ಭಾರತೀಯ ರೈಲ್ವೇಯು ಭಾರತ್ ಗೌರವ್ ವಿಶೇಷ ಪ್ರವಾಸಿ ರೈಲಿನಲ್ಲಿ 'ದಕ್ಷಿಣ ಕರಾವಳಿ ದೇವಾಲಯ ಪ್ರವಾರ' (South Canara Temple Tour) ಆರಂಭಿಸಲು ಸಿದ್ಧವಾಗಿದೆ. ಐದು ರಾತ್ರಿಗಳು ಮತ್ತು ಆರು ದಿನಗಳ ಪ್ರಯಾಣವು ಡಿಸೆಂಬರ್ 07, 2023 ರಂದು ಕೇರಳದ ಕೊಚುವೇಲಿ ರೈಲು ನಿಲ್ದಾಣದಿಂದ ಪ್ರಾರಂಭವಾಗುತ್ತದೆ.
ಪ್ರವಾಸವು ಡಿಸೆಂಬರ್ 12 ರಂದು ಕೊಚುವೇಲಿ ರೈಲು ನಿಲ್ದಾಣದಲ್ಲಿ ಮುಕ್ತಾಯಗೊಳ್ಳಲಿದೆ. ಈ ಪ್ರವಾಸದ ಸಮಯದಲ್ಲಿ, ರೈಲು ಕೇರಳ, ತಮಿಳುನಾಡು ಮತ್ತು ಕರ್ನಾಟಕ ಮೂರು ರಾಜ್ಯಗಳಲ್ಲಿ ಸಾಗುತ್ತದೆ. ಪ್ರವಾಸಿಗರು ಪ್ರವಾಸದಲ್ಲಿ ಪ್ರಮುಖ ಧಾರ್ಮಿಕ ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅವಕಾಶವಿದೆ.

ಆದಾಗ್ಯೂ, ಕೆಲವು ಆಯ್ದ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಹತ್ತಿಸಲಾಗುತ್ತದೆ ಮತ್ತು ಇಳಿಸಲಾಗುತ್ತದೆ. ಕೊಚುವೇಲಿ, ಕೊಲ್ಲಂ, ಸೆಂಕೊಟ್ಟೈ, ತೆಂಕಶಿ, ರಾಜಪಾಳ್ಯಂ, ಶಿವಕಾಶಿ, ವಿರುದುನಗರ, ಮಧುರೈ ಜಂಕ್ಷನ್, ದಿಂಡಿಗಲ್, ತಿರುಚ್ಚಿ, ತಂಜಾವೂರು, ಕುಂಭಕೋಣಂ, ಮೈಲಾಡುತುರೈ, ಚಿದಬರಂ, ತ್ರಿಪದ್ರಿಪುಲಿಯೂರ್, ವಿಲ್ಲುಪುರಂ, ಚೆಂಗಲ್ಪಟ್ಟು, ತಾಂಬರಮ್, ಕಪಾಡಿ ಜಂಕ್ಷನ್, ಚೆನ್ನೈ ಈ ನಿಲ್ದಾಣಗಳಾಗಿದೆ. ಬೆಂಗಳೂರಿಗರು ಇದರಲ್ಲಿ ಯಾವುದೇ ನಿಲ್ದಾಣಕ್ಕೆ ತಲುಪಿದರೆ ಬಳಿಕ ಮೂರು ರಾಜ್ಯಗಳಲ್ಲಿ ಪ್ರವಾಸ ಮಾಡಬಹುದು.
ಭೇಟಿ ನೀಡಲಿರುವ ಸ್ಥಳಗಳ ಪಟ್ಟಿ
ಉಡುಪಿ: ಶ್ರೀಕೃಷ್ಣ ದೇವಸ್ಥಾನ
ಕೊಲ್ಲೂರು: ಮೂಕಾಂಬಿಕಾ ದೇವಸ್ಥಾನ ಮತ್ತು ಮುರುಡೇಶ್ವರ ದೇವಸ್ಥಾನ
ಉಡುಪಿ: ಶೃಂಗೇರಿ ಮತ್ತು ಹೊರನಾಡು ದೇವಸ್ಥಾನ
ಎಷ್ಟು ಸೀಟ್‌ಗಳಿದೆ?
ಈ ಪ್ರವಾಸಿ ರೈಲಿನಲ್ಲಿ ಒಟ್ಟು 768 ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗಿದೆ. ರೈಲು 3 ಎಸಿ ಮತ್ತು ಎಂಟು ಸ್ಲೀಪರ್ ಕ್ಲಾಸ್ ಕೋಚ್‌ಗಳನ್ನು ಹೊಂದಿದೆ. ರೈಲು 560 ಇಕಾನಮಿ ಕ್ಲಾಸ್ ಮತ್ತು 208 ಕಂಫರ್ಟ್ ಕ್ಲಾಸ್‌ಗಳನ್ನು ಹೊಂದಿದೆ.
ಪ್ರವಾಸದ ದರ ಎಷ್ಟಿದೆ?
ಈ ರೈಲು ಪ್ರವಾಸದ ಪ್ಯಾಕೇಜ್‌ನ ಬೆಲೆಯು ಎಕಾನಮಿ ಕ್ಲಾಸ್‌ಗೆ ಪ್ರತಿ ಪ್ರಯಾಣಿಕರಿಗೆ 11,750 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಕಂಫರ್ಟ್ ಕ್ಲಾಸ್‌ಗೆ ಪ್ರತಿ ಪ್ರಯಾಣಿಕರಿಗೆ 19950 ರೂಪಾಯಿ ಆಗಿದೆ. ಈ ರೈಲು ಪ್ರವಾಸ ಪ್ಯಾಕೇಜ್ ಊಟ, ಪ್ರಯಾಣ ವಿಮೆ, ಪ್ರವಾಸ ವ್ಯವಸ್ಥಾಪಕರ ಸಲಹೆ, ವಸತಿ ಸೌಲಭ್ಯ ಮತ್ತು ರೈಲಿನಲ್ಲಿ ಭದ್ರತೆಯಂತಹ ಎಲ್ಲಾ ಪ್ರಯಾಣ ಸೌಲಭ್ಯಗಳನ್ನು ಒಳಗೊಂಡಿದೆ.
ಟಿಕೆಟ್ ಬುಕ್ ಮಾಡುವುದು ಹೇಗೆ?
ಇಂಡಿಯನ್ ರೈಲ್ವೆ ಕ್ಯಾಟೆರಿಂಗ್ ಆಂಡ್ ಟೂರಿಸಂ ಕಾಪೋರೇಷನ್ (ಐಆರ್‌ಸಿಟಿಸಿ) ವೆಬ್‌ಸೈಟ್ https://www.irctctourism.com ಗೆ ಭೇಟಿ ನೀಡುವ ಮೂಲಕ ಟಿಕೆಟ್ ಬುಕ್ ಮಾಡಬಹುದು. ಯಾವುದೇ ಸಮಸ್ಯೆಯಿದ್ದಲ್ಲಿ, 8287931964 ಮತ್ತು 9003140682 ಕ್ಕೆ ಕರೆ ಮಾಡಬಹುದಾಗಿದೆ. ಭಾರತ್ ಗೌರವ್ ರೈಲು ಯೋಜನೆಯಡಿಯಲ್ಲಿ ರೈಲು ಪ್ರವಾಸೋದ್ಯಮವನ್ನು ಉತ್ತೇಜಿಸಲು ರಾಷ್ಟ್ರೀಯ ಸಾರಿಗೆಯು ಶೇಕಡ 33 ರಷ್ಟು ರಿಯಾಯಿತಿಯನ್ನು ಒದಗಿಸುತ್ತಿದೆ.


Click it and Unblock the Notifications