ನಾವು ಉಳಿತಾಯ ಮಾಡುವ ವಿಚಾರಕ್ಕೆ ಬಂದಾಗ ನಮ್ಮ ಮುಂದೆ ಬರುವ ಸುರಕ್ಷಿತ ಹೂಡಿಕೆ ಆಯ್ಕೆಗಳಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಕೂಡಾ ಒಂದಾಗಿದೆ. ಪಿಪಿಎಫ್ ಜನಪ್ರಿಯ ಸಣ್ಣ ಉಳಿತಾಯ ಯೋಜನೆಯಾಗಿದೆ. ಪಿಪಿಎಫ್ ಸರ್ಕಾರ ಬೆಂಬಲಿತ ಯೋಜನೆಯಾಗಿದ್ದು, ಇದು ದೀರ್ಘಾವಧಿಯ ಯೋಜನೆಯಾಗಿದೆ. ಹಾಗೆಯೇ ತೆರಿಗೆ ಪ್ರಯೋಜವನ್ನು ನೀಡುತ್ತದೆ. ಅಧಿಕ ಹಾಗೂ ಉತ್ತಮ ರಿಟರ್ನ್ ಅನ್ನು ನೀಡುತ್ತದೆ.
ಭಾರತದ ಸರ್ಕಾರದ ಹಣಕಾಸು ಸಚಿವಾಲಯದ ಅಡಿಯಲ್ಲಿ ಇರುವುದರಿಂದಾಗಿಒ ಪಿಪಿಎಫ್ ಅಪಾಯವಿಲ್ಲದ ಹೂಡಿಕೆ ವಿಧಾನವಾಗಿದೆ. ಪ್ರಸ್ತುತ ಪಿಪಿಎಫ್ ಖಾತೆಯನ್ನು ತೆರೆಯುವುದು ಸುಲಭವಾಗಿದೆ. ಎಸ್‌ಬಿಐ, ಎಚ್‌ಡಿಎಫ್‌ಸಿ, ಐಸಿಐಸಿಐ, ಆಕ್ಸಿಸ್ ಬ್ಯಾಂಕ್‌ಗಳಲ್ಲಿ ನಾವು ಪಿಪಿಎಫ್ ಖಾತೆಯನ್ನು ತೆರೆಯಲು ಸಾಧ್ಯವಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಪಿಪಿಎಫ್ ಖಾತೆಯನ್ನು ತೆರೆಯುವುದು ಹೇಗೆ ಎಂದು ನಾವು ವಿವರಿಸಿದ್ದೇವೆ, ಮುಂದೆ ಓದಿ...

ಎಚ್‌ಡಿಎಫ್‌ಸಿ ಬ್ಯಾಂಕ್ ಪಿಪಿಎಫ್ ಖಾತೆ ಅರ್ಹತೆ
* ಪಿಪಿಎಫ್ ಖಾತೆಯನ್ನು ತೆರೆಯಲು ಬಯಸುವ ವ್ಯಕ್ತಿ ಭಾರತೀಯ ನಾಗರಿಕರು ಆಗಿರಬೇಕು.
* ಒಬ್ಬ ವ್ಯಕ್ತಿಯು ತನ್ನ ಹೆಸರಿನಲ್ಲಿ ಅಂಚೆ ಕಚೇರಿ ಅಥವಾ ಬ್ಯಾಂಕ್‌ನಲ್ಲಿ ಪಿಪಿಎಫ್ ಖಾತೆಯನ್ನು ತೆರೆಯಬಹುದಾಗಿದೆ.
* ವ್ಯಕ್ತಿಯು ತನ್ನ ಹೆಸರಿನಲ್ಲಿ ಅಥವಾ ಅಪ್ರಾಪ್ತ ಹೆಸರಿನಲ್ಲಿ ತಾವು ಪಿಪಿಎಫ್ ಖಾತೆಯನ್ನು ತೆರೆಯಬಹುದಾಗಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಪಿಪಿಎಫ್ ಖಾತೆ ತೆರೆಯಲು ಬೇಕಾದ ದಾಖಲೆಗಳು
* ಕೆವೈಸಿ ದಾಖಲೆಗಳಾದ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಅಥವಾ ವೋಟರ್ ಐಡಿ ಕಾರ್ಡ್
* ಅರ್ಜಿದಾರರ ಪಾಸ್‌ಪೋರ್ಟ್ ಗಾತ್ರದ ಫೋಟೋ
* ಸ್ವ ಸಹಿ ಮಾಡಿದ ಫಾರ್ಮ್ ಎ ಅಥವಾ ಪಿಪಿಎಫ್ ಖಾತೆ ತೆರೆಯಲು ಅರ್ಜಿ ಸಲ್ಲಿಸುವ ಫಾರ್ಮ್
* ನಾಮಿನೇಷನ್‌ಗೆ ಸ್ವ ಸಹಿ ಮಾಡಿದ ಫಾರ್ಮ್ ಇ
* ಫೋನ್/ ಎಲೆಕ್ಟ್ರಿಸಿಸಿ/ ನೀರಿನ ಬಿಲ್‌ನಂತಹ ನಿವಾಸ ಪುರಾವೆ
* ಅಪ್ರಾಪ್ತರ ಪಿಪಿಎಫ್ ಖಾತೆಗಳಿಗೆ ಪೋಷಕರ ಛಾಯಾಚಿತ್ರ ಮತ್ತು ಕೆವೈಸಿ ದಾಖಲೆಗಳನ್ನು ನೀಡಬೇಕಾಗುತ್ತದೆ.
* ಪಿಪಿಎಫ್ ಖಾತೆದಾರರ ಬ್ಯಾಂಕ್ ಪಾಸ್‌ಬುಕ್
ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಖಾತೆ ತೆರೆಯುವಾಗ ಈ ಅಂಶ ನೆನಪಿರಲಿ
* ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಸಕ್ರಿಯವಾದ ಉಳಿತಾಯ ಖಾತೆಯನ್ನು ಹೊಂದಿರುವವರು ಮಾತ್ರ ಬ್ಯಾಂಕ್‌ನಲ್ಲಿ ಪಿಪಿಎಫ್ ಖಾತೆಯನ್ನು ತೆರೆಯಲು ಅವಕಾಶವಿದೆ.
* ನಿಮ್ಮ ಉಳಿತಾಯ ಖಾತೆಯನ್ನು ಎಚ್‌ಡಿಎಫ್‌ಸಿ ಬ್ಯಾಂಕ್‌ನ ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಸಕ್ರಿಯವಾಗಿ ಪಡೆಯುತ್ತಿರಬಹುದು.
* ಒಟಿಪಿ ಜನರೇಟ್ ಮಾಡಲು ನಿಮ್ಮ ಮೊಬೈಲ್ ಸಂಖ್ಯೆಯು ಆಧಾರ್‌ನೊಂದಿಗೆ ಲಿಂಕ್ ಆಗಿರಬೇಕಾಗುತ್ತದೆ.
* ನಿಮ್ಮ ಪಿಪಿಎಫ್ ಖಾತೆಗೆ ಸಂಬಂಧಿಸಿದ ಅಲರ್ಟ್ ಅನ್ನು ನೀವು ಪಡೆಯಲು ನಿಮ್ಮ ಉಳಿತಾಯ ಖಾತೆಯನ್ನು ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯೊಂದಿಗೆ ನೋಂದಾಯಿಸಿಕೊಳ್ಳಬೇಕು.
ಮೊಬೈಲ್ ಬ್ಯಾಂಕಿಂಗ್ ಮೂಲಕ ಪಿಪಿಎಫ್ ಖಾತೆ ತೆರೆಯಿರಿ
ಹಂತ 1: ಮೊಬೈಲ್ ಬ್ಯಾಂಕಿಂಗ್ ಅಕೌಂಟ್ ಅನ್ನು ತೆರೆಯಿರಿ ಲಾಗಿನ್ ಆಗಿ ಹೋಮ್‌ಪೇಜ್‌ನಲ್ಲಿ 'Save' ಮೇಲೆ ಕ್ಲಿಕ್ ಮಾಡಿ
ಹಂತ 2: 'Accounts' ಸೆಕ್ಷನ್‌ಗೆ ಭೇಟಿ ನೀಡಿ, 'Open PPF Account' ಮೇಲೆ ಕ್ಲಿಕ್ ಮಾಡಿ
ಹಂತ 3: 'Do you have a PPF account with any other bank or post office?' ಎಂದು ಬಂದರೆ 'No' ಎಂದು ಕ್ಲಿಕ್ ಮಾಡಿ, 'Continue' ಒತ್ತಿ.
ಹಂತ 4: 'Step 1- Set-up PPF Account' ಪೇಜ್ ಅಡಿಯಲ್ಲಿ ನಿಮ್ಮ ರಾಜ್ಯ ಹಾಗೂ ಬ್ರ್ಯಾಂಚ್ ಅನ್ನು ಆಯ್ಕೆ ಮಾಡಿ.
ಹಂತ 5: ಡೆಪಾಸಿಟ್ ಮಾಡಲು ಬಯಸುವ ಕನಿಷ್ಠ ಮೊತ್ತವನ್ನು ನಮೂದಿಸಿ (ವಾರ್ಷಿಕವಾಗಿ 500 ರೂಪಾಯಿಯಿಂದ 1.5 ಲಕ್ಷ ರೂಪಾಯಿವರೆಗೆ)
ಹಂತ 6: 'Continue' ಅನ್ನು ಕ್ಲಿಕ್ ಮಾಡಿ.
ಹಂತ 7: 'Step 2- Add Nominee' ಪೇಜ್‌ಗೆ ರಿಡೈರೆಕ್ಟ್ ಆಗಲಿದೆ. ಅಲ್ಲಿ ನಾಮಿನೇಷನ್ ಅನ್ನು ಷೋಷಿಸಬೇಕಾಗುತ್ತದೆ.
ಹಂತ 8: ಅದಾದ ಬಳಿಕ 'Continue' ಮೇಲೆ ಕ್ಲಿಕ್ ಮಾಡಿ, ನಮೂದಿಸಿದ ಮಾಹಿತಿ ಖಚಿತಪಡಿಸಿಕೊಳ್ಳಿ.
ಹಂತ 9: ಈಗ ನಿಮ್ಮ ರಿಜಿಸ್ಟಾರ್ ಮೊಬೈಲ್ ನಂಬರ್‌ನಲ್ಲಿ ಒಟಿಪಿಯನ್ನು ಪಡೆಯುತ್ತೀರಿ. ಒಟಿಪಿ ವೆರಿಫೈ ಮಾಡಿ, Submit ಮೇಲೆ ಕ್ಲಿಕ್ ಮಾಡಿ.
ಹಂತ 10: ವೆರಿಫೀಕೇಷನ್ ಯಶಸ್ವಿಯಾದ ಬಳಿಕ ನಿಮಗೆ ಖಾತೆ ತೆರೆದ ಬಗ್ಗೆ ಇಮೇಲ್ ಮೂಲಕ ಅಥವಾ ಮೊಬೈಲ್ ನಂಬರ್ ಮೂಲಕ ಮಾಹಿತಿ ಲಭ್ಯವಾಗಲಿದೆ.
ನೆಟ್ ಬ್ಯಾಂಕಿಂಗ್ ಮೂಲಕ ಪಿಪಿಎಫ್ ಖಾತೆ ತೆರೆಯಿರಿ
ಹಂತ 1: ಐಡಿ ಮತ್ತು ಪಾಸ್‌ವರ್ಡ್ ಮೂಲಕ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಲಾಗಿನ್ ಆಗಿ.
ಹಂತ 2: 'Offers' ಟ್ಯಾಬ್ ಮೇಲೆ ಕ್ಲಿಕ್ ಮಾಡಿ, 'Public Provident Fund' ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 3: ಬ್ಯಾಂಕ್ ಬ್ರ್ಯಾಂಚ್, ರಾಜ್ಯ ಇತರೆ ಮಾಹಿತಿಯನ್ನು ಮುಂದಿನ ಪೇಜ್‌ನಲ್ಲಿ ನಮೂದಿಸಿ ಪರಿಶೀಲನೆ ಮಾಡಿ
ಹಂತ 4: ಡೆಪಾಸಿಟ್ ಮಾಡುವ ಮೊತ್ತ ನಮೂದಿಸಿ, ನಾಮಿನಿಯ ಮಾಹಿತಿ ಉಲ್ಲೇಖಿಸಿ
ಹಂತ 5: 'Submit' ಮೇಲೆ ಕ್ಲಿಕ್ ಮಾಡಿ, ಅದಾದ ಬಳಿಕ ಖಾತೆ ತೆರೆಯುವ ಪ್ರಕ್ರಿಯೆ ಯಶಸ್ವಿಯಾದ ಬಗ್ಗೆ ನಿಮಗೆ ಆಧಾರ್ ಲಿಂಕ್ ಆದ ಮೊಬೈಲ್ ಸಂಖ್ಯೆಗೆ ಮೆಸೇಜ್ ಬರಲಿದೆ. ಪಿಪಿಎಫ್ ಖಾತೆ ತೆರೆದ ಬಳಿಕ ನೀವು ಮೊತ್ತವನ್ನು ಉಳಿತಾಯ ಖಾತೆಯಿಂದ ಪಿಪಿಎಫ್ ಖಾತೆಗೆ ರವಾನೆ ಮಾಡಿ.


Click it and Unblock the Notifications