ರೈಲು ಪ್ರಯಾಣವು ಪ್ರಪಂಚದಾದ್ಯಂತದ ಸಾಮಾನ್ಯ ಪ್ರಯಾಣದ ವಿಧಾನಗಳಲ್ಲಿ ಒಂದಾಗಿದೆ. ಸಾಮಾನ್ಯ ಕೋಚ್, ಎಸಿ ಅಥವಾ ಸ್ಲೀಪರ್ ಕೋಚ್ ಆಗಿರಲಿ, ಭಾರತದಲ್ಲಿ ಪ್ರತಿದಿನ ಸಾವಿರಾರು ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಾರೆ. 2020 ರಲ್ಲಿ 808.6 ಕೋಟಿ ಪ್ರಯಾಣಿಕರು ಭಾರತೀಯ ರೈಲ್ವೇಯಲ್ಲಿ ಪ್ರಯಾಣ ಮಾಡಿದ್ದಾರೆ ಎಂದು ಅಂಕಿಅಂಶಗಳು ಹೇಳಿದೆ.
ಅಂಕಿಅಂಶಗಳನ್ನು ನಾವು ನೋಡಿದಾಗ ದೇಶದಾದ್ಯಂತ ಜನರು ತಮ್ಮ ದಿನನಿತ್ಯದ ಪ್ರಯಾಣಕ್ಕಾಗಿ ಆಗಲಿ, ಅಥವಾ ದೂರದ ಪ್ರಯಾಣಕ್ಕಾಗಲಿ ಹೆಚ್ಚಾಗಿ ರೈಲಿನ ಮೇಲೆ ಅವಲಂಭಿತರಾಗಿದ್ದಾರೆ ಎಂದು ತಿಳಿಯುತ್ತದೆ. ಈ ನಡುವೆ ಸಾಮಾನ್ಯ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಸಲು ಸಾಮಾನ್ಯವಾಗಿ ಮೊದಲೇ ಟಿಕೆಟ್ ಬುಕ್ ಮಾಡುವ ಅಗತ್ಯವಿಲ್ಲ. ನಿಲ್ದಾಣದ ಕೌಂಟರ್‌ನಿಂದ ಟಿಕೆಟ್ ಖರೀದಿಸಬಹುದು.

ಬಹಳಷ್ಟು ಜನರು ತಾವು ಪ್ರಯಾಣ ಮಾಡಲು ಬಯಸುವ ಸ್ಥಳಕ್ಕೆ ತಲುಪುವ ಮೊದಲು ಬೇರೆ ರೈಲಿನಲ್ಲಿ ಪ್ರಮಾಣ ಮಾಡಲು ಒಂದೇ ಸಾಮಾನ್ಯ ಟಿಕೆಟ್ ಅನ್ನು ಬಳಸುತ್ತಾರೆ. ಒಮ್ಮೆ ಟಿಕೆಟ್ ಅನ್ನು ಖರೀದಿಸಿ ಬೇರೆ ಬೇರೆ ರೈಲುಗಳ ಮೂಲಕ ಪ್ರಯಾಣ ಮಾಡುತ್ತಾ ಸಾಗುತ್ತಾರೆ. ಆದರೆ ಆ ರೀತಿ ಮಾಡಬಹುದೇ?
ಒಂದು ಟಿಕೆಟ್ ಬಳಸಿಕೊಂಡು ಜನರು ಎಷ್ಟು ಬಾರಿ ರೈಲುಗಳನ್ನು ಬದಲಾಯಿಸಬಹುದು ಮತ್ತು ಇನ್ನೊಬ್ಬರ ಜನರಲ್ ಕೋಚ್‌ಗೆ ಹೋಗಬಹುದು ಎಂಬುದಕ್ಕೆ ಭಾರತೀಯ ರೈಲ್ವೇ ಮಾರ್ಗಸೂಚಿಯನ್ನು ನಿಗದಿಪಡಿಸಿದೆ. ಆದರೆ ನಿಯಮಗಳು ಸಮಾಜದ ಬಹುತೇಕ ಜನರಿಗೆ ತಿಳಿದಿಲ್ಲ. ಈ ಬಗ್ಗೆ ಇಲ್ಲಿದೆ ಸ್ಪಷ್ಟತೆ, ಮುಂದೆ ಓದಿ...
ಒಂದೇ ಜನರೆಲ್ ಟಿಕೆಟ್ ಬಳಸಬಹುದೇ?
ಎಕ್ಸ್ ಪ್ರೆಸ್ ಟ್ರೈನ್ ಅಥವಾ ದೂರದ ರೈಲಾಗಿದ್ದರೆ ಸಾಮಾನ್ಯ ಟಿಕೆಟ್ ಇದ್ದರೂ ಕೆಳಗಿಳಿದು ಇನ್ನೊಂದು ರೈಲು ಹತ್ತುವಂತಿಲ್ಲ. ಟಿಕೆಟ್ ಖರೀದಿಸಿದ ರೈಲಿನಲ್ಲಿ ಮಾತ್ರ ಪ್ರಯಾಣಿಸಬಹುದು ಎಂದು ನಿಯಮ ಹೇಳುತ್ತದೆ. ಆದರೆ ಕೆಲವರನ್ನು ರೈಲನ್ನು ಬದಲಾವಣೆ ಮಾಡುತ್ತಾರೆ. ಆದರೆ ಸಿಕ್ಕಿಬಿದ್ದರೆ, ನಿಮಗೆ ಖಂಡಿತವಾಗಿಯೂ ದಂಡ ಹಾಕಲಾಗುತ್ತದೆ. ಆದ್ದರಿಂದ ಸಾಮಾನ್ಯ ಟಿಕೆಟ್ ಖರೀದಿಸಿ ರೈಲುಗಳನ್ನು ಬದಲಾಯಿಸುವುದನ್ನು ತಪ್ಪಿಸಬೇಕು ಎಂದು ಸಲಹೆ ನೀಡಲಾಗುತ್ತದೆ.
ಸ್ಥಳೀಯ ರೈಲುಗಳಲ್ಲಿ ಆದಲ್ಲಿ ನೀವು ರೈಲು ಬದಲಾವಣೆ ಮಾಡಿಕೊಂಡು ಪ್ರಯಾಣ ಮಾಡಿದರೆ ಹೆಚ್ಚು ತೊಂದರೆ ಏನು ಆಗುವುದಿಲ್ಲ. ಟಿಕೆಟ್ ಖರೀದಿಸಿದಾಗ, ಅದರ ಮೇಲೆ ನಿಲ್ದಾಣದ ಹೆಸರು ಮತ್ತು ಖರೀದಿಸುವ ಸಮಯವನ್ನು ಬರೆಯಲಾಗುತ್ತದೆ. ಸಾಮಾನ್ಯ ಟಿಕೆಟ್ ಸಮಯ ಮಿತಿಯನ್ನು ಹೊಂದಿರುತ್ತದೆ. ಆ ಸಮಯ ಮುಗಿದ ಬಳಿಕ ಟಿಕೆಟ್ ಅಮಾನ್ಯವಾಗುತ್ತದೆ.
ದೆಹಲಿ ಅಥವಾ ಮುಂಬೈನಂತಹ ನಗರ ನಿಲ್ದಾಣದಲ್ಲಿ ಯಾರಾದರೂ ಸಾಮಾನ್ಯ ಟಿಕೆಟ್ ಖರೀದಿಸಿದರೆ, ಅದರ ಮಾನ್ಯತೆ ಕೇವಲ 1 ಗಂಟೆ ಮಾತ್ರ ಇರುತ್ತದೆ. ಅಂದರೆ ನೀವು ಅಲ್ಲಿರುವ ಯಾವುದೇ ರೈಲನ್ನು ಕೂಡಾ ಒಂದು ಗಂಟೆಯೊಳಗೆ ಹತ್ತಿ ಪ್ರಯಾಣ ನಡೆಸಬೇಕಾಗುತ್ತದೆ. ಸಣ್ಣ ಪಟ್ಟಣದ ನಿಲ್ದಾಣವಾಗಿದ್ದರೆ, ಸಾಮಾನ್ಯ ಟಿಕೆಟ್‌ನಲ್ಲಿ ನಿಲ್ದಾಣದಿಂದ ಹೊರಡಲು 3 ಗಂಟೆಗಳ ಕಾಲಾವಕಾಶವನ್ನು ಪಡೆಯಬಹುದು.


Click it and Unblock the Notifications