ಆಟೋಮೊಬೈಲ್ ಮೇಲೆ ಅತೀ ಹೆಚ್ಚಿನ ಆಸಕ್ತಿ ಹೊಂದಿರುವ ಜನಪ್ರಿಯ ವ್ಯಕ್ತಿಗಳಲ್ಲಿ, ಸ್ಟಾರ್ ನಟರುಗಳಲ್ಲಿ ಅಜಯ್ ದೇವಗನ್ ಕೂಡಾ ಒಬ್ಬರಾಗಿದ್ದಾರೆ. ಅಜಯ್ ದೇವ್‌ಗನ್ ಹಲವಾರು ಮಾಡೆಲ್‌ಗಳ ಕಾರುಗಳನ್ನು ಹೊಂದಿದ್ದಾರೆ. ಅಜಯ್ ದೇವ್‌ಗನ್‌ರ ಪತ್ನಿ ಕಾಜಲ್ ಹಾಗೂ ಮಗಳ ನ್ಯಾಸ ದೇವ್‌ಗನ್ ಕೂಡಾ ಹಲವಾರು ಬಾರಿ ಐಷಾರಾಮಿ ಕಾರುಗಳಲ್ಲಿ ಕಂಡುಬರುತ್ತಾರೆ.
ಅಜಯ್ ದೇವ್‌ಗನ್ ಇತ್ತೀಚೆಗೆ ತನ್ನ ಈ ಕಾರುಗಳ ಸಂಗ್ರಹಕ್ಕೆ ಹೊಸ ಸೇರ್ಪಡೆಯನ್ನು ಮಾಡಿಕೊಂಡಿದ್ದಾರೆ. ಬಾಲಿವುಡ್ ನಟ ಅಜಯ್ ದೇವಗನ್ ಜರ್ಮನ್ ವಾಹನ ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯೂನಿಂದ ಹೊಸ ಅತೀ ದುಬಾರಿಯಾದ ಇವಿ (ಎಲೆಕ್ಟ್ರಿಕ್ ವಾಹನ) ಅನ್ನು ಖರೀದಿಸಿದ್ದಾರೆ. ಈ ಕಾರಿನ ಬಗ್ಗೆ ಈ ಕೆಳಗೆ ಅಧಿಕ ಮಾಹಿತಿ ಇದೆ, ಮುಂದೆ ಓದಿ...

1.95 ಕೋಟಿ ರೂ. ಮೌಲ್ಯದ ಐಷಾರಾಮಿ ಕಾರು ಹೇಗಿದೆ?
ವರದಿಯ ಪ್ರಕಾರ ನಟ ಅಜಯ್ ದೇವ್‌ಗನ್ ಸುಮಾರು 1.95 ಕೋಟಿ ರೂಪಾಯಿ ಮೌಲ್ಯದ ಬಿಎಂಡಬ್ಲ್ಯೂ i7 ಐಷಾರಾಮಿ ಎಲೆಕ್ಟ್ರಿಕ್ ಕಾರನ್ನು ಖರೀದಿ ಮಾಡಿದ್ದಾರೆ. ಬಿಎಂಡಬ್ಲ್ಯೂ i7 ಭಾರತದಲ್ಲಿ ಬ್ರ್ಯಾಂಡ್‌ನ ಪ್ರಮುಖ ಇವಿ ಆಗಿದೆ. ಕಾರ್ಟೊಕ್ ವರದಿಯ ಪ್ರಕಾರ, ನಟ ಅಜಯ್ ದೇವ್‌ಗನ್ ಖರೀದಿ ಮಾಡಿರುವ ಬಿಎಂಡಬ್ಲ್ಯೂ i7 ಇವಿ ಟ್ವಿಲೈಟ್ ಪರ್ಪಲ್ ಪರ್ಲ್ ಮೆಟಾಲಿಕ್‌ನ ಕ್ಲಾಸಿ ಶೇಡ್ ಅನ್ನು ಹೊಂದಿದೆ.
1.5 ಕೋಟಿ ರೂ.ಯ ಇವಿ ಖರೀದಿಸಿದ ತನ್ನ ಪುತ್ರಿಯರಿಗೆ ಎಆರ್ ರೆಹಮಾನ್ ಶಭಾಸ್!
ಈ ಕಾರಿನಲ್ಲಿ ಎರಡು ಎಲೆಕ್ಟ್ರಿಕ್ ಮೋಟಾರುಗಳು ಇದೆ. ಈ ಎರಡು ಕಾರುಗಳು ಜೊತೆಯಾಗಿ 544 ಹಾರ್ಸ್‌ಪವರ್ ಮತ್ತು 745 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 550 ಕಿಲೋ ಮೀಟರ್‌ಗೂ ಅಧಿಕ ರೇಂಜ್ ಅನ್ನು ಹೊಂದಿರುವ ಬಿಎಂಡಬ್ಲ್ಯೂ i7 ಟಾಪ್ ಸ್ಪೀಡ್ ಗಂಟೆಗೆ 239 ಕಿಲೋ ಮೀಟರ್ ಅನ್ನು ಹೊಂದಿದೆ. ಇದು 4.7 ಸೆಕೆಂಡ್‌ಗಳಲ್ಲಿ 0 ರಿಂದ 100 ಕಿಮೀ/ಗಂ ವೇಗದಲ್ಲಿ ಓಡಬಲ್ಲದು.
