ಸಾಮಾನ್ಯವಾಗಿ ಯಾರಾದರೂ ಹಣವನ್ನು ಕೇಳಿದಾಗ ನಾವೇನು ಹಣ ಬೆಳೆಯುವ ಮರವನ್ನು ನೆಟ್ಟಿದ್ದೇವಾ ಎಂದು ಹೇಳುವುದನ್ನು ಕೇಳಿರಬಹುದು. ಹಾಗೆಯೇ ಮರಗಳ ಮೇಲೆ ಹಣ ಬೆಳೆಯುವುದಿಲ್ಲ ಎಂಬುವುದು ಹೆಚ್ಚಾಗಿ ಹೇಳಲಾಗುವ ಮಾತು. ಆದರೆ ನೀವು ಮರಗಳನ್ನು ನೆಡುವ ಮೂಲಕವೇ ಹಣವನ್ನು ಸಂಪಾದನೆ ಮಾಡಬಹುದು ಎಂಬುವುದು ತಿಳಿದಿದೆಯೇ?
ಹೌದು, ನೀವು ಮರಗಳನ್ನು ನೆಡುವ ಮೂಲಕವೇ ಹಣವನ್ನು ಗಳಿಸಬಹುದಾಗಿದೆ. ಆದರೆ ಮರವನ್ನು ನೆಟ್ಟು ಹಣ ಗಳಿಸುವುದು ಹೇಗೆ ಎಂಬುವುದು ನಿಮ್ಮ ಪ್ರಶ್ನೆಯಾಗಿರಬಹುದು, ಆದರೆ ಅದು ಹೇಗೆ ಎಂದು ನಾವು ಇಲ್ಲಿ ವಿವರಿಸಿದ್ದೇವೆ. ಮಹಾಗನಿ ಸಸಿಗಳನ್ನು ನೆಡುವ ಮೂಲಕ ನೀವು ಅದೃಷ್ಟವನ್ನು ಗಳಿಸಬಹುದು ಎಂಬುವುದು ನಿಮಗೆ ತಿಳಿದಿದೆಯೇ?, ಈ ಪ್ರಕ್ರಿಯೆ ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ, ಆದರೆ ಉತ್ತಮ ಗಳಿಕೆಗೆ ಸ್ವಲ್ಪ ಸಮಯ ಕಾಯಬೇಕಾಗುತ್ತದೆ ಅಲ್ಲವೇ?

ಪ್ರತಿ ಭಾಗವು ಕೂಡಾ ಉಪಯುಕ್ತ
ಮಹಾಗನಿ ಮರವು ಅತೀ ಮೌಲ್ಯಯುತ ಮರವಾಗಿದೆ. ಮಹಾಗನಿ ಮರದಲ್ಲಿರುವ ಪ್ರತಿಯೊಂದು ಅಣುವು ಕೂಡಾ ಅತೀ ಮೌಲ್ಯಯುತವಾಗಿದೆ. ಮರ, ಬೀಜ, ಎಲೆ, ಹೂವು ಎಲ್ಲವೂ ಕೂಡಾ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಮಹಾಗನಿ ಮರದ ರೆಂಬೆ ಕೊಂಬೆಗಳನ್ನು ಬಳಸಿಕೊಂಡು ಸಂಗೀತ ವಾದ್ಯಗಳು, ವಿಗ್ರಹಗಳು, ವಾಟರ್ ಕ್ರಾಫ್ಟ್‌ಗಳು, ಅಲಂಕಾರಿಕ ವಸ್ತುಗಳನ್ನು ಉತ್ಪಾದನೆ ಮಾಡಬಹುದಾಗಿದೆ.
ಮಹಾಗನಿಯ ಬೀಜ ಹಾಗೂ ಎಲೆಗಳನ್ನು ಬಳಸಿಕೊಂಡು ಔಷಧಿಗಳು, ಟಾನಿಕ್‌ಗಳನ್ನು ಉತ್ಪಾದನೆ ಮಾಡಬಹುದಾಗಿದೆ. ಡಯಾಬಿಟೀಸ್, ಕ್ಯಾನ್ಸರ್, ಅಸ್ತಮಾ, ಅಧಿಕ ರಕ್ತದೊತ್ತಡ, ಇತರೆ ಕಾಯಿಲೆಗಳಿಗೆ ಮಹಾಗನಿ ಎಲೆಗಳನ್ನು ಬಳಸಿಕೊಂಡು ಔಷಧಿಯನ್ನು ತಯಾರಿಸಲಾಗುತ್ತದೆ. ಇನ್ನು ಕೆಲವು ಕೃಷಿ ಕೀಟನಾಶಕಗಳನ್ನು ಸಹ ಮಹಾಗನಿ ಮರದ ಎಲೆಗಳಿಂದ ತಯಾರಿ ಮಾಡಲಾಗುತ್ತದೆ.
