Singapore Airlines: ಸಿಬ್ಬಂದಿಗಳಿಗೆ 8 ತಿಂಗಳ ವೇತನ ಬೋನಸ್ ಆಗಿ ಘೋಷಿಸಿದ ಏರ್‌ಲೈನ್ಸ್

ಸಂಸ್ಥೆಗೆ ಭಾರೀ ಪ್ರಮಾಣದಲ್ಲಿ ಲಾಭ ಉಂಟಾದ ಬಳಿಕ ಆ ಲಾಭವನ್ನು ತನ್ನ ಉದ್ಯೋಗಿಗಳಿಗೂ ನೀಡಲು ಈ ವಿಮಾನಯಾನ ಸಂಸ್ಥೆಯೊಂದು ನಿರ್ಧಾರ ಮಾಡಿದೆ. ಹೌದು, ಸಿಂಗಾಪುರ ಏರ್‌ಲೈನ್ಸ್ ತನ್ನ ಉದ್ಯೋಗಿಗಳಿಗೆ ಅದ್ಭುತ ಆಫರ್ ಅನ್ನು ನೀಡಿದೆ. ವಾರ್ಷಿಕವಾಗಿ ಸಿಂಗಾಪುರ ಏರ್‌ಲೈನ್ಸ್ ರೆಕಾರ್ಡ್ ಬ್ರೇಕಿಂಗ್ ಲಾಭವನ್ನು ಗಳಿಸಿದೆ.

ಸಿಂಗಾಪುರ ಏರ್‌ಲೈನ್ಸ್‌ನ ವಾರ್ಷಿಕ ಲಾಭವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ದಾಖಲೆಯ ಆದಾಯವನ್ನು ಸಂಸ್ಥೆಯು ಗಳಿಸಿದೆ. 13,000 ಕೋಟಿ ರೂಪಾಯಿಯ ರೆಕಾರ್ಡ್ ಬ್ರೇಕಿಂಗ್ ಲಾಭವನ್ನು ಸಿಂಗಾಪುರ ಏರ್‌ಲೈನ್ಸ್ ಗಳಿಸಿದೆ. ಇದಾದ ಬಳಿಕ ವಿಮಾನಯಾನ ಸಂಸ್ಥೆಯು ತನ್ನ ಸಿಬ್ಬಂದಿಗಳಿಗೆ ಸುಮಾರು ಎಂಟು ತಿಂಗಳ ಸಂಬಳಕ್ಕೆ ಸಮಾನವಾದ ಬೋನಸ್ ಅನ್ನು ಬಹುಮಾನವಾಗಿ ಪಡೆದಿದೆ.

 ಸಿಬ್ಬಂದಿಗಳಿಗೆ 8 ತಿಂಗಳ ವೇತನ ಬೋನಸ್ ಆಗಿ ಘೋಷಿಸಿದ ಏರ್‌ಲೈನ್ಸ್

ಮೆಗಾ ಬೋನಸ್ ಅನ್ನು ಹಂಚುವುದು ಹೇಗೆ?

ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲೂ ಉದ್ಯೋಗಿಗಳ ಸಮರ್ಪಣೆ ಮತ್ತು ಪ್ರಯತ್ನಗಳಿಗೆ ಶ್ಲಾಘನೆಯಾಗಿ ಸಿಂಗಾಪುರ ಏರ್‌ಲೈನ್ಸ್ ಬೋನಸ್ ಅನ್ನು ನೀಡುವ ಘೋಷಣೆಯನ್ನು ನೀಡಿದೆ. ಅರ್ಹ ಉದ್ಯೋಗಿಗಳು 6.65 ತಿಂಗಳ ವೇತನಕ್ಕೆ ಸಮಾನವಾದ ಲಾಭ-ಹಂಚಿಕೆಯ ಪ್ರೋತ್ಸಾಹವನ್ನು ಮತ್ತು ಗರಿಷ್ಠ 1.5 ತಿಂಗಳ ಆದಾಯವನ್ನು ಬೋನಸ್ ಆಗಿ ಸ್ವೀಕರಿಸುತ್ತಾರೆ ಎಂದು ಏರ್‌ಲೈನ್ ಪ್ರತಿನಿಧಿ ತಿಳಿಸಿದ್ದಾರೆ.

ಹಿರಿಯ ಕಾರ್ಯನಿರ್ವಾಹಕರಿಗೆ ಹೆಚ್ಚುವರಿ ಎಕ್ಸ್-ಗ್ರೇಷಿಯಾ ಪ್ರೋತ್ಸಾಹ ಇರುವುದಿಲ್ಲ. "ಸಿಂಗಾಪುರ ಏರ್‌ಲೈನ್ಸ್‌ ಉದ್ಯೋಗಿಗಳಿಗೆ ಬೋನಸ್ ದೀರ್ಘಾವಧಿಯ ವಾರ್ಷಿಕ ಲಾಭ-ಹಂಚಿಕೆಯ ಬೋನಸ್ ಸೂತ್ರವನ್ನು ಆಧರಿಸಿದೆ. ನಮ್ಮ ಸಿಬ್ಬಂದಿ ಒಕ್ಕೂಟವು ಇದನ್ನು ಒಪ್ಪಿಕೊಂಡಿದೆ," ಎಂದು ವಕ್ತಾರರು ಹೇಳಿದ್ದಾರೆ.

