ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ವ್ಯಾಪಾರ ಜಗತ್ತಿಗೆ ಎಂಟ್ರಿ ನೀಡಿದ್ದಾರೆ, ತನ್ನದೇ ಆದ ಸ್ವಂತ ಪ್ರೀಮಿಯಂ ಸ್ಟ್ರೀಟ್ ವೇರ್ ಬ್ರ್ಯಾಂಡ್ ಡಿ'ಯಾವೋಲ್ ಅನ್ನು ಪ್ರಾರಂಭ ಮಾಡಿದ್ದಾರೆ. ಈ ಬ್ರ್ಯಾಂಡ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಸರ್ ಅನ್ನು ಹಂಚಿಕೊಂಡಿದ್ದಾರೆ. ಈ ಟೀಸರ್‌ನಲ್ಲಿ ಆರ್ಯನ್ ಖಾನ್ ತಂದೆ ಶಾರುಖ್ ಖಾನ್ ಕೂಡಾ ಕಾಣಿಸಿಕೊಂಡಿದ್ದಾರೆ.
ಆರ್ಯನ್ ಖಾನ್ ಬ್ಲಾಕ್ ಬೋರ್ಡ್ ಮೇಲೆ ಬರೆದು ಬರೆದು ಕೊನೆಗೆ ರೆಂಡ್ ಪೇಂಟ್ ಇರುವ ಪೇಂಟ್ ಬ್ರಷ್ ಅನ್ನು ಕೆಳಕ್ಕೆ ಹಾಕುತ್ತಾರೆ. ಅದಾದ ಬಳಿಕ ಬಂದ ಶಾರುಖ್ ಖಾನ್ ಆ ಬ್ರಷ್ ಅನ್ನು ಎತ್ತಿಕೊಳ್ಳುತ್ತಾರೆ, ಅದಾದ ಬಳಿಕ ಸ್ಕ್ರೀನ್ ಬ್ಲಾಂಕ್ ಆಗುತ್ತದೆ, ಶಾರುಖ್ ಖಾನ್ ಬ್ಲಾಕ್ ಬೋರ್ಡ್ ಮೇಲೆ ಬ್ರಷ್‌ನಿಂದ ಮಾರ್ಕ್ ಮಾಡುತ್ತಾರೆ ಅಲ್ಲಿಗೆ ಟೀಸರ್‌ನಲ್ಲಿ ಬ್ರ್ಯಾಂಡ್ ಹೆಸರು ಕಾಣುತ್ತದೆ.

ಆರ್ಯನ್ ಕಳೆದ ವರ್ಷ ತಮ್ಮ ಪ್ರೀಮಿಯಂ ವೋಡ್ಕಾ ಬ್ರ್ಯಾಂಡ್ ಅನ್ನು ಪ್ರಾರಂಭಿಸಿದ ಅದೇ ಪಾಲುದಾರರಾದ ಲೆಟಿ ಬ್ಲಾಗೋವಾ ಮತ್ತು ಬಂಟಿ ಸಿಂಗ್ ಪಾಲುದಾರಿಕೆಯಲ್ಲಿ ಬಟ್ಟೆ ಕಂಪನಿಯನ್ನು ಪ್ರಾರಂಭಿಸಿದ್ದಾರೆ. ಆರ್ಯನ್ ಖಾನ್ ವ್ಯಾಪಾರ ಜಗತ್ತಿಗೆ ಎಂಟ್ರಿ ನೀಡಿದರೂ ಕೂಡಾ ಬಾಲಿವುಡ್ ಅಥವಾ ಸಿನಿಮಾ ಇಂಡಸ್ಟ್ರಿಯೊಂದಿಗಿನ ತನ್ನ ನಂಟನ್ನು ಕಳೆದುಕೊಂಡಿಲ್ಲ.
ಸಿನಿಮಾ ನಂಟನ್ನು ಬಿಡದ ಆರ್ಯನ್ ಖಾನ್
ಶೀಘ್ರದಲ್ಲೇ ತಮ್ಮ ಸಿನಿಮಾ ಲೋಕಕ್ಕೆ ಆರ್ಯನ್ ಖಾನ್ ಪಾದಾರ್ಪಣೆ ಮಾಡಲಿದ್ದಾರೆ. ಆರ್ಯನ್ ಖಾನ್ ತನ್ನ ತಂದೆಯ ನಿರ್ಮಾಣ ಸಂಸ್ಥೆಯಾದ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ನ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುವ ಸಿನಿಮಾದಲ್ಲಿ ನಟನೆ ಮಾಡಲಿದ್ದಾರೆ. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜು ಮತ್ತು ಅದಕ್ಕೆ ಸಂಬಂಧಿಸಿದ ಪ್ರಮುಖ ಕಾರ್ಯಗಳನ್ನು ಕೂಡಾ ಆರ್ಯನ್ ನಿರ್ವಹಣೆ ಮಾಡುತ್ತಿದ್ದಾರೆ.