ಸಾಬೂನು, ಬಣ್ಣ ಮತ್ತು ವಾರ್ನಿಷ್ ಕೈಗಾರಿಕೆಗಳಿಗೆ ಮಹಾಗನಿ ಎಲೆಗಳಿಂದ ತೆಗೆದ ಎಣ್ಣೆಗಳನ್ನು ಬಳಕೆ ಮಾಡಲಾಗುತ್ತದೆ. ಭಾರತದ ಎಲ್ಲಾ ಬಯಲು ಪ್ರದೇಶಗಳು, ಗುಡ್ಡಗಾಡು ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳು ಮಹಾಗನಿ ಮರ ಬೆಳವಣಿಗೆಗೆ ಸೂಕ್ತವಾಗಿದೆ. ರೈತರು ತಮ್ಮ ಗ್ರಾಮಾಂತರ ಜಮೀನುಗಳಲ್ಲಿ ಮಹಾಗನಿ ಮರವನ್ನು ನೆಡಬಹುದು.
ಮಹಾಗನಿ ಮರ ನೆಟ್ಟು ಹಣ ಸಂಪಾದನೆ ಮಾಡುವುದು ಹೇಗೆ?
ಕಂದು ಬಣ್ಣದಿಂದ ಕಡುಗೆಂಪು ಬಣ್ಣವು ಮಹಾಗನಿ ಮರದ ಬಣ್ಣದ ಪ್ಯಾಲೆಟ್ ಆಗಿದೆ. ಇದು ಮರವಾಗುವ ಸಸ್ಯವಾಗಿದೆ. ಈ ಸಸ್ಯವು 12 ವರ್ಷಗಳಲ್ಲಿ ಪೂರ್ಣ ಮರವಾಗಿ ಬೆಳೆಯುತ್ತದೆ. ಇದರ ಮರದ ಬೆಲೆ ಪ್ರತಿ ಕ್ಯೂಬಿಕ್ ಫೂಟ್ 1,300 ರಿಂದ 2,500 ರೂಪಾಯಿ ಆಗಿದೆ. ಮರದ ಬಣ್ಣ ಮತ್ತು ಗುಣಮಟ್ಟದ ಆಧಾರದಲ್ಲಿ ವೆಚ್ಚವನ್ನು ನಿರ್ಧಾರ ಮಾಡಲಾಗುತ್ತದೆ.
ಕೆಂಪು ಬಣ್ಣದ ಮರಕ್ಕೆ ಹೆಚ್ಚಿನ ಬೆಲೆಯನ್ನು ವಿಧಿಸಲಾಗುತ್ತದೆ. ಕಂದು ಬಣ್ಣದ ಮರವು ಸ್ವಲ್ಪ ಕಡಿಮೆ ದುಬಾರಿಯಾಗಿದೆ. ಮಹಾಗನಿ ಸಸ್ಯವು 60 ರಿಂದ 80 ಅಡಿ ಎತ್ತರದವರೆಗೆ ಬೆಳೆಯಬಹುದು. 12 ವರ್ಷವಾಗುವ ಈ ಮರವು ದಟ್ಟವಾಗಿ ಬೆಳೆಯುತ್ತದೆ. ತಜ್ಞರ ಪ್ರಕಾರ ಒಂದು ಮರವು 40 ಕ್ಯೂಬಿಟ್ ಫೀಟ್ ಗಳಷ್ಟು ಮರವನ್ನು ಉತ್ಪಾದಿಸುತ್ತದೆ. ಈ ಮರಕ್ಕೆ ಪ್ರತಿ ಕ್ಯೂಬಿಕ್ ಫೀಟ್‌ಗೆ ಸರಾಸರಿ 1500 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ, ಒಂದು ಮಹಾಗನಿ ಮರ ಸುಮಾರು 60 ಸಾವಿರ ರೂಪಾಯಿ ಮೌಲ್ಯವನ್ನು ಹೊಂದಿದೆ.
