ಇನ್ನೇನು ಹಬ್ಬಗಳ ಸೀಸನ್ ಆರಂಭವಾಗುತ್ತಿದೆ. ಈಗಾಗಲೇ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ನಾಗರ ಪಂಚಮಿ ಆಚರಣೆ ಮಾಡಲಾಗಿದೆ. ಇನ್ನು ಕೆಲವು ದಿನಗಳಲ್ಲೇ ಬೇರೆ ಬೇರೆ ಹಬ್ಬಗಳು ಬರಲಿದೆ. ಹಬ್ಬ ಎಂದಾಗ ನಾವು ನಮ್ಮ ತವರೂರಿಗೆ ಹೋಗದೆ ಇರುತ್ತೇವೆಯೇ? ಹೌದು, ಹಬ್ಬದ ಸೀಸನ್ ಬಂದಾಗ ಜನರು ನಗರಗಳಿಂದ ತಮ್ಮ ಊರುಗಳಿಗೆ ಪ್ರಯಾಣ ಮಾಡುತ್ತಾರೆ.
ಈ ವರ್ಷ, ಸೀಮಿತ ರೈಲು ಟಿಕೆಟ್‌ಗಳು ಲಭ್ಯವಿರುವುದರಿಂದ, ಜನರು ಒಮ್ಮೆ ಟಿಕೆಟ್ ಅನ್ನು ಖರೀದಿಸಿ ಅದಾದ ಬಳಿಕ ಅದನ್ನು ಹೆಚ್ಚಿನ ದರಕ್ಕೆ ಬೇರೆಯವರಿಗೆ ಮಾರಾಟ ಮಾಡುವ ಗ್ಯಾಂಬ್ಲಿಂಗ್ ನಡೆಯುವ ನಿರೀಕ್ಷೆ ಅಧಿಕವಾಗಿದೆ. ಇಂತಹ ವ್ಯಕ್ತಿಗಳು ಸಾಮಾನ್ಯವಾಗಿ ರೈಲ್ವೆ ನಿಲ್ದಾಣಗಳ ಹೊರಗೆ ಅಥವಾ ಬಸ್ ನಿಲ್ದಾಣಗಳಲ್ಲಿ ಇರುತ್ತಾರೆ. ನಿಮ್ಮ ಮನವೊಲಿಸುತ್ತಾರೆ.

ಯಾವುದೇ ಟಿಕೆಟ್‌ಗಳು ಲಭ್ಯವಿಲ್ಲ, ಟಿಕೆಟ್ ಪಡೆಯುವ ಏಕೈಕ ಮಾರ್ಗವೆಂದರೆ ಅವರಿಂದ ಖರೀದಿಸುವುದು ಎಂದು ನಿಮಗೆ ಅವರು ಹೇಳಬಹುದು. ಈ ಬಗ್ಗೆ ಎಚ್ಚರವಾಗಿರುವುದು ಅತೀ ಮುಖ್ಯವಾಗುತ್ತದೆ. ಈ ನಡುವೆ ನೀವು ಇಂತಹ ವ್ಯಕ್ತಿಗಳಿಂದ ತಪ್ಪಿಸಿಕೊಳ್ಳಲು ಮತ್ತು ಐಆರ್‌ಸಿಟಿಸಿ ಮೂಲಕ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ ನಿಮಗಾಗಿ ಕೆಲವು ಸಲಹೆಗಳು ಇಲ್ಲಿವೆ:
ಟಿಕೆಟ್ ಬುಕ್ ಮಾಡುವವರಿಗೆ ಸಲಹೆಗಳು
* ಐಆರ್‌ಸಿಟಿಸಿ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನಂತಹ ಅಧಿಕೃತ ಮೂಲಗಳಿಂದ ಮಾತ್ರ ಟಿಕೆಟ್‌ಗಳನ್ನು ಖರೀದಿಸಿ.
* ರೈಲ್ವೆ ನಿಲ್ದಾಣಗಳಲ್ಲಿ ಅಧಿಕ ಬೆಲೆಗೆ ಟಿಕೆಟ್‌ಗಳನ್ನು ಮಾರಾಟ ಮಾಡುವ ವ್ಯಕ್ತಿಗಳಿಂದ ಎಂದಿಗೂ ಕೂಡಾ ಟಿಕೆಟ್‌ಗಳನ್ನು ಖರೀದಿಸಬೇಡಿ, ಅವರು ಎಷ್ಟೇ ಮನವೊಲಿಸುವವರಾಗಿದ್ದರೂ ಸಹ ಅವರ ಜಾಲದಲ್ಲಿ ಸಿಲುಕಬೇಡಿ.
