ಉತ್ತರ ಭಾರತದ ಅತೀ ವಿಶೇಷವಾದ ತಿಂಡಿಗಳಲ್ಲಿ, ಜನಪ್ರಿಯವಾದ ತಿಂಡಿಗಳಲ್ಲಿ ಸಮೋಸಾ ಕೂಡಾ ಒಂದಾಗಿದೆ. ಈ ಸಮೋಸ ಮಾರಾಟದಿಂದಲೇ ಶ್ರೀಮಂತರಾಗಲು ಸಾಧ್ಯವೆಂದರೆ ನೀವು ನಂಬಬಹುದೇ?. ಹೌದು, ಬೆಂಗಳೂರಿನ ಈ ದಂಪತಿಗಳು ಸಮೋಸಾವನ್ನು ಮಾರಾಟ ಮಾಡುವ ಮೂಲಕವೇ ದಿನಕ್ಕೆ 12 ಲಕ್ಷ ರೂಪಾಯಿಯನ್ನು ಸಂಪಾದನೆ ಮಾಡುತ್ತಿದ್ದಾರೆ!. ಈ ದಂಪತಿ "ಸಮೋಸಾ ಸಿಂಗ್" ಎಂಬ ವಹಿವಾಟಿನ ಮೂಲಕ ಇಷ್ಟೊಂದು ಸಂಪಾದನೆ ಮಾಡುತ್ತಿದ್ದಾರೆ.
ಈ ದಂಪತಿಯು ಅಧಿಕ ವೇತನವನ್ನು ನೀಡುವ ಉದ್ಯೋಗವನ್ನು ತೊರೆದು ಸಮೋಸಾವನ್ನು ಮಾರಾಟ ಮಾಡುತ್ತಿದ್ದಾರೆ. ಈ ದಂಪತಿಯು 7 ವರ್ಷದ ಹಿಂದೆ 2015ರಲ್ಲಿ ಉದ್ಯೋಗವನ್ನು ತೊರೆದು ಸಮೋಸಾ ಮಾರಾಟ ಮಾಡುವ ವ್ಯಾಪಾರವನ್ನು ಆರಂಭಿಸಿದೆ. ಈಗ ಈ ವ್ಯಾಪಾರವು ಮಾಸಿಕವಾಗಿ ಸುಮಾರು 45 ಕೋಟಿ ರೂಪಾಯಿಯ ವಹಿವಾಟನ್ನು ಹೊಂದಿದೆ. ಅದು ಕೂಡಾ ಪ್ರತಿ ದಿನ 12 ಲಕ್ಷ ರೂಪಾಯಿ ಆದಾಯವನ್ನು ಹೊಂದಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ...

ಸಮೋಸಾ ಮಾರಾಟ ಮಾಡುವ ದಂಪತಿಗಳ ಮಾಹಿತಿ
ಸಮೋಸಾ ಮಾರಾಟ ಮಾಡಿ ಅತೀ ಅಧಿಕ ಆದಾಯವನ್ನು ಪಡೆಯುತ್ತಿರುವುದು ಬೆಂಗಳೂರಿನ ದಂಪತಿಗಳಾದ ನಿಧಿ ಸಿಂಗ್ ಮತ್ತು ಆಕೆಯ ಪತ್ನಿ ಶಿಖರ್ ವೀರ್ ಸಿಂಗ್ ಆಗಿದ್ದಾರೆ. ಹರಿಯಾಣದಲ್ಲಿ ಬಯೋಟೆಕ್ನಾಲಜಿಯಲ್ಲಿ ಬಿ-ಟೆಕ್ ಅನ್ನು ಈ ದಂಪತಿಗಳು ಜೊತೆಯಾಗಿ ಮಾಡಿದ್ದು, ಆ ಸಂದರ್ಭದಲ್ಲೇ ಭೇಟಿಯಾಗಿದ್ದಾರೆ. ಇದಾದ ಬಳಿಕ ಇಬ್ಬರ ಜೀವನವೇ ಬದಲಾವಣೆಯಾಗಿದೆ.
ನಿಧಿ ಸಿಂಗ್ 17 ಸಾವಿರ ರೂಪಾಯಿ ವೇತನ ನೀಡುವ ಕಾರ್ಪೋರೇಟ್ ಸಂಸ್ಥೆಯೊಂದಕ್ಕೆ ಸೇರ್ಪಡೆಯಾಗಿದ್ದು. ಅದಾದ ಬಳಿಕ ಗುರುಗ್ರಾಮದ ಫಾರ್ಮಾ ಸಂಸ್ಥೆಯಲ್ಲಿ ಬ್ಯುಜಿನೆಸ್ ಡೆಲಪಮ್‌ಮೆಂಟ್ ಅಸೋಸಿಯೇಟ್‌ನಲ್ಲಿ ವಾರ್ಷಿಕ 30 ಲಕ್ಷ ರೂಪಾಯಿ ಆದಾಯದ ಆಫರ್ ಒಪ್ಪಿಕೊಂಡು ವೃತ್ತಿಗೆ ಸೇರ್ಪಡೆಯಾಗಿದ್ದಾರೆ.
ಇನ್ನೊಂದೆಡೆ ನಿಧಿ ಸಿಂಗ್ ಪತಿ ಶಿಖರ್ ವೀರ್ ಸಿಂಗ್ ವಿಜ್ಞಾನಿಯಾಗಿ ಕಾರ್ಯನಿರ್ವಹಣೆ ಆರಂಭಿಸಿದ್ದಾರೆ. ಹೈದಾರಾಬಾದ್‌ನಲ್ಲಿ ಶಿಖರ್ ವೀರ್ ಸಿಂಗ್ ಇನ್‌ಸ್ಟಿಟ್ಯೂಟ್ ಆಫ್ ಲೈಫ್ ಸೈನ್ಸ್‌ನಲ್ಲಿ ಎಂಟೆಕ್ ಅನ್ನು ಪಡೆದಿದ್ದಾರೆ. ಅಂತಿಮವಾಗಿ, ಇಬ್ಬರೂ 2015 ರಲ್ಲಿ ತಮ್ಮ ಉದ್ಯೋಗವನ್ನು ತೊರೆದು ಒಂದು ಸಾಹಸಕ್ಕೆ ಮುಂದಾಗಿದ್ದಾರೆ. ಅದುವೇ ಸಮೋಸಾ ಮಾರಾಟ ಮಾಡುವ ವ್ಯಾಪಾರವಾಗಿದೆ.
ದಂಪತಿಗಳು ತಾವಾಗಿಯೇ ಏನನ್ನಾದರೂ ಪ್ರಾರಂಭಿಸಬೇಕು ಎಂದು ನಿರ್ಧಾರ ಮಾಡಿದ್ದಾರೆ. ವ್ಯಾಪಾರವನ್ನು ಆರಂಭ ಮಾಡಲು ಬಯಸಿದ್ದರು. ಮೊದಮೊದಲು ನಿಧಿ ಪ್ರಸ್ತಾಪ ಮಾಡಿದ ಸಮೋಸ ಮಾರಾಟ ಮಾಡುವ ಐಡಿಯಾವನ್ನು ಶಿಖರ್ ಸಿಂಗ್ ನಿರಾಕರಿಸಿದ್ದಾರೆ. ಆದರೆ ನಿಧಿ ಸಿಂಗ್, ತನ್ನ ಪತಿಗೆ ಮನವರಿಕೆ ಮಾಡಿದ್ದು, ಸಮೋಸಾ ಮಾರಾಟದ ವ್ಯಾಪಾರವನ್ನು ಆರಂಭಿಸಿದ್ದಾರೆ.


Click it and Unblock the Notifications