ಪ್ರತಿ ಐದು ವರ್ಷಗಳಿಗೊಮ್ಮೆ, ಮಹಾಗನಿ ಮರಗಳಲ್ಲಿ ಬೀಜ ಉತ್ಪಾದನೆಯಾಗುತ್ತದೆ. ಒಂದು ಸಸ್ಯದಲ್ಲಿ ಸುಮಾರು 5 ಕೆಜಿ ಬೀಜಗಳನ್ನು ಪಡೆಯಬಹುದಾಗಿದೆ. ಮಾರುಕಟ್ಟೆಯ ಪ್ರಕಾರ ಬೀಜದ ಬೆಲೆ ಕೆಜಿಗೆ 1,000 ರೂಪಾಯಿ ಆಗಿದೆ. ನೀವು ನಿರಂತರವಾಗಿ 12 ವರ್ಷಗಳವರೆಗೆ 10,000 ರೂಪಾಯಿಗೆ ಬೀಜಗಳನ್ನು ಮಾರಾಟ ಮಾಡಬಹುದು.
ಒಂದು ಮಹಾಗನಿ ಮರವು 12 ವರ್ಷಗಳ ಅವಧಿಯಲ್ಲಿ ಈ ರೀತಿಯಲ್ಲಿ 70,000 ರೂಪಾಯಿ ಆದಾಯವನ್ನು ನೀಡುತ್ತದೆ. ಒಬ್ಬ ರೈತ ಹೊಲದಲ್ಲಿ 500 ಮರಗಳನ್ನು ನೆಟ್ಟು 12 ವರ್ಷಗಳ ನಂತರ 3 ಕೋಟಿ ರೂಪಾಯಿಗೆ ಮಾರಾಟ ಮಾಡಬಹುದಾಗಿದೆ. ಈ 12 ವರ್ಷಗಳಲ್ಲಿ, ಒಬ್ಬ ರೈತ ತನ್ನ ಕೃಷಿ ಭೂಮಿಯಲ್ಲಿ ಸರಿಯಾದ ಕೃಷಿ ಮಾರುವ ಮೂಲಕ ಉತ್ತಮ ಆದಾಯವನ್ನು ಗಳಿಸಬಹುದಾಗಿದೆ.
ಈ ವಿಚಾರ ನಿಮಗೆ ತಿಳಿದಿರಲಿ
ಹಿರಿಯ ಕೃಷಿ ವಿಜ್ಞಾನಿ ಡಾ.ಮಯಾಂಕ್ ರೈ ಪ್ರಕಾರ ಮಹಾಗನಿ ಮರದ ಬೇರುಗಳು ಹೆಚ್ಚು ಆಳವಾಗಿರುವುದಿಲ್ಲ. ಆದ್ದರಿಂದ ಗುಡ್ಡಗಾಡು ಪ್ರದೇಶಗಳಲ್ಲಿ ನೆಟ್ಟರೆ ಮರ ಬೀಳುವ ಸಾಧ್ಯತೆ ಇರುತ್ತದೆ. ನೀರು ತುಂಬಿರುವ ಮತ್ತು ಕಲ್ಲಿನ ಮಣ್ಣಿನಲ್ಲಿಯೂ ಮಹಾಗನಿ ಮರವನ್ನು ನೆಡಬಾರದು. ಮಹಾಗನಿ ಸಸಿಗಳನ್ನು ನೆಡುವಾಗ ಬಿಸಿ ಬೇಸಿಗೆ ಅಥವಾ ಅತ್ಯಂತ ಶೀತ ವಾತಾವರಣ ಇರಬಾರದು.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ

Karnataka SSLC Exam: ಇಂದಿನಿಂದ ಕರ್ನಾಟಕದಲ್ಲಿ SSLC ಪರೀಕ್ಷೆ; ವಿದ್ಯಾರ್ಥಿಗಳು ಈ ವಿಷಯ ದಿಳಿದೇ ಎಕ್ಸಾಂಗೆ ಹೋಗಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Renault Duster 2026: ಕಡಿಮೆ ಬೆಲೆಗೆ ಉತ್ತಮ ಕಾರು; 10.49 ಲಕ್ಷ ಬೆಲೆಯಲ್ಲಿ ಹೊಸ ರೆನಾಲ್ಟ್ ಡಸ್ಟರ್-ವಿಶೇಷತೆ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ



Click it and Unblock the Notifications