ವಂದೇ ಭಾರತ್ ಮತ್ತು ನಮೋ ಭಾರತ್ ರೈಲುಗಳ ನಂತರ, ಕೆಲವು ಅತೀ ಹೆಚ್ಚು ಜನಜಂಗುಳಿ ಇರುವ ವಿಭಾಗಗಳಲ್ಲಿ ಪ್ರಯಾಣಿಕರಿಗೆ ಸಹಾಯವಾಗಲೆಂದು ಅಮೃತ್ ಭಾರತ್ ಸೂಪರ್-ಫಾಸ್ಟ್ ಸೇವೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲು ಸರ್ಕಾರ ಸಜ್ಜಾಗಿದೆ.
ಅಮೃತ್ ಭಾರತ್ ಎಕ್ಸ್‌ಪ್ರೆಸ್, ವಂದೇ ಭಾರತ್ ಎಕ್ಸ್‌ಪ್ರೆಸ್‌ನಂತೆಯೇ ವೇಗವನ್ನು ಹೊಂದಿದೆ. ಇದು ಹವಾನಿಯಂತ್ರಿತ (ಎಸಿ) ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಗೆ ಹೋಲಿಸಿದರೆ ಕಡಿಮೆ ವೆಚ್ಚದ್ದಾಗಿದೆ. ಹೆಚ್ಚಿನ ದೂರವನ್ನು ಸಾಗಲು ಇದನ್ನು ವಿನ್ಯಾಸಗೊಳಿಸಲಾಗಿದೆ. ನಾನ್-ಎಸಿ ಸ್ಲೀಪರ್ ಮತ್ತು ಅನ್ ರಿಸರ್ವ್ಡ್ ಕ್ಲಾಸ್ ಸೇವೆಯಾಗಿದೆ.

ಭಾರತೀಯ ರೈಲ್ವೆಯು ಇನ್ನು ಕೂಡಾ ಮಾರ್ಗಗಳು ಮತ್ತು ನಿಲ್ದಾಣಗಳನ್ನು ಅಂತಿಮಗೊಳಿಸಿಲ್ಲ. ಆದರೆ ಮುಂಬೈ, ಪಾಟ್ನಾ ಮತ್ತು ಚೆನ್ನೈ ವಿಭಾಗಗಳಲ್ಲಿ ಅಮೃತ್ ಭಾರತ್ ಸೇವೆಗಳನ್ನು ಆರಂಭಿಕ ಹಂತದಲ್ಲಿ ಪರಿಚಯಿಸುವ ಸಾಧ್ಯತೆಯಿದೆ. ಪ್ರಸ್ತುತ, 22 ಕೋಚ್‌ಗಳನ್ನು ಒಳಗೊಂಡಿರುವ ಅಮೃತ್ ಭಾರತ್ ಎಕ್ಸ್‌ಪ್ರೆಸ್‌ನ ಒಂದು ರೇಕ್ ಪ್ರಾಯೋಗಿಕ ಚಾಲನೆಯಲ್ಲಿದೆ.
ಎರಡನೇ ರೇಕ್ ಶೀಘ್ರದಲ್ಲೇ ಆರಂಭವಾಗುವ ನಿರೀಕ್ಷೆಯಿದೆ. ಈ ರೈಲಿನಲ್ಲಿ ರೈಲಿನ ಎರಡೂ ತುದಿಗಳಲ್ಲಿ ಎರಡು ಲೋಕೋಮೋಟಿವ್‌ಗಳನ್ನು ಏಕಕಾಲದಲ್ಲಿ ಬಳಸಲಾಗುತ್ತದೆ. ಒಂದೇ ಚಾಲಕನಿಂದ ಇದನ್ನು ನಿರ್ವಹಣೆ, ನಿಯಂತ್ರಣ ಮಾಡಲಾಗುತ್ತದೆ.
22 ಕೋಚ್‌ಗಳನ್ನು ಹೊಂದಿರುವ ಈ ರೈಲು
ಈ ವಿಧಾನವು ರೈಲು ವೇಗವಾಗಿ ಚಲಿಸಲು ಅವಕಾಶ ನೀಡತ್ತದೆ. ಹಾಗೆಯೇ ನಿಲ್ದಾಣಗಳಲ್ಲಿ ನಿಲುಗಡೆ ಸಮಯವನ್ನು ಕಡಿಮೆ ಮಾಡುತ್ತದೆ, ರೈಲು ಟರ್ನ್ ಆಗುವ ಸಮಯವು ಕೂಡಾ ಕಡಿಮೆಯಾಗುತ್ತದೆ. ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು 12 ನಾನ್-ಎಸಿ ಸ್ಲೀಪರ್ ಕ್ಲಾಸ್, 8 ಸಾಮಾನ್ಯ ಅನ್‌ರಿಸರ್ವ್ಡ್ ಕ್ಲಾಸ್ ಮತ್ತು 2 ಲಗೇಜ್ ಕೋಚ್‌ಗಳು ಸೇರಿದಂತೆ 22 ಕೋಚ್‌ಗಳನ್ನು ಒಳಗೊಂಡಿದೆ.
ಈ ಕೋಚ್‌ಗಳು ಕೋಚ್‌ಗಳ ನಡುವೆ ಸುರಕ್ಷತೆಗಾಗಿ ಮತ್ತು ಶಬ್ದ ಮತ್ತು ಕಂಪನಗಳನ್ನು ಕಡಿಮೆ ಮಾಡಲು ಸಾಧ್ಯವಾಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಸಿಸಿಟಿವಿ ಕ್ಯಾಮೆರಾಗಳು, ಬಯೋ ವ್ಯಾಕ್ಯೂಮ್ ಶೌಚಾಲಯಗಳನ್ನು ಇದು ಹೊಂದಿರುತ್ತದೆ.
ಇನ್ನು ಸೆನ್ಸರ್ ಆಧಾರಿತ ನೀರಿನ ಟ್ಯಾಪ್‌ಗಳು, ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಎಲೆಕ್ಟ್ರಿಕ್ ಔಟ್‌ಲೆಟ್‌ಗಳು, ಎಲ್‌ಇಡಿ ದೀಪಗಳು ಮತ್ತು ಆಧುನಿಕವಾಗಿ ವಿನ್ಯಾಸಗೊಳಿಸಲಾದ ಫ್ಯಾನ್‌ಗಳು ಮತ್ತು ಸ್ವಿಚ್‌ಗಳನ್ನು ಸಹ ಹೊಂದಿವೆ. ಹೆಚ್ಚುವರಿಯಾಗಿ, ಪ್ರತಿ ಸೀಟಿಗೆ ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಅನ್ನು ಒದಗಿಸಲಾಗಿದೆ.
ಪುಶ್-ಪುಲ್ ಲೋಕೋಮೋಟಿವ್‌ಗಳನ್ನು ಸಿಎಲ್‌ಡಬ್ಲ್ಯೂನಲ್ಲಿ ತಯಾರಿಸಲಾಗುತ್ತಿದ್ದರೆ, ಕೋಚ್‌ಗಳನ್ನು ಕೋಚ್‌ಗಳನ್ನು ಐಸಿಎಫ್ ಚೆನ್ನೈನಲ್ಲಿ ಉತ್ಪಾದಿಸಲಾಗುತ್ತಿದೆ. ಈ ರೈಲುಗಳು ಜನನಿಬಿಡ ನಗರಗಳಿಗೆ ಹಗಲು-ರಾತ್ರಿ ಎಕ್ಸ್‌ಪ್ರೆಸ್ ಸೇವೆಗಳಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. 22 ಬೋಗಿಗಳ ರೈಲು ಸೆಟ್ ತನ್ನ ಪ್ರಯಾಣದ ಉದ್ದಕ್ಕೂ ಸರಿಸುಮಾರು 1,800 ಪ್ರಯಾಣಿಕರಿಗೆ ಅವಕಾಶ ಕಲ್ಪಿಸುತ್ತದೆ.


Click it and Unblock the Notifications