For Quick Alerts
ALLOW NOTIFICATIONS  
For Daily Alerts

1.5 ಕೋಟಿ ರೂ.ಯ ಇವಿ ಖರೀದಿಸಿದ ತನ್ನ ಪುತ್ರಿಯರಿಗೆ ಎಆರ್ ರೆಹಮಾನ್ ಶಭಾಸ್!

|

ಎಲೆಕ್ಟ್ರಿಕ್ ವಾಹನಗಳು ಭಾರತೀಯ ಮಾರುಕಟ್ಟೆಯಲ್ಲಿ ನಿಧಾನವಾಗಿ ಜನಪ್ರಿಯತೆಯನ್ನು ಗಳಿಸುತ್ತಿವೆ. ಜನರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನವನ್ನು ಖರೀದಿ ಮಾಡುತ್ತಿದ್ದಾರೆ. ಖ್ಯಾತ ಸಂಗೀತಗಾರರಾದ ಎಆರ್ ರೆಹಮಾನ್ ಅವರ ಪುತ್ರಿಯರು ಕೂಡಾ ಎಲೆಕ್ಟ್ರಿಕ್ ಕಾರನ್ನು ಖರೀದಿ ಮಾಡಿದ್ದಾರೆ. ಅದು ಕೂಡಾ ಬರೋಬ್ಬರಿ 1.5 ಕೋಟಿ ರೂಪಾಯಿಯ ಕಾರಾಗಿದೆ.

ಎಆರ್ ರೆಹಮಾನ್ ಅವರ ಪುತ್ರಿಯರಾದ ಖತೀಜಾ ಮತ್ತು ರಹೀಮಾ ಅವರು 1.53 ಕೋಟಿ ರೂಪಾಯಿ ಮೌಲ್ಯದ ಹೊಸ ಪೋರ್ಷೆ ಟೇಕಾನ್ ಇವಿ ಖರೀದಿಸಿದ್ದಾರೆ. ಸ್ವಾಂಕಿ ಸ್ಪೋರ್ಟ್ಸ್ ಕಾರು ಕಾರ್ಯಕ್ಷಮತೆ ಮತ್ತು ನೂತನ ಫೀಚರ್‌ಗಳಿಗಾಗಿ ಸಾಕಷ್ಟು ಜನಪ್ರಿಯವಾಗಿದೆ. ಇದರ ಪ್ರಮುಖ ಆಕರ್ಷಣೆ ಎಲೆಕ್ಟ್ರಿಕ್ ಪವರ್‌ಟ್ರೇನ್ ಆಗಿದೆ.

ಎಲೆಕ್ಟ್ರಿಕ್ ವಾಹನ ವ್ಯಾಪಾರ: ವಿಧ, ಹೂಡಿಕೆ, ಏನೆಲ್ಲ ಅಗತ್ಯ?ಎಲೆಕ್ಟ್ರಿಕ್ ವಾಹನ ವ್ಯಾಪಾರ: ವಿಧ, ಹೂಡಿಕೆ, ಏನೆಲ್ಲ ಅಗತ್ಯ?

ಈ ಕಾರು ಜನಪ್ರಿಯ ಸಂಗೀತ ಸಂಯೋಜಕರ ಕುಟುಂಬದ ಗಮನವನ್ನೂ ಸೆಳೆದಿದೆ. ರೆಹಮಾನ್ ತನ್ನ ಪುತ್ರಿಯರು ಕಾರು ಖರೀದಿ ಮಾಡಿರುವುದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಉಲ್ಲೇಖ ಮಾಡಿದ್ದಾರೆ. ನನ್ನ ಪುತ್ರಿಯರು ಪ್ರಕೃತಿ ಸ್ನೇಹಿ ಇವಿ ಖರೀದಿ ಮಾಡಿರುವುದು ಹೆಮ್ಮೆಯಾಗಿದೆ ಎಂದು ಇನ್‌ಸ್ಟಾಗ್ರಾಮ್‌ ಪೋಸ್ಟ್ ಮಾಡಿದ್ದಾರೆ.

1.5 ಕೋಟಿ ರೂ.ಯ ಇವಿ ಖರೀದಿಸಿದ ಎಆರ್ ರೆಹಮಾನ್ ಪುತ್ರಿಯರು!

'ಬಾಸ್ ವುಮೆನ್', ರೆಹಮಾನ್ ತಮ್ಮ ಹೆಣ್ಣುಮಕ್ಕಳು ತಮ್ಮ ಪೋರ್ಷೆ ಟೇಕನ್ ಇವಿ ಜೊತೆಗೆ ನಿಂತಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಉಲ್ಲೇಖಿಸಿ ಬರೆದಿದ್ದಾರೆ. ಕಾರಿನ ನೋಂದಣಿ ಫಲಕದಲ್ಲಿ 'ARR Studios' ಎಂದು ಬರೆಯಲಾಗಿದೆ. ರೆಹಮಾನ್‌ ಪುತ್ರಿಯರು ಖರೀದಿ ಮಾಡಿರುವ ಇವಿ ನೀಲಿ ಬಣ್ಣದ್ದಾಗಿದೆ.

"ನಮ್ಮ ಯುವ ನಿರ್ಮಾಪಕರು #ARRstudios ಕೂಲ್ ಮೆಟಾವರ್ಸ್ ಪ್ರಾಜೆಕ್ಟ್‌ಗಳನ್ನು ಮುನ್ನಡೆಸುತ್ತಿದ್ದಾರೆ. ಖತೀಜಾ ಮತ್ತು ರಹೀಮಾ ಎಲೆಕ್ಟ್ರಿಕ್‌ಕಾರು ಖರೀದಿ ಮಾಡಿ ಗೋ ಗ್ರೀನ್‌ ಆಯ್ಕೆ ಮಾಡಿಕೊಂಡಿದ್ದಾರೆ. ನೀವು ನೋಡಲು ಬಯಸುವ ಬದಲಾವಣೆಯನ್ನು ನೀವೇ ಆರಂಭ ಮಾಡಿ. #bosswomen#girlpower#gogreen," ಎಂದು ಎಆರ್ ರೆಹಮಾನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಬಿಇಎಲ್‌ನಿಂದ ಹೈಡ್ರೋಜನ್ ಫುಯಲ್ ಸೆಲ್ ತಯಾರಿಕೆ; ಅಮೆರಿಕದ ಟಿಇವಿ ಜೊತೆ ಒಪ್ಪಂದಬಿಇಎಲ್‌ನಿಂದ ಹೈಡ್ರೋಜನ್ ಫುಯಲ್ ಸೆಲ್ ತಯಾರಿಕೆ; ಅಮೆರಿಕದ ಟಿಇವಿ ಜೊತೆ ಒಪ್ಪಂದ

2021 ರಲ್ಲಿ ಬಿಡುಗಡೆಯಾದ ಪೋರ್ಷೆ ಟೇಕಾನ್ ಅನ್ನು ಸೆಡಾನ್ ಮತ್ತು ಕ್ರಾಸ್ ಟ್ಯುರಿಸ್ಮೊ ಎಸ್ಟೇಟ್ ಎಂಬ ಎರಡು ಶೈಲಿಗಳನ್ನು ಹೊಂದಿದೆ. ಇದು Audi e-tron GT ಯಂತೆಯೇ ಇದೆ. ಪೋರ್ಷೆ ಟೇಕಾನ್ ಸೆಡಾನ್ ನಾಲ್ಕು ವೇರಿಯಂಟ್‌ಗಳನ್ನು ಹೊಂದಿದೆ. ಸ್ಟ್ಯಾಂಡರ್ಡ್, 4S, ಟರ್ಬೊ ಮತ್ತು ಟರ್ಬೊ ಎಸ್ ಇದಾಗಿದೆ. ಕ್ರಾಸ್ ಟ್ಯುರಿಸ್ಮೊ ಎಸ್ಟೇಟ್ ಮೂರು ವೇರಿಯಂಟ್‌ಗಳನ್ನು ಹೊಂದಿದೆ. 4S, ಟರ್ಬೊ ಮತ್ತು ಟರ್ಬೊ ಎಸ್ ಆಗಿದೆ.

ಜರ್ಮನ್ ಸ್ಪೋರ್ಟ್ಸ್ ಕಾರು ತಯಾರಕರು Taycan EV 260 Kmph ವೇಗವನ್ನು ಹೊಂದಿದೆ. ಈ ಕಾರು ಕೇವಲ 2.8 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿಮೀ ವೇಗವನ್ನು ತಲುಪುತ್ತದೆ. ಪೋರ್ಷೆ ಟೇಕಾನ್ ವಿಶ್ವದ ಅತ್ಯಂತ ವೇಗದ ಎಲೆಕ್ಟ್ರಿಕ್ ಕಾರುಗಳಲ್ಲಿ ಒಂದಾಗಿದೆ.

English summary

AR Rahman Lauds Daughters Rahima and Khatija for Buying Car Worth Rs 1.5 Crore

‘Girl Power’: AR Rahman lauds daughters Rahima and Khatija for buying Porsche Taycan sports car worth Rs 1.5 crore.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X