ಮಂಗಳವಾರ, ಸಿಟಿ-ಸ್ಟೇಟ್ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯು ಮಾರ್ಚ್ 31 ರಂದು ಮುಕ್ತಾಯವಾದ ಆರ್ಥಿಕ ವರ್ಷಕ್ಕೆ 2.16 ಬಿಲಿಯನ್ ಡಾಲರ್ ನಿವ್ವಳ ಲಾಭವನ್ನು ಘೋಷಣೆಯನ್ನು ಮಾಡಿದೆ. ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಪ್ರಬಲವಾಗಿದೆ. ಸಿಂಗಾಪುರ ಏರ್‌ಲೈನ್ಸ್ ಷೇರುಗಳು ಗುರುವಾರ ಶೇಕಡ 1.2ರಷ್ಟು ಹೆಚ್ಚಳವಾಗಿದೆ.

ಸಿಂಗಾಪುರ ಏರ್‌ಲೈನ್ಸ್ ಏಪ್ರಿಲ್‌ನಲ್ಲಿ 1.75 ಮಿಲಿಯನ್ ಪ್ರಯಾಣಿಕರನ್ನು ಸಾಗಿಸಿದೆ ಎಂದು ಸೋಮವಾರ ವರದಿ ಮಾಡಿದೆ. ಕಳೆದ ವರ್ಷ ಇದೇ ತಿಂಗಳಿನ ಆದಾಯಕ್ಕಿಂತ ಶೇಕಡ 53ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷದ ಆದಾಯವು ಸಾಂಕ್ರಾಮಿಕಕ್ಕಿಂತ ಅಧಿಕವಾಗಿದೆ.

Go First financial crisis: ದೇಶದಲ್ಲಿ ಸ್ಥಗಿತಗೊಂಡ ವಿಮಾನಯಾನ ಸಂಸ್ಥೆಗಳ ಪಟ್ಟಿ ಇಲ್ಲಿದೆ

ಇಂಡಿಗೋ 919 ಕೋಟಿ ರೂ. ನಿವ್ವಳ ಲಾಭ

ಮಾರುಕಟ್ಟೆ ಪಾಲಿನ ಮೂಲಕ ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಇತ್ತೀಚೆಗೆ ತನ್ನ ಅತ್ಯುತ್ತಮ ನಾಲ್ಕನೇ ತ್ರೈಮಾಸಿಕ ಹಣಕಾಸು ಫಲಿತಾಂಶಗಳನ್ನು ಪ್ರಕಟಿಸಿದೆ. ಇಂಡಿಗೋ 919 ಕೋಟಿ ರೂಪಾಯಿಗಳ ನಿವ್ವಳ ಲಾಭವನ್ನು ವರದಿ ಮಾಡಿದೆ. ಹಣಕಾಸು ವರ್ಷ 2022ರಲ್ಲಿ ಇದೇ ಅವಧಿಯಲ್ಲಿ ಏರ್‌ಲೈನ್ 1,681 ಕೋಟಿ ರೂಪಾಯಿಗಳ ನಿವ್ವಳ ನಷ್ಟವನ್ನು ವರದಿ ಮಾಡಿದೆ.

ಹಿಂದಿನ ವರ್ಷ 6,161 ಕೋಟಿ ರೂಪಾಯಿಗಳಿಗೆ ಲಾಭವನ್ನು ಗಳಿಸಿದ್ದ ಇಂಡಿಗೋ ಹಣಕಾಸು ವರ್ಷ 2023ರಲ್ಲಿ 305 ಕೋಟಿ ರೂಪಾಯಿಗಳ ನಿವ್ವಳ ನಷ್ಟವನ್ನು ಏರ್‌ಲೈನ್ ವರದಿ ಮಾಡಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಆದಾಯ ಮತ್ತು ಪ್ರಯಾಣಿಕರ ಸಂಖ್ಯೆಯಲ್ಲಿನ ಹೆಚ್ಚಳವು ಕ್ರಮವಾಗಿ ಶೇಕಡ 76.5 ಮತ್ತು ಶೇಕಡ 60.5ರಷ್ಟು ವರ್ಷದಿಂದ ವರ್ಷಕ್ಕೆ ಏರಿಕೆಯಾಗಿದೆ.

ವಿದೇಶಿ ಕರೆನ್ಸಿ ಗಳಿಕೆ 252 ಕೋಟಿ ಹಾಗೂ ಇತರೆ ಆದಾಯ 439 ಕೋಟಿ ರೂಪಾಯಿಗಳಿಂದ ಲಾಭ ಹೆಚ್ಚಳವಾಗಿದೆ. ಇಂಜಿನ್ ಸಮಸ್ಯೆಗಳಿಂದಾಗಿ ಈಗ 30 ಕ್ಕೂ ಹೆಚ್ಚು ವಿಮಾನಗಳನ್ನು ಇಂಡಿಗೋ ಸ್ಥಗಿತಗೊಳಿಸಿದೆ. ಹಣಕಾಸು ವರ್ಷ 2024ರ ಮೊದಲ ತ್ರೈಮಾಸಿಕದಲ್ಲಿ ಶೇಕಡ 5-7ರಷ್ಟು ಬೆಳವಣಿಗೆಯ ಸಾಧ್ಯತೆಯಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+