ಬಿಎಂಡಬ್ಲ್ಯೂ i7ನ ಕ್ಯಾಬಿನ್ ಇತ್ತೀಚಿನ ಬಿಎಂಡಬ್ಲ್ಯೂ 7- ಸಿರೀಸ್‌ಗೆ ಬಹುತೇಕ ಹೋಲಿಕೆಯಾಗುತ್ತದೆ. ಅಮೆಜಾನ್ ಫೈರ್ ಟಿವಿ ಮೂಲಕ ವೀಡಿಯೊಗಳನ್ನು ಸ್ಟ್ರೀಮ್ ಮಾಡಬಹುದಾದ ಸ್ಕ್ರೀನ್ ಇದೆ. ಮೇಲ್ಭಾಗದಲ್ಲಿ ಈ ಸ್ಕ್ರೀನ್ ಇದ್ದು 31.3-ಇಂಚಿನ, 8ಕೆ ಸಿನಿಮಾ ಪರದೆ ಇದಾಗಿದೆ. ಪ್ರಯಾಣಿಕರು ಎಚ್‌ಡಿಎಂಐ ಪೋರ್ಟ್ ಮೂಲಕ ಪ್ರಯಾಣದ ಸಮಯದಲ್ಲಿ ಪಿಎಸ್5 ಗೇಮಿಂಗ್ ಕೂಡಾ ಆನಂದಿಸಬಹುದಾಗಿದೆ.
ಈ ಇವಿಯ ಹಿಂಭಾಗದ ಡೋರ್‌ಗಳು 5.5-ಇಂಚಿನ ಟಚ್‌ಸ್ಕ್ರೀನ್ ಅನ್ನು ಹೊಂದಿದೆ. ಇದು ಇನ್ಫೋಟೈನ್‌ಮೆಂಟ್ ಸಿಸ್ಟಮ್, ಟೆಂಪರೇಚರ್ ಕಂಟ್ರೋಲ್ (ತಾಪಮಾನ ನಿಯಂತ್ರಣ) ಮತ್ತು ಸೀಟ್ ಅಥವಾ ಆಸನಗಳ ನಿಯಂತ್ರಣ ಮಾಡುತ್ತದೆ.
ಅಜಯ್ ದೇವ್‌ಗನ್ ಬಳಿ ಇರುವ ದುಬಾರಿ ಕಾರುಗಳು
ಬಿಎಂಡಬ್ಲ್ಯೂ i7 ಮಾತ್ರ ಅಜಯ್ ದೇವ್‌ಗನ್ ಬಳಿ ಇರುವ ಐಷಾರಾಮಿ ಕಾರು ಅಲ್ಲ, ಅಜಯ್ ದೇವ್‌ಗನ್ ಬಳಿ ಹಲವಾರು ಐಷಾರಾಮಿ ಕಾರುಗಳು ಇದೆ. ಮರ್ಸಿಡಿಸ್ S 450 4MATIC, ರೋಲ್ಸ್ ರಾಯ್ಸ್ ಕುಲ್ಲಿನನ್, ಮರ್ಸಿಡಿಸ್ ಮೇಬ್ಯಾಕ್ GLS600, ರೇಂಜ್ ರೋವರ್ ವೋಗ್, ಆಡಿ Q7, ಮಿನಿ ಕೂಪರ್ ಇತರ ಕಾರುಗಳನ್ನು ಕೂಡಾ ಅಜಯ್ ದೇವ್‌ಗನ್ ಹೊಂದಿದ್ದಾರೆ.
ಇನ್ನು ಎಲೆಕ್ಟ್ರಿಕ್ ವಾಹನಗಳು ಭಾರತೀಯ ಮಾರುಕಟ್ಟೆಯಲ್ಲಿ ನಿಧಾನವಾಗಿ ಜನಪ್ರಿಯತೆಯನ್ನು ಗಳಿಸುತ್ತಿವೆ. ಜನರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನವನ್ನು ಖರೀದಿ ಮಾಡುತ್ತಿದ್ದಾರೆ. ಅಜಯ್ ದೇವ್‌ಗನ್ ಕೂಡಾ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನವನ್ನು ಖರೀದಿ ಮಾಡಿದ್ದಾರೆ. ಈ ಹಿಂದೆ ಖ್ಯಾತ ಸಂಗೀತಗಾರರಾದ ಎಆರ್ ರೆಹಮಾನ್ ಅವರ ಪುತ್ರಿಯರು ಕೂಡಾ ಎಲೆಕ್ಟ್ರಿಕ್ ಕಾರನ್ನು ಖರೀದಿ ಮಾಡಿದ್ದಾರೆ. ಅದು ಕೂಡಾ ಬರೋಬ್ಬರಿ 1.5 ಕೋಟಿ ರೂಪಾಯಿಯ ಕಾರಾಗಿದೆ.


Click it and Unblock the Notifications