ಪ್ರಮುಖವಾಗಿ ತನ್ನ ತಂದೆ ಶಾರುಖ್ ಖಾನ್ ಮೇಲಿರುವ ಕೆಲಸದ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಆರ್ಯನ್ ಖಾನ್ ಸಹಾಯ ಮಾಡುತ್ತಿದ್ದಾರೆ. ಈ ಕೆಲಸದಲ್ಲಿ ಆತನ ಸಹೋದರಿ ಸುಹಾನಾ ಕೂಡ ಸಹಾಯ ಮಾಡುತ್ತಾಳೆ. ಶಾರುಖ್ ಖಾನ್ ಸ್ವತಃ ವಿಶ್ವದ ಶ್ರೀಮಂತ ನಟರಲ್ಲಿ ಒಬ್ಬರಾಗಿದ್ದಾರೆ. 770 ಮಿಲಿಯನ್ ಡಾಲರ್ ಅಥವಾ 6289 ಕೋಟಿಗಳಷ್ಟು ನಿವ್ವಳ ಆದಾಯವನ್ನು ಹೊಂದಿದ್ದಾರೆ.
ಶಾರುಖ್ ಖಾನ್ ಐಪಿಎಲ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಹೊಂದಿದ್ದಾರೆ. ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಅನ್ನು ಹೊಂದಿದ್ದಾರೆ. ವಿಎಫ್‌ಎಕ್ಸ್ ಸ್ಟುಡಿಯೋವನ್ನು ನಡೆಸುತ್ತಿದ್ದಾರೆ ಮತ್ತು ಜಾಹೀರಾತುಗಳ ಮೂಲಕ ಸಾಕಷ್ಟು ಹಣವನ್ನು ಗಳಿಸುತ್ತಾರೆ. ವ್ಯಾಪಾರ ಜಗತ್ತಿನಲ್ಲಿ ಆರ್ಯನ್ ಎಂಟ್ರಿಯು ಈಗಾಗಲೇ ಪ್ರಭಾವಶಾಲಿ ವ್ಯಾಪಾರದ ಮೂಲಕದ ಆದಾಯಕ್ಕೆ ಹೆಚ್ಚಿನ ಆದಾಯ ಸೇರ್ಪಡೆಗೆ ಕಾರಣವಾಗಿದೆ. ಸಿನಿಮಾ ಇಂಡಸ್ಟ್ರೀಯೊಂದಿಗೆ ತನ್ನದೇ ಆದ ಬ್ರ್ಯಾಂಡ್ ಅನ್ನು ಹೇಗೆ ನಿರ್ವಹಣೆ ಮಾಡುತ್ತಾರೆ ಎಂಬುವುದು ನೋಡಬೇಕಾಗಿದೆ.
ಶಾರುಖ್ ಖಾನ್ ಬಲಗೈ ಬಂಟ ವೆಂಕಿ ಮೈಸೂರು
ಶಾರುಖ್ ಖಾನ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ಜೊತೆಗೆ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮಾಲೀಕರಾಗಿದ್ದಾರೆ. ಇದು ದೇಶದ ಪ್ರಮುಖ ಚಲನಚಿತ್ರ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿದೆ.
ಈ ಎರಡು ಸಂಸ್ಥೆಗಳ ಸಿಇಒ 'ವೆಂಕಿ ಮೈಸೂರು' ಆಗಿದ್ದಾರೆ. ರೆಡ್ ಚಿಲ್ಲೀಸ್ ಸಿಇಒ, ಕೆಕೆಆರ್ ತಂಡದ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
ವೆಂಕಿ ಮೈಸೂರು ಕರ್ನಾಟಕದ ಮೈಸೂರಿನಲ್ಲಿ ಜನಿಸಿದರು. ಅವರ ಆರಂಭ ದಿನಗಳಲ್ಲಿ ಅವರು ರಣಜಿ ಟ್ರೋಫಿಗೆ ಪ್ರವೇಶಿಸುವ ಪ್ರಯತ್ನದಲ್ಲಿದ್ದರು. ಆದರೆ ತಂದೆಯ ಒತ್ತಾಯ ಮತ್ತು ಆಸೆಯಂತೆ ಕ್ರಿಕೆಟ್ ಗೆ ಗುಡ್ ಬೈ ಹೇಳಿ ಎಂಬಿಎ ಮುಗಿಸಿದರು. ಆದರೆ ವಿಧಿ ಬರೆದಂತೆ ಕೆಕೆಆರ್ ತಂಡದೊಂದಿಗೆ ಕ್ರಿಕೆಟ್ ನಂಟು ಮತ್ತೆ ಜೊತೆಗೂಡಿತು. 2010 ರಲ್ಲಿ, ವೆಂಕಿ ಮೈಸೂರು ಅವರು ಮೆಟ್‌ಲೈಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಬಳಿಕ ಇದನ್ನು ತ್ಯಜಿಸಿ ಶಾರುಖ್ ಖಾನ್ ಅವರ ಕೆಕೆಆರ್ ಗೆ ಸೇರಿದರು.


Click it and Unblock the Notifications