* ಟಿಕೆಟ್ ಅನ್ನು ಹೆಚ್ಚಿನ ದರಕ್ಕೆ ಅಕ್ರಮವಾಗಿ ಮಾರಾಟ ಮಾಡುವವರು ನಿಮ್ಮನ್ನು ಸಂಪರ್ಕಿಸಿದರೆ, ನಯವಾಗಿ ನಿರಾಕರಿಸಿ, ಅವರಿಂದ ದೂರವಿರಿ
* ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿ.
ಇಂತಹ ವ್ಯಕ್ತಿಗಳನ್ನು ನಿಯಂತ್ರಿಸಲು ಸರ್ಕಾರವು ತೆಗೆದುಕೊಂಡ ಕ್ರಮಗಳು
ಆಪರೇಷನ್ ಉಪಲಬ್ಧ್: ಇದು ಜುಲೈ 2022 ರಲ್ಲಿ ಇ-ಟಿಕೆಟಿಂಗ್ ಮಾಡಿ ಅದನ್ನು ಅಧಿಕ ಹಣಕ್ಕೆ ಮರುಮಾರಾಟ ಮಾಡುತ್ತಿದ್ದ ಜನರನ್ನು ಹತ್ತಿಕ್ಕಲು ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಮಿಷನ್-ಮೋಡ್ ಕಾರ್ಯಾಚರಣೆಯನ್ನು ನಡೆಸಿದ್ದರು. ಈ ಕಾರ್ಯಾಚರಣೆಯ ಅಡಿಯಲ್ಲಿ, ಆರ್‌ಪಿಎಫ್ 1,000 ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದು, 1 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದೆ.
ಪ್ರಯಾಣಿಕರಿಗೆ ಗುರುತಿನ ಚೀಟಿ ತೋರಿಸುವುದು ಕಡ್ಡಾಯ: ಟಿಕೆಟ್ ಕಾಯ್ದಿರಿಸುವ ಸಮಯದಲ್ಲಿ ಪ್ರಯಾಣಿಕರು ತಮ್ಮ ಗುರುತಿನ ಚೀಟಿಯನ್ನು ತೋರಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಇತರ ಜನರ ಹೆಸರಿನಲ್ಲಿ ಟಿಕೆಟ್ ಕಾಯ್ದಿರಿಸಲು ಟಿಕೆಟ್ ಅಕ್ರಮವಾಗಿ ಮಾರಾಟ ಮಾಡುವವರಿಗೆ ಹೆಚ್ಚು ಕಷ್ಟವಾಗುವಂತೆ ಮಾಡಲು ಇದನ್ನು ಮಾಡಲಾಗಿದೆ.
ಐಆರ್‌ಸಿಟಿಸಿ ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಅಪ್‌ಗ್ರೇಡ್: ಇಂಡಿಯನ್ ರೈಲ್ವೇ ಕ್ಯಾಟೆರಿಂಗ್ ಆಂಡ್ ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ರೈಲ್ವೆ ಟಿಕೆಟ್‌ಗಳ ಬುಕಿಂಗ್ ಅನ್ನು ನಿರ್ವಹಿಸುವ ಸರ್ಕಾರಿ ಸಂಸ್ಥೆಯಾಗಿದೆ. ಸರ್ಕಾರವು ಐಆರ್‌ಸಿಟಿಸಿ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನ ಅನ್ನು ಸುಧಾರಿಸಿದೆ. ಪ್ರಯಾಣಿಕರಿಗೆ ನೇರವಾಗಿ ಟಿಕೆಟ್‌ಗಳನ್ನು ಕಾಯ್ದಿರಿಸಲು ಸುಲಭವಾಗಿದೆ.
ಈ ಕ್ರಮಗಳು ರೈಲ್ವೆ ಟಿಕೆಟ್ ಖರೀದಿಸಿ ಅಧಿಕ ಬೆಲೆಗೆ ಮಾರಾಟ ಮಾಡುವ ಚಟುವಟಿಕೆಗಳ ಮೇಲೆ ಗಮನಾರ್ಹ ಪರಿಣಾಮ ಬೀರಿವೆ. ಇಂತಹ ವ್ಯಕ್ತಿಗಳ ಬಂಧನ ಅಧಿಕವಾಗುತ್ತಿದೆ. ಹಾಗೆಯೇ ಬುಕಿಂಗ್ ಪ್ರಕ್ರಿಯೆ ಗ್ರಾಹಕರಿಗೆ ಸರಳಗೊಳಿಸಲಾಗಿದೆ. ಆದರೆ ಜನರು ಎಚ್ಚರವಾಗಿರುವುದು ಅತೀ ಮುಖ್ಯವಾಗುತ್ತದೆ.


Click it and Unblock the Notifications