಾವತಿಗೆ ಮುಂದಾಗಿದ್ದರು. ಅಲ್ಲದೆ ಜೂನ್‌ನಿಂದ ತಡೆಹಿಡಿದಿರುವ ಸಂಬಳದ ಮೇಲೆ ಶೇಕಡ 12 ರಷ್ಟು ಬಡ್ಡಿಯನ್ನು ಪಾವತಿಸುವುದಾಗಿ ಭರವಸೆಯನ್ನೂ ನೀಡಿತ್ತು.


Click it and Unblock